ವಿಷಯಕ್ಕೆ ಹೋಗು

ಸನ್ನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸನ್ನಿ (ಚಿತ್ತವಿಭ್ರಮ) ಎಂದರೆ ಹಿಂದಿನ ಮೂಲ ಮಾನಸಿಕ ಕಾರ್ಯದಿಂದ ಜೈವಿಕವಾಗಿ ಉಂಟಾದ ಅವನತಿ. ಇದು ಅಲ್ಪಾವಧಿಯಲ್ಲಿ ಅಭಿವೃದ್ಧಿಯಾಗುತ್ತದೆ, ಸಾಮಾನ್ಯವಾಗಿ ಕೆಲವು ಗಂಟೆಗಳು ಅಥವಾ ದಿನಗಳಲ್ಲಿ.[] ಸನ್ನಿಯು ಗಮನ, ಪ್ರಜ್ಞೆ ಮತ್ತು ಅರಿವಿನಲ್ಲಿನ ಕ್ಷೋಭೆಗಳನ್ನು ಒಳಗೊಳ್ಳುವ ಲಕ್ಷಣಕೂಟವಾಗಿದೆ. ಇದು ಇತರ ನರಶಾಸ್ತ್ರೀಯ ಕೊರತೆಗಳನ್ನು ಕೂಡ ಒಳಗೊಳ್ಳಬಹುದು, ಉದಾಹರಣೆಗೆ ಮಾನಸ ಚಾಲನಾ ಕ್ಷೋಭೆಗಳು (ಉದಾ. ಅತಿ ಸಕ್ರಿಯ, ಕಡಿಮೆ ಸಕ್ರಿಯ ಅಥವಾ ಮಿಶ್ರ), ದುರ್ಬಲ ನಿದ್ದೆ-ಎಚ್ಚರ ಚಕ್ರ, ಭಾವನಾತ್ಮಕ ಕ್ಷೋಭೆಗಳು, ಮತ್ತು ಗ್ರಹಣ ಸಂಬಂಧಿ ಕ್ಷೋಭೆಗಳು (ಉದಾ. ಭ್ರಮೆಗಳು ಮತ್ತು ಭ್ರಾಂತಿಗಳು).

ಸನ್ನಿಯು ತೀವ್ರ ದೈಹಿಕ ಪ್ರಕ್ರಿಯೆಯಿಂದ ಉಂಟಾಗುತ್ತದೆ, ಅಂದರೆ ದೈಹಿಕವಾಗಿ ಗುರುತಿಸಬಲ್ಲ ಮೆದುಳಿನಲ್ಲಿನ ರಾಚನಿಕ, ಕಾರ್ಯಾತ್ಮಕ ಅಥವಾ ರಾಸಾಯನಿಕ ಸಮಸ್ಯೆ. ಇದು ಮೆದುಳಿನ ಹೊರಗಿನ ರೋಗ ಪ್ರಕ್ರಿಯೆಯಿಂದ ಉದ್ಭವಿಸಬಹುದು ಆದರೆ ಮೆದುಳಿನ ಮೇಲೆ ಪ್ರಭಾವ ಹೊಂದಿರುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Diagnostic and statistical manual of mental disorders : DSM-5 (Fifth ed.). Arlington, VA: American Psychiatric Association. 2013. ISBN 9780890425596. OCLC 847226928.
"https://kn.wikipedia.org/w/index.php?title=ಸನ್ನಿ&oldid=961765" ಇಂದ ಪಡೆಯಲ್ಪಟ್ಟಿದೆ