ಸಮುದ್ರ ಫಲ
ಗೋಚರ
ಸಮುದ್ರಫಲ
ವೈಜ್ಞಾನಿಕ ಹೆಸರು
[ಬದಲಾಯಿಸಿ]ಬ್ಯಾರಿಂಗ್‍ಟನ್ ರೆಸಿಮೊಸ
ಇತರೆ ಹೆಸರು
[ಬದಲಾಯಿಸಿ]ತಮಿಳು : ಸಮುದ್ರಪುಲ್ಲಾನಿ ತೆಲುಗು : ಕನಪ ಚೆಟ್ಟು ಸಂಸ್ಕøತ : ಸಮುದ್ರಫಲ ಹಿಂದಿ : ನಿವರ್ ಹುಟ್ಟು : ಚೋಳಮಂಡಲ ತೀರ ಪುಪ್ಪ : ವೈಶಾಖ
ವಿವರಣೆ
[ಬದಲಾಯಿಸಿ]ಮರವು ಸಣ್ಣಗಾತ್ರವಾಗಿದ್ದು 10ಮೀಟರ್ ಎತ್ತರ ಬೆಳೆಯುತ್ತದೆ. 10-30ಸೆ.ಮೀ. ಎಲೆಗಳು ಕೊಂಬೆಗಳ ಕೊನೆಯಲ್ಲಿಇರುತ್ತವೆ. 2-3 ಸೆ.ಮಿ. ಉದ್ದದ ತಿಳಿಗೆಂಪು ಬಣ್ಣದ ಹೂವುಗಳು 20-60 ಸೆಂ.ಮೀ.ಉದ್ದದಜೋಲಾಡುತ್ತಿರುವ ಪುಪ್ಪಮಂಜರಿಯಲ್ಲಿಇರುತ್ತವೆ. 3-4 ಸೆ.ಮೀ ಉದ್ದ ನೇರಳೆ ಅಥವಾ ಹಸಿರು ಬಣ್ಣದ ಕಾಯಿಗಳು 4 ಮೂಲೆಗಳನ್ನು ಹೊಂದಿರುತ್ತವೆ.[೧]
ಉಪಯೋಗಗಳು
[ಬದಲಾಯಿಸಿ]- ಬೇರುತಂಪುಗುಣವನ್ನು ಹೊಂದಿದ್ದು, ಮಲಬದ್ದತೆಯನ್ನುಗುಣ ಮಾಡುತ್ತದೆ.
- ಬೀಜವನ್ನು ಪುಡಿಮಾಡಿ ಮೂಲವ್ಯಾಧಿಗೂ, ಪಿತ್ತದೋಷಕ್ಕೂಆಗುವುದು.
- ಕಾಯಿಯನ್ನು ಪುಡಿಮಾಡಿ ಬೇರೆ ಔಷಧಗಳ ಸಮೇತ ಸ್ವರಭಂಗಕ್ಕೂ ನಂಜಿಗೂಉಪಯೋಗಿಸಬಹುದು.
- ಸಂಧಿವಾತದ ನೋವುಗಳಿಗೆ ತೊಗಟೆಯಕಷಾಯವನ್ನು ಲೇಪಿಸುವುದರಿಂದ ಮತ್ತು ಸೇವಿಸುವುದರಿಂದ ನೋವು ಶಮನವಾಗುವುದು.
- ಚರ್ಮದತುರಿಕೆ, ಹುಳುಕಡ್ಡಿ. ಸಿಡುಬು ಮುಂತಾದಚರ್ಮದ ಸಮಸ್ಯೆಗಳಿಗೆ ಎಲೆ ಅಥವಾ ಬೇರುಅಥವಾತೊಗಟೆಯನ್ನುಅರೆದುಗಂಧವನ್ನು ಲೇಪಿಸುವುದರಿಂದಗುಣಮುಖರಾಗುತ್ತಾರೆ.
- ಮೂಗಿನಲ್ಲಿಕಟ್ಟಿರುವ ಶೀತದ ನೀರು ಇಳಿಯುವ ಹಾಗೆ ಕಾಯಿಯನ್ನು ಒಣಗಿಸಿ ಪುಡಿಮಾಡಿ ನಸ್ಯ ಹಾಕುವರು.[೨]
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ ವನಸಿರಿ. ಅಜ್ಜಂಪುರ ಕೃಷ್ಣ ಸ್ವಾಮಿ. ಸ್ವಣಾಂಬ ಪಬ್ಲಿಕೇಶನ್
- ↑ "ಆರ್ಕೈವ್ ನಕಲು". Archived from the original on 2021-05-14. Retrieved 2018-09-30.