ವಿಷಯಕ್ಕೆ ಹೋಗು

ಸಮನ್ವಯತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಪೀಠಿಕೆ

[ಬದಲಾಯಿಸಿ]

ವ್ಯವಸ್ಥಾಪಕನು ಎಲ್ಲಾ ಪರಸ್ಪರ ಸಂಬಂಧವಿರುವ ನಿರ್ವಹಣೆಯ ಕಾರ್ಯಗಳನ್ನು ಸಂಘಟನೆಯ,ಕಾರ್ಯನಿರ್ವಹಣೆಯ ಸಂದರ್ಭದಲ್ಲಿ ನಿರ್ವಹಿಸಬೇಕಾಗುತ್ತದೆ.ಸಮನ್ವಯತೆಯು ಪರಸ್ಪರ ಅವಲಂಬಿತ ಮತ್ತು ಆಂತರಿಕವಾಗಿ ಜೋಡಣೆಯಾದ ವ್ಯವಸ್ಥೆಗಳನ್ನು ಹೊಂದಿರುತ್ತದೆ.ವ್ವವಸ್ಥಾಪಕನು ವಿವಿಧ ಗುಂಪುಗಳ ಕಾರ್ಯಗಳ ಮಧ್ಯೆ ಸಾಮರಸ್ಯವೇರ್ಪಡಿಸಿ ಸಂಘಟನೆಯ ಉದ್ದೇಶಗಳನ್ನು ಸಾಧಿಸಬೇಕಾಗುತ್ತದೆ.ವ್ವವಸ್ಥಾಪಕನು ವಿವಿಧ ಇಲಾಖೆಗಳ ಕಾರ್ಯ/ಚಟುವಟಿಕೆಗಳನ್ನು ಒಂದುಗೂಡಿಸಿ ಸಮಗ್ರತೆಯಿಂದ ಕಾರ್ಯನಿರ್ವಹಿಸುವ ಪ್ರಕ್ರಿಯೆಯೇ ಸಮನ್ವಯತೆ.

ಸಮನ್ವಯತೆ ಸಂಘಟನೆಯ ಸಾಮಾನ್ಯವಾದ ಗುರಿ ಸಾಧಿಸುವ ದೃಷ್ಟಿಯಿಂದ ಗುಂಪಿನಲ್ಲಿರುವ ಎಲ್ಲಾ ಸದಸ್ಯರ ಪರಿಶ್ರಮವನ್ನು ಒಂದುಗೂಡಿಸಿ ಸಮಗ್ರತೆಯಿಂದ ಅವರ ಕಾರ್ಯಗಳು ಒಂದೇ ಸಮಯದಲ್ಲಿ ಜರುಗಿಸುವುದಾಗಿರುತ್ತದೆ.ಸಮನ್ವಯತೆಯು ನಿರ್ವಹಣೆಯ ಎಲ್ಲಾ ಕಾರ್ಯಗಳನ್ನು ಒಂದುಗೂಡಿಸುವ ಅಗೋಚರ ಶಕ್ತಿಯಾಗಿದೆ.

ವ್ಯಾಖ್ಯೆ

[ಬದಲಾಯಿಸಿ]
  • ಮೂನಿ ಮತ್ತು ರೀಲೆ ರವರ ಪ್ರಕಾರ ಸಂಸ್ಥೆಯ ಸಾಮಾನ್ಯ ಉದ್ದೇಶಗಳ ಸಾಧನೆಗಾಗಿ ಗುಂಪುಗಳ ಕಾರ್ಯದಲ್ಲಿ ಏಕರೂಪತೆ ಸಾಧಿಸಲು ರೂಪಿಸುವ ಕ್ರಮಬದ್ಧ ವ್ಯವಸ್ಥೆ ಸಮನ್ವಯತೆ'.

ಸಮನ್ವಯತೆಯ ಲಕ್ಷಣಗಳು

[ಬದಲಾಯಿಸಿ]

1. ಗುಂಪುಗಳ ಪರಿಶ್ರಮವನ್ನು ಒಗ್ಗೂಡಿಸುವುದು

ಇದು ವಿವಿಧ ಹಿತಾಸಕ್ತಿಗಳನ್ನು ಹೊಂದಿರುವ ಗುಂಪು ಚಟುವಟಿಕೆಗಳನ್ನು ಒಂದುಗೂಡಿಸಿ ಯೋಜನೆ ಮತ್ತು ವೇಳಾಪಟ್ಟಿಗಳಿಗನುಗಿಣವಾಗಿಕೆಲಸ ಕಾರ್ಯಗಳು ನಡೆಯುವುದನ್ನು ಮಾರ್ಗದರ್ಶನ ಮಾಡುವುದಾಗಿರುತ್ತದೆ.

2. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಏಕತೆ ಮೂಡಿಸುವುದು

ಸಮನ್ವಯತೆ ವಿವಿಧ ಇಲಾಖೆಗಳ ಕಾರ್ಯಚಟುವಟಿಕೆಗಳನ್ನು ಒಂದುಗೂಡಿಸಿ ಐಕ್ಯತೆಯಿಂದ ಸಂಘಟನೆಯ ಉದ್ದೇಶಗಳನ್ನು ಸಾಧಿಸುತ್ತದೆ.

3. ನಿರಂತರ ಪ್ರಕ್ರಿಯೆಯಾಗಿದೆ

ಸಮನ್ವಯತೆಯು ನಿರಂತರ ಪ್ರಕ್ರಿಯೆಯಾಗಿದ್ದು,ಯೋಜನೆಗಳನ್ನು ತಯಾರಿಸುವುದರಿಂದ ಪ್ರಾರಂಭವಾಗಿ ನಿಯಂತ್ರಿಸುವವರೆಗೂ ಮುಂದುವರೆದು ಸಂಘಟನೆಯ ಕಾರ್ಯಾಚರಣೆಯಲ್ಲಿ ದಕ್ಷತೆಯನ್ನು ಕಾಪಾಡುತ್ತದೆ.

4. ಸಮನ್ವಯತೆಯು ಸಾರ್ವತ್ರಿಕ ಪ್ರಕ್ರಿಯೆ

ಸಂಘಟನೆಯ ವಿವಿಧ ವಿಭಾಗಗಳ ಕಾರ್ಯಗಳು ಒಂದನ್ನೊಂದು ಅವಲಂಬಿಸಿಕೊಂಡಿರುವುದರಿಂದ ಎಲ್ಲಾ ಹಂತದ ನಿರ್ವಹಣೆಯ ಕಾರ್ಯಗಳಲ್ಲಿ ಸಮನ್ವಯತೆ ಅವಶ್ಯಕವಾಗಿರುತ್ತದೆ.ಬೇರೆ ಬೇರೆ ವಿಭಾಗದ ಕಾರ್ಯಚಟುವಟಿಕೆಗಳನ್ನು ಬೇರೆ ಬೇರೆ ನಿರ್ವಹಣಾ ಹಂತದ ಕಾರ್ಯಗಳಲ್ಲಿ ಸಮನ್ವಯತೆ ಸಾಧಿಸುವ ಮೂಲಕ ಅವುಗಳಲ್ಲಿ ಐಕ್ಯತೆಯನ್ನು ಮೂಡಿಸುತ್ತದೆ.

5. ಸಮನ್ವಯತೆಯು ಎಲ್ಲಾ ವ್ವವಸ್ಥಾಪಕರ ಜವಾಬ್ದಾರಿಯಾಗಿದೆ

ಪ್ರತಿಯೊಬ್ಬ ವ್ವವಸ್ಥಾಪಕನು ಸಂಘಟನೆಯ ಕಾರ್ಯಗಳಲ್ಲಿ ಸಮನ್ವತೆಯನ್ನು ಸಾಧಿಸುವ ಜವಾಬ್ದಾರಿಯನ್ನು ಹೊಂದಿರುತ್ತಾನೆ.ಉನ್ನತ ಹಂತದ ನಿರ್ವಾಹಕರು ಮಧ್ಯಮ ಹಾಗೂ ಕೆಳಹಂತದ ನಿರ್ವಾಹಕರುಗಳೊಂದಿಗೆ ಸಮನ್ವಯತೆಯನ್ನು ಸಾಧಿಸುವ ಮೂಲಕ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಬೇಕಾಗುತ್ತದೆ.ಅದೇ ರೀತಿ ಮಧ್ಯಮ ಹಂತದ ವ್ಯವಸ್ಥಾಪಕರು ಉನ್ನತ ಹಂತ ಹಾಗೂ ಕೆಳಹಂತದ ವ್ಯವಸ್ಥಾಪಕರುಗಳೊಂದಿಗೆ ಸಮನ್ವಯತೆಯನ್ನು ಏರ್ಪಡಿಸಬೇಕಾಗುತ್ತದೆ.ಹಾಗೆಯೇ ಕೆಳಹಂತದ ವ್ಯವಸ್ಥಾಪಕರುಗಳು ತಮ್ಮ ಸಿಬ್ಬಂದಿಗಳ ಕೆಲಸ ಕಾರ್ಯಗಳು ಯೋಜಿಸಿದಂತೆ ನಡೆಯುತ್ತವೆಯೇ ಎಂಬುದನ್ನು ಸಮನ್ವಯತೆಯ ಮೂಲಕ ಖಚಿತಪಡಿಸಿಕೊಳ್ಳಬೇಕು.

6. ಸಮನ್ವಯತೆಯು ಒಂದು ಉದ್ದೇಶಪೂರ್ವಕ ಕಾರ್ಯ

ಎಲ್ಲಾ ವ್ಯವಸ್ಥಾಪಕರೂ ಉದ್ದೇಶಪೂರ್ವಕವಾಗಿ ಸಮನ್ವಯತೆಯನ್ನು ಬೇರೆ ಬೇರೆ ವ್ಯಕ್ತಿಗಳೊಡನೆ ಏರ್ಪಡಿಸುವುದರ ಮೂಲಕ ಸಂಘಟನೆಯ ಸಾಮಾನ್ಯ ಉದ್ದೇಶಗಳನ್ನು ಸಾಧಿಸುತ್ತಾರೆ.