ಸಮಸಂಸ್ಕೃತ
ಗೋಚರ
ಸಂಖ್ಯಾವಾಚಕಗಳನ್ನೂ ಅವ್ಯಯಗಳನ್ನೂ ಉಳಿದು ಮಿಕ್ಕ ಸಂಸ್ಕøತ ಶಬ್ದಗಳನ್ನು ಕನ್ನಡಕ್ಕೆ ಪ್ರಕೃತಿಗಳನ್ನಾಗಿ ತೆಗೆದುಕೊಳ್ಳುತ್ತಾರೆ. ಕನ್ನಡಕ್ಕೆ ಸಂಸ್ಕøತ ಪದಗಳು ಸಮಾನವಾಗಿ ಎರಡು ರೀತಿಯಲ್ಲಿ ಬರುವುದು.[೧]
ಸ್ವರಾಂತ
[ಬದಲಾಯಿಸಿ]ಸ್ವರಾಂತದಲ್ಲಿ ಎರಡು ವಿಭಾಗ ಮಾಡಬಹುದು.
- ಹೃಸ್ವ ಸ್ವರಾಂತವಾದ ಶಬ್ದಗಳು ಸಾಮಾನ್ಯವಾಗಿ ಯಾವ ವ್ಯತ್ಯಾಸವನ್ನೂ ಹೊಂದುವುದಿಲ್ಲ. ಉದಾ : ಭುವನ, ಮುನಿ, ರಿಪು, ಪಿತೃ, ಪ್ರಶ್ನೆ, ಸಖಿ-ಸಖ, ಸವಿತೃ-ಸವಿತಾರ, ದಾತೃ-ದಾತ ಇತ್ಯಾದಿ.
- ದೀರ್ಘಸ್ವರಾಂತವಾದ ಶಬ್ದಗಳು ಹೃಸ್ವಸ್ವರಾಂತಗಳಾಗುತ್ತವೆ. ಉದಾ : ಕರುಣಾ-ಕರುಣ, ಗೌರೀ-ಗೌರಿ, ಮಾಲಾ-ಮಾಲೆ, ಭಿಕ್ಷ-ಭಿಕ್ಷೆ.
ವ್ಯಂಜನಾಂತ
[ಬದಲಾಯಿಸಿ]- ಸಂಸ್ಕೃತದ ವ್ಯಂಜನಾಂತ ಶಬ್ದಗಳು ಕನ್ನಡಕ್ಕೆ ಬರುವಾಗ –
- ಅ] ಕೆಲವಕ್ಕೆ ಅಂತ್ಯ ವ್ಯಂಜನ ಲೋಪವಾಗುತ್ತದೆ. ಉದಾ : ರಾಜನ್ – ರಾಜ, ಬ್ರಹ್ಮನ್ - ಬ್ಗರಹ್ಮ, ಪುರೂರವ್ - ಪುರೂರುವ ಇತ್ಯಾದಿ.
- ಆ] ಕೆಲವಕ್ಕೆ ‘ಅ’ಕಾರ ಸೇರುತ್ತದೆ. ಉದಾ : ದಿವ್ -ದಿವ, ಬುದ್-ಬುದ ಇತ್ಯಾದಿ.
- ಇ] ಕೆಲವಕ್ಕೆ ಅಂತ್ಯವ್ಯಂಜನಕ್ಕೆ ದ್ವಿತ್ವ ಬಂದು ‘ಉ’ಕಾರ ಸೇರುತ್ತದೆ. ಉದಾ : ಅಪ್-ಅಪ್ಪು, ವಿದ್ಯುತ್-ವಿದ್ಯುತ್ತು ಇತ್ಯಾದಿ.
- ಈ] ಕೆಲವಕ್ಕೆ ಅಂತ್ಯವ್ಯಂಜನ ಲೋಪ, ದ್ವಿತ್ವ ಉಕಾರ ಬರುತ್ತದೆ. ಉದಾ : ತೇಜಸ್-ತೇಜ>ತೇಜಸ್ಸು, ಯಶಸ್-ಯಸ>ಯಶಸ್ಸು ಇತ್ಯಾದಿ.
- ಉ] ಯಾವ ವ್ಯತ್ಯಾಸವೂ ಆಗದವುಗಳು – ಉದಾ: ವಾಕ್, ಗೀರ್ ಇತ್ಯಾದಿ.
- ಊ] ಸಂಸ್ಕøತ ಪ್ರಥಮಾ ಬಹುವಚನಗಳು ಕನ್ನಡದಲ್ಲಿ ಏಕವಚನ ಪ್ರಕೃತಿಗಳಾರುವುದು. ಉದಾ : ವಿದ್ವಾನ್- ವಿದ್ವಾಂಸ, ಶ್ವಾನ, ಶ್ರೀಮಂತ, ಹನುಮಂತ ಇತ್ಯಾದಿ.