ಸನ್ನದು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸನ್ನದಿನ ಒಂದು ಉದಾಹರಣೆ (ಮ್ಯಾಗ್ನ ಕಾರ್ಟಾ).

ಸನ್ನದು (ಅಧಿಕಾರಪತ್ರ) ಎಂದರೆ ನೀಡುವವನು ನಿರ್ದಿಷ್ಟಪಡಿಸಿದ ಹಕ್ಕುಗಳನ್ನು ಚಲಾಯಿಸುವ ಪಡೆಯುವವನ ವಿಶೇಷಾಧಿಕಾರವನ್ನು ವಿಧ್ಯುಕ್ತವಾಗಿ ಒಪ್ಪುತ್ತಾನೆ ಎಂದು ಹೇಳಿ ಅಧಿಕಾರ ಅಥವಾ ಹಕ್ಕುಗಳನ್ನು ನೀಡುವುದು.[೧] ನೀಡುವವನು ಪ್ರಾಧಾನ್ಯತೆಯನ್ನು (ಅಥವಾ ಸಾರ್ವಭೌಮತ್ವ) ಉಳಿಸಿಕೊಳ್ಳುತ್ತಾನೆ, ಮತ್ತು ಪಡೆಯುವವನು ಸಂಬಂಧದೊಳಗೆ ಸೀಮಿತ (ಅಥವಾ ಕೆಳಗಣ) ಸ್ಥಾನವನ್ನು ಒಪ್ಪಿಕೊಳ್ಳುತ್ತಾನೆ ಎಂಬುದು ಸೂಚ್ಯವಾಗಿದೆ, ಮತ್ತು ಈ ಅರ್ಥದಲ್ಲಿ ಐತಿಹಾಸಿಕವಾಗಿ ಸನ್ನದುಗಳನ್ನು ನೀಡಲಾಗುತ್ತಿತ್ತು, ಮತ್ತು ಆ ಅರ್ಥವನ್ನೇ ಈ ಪದದ ಆಧುನಿಕ ಬಳಕೆಯಲ್ಲಿ ಉಳಿಸಿಕೊಳ್ಳಲಾಗಿದೆ.

ಪುರಸಭಾ ಸನ್ನದು[ಬದಲಾಯಿಸಿ]

ಪುರಸಭೆಯು ನಗರಗಳು, ಕೌಂಟಿಗಳು, ಪಟ್ಟಣಗಳು, ಟೌನ್‍ಷಿಪ್‍ಗಳು, ಸನ್ನದು ಟೌನ್‍ಷಿಪ್‍ಗಳು, ಗ್ರಾಮಗಳು ಮತ್ತು ಬರೊಗಳು ಸೇರಿದಂತೆ (ಆದರೆ ಖಡಾಖಂಡಿತವಾಗಿ ಇದಕ್ಕೆ ಸೀಮಿತವಾಗಿಲ್ಲ), ಸ್ಥಳೀಯ ಆಡಳಿತ ಮಂಡಳಿಗೆ ಬಳಸಲಾಗುವ ಕಾನೂನು ಪದವಾಗಿದೆ. ಅಂತಹ ಪುರಸಭೆಗಳು ಅವುಗಳು ಸ್ಥಿತವಾಗಿರುವ ರಾಜ್ಯ ಅಥವಾ ಪ್ರಾಂತಗಳ ಕಾನೂನುಗಳಡಿ ಸ್ವ-ಆಡಳಿತದ ಘಟಕಗಳಾದಾಗ ಪೌರ ಏಕೀಕರಣ ಆಗುತ್ತದೆ. ಹಲವುವೇಳೆ, ಈ ಘಟನೆಯನ್ನು ಪುರಸಭಾ ಸನ್ನದಿನ ನೀಡುವಿಕೆ ಅಥವಾ ಘೋಷಣೆಯೊಂದಿಗೆ ಗುರುತಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2019-12-29. Retrieved 2019-12-29.
"https://kn.wikipedia.org/w/index.php?title=ಸನ್ನದು&oldid=1168243" ಇಂದ ಪಡೆಯಲ್ಪಟ್ಟಿದೆ