ವಿಷಯಕ್ಕೆ ಹೋಗು

ಸಯಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'Sion' (Marathi: शीव) (Portuguese old name Sião)

[ಬದಲಾಯಿಸಿ]

'ಸಯಾನ್', ಅಥವಾ 'ಸಾಯನ್,' ಎಂದು ಕರೆಯುವ ಮುಂಬಯಿನಗರದ ಒಂದು ಉಪನಗರ. ೧೫೪೩, ರಲ್ಲಿ ಪೋರ್ಚುಗೀಸರು, ಮುಂಬಯಿ ಬಂದರಿನ ಆಡಳಿತವನ್ನು ಬಲವಂತವಾಗಿ ತಮ್ಮ ಕೈಗೆ ತೆಗೆದುಕೊಂಡು, ತಮ್ಮ ’ಜೆಸ್ಸ್ಯೂಟ್ ಧರ್ಮ ಗುರುಗಳಿಗೆ’, ಒಪ್ಪಿಸಿದರು. ಆಗ ಅವರು ಸಯಾನ್ ಬಳಿಯ ಬೆಟ್ಟದಮೇಲೆ ಈಗಿನ ಸಯಾನ್ ರೈಲ್ವೆ ಸ್ಟೇಷನ್ ಹತ್ತಿರ, ಚಾಪೆಲ್ ಕಟ್ಟಿದರು. ಅದಕ್ಕೆ ’ಮೌಂಟ್ ಝಿಯಾನ್’ ಎಂಬ ಹೆಸರಿಟ್ಟರು. ಜೆರುಸಲೆಮ್ ಭಾಷೆಯಲ್ಲಿ ’ಸಯಾನ್,’ ಹಾಗೂ ಮರಾಠಿಭಾಷೆಯಲ್ಲಿ ’ ಶಿವ್,’ ಎಂದು ನಾಮಕರಣವಾಗಿದೆ. ’ಶಿವ್’ ಅಂದರೆ, ನಿಯಮಿತ ಜಾಗ ,ಅಥವಾ ಸರಹದ್ದು ಎಂದರ್ಥ. ಉತ್ತರ ಮುಂಬಯಿಗೂ ದಕ್ಷಿಣ ಮುಂಬಯಿಗೂ ಮಧ್ಯದ ಜಾಗ. ೧೭ ನೆಯ ಶತಮಾನದಲ್ಲಿ 'ಸಯಾನ್,' ಒಂದು ಚಿಕ್ಕ ಗ್ರಾಮ ಅಲ್ಲಿ ಬೆಳೆಯಿತು. ಈಗಿನ ಮುಂಬಯಿ ಹಾಗೂ, ’ಸಾಲ್ಸೆಟ್ ದ್ವೀಪ’, ದ ಭಾಗದಲ್ಲಿ. ಅಂದಿನ ಮುಂಬಯಿನಗರ ಒಟ್ಟು ೭ ದ್ವೀಪಗಳ ನಗರಿ. ಆ ದ್ವೀಪಗಳ ಮಧ್ಯೆ, ನೀರು, ಗುಡ್ಡ ಬೆಟ್ಟ, ಹಳ್ಳ-ಕೊಳ್ಳ, ಕೊಚ್ಚೆ ಪ್ರದೇಶಗಳಿದ್ದವು. ನೆಲ ಸಮತಟ್ಟಾಗಿರಲಿಲ್ಲ. ಮುಂಬಯಿನ ಕಲ್ಪನೆ, ಉತ್ತರ ದಿಕ್ಕನ ಮಾತ್ರ. ’ಮಾಟುಂಗಾ ಉಪನಗರ’ ವನ್ನು ತಲುಪಲು, ನೂರಾರು ವರ್ಷಗಳೇ ಬೇಕಾಯಿತು. ’ಯೂರೋಪಿಯನ್ನರು’ ಹಾಗೂ ’ಬ್ರಿಟಿಷ್’, ’ಪೋರ್ಚುಗೀಸ್’ ಜನ, ಉತ್ತರ ಮುಂಬಯಿನ ಕಡೆಗೆ ಬರಲು ಇಚ್ಛಿಸುತ್ತಿರಲಿಲ್ಲ. ಹಾಗಾಗಿ ಅವರು ಕಟ್ಟಿದ ಭವ್ಯ ಕಟ್ಟಡಗಳು, ಅರಬ್ಬೀ ಸಮುದ್ರದ ಅಂಚಿನಲ್ಲಿ ಇದ್ದವು. ಅವರ ಆಸಕ್ತಿ,’ಕೊಲಾಬಾ,’ ಮುಂತಾದ ಜಾಗಗಳಿಗೆ ಮಾತ್ರ ಸೀಮಿತವಾಗಿತ್ತು.

’ಬ್ರೀಟಿಷ್ ಕಂಪನಿ ಸರ್ಕಾರ,’ ಮುಂಬಯಿನ ಆಧಿಪತ್ಯವನ್ನು ತೆಗೆದುಕೊಂಡನಂತರ

[ಬದಲಾಯಿಸಿ]

’ಬ್ರೀಟಿಷ್ ಕಂಪನಿ ಸರ್ಕಾರ,’ ಮುಂಬಯಿನ ಆಧಿಪತ್ಯ ವಹಿಸಿಕೊಂಡ ನಂತರ ಗಮನಾರ್ಹ ಬದಲಾವಣೆಗಳು ನಡೆದು, ಅವರುಗಳು, ಭಾರಿ-ಭಾರಿ ಕಲ್ಲುಬಂಡೆಗಳು ಮತ್ತು ಮಣ್ಣುಗಳಿಂದ ಮುಚ್ಚಿ, ಅರಬ್ಬೀ ಸಮುದ್ರದಿಂದ ಭೂಮಿಯನ್ನು ವಶಕ್ಕೆ ಪಡೆಯುವ ಪರಿಪಾಠ ವನ್ನು ಜಾರಿಗೆ ತಂದರು. ಇದನ್ನೇ ಇಂಗ್ಲೆಂಡ್ ನಿಂದ ಮುಂಬಯಿಗೆ ಆಗಮಿಸಿದ ಅಧಿಕಾರಿಗಳೆಲ್ಲಾ ತಮ್ಮ ಪ್ರಮುಖ-ಆದ್ಯತೆಯಾಗಿ ತೆಗೆದುಕೊಂಡು ಮುಂದುವರೆದರು. ’ಬ್ಯಾಕ್ ಬೇ ರೆಕ್ಲಮೇಶನ್,’ ಎಂಬ ಹೆಸರು ಬಂದಿದ್ದು ಅದಕ್ಕಾಗಿಯೆ.

ಆಧಾರ ಹಾಗೂ ಅನ್ವಯಿಸುವ ಲೇಖನಗಳು :

[ಬದಲಾಯಿಸಿ]

1. ^ D'Cunha, Jose Gerson (1900). "IV The Portuguese Period". The Origins of Bombay (3 ed.). Bombay: Asian Educational Services. pp. 265. ISBN 81-206-0815-1. http://books.google.co.in/books?id=miD5YO05jpUC&dq=the+origins+of+bombay&client=firefox-a. Retrieved on 2009-01-04.

ಇದನ್ನೂ ನೋಡಿ :

  • Sion Fort
"https://kn.wikipedia.org/w/index.php?title=ಸಯಾನ್&oldid=743028" ಇಂದ ಪಡೆಯಲ್ಪಟ್ಟಿದೆ