ಸಮಷ್ಟಿ

ವಿಕಿಪೀಡಿಯ ಇಂದ
Jump to navigation Jump to search

ಸಮಷ್ಟಿ ತಂಡವು ೨೦೦೦ ದಲ್ಲಿ ಹುಟ್ಟಿಕೊಂಡ ರಂಗತಂಡ. ಹೊಸ ಪ್ರತಿಭೆಗಳನ್ನು ಹುಡುಕಿ ಅವರಲ್ಲಿ ರಂಗಾಸಕ್ತಿಯನ್ನು ಬೆಳೆಸುವುದು ಇದರ ಉದ್ದೇಶ. ಇದಕ್ಕಾಗಿ ಹಲವಾರು ಉಚಿತ ರಂಗಶಿಬಿರಗಳನ್ನು ಹಾಗೂ ಭಾನುವಾರದ ರಂಗಶಾಲೆಯನ್ನೂ ಇದುವರೆಗೆ ನಡೆಸಿದೆ.ಈವರೆಗೆ ಇದು 'ಆಷಾಡದ ಒಂದು ದಿನ', 'ಸಾಂಬಶಿವ ಪ್ರಹಸನ', 'ಮೃಚ್ಛಕಟಿಕ', 'ಹದ್ದು ಮೀರಿದ ಹಾದಿ', 'ಅಲೆಗಳಲ್ಲಿ ರಾಜ ಹಂಸಗಳು', 'ಹರಿಣಾಭಿಸರಣ', 'ಕಥನ', 'ಮಿಸ್ ಸದಾರಮೆ', 'ಕಥೆ ಹೇಳತೀವಿ', 'ಅವಾಂತರ', 'ನಾಯಿಕಥೆ', 'ಪ್ರಮೀಳಾರ್ಜುನೀಯಮಂ', 'ಚಿರಕುಮಾರ ಸಭಾ', ಮುಂತಾದ ನಾಟಕಗಳನ್ನು ಯಶಸ್ವಿಯಾಗಿ ರಂಗಕ್ಕೆ ತಂದಿದೆ. ಇದಲ್ಲದೇ ನೀನಾಸಂನ 'ಪ್ರಯಣ', ತಂಡದ 'ಕರ್ಣಾದರ್ಶ', ಮತ್ತು 'ಕೊಳಲು ಭೂಮಿಗೀತ' ಹಾಗೂ 'ಜನಮನದಾಟ' ತಂಡದ 'ರಹಸ್ಯ ವಿಶ್ವ ' ಮತ್ತು 'ತಬರನ ಕಥೆ' ನಾಟಕಗಳ ಪ್ರದರ್ಶನಗಳನ್ನು ಆಯೋಜಿಸಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಲಾಗ್ ಅನ್ ಅಗಿ www.samashti.com

"https://kn.wikipedia.org/w/index.php?title=ಸಮಷ್ಟಿ&oldid=616690" ಇಂದ ಪಡೆಯಲ್ಪಟ್ಟಿದೆ