ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಣಮಸಾಗರ

ವಿಕಿಪೀಡಿಯ ಇಂದ
Jump to navigation Jump to search

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಣಮಸಾಗರವು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಹಣಮಸಾಗರ ಗ್ರಾಮದಲ್ಲಿ ೧೯೫೫ರಲ್ಲಿ ಸ್ಠಾಪಿತವಾಗಿದೆ. ಶಾಲೆಯಲ್ಲಿ ೧ನೇ ತರಗತಿಯಿಂದ ೮ನೇ ತರಗತಿವರೆಗೆ ೨೦೦ರಕ್ಕೂ ಹೆಚ್ಚು ವಿದ್ಯಾರ್ಥಿಗಳ್ಳಿದ್ದಾರೆ.

ಶಾಲೆಯ ಪಕ್ಷಿನೋಟ[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

ವಿಜಯಪುರ ಜಿಲ್ಲೆಯ ವಿಜಯಪುರ ತಾಲೂಕಿನ ಸುಕ್ಷೇತ್ರ ಹಣಮಸಾಗರ ಒಂದು ಚಿಕ್ಕ ಗ್ರಾಮವಾಗಿದ್ದು, ಗ್ರಾಮದಲ್ಲಿ ಈ ಶಾಲೆಯು ದಿನಾಂಕ : 05/06/1947 ರಲ್ಲಿ ಮಂಜೂರಾತಿ ಆದೇಶವಾಯಿತು. ಅಧಿಕೃತವಾಗಿ ದಿನಾಂಕ:15/08/1947 ರಂದು ಸ್ವಾತಂತ್ರ್ಯ ಸಿಕ್ಕ ದಿನದಂದು ಸ್ವಾತಂತ್ಯೋತ್ಸವ ಸಂಭ್ರಮಾಚರಣೆಯೊಂದಿಗೆ ಶಾಲೆಯು ಅಧಿಕೃತವಾಗಿ ಸರಸ್ವತಿ ಪೂಜೆಯೊಂದಿಗೆ ಪ್ರಾರಂಭವಾಯಿತು. ಶಾಲೆಯ ಕ್ರಮ ಸಂಖ್ಯೆ 147 ಇದ್ದು ಪ್ರಾರಂಭದಲ್ಲಿ ಶಾಲೆಯು ಶಿಕ್ಷಕರ ಮಂಜೂರಾತಿ ಇಲ್ಲದ ಕಾರಣ ಶ್ರೀ ಓ.ಗು.ಪೂಜಾರಿ ಶಿಕ್ಷಕರು ಸ್ವಯಂ ಪ್ರೇರಣೆಯಿಂದ ಊರಿನ ಚಂದ್ರ ಶಾಲೆಯಲ್ಲಿ ಒಂದನೇ ತರಗತಿಯನ್ನು ಪ್ರಾರಂಭಿಸಿದರು. ಅದೇ ಚಂದ್ರ ಶಾಲೆಯಲ್ಲಿ ಸತತ 08 ವರ್ಷಗಳವರೆಗೆ ಶಾಲೆ ನಡೆದು 1955ರಲ್ಲಿ ಈಗಿನ ಪ್ರಸಕ್ತ ಸ್ಥಳದಲ್ಲಿ ಸರಕಾರಿ ಶಾಲೆಯ ಮೊದಲನೆಯ ಕೋಣೆಯು ಶ್ರೀ ಈರಬಸಯ್ಯಾ ಗು ಮಠಪತಿ ಇವರ ಭೂದಾನದಿಂದ ದೊರೆತ 20 ಗುಂಟೆ ಜಾಗೆಯಲ್ಲಿ ಪ್ರಾರಂಭವಾಯಿತು. ಎರಡನೆಯ ಕೋಣೆಯು 1985ರಲ್ಲಿ ಕಟ್ಟಲ್ಪಟ್ಟಿತು. ಕ್ರಮೇಣ ಹಂತ ಹಂತವಾಗಿ OBB,DPEP ಮತ್ತು SSA ಯೋಜನೆಗಳಲ್ಲಿ ಒಟ್ಟು 8 ಕೋಣೆಗಳು ನಿರ್ಮಾಣವಾಗಿವೆ.

ಶಿಕ್ಷಕರು[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

ಪ್ರಾರಂಭದಲ್ಲಿ ತರಗತಿಗಳನ್ನು ಯಾವುದೇ ಸಂಭಾವನೆಯಿಲ್ಲದೆ ತರಗತಿಗಳನ್ನು ನಡೆಸಿಕೊಂಡು ಬಂದ ಓ.ಗು.ಪೂಜಾರಿ ಶಿಕ್ಷಕರ ನಿಧನದ ನಂತರ ಸದರಿ ಶಾಲೆಗೆ ಕಂಬಾಗಿಯ ಶ್ರೀ ದೇವೇಂದ್ರ ಬಡಿಗೇರ, ಶ್ರೀ ಕೆಂಗನಾಳ, ಶ್ರೀ ಚಲುವಾದ, ಜೈನಾಪೂರದ ಶ್ರೀ ಕುಲಕರ್ಣಿ, ಶ್ರೀ ಲಚ್ಚಪ್ಪ ತೊನಶ್ಯಾಳ(ಗುಣದಾಳ), ದೇವರಗೆಣ್ಣೂರಿನ ಶ್ರೀ ಮೋದೀನ್ ಕೋಲ್ಹಾರ, ಶ್ರೀಮತಿ ಆರ್.ಆರ್.ಪಾಟಿ, ಶ್ರೀ ಎಸ್.ಎಮ್. ಏಳಗಿ, ಶ್ರೀಮತಿ ರಾಯಣ್ಣವರ, ಶ್ರೀಮತಿ ಜಯಶ್ರೀ ಚಲ್ಲಾ, ಶ್ರೀ ಎನ್.ಎಲ್. ರಾಠೋಡ, ಶ್ರೀ ಎಸ್.ಎ.ಬಿರಾದರ, ಶ್ರೀಮತಿ ಎಸ್.ಎಮ್.ಸುನಗದ(ಕಾಖಂಡಕಿ), ಶ್ರೀಮತಿ ಕೋರಿ, ಶ್ರೀ ಎಸ್.ಎಸ್.ಪಾಟೀಲ್(ಸಾರವಾಡ), ಶ್ರೀಮತಿ ಎಸ್.ಎಚ್.ನದಾಫ್, ಶ್ರೀಮತಿ ದೇಗಿನಾಳ, ಶ್ರೀ ತಳವಾರ, ಶ್ರೀ ಕುಲಕರ್ಣಿ ಸದರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರುಗಳು. ಪ್ರಸ್ತುತ(2017) ಸದರಿ ಶಾಲೆಯಲ್ಲಿ ಶ್ರೀಮತಿ ಲಕ್ಷ್ಮೀ ಹೊಸಮನಿ, ಶ್ರೀಮತಿ ಏ.ವ್ಹಿ. ದೇಶಮುಖ, ಶ್ರೀ ಆರ್.ಎ. ಗಂಗೂರ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಈ ಶಾಲೆಯು 1947 ರಿಂದ 1978 ರವರೆಗೆ 01 ರಿಂದ 04 ನೇ ತರಗತಿಯವರೆಗೆ ಇದ್ದದ್ದು, 1979ನೇ ಸಾಲಿನಿಂದ 1998 ರವರೆಗೆ 01ರಿಂದ 06ನೇ ವರ್ಗದವರೆಗೆ ತರಗತಿಗಳು ಇದ್ದವು. ನಂತರ 1999 ರಲ್ಲಿ 7ನೇ ವರ್ಗ ಪ್ರಾಂಭವಾಯಿತು. ನಂತರ 2004/05ನೇ ಸಾಲಿನಲ್ಲಿ 8ನೇ ತರಗತಿಯು ಪ್ರಾರಂಭವಾಯಿತು.

ಹಳೆಯ ವಿಧ್ಯಾರ್ಥಿಗಳು[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

ಈ ಶಾಲೆಯಲ್ಲಿ ಓದಿದ ವಿಧ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲಿ 4 ಜನ ತಂತ್ರಜ್ಞರು, ಒಬ್ಬರು ಕೃಷಿ ಅಧಿಕಾರಿಯಾಗಿ, ಒಬ್ಬರು KEB ಯಲ್ಲಿ, ಅದೇ ತೆರನಾಗಿ ಮಿಲಿಟರಿಯಲ್ಲಿ 9 ಜನರು, ಪೋಲಿಸ್ ಇಲಾಖೆಯಲ್ಲಿ ಒಬ್ಬರು, ಸರಕಾರಿ ಶಾಲೆ ಶಿಕ್ಷಕರಾಗಿ 4 ಜನ ಹಾಗೂ ಖಾಸಗಿ ಶಾಲಾ ಶಿಕ್ಷಕರಾಗಿ 6 ಜನ ಹಾಗೂ ಬೇರೆ ಬೇರೆ ಇಲಾಖೆ ಸೇವೆ ಸಲ್ಲಿಸುತ್ತಿದ್ದಾರೆ. ಈ ಶಾಲೆಯ ಏಳಿಗೆಗಾಗಿ ಯುವಕರು ಪಾಲಕರು ಪ್ರೋತ್ಸಾಹ ಹೊಂದಲು, ಚೈತನ್ಯ ಶಕ್ತಿಯಾಗಿ ಪರಮ ಪೂಜ್ಯ ವೇದಮೂರ್ತಿ ಶ್ರೀ ಶಿವಯ್ಯಾ ಮಹಾ ಸ್ವಾಮಿಗಳು ಬಬಲಾದಿ ಮಠ ಹಣಮಸಾಗರ ಇವರ ಕೃಪಾಶೀರ್ವಾದ ಹಾಗೂ ಮಾರ್ಗದರ್ಶನ ಪ್ರಮುಖವಾಗಿದೆ.

ಬೇಸಿಗೆ ಸಂಭ್ರಮ ಕಾರ್ಯಕ್ರಮ[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

ಕಳೆದ 2010-2016 ವರ್ಷಗಳಲ್ಲಿ ಸದರಿ ಶಾಲೆಯ ದಾಖಲಾತಿ ಹಾಜರಾತಿ ಕುಸಿಯುತ್ತಾ ಬಂದು ಕೇವಲ 62 ಮಕ್ಕಳು ಮಾತ್ರ 1ರಿಂದ 8ನೇ ತರಗತಿಯಲ್ಲಿ ಓದುತ್ತಿದ್ದರು. ಪ್ರಸ್ತುತ ಸಾಲಿನಲ್ಲಿ ಸರಕಾರವು ಜಾರಿಗೆ ತಂದಂತಹ ಬೇಸಿಗೆ ಸಂಭ್ರಮ ಕಾರ್ಯಕ್ರಮದಡಿಯಲ್ಲಿ ಸದರಿ ಶಾಲೆಯ ಮಕ್ಕಳು ಉತ್ಸುಕರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಯೊಜನೆಯು ಖಾಸಗಿ ಶಾಲೆಗಳಲ್ಲಿ ವಿಸ್ತರಣೆಯಾಗಿರಲಿಲ್ಲ ಖಾಸಗಿ ಶಾಲೆಯಲ್ಲಿ ಓದುವ ಮಕ್ಕಳು ತಮ್ಮ ಬೇಸಿಗೆ ಸಮಯವನ್ನು ಮನೆಯಲ್ಲಿಯೆ ಕಳೆಯದೆಯೇ ಸರಕಾರಿ ಶಾಲೆಯ ಮಕ್ಕಳೊಂದಿಗೆ ಬೆರೆತು ಇಲ್ಲಿಯ ಚಟುವಟಿಕೆಗಳು ಆಟ-ಪಾಠಗಳಲ್ಲಿ ಸಕ್ರೀಯವಾಗಿ ಬೆರೆತು ಶಾಲೆಯಲ್ಲಿ ನೀಡುವ ಮಧ್ಯಾಹ್ನದ ಬಿಸಿಯೂಟ ಆಕರ್ಷಣೀಯ ಭೋಧನೆ, ಶಾಲಾ ಪರಿಸರಕ್ಕೆ ಆಕರ್ಷಿತರಾಗಿ ಪ್ರತಿ ದಿನವು ಶಾಲೆಗೆ ಬರಲು ರೂಢಿಸಿಕೊಂಡರು. ಸದರಿ ಗ್ರಾಮದಲ್ಲಿರುವ ಬೇರೆ ಬೇರೆ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷ್ಕಕರು ಸಹ ಬೇಸಿಗೆ ಸಂಭ್ರಮ ಕಾರ್ಯಕ್ರಮದಲ್ಲಿ ಸ್ವಯಂಪ್ರೆರಿತರಾಗಿ ಆಕರ್ಷಕ ಬೋಧನೆಯನ್ನು ಮಾಡಿದ್ದರಿಂದ ತಮ್ಮ ಮಕ್ಕಳ ಸಾಧನೆಯನ್ನು ಗಮನಿಸಿದ ಪಾಲಕರು, ಪೋಷಕರು ಸಂಘ ಸಂಸ್ಥೆಗಳವರು, ಜನಪ್ರತಿನಿಧಿಗಳು ಸಹ, ಸರಕಾರಿ ಶಾಲೆಗಳು ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿರುವದನ್ನು ಮನಗಂಡ ಪಾಲಕರು ತಮ್ಮ ಮಕ್ಕಳ ಖಾಸಗಿ ಶಾಲೆಯಲ್ಲಿ ಒದುವದು ಬೇಡ ಎಂದು ನಿರ್ಧಾರ ಕೈಗೊಂಡು ಖಾಸಗಿ ಶಾಲೆಯಿಂದ, ತಮ್ಮೂರಿನ ಸರಕಾರಿ ಶಾಲೆಯಲ್ಲಿ ಓದಿಸುವ ಹಂಬಲವನ್ನು ವ್ಯಕ್ತಪಡಿಸಿ ಈ ಶಾಲೆಗೆ ಮಕ್ಕಳನ್ನು ದಾಖಲಿಸಲು ಮುಂದಾದರು.

ಉಲ್ಲೇಖ[ಬದಲಾಯಿಸಿ]

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಣಮಸಾಗರ