ಸದಸ್ಯ:Zameer pasha M S

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
wonderla,Mangalore
Zameer pasha M S


ಕುಟುಂಬ[ಬದಲಾಯಿಸಿ]

ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ ರಾಜ್ಯ, ಭಾರತ
ನಂದಿ ಬೆಟ್ಟ

ನನ್ನ ಹೆಸರು ಜಮೀರ್ ಪಾಷಾ ಎಂ ಎಸ್,ನನ್ನತಂದೆಯ ಹೆಸರು ಶಬ್ಬೀರ್ ಪಾಷಾ,ತಾಯಿಯ ಹೆಸರು ನಸೀಮ ತಾಜ್.ತಮ್ಮನ ಹೆಸರು ಮುಬಾರಕ್ ಪಾಷಾ ಎಂ ಎಸ್. ನಾನು https://en.wikipedia.org/wiki/Karnataka ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಕರ್ನಾಟಕ ರಾಜ್ಯ ಭಾರತ ಯ ಚಿಂತಾಮಣಿ ಎಂಬ ತಾಲ್ಲೂಕಿನ ಆರ್ ಕೆ ನರ್ಸಿಂಗ್ ಹೋಂ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ಸುಮಾರು 4.00 ಗಂಟೆಗೆ ದಿನಾಂಕ 04/07/2001 ರಲ್ಲಿ ಜನಿಸಿದೆನು.ನಂತರ ನಮ್ಮ ಕುಟುಂಬ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಎಂಬ ಗ್ರಾಮಕ್ಕೆ ವಲಸೆ ಹೋದೆವು.

ವಿದ್ಯಾಭ್ಯಾಸ[ಬದಲಾಯಿಸಿ]

ನಂತರ ನನ್ನನ್ನು ನಮ್ಮ ತಾಯಿ ಅಂಗನವಾಡಿಗೆ ಸೇರಿಸಿದರು.ಹಾಗೆ ನನ್ನ ಶಿಕ್ಷಣವನ್ನು ಮುಂದುವರಿಸಲು ನನ್ನನ್ನು ವೀರ ಹನುಮಾನ್ ಎಂಬ ಆಂಗ್ಲ ಶಾಲೆಯಲ್ಲಿ,ಎಲ್ ಕೆ ಜಿ ನಿಂದ ಎರಡನೇ ತರಗತಿಯವರೆಗೂ ಓದಿಸಿದರು .ನಂತರ ನಮ್ಮ ಕುಟುಂಬ ನಮ್ಮ ತಂದೆಯ ಕೆಲಸಕ್ಕಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಎಂಬ ತಾಲ್ಲೂಕಿಗಿ ವಲಸೆ ಹೋದೆವು.ಅಲ್ಲಿ ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸಲು ನನ್ನನ್ನು ನ್ಯೂ ಕಿರಣ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇರಿಸಿದರೂ.ನಂತರ ನಾನು ಮೂರನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ಓದಿದೆ.

ನೆನಪುಗಳು ಮತ್ತು ವಿದ್ಯಾಬ್ಯಾಸ[ಬದಲಾಯಿಸಿ]

ನಾನು ಹೋಗಿದ್ದ ಸ್ಥಳ
ಚಿಕ್ಕಮಗಳೂರು

ನಾನು ಮತ್ತು ನಮ್ಮ ಗೆಳೆಯರು ಶಾಲ ಶಿಕ್ಷಕರೊಂದಿಗೆ ಮೂರು ದಿನಗಳು ಚಿಕ್ಕಮಗಳೂರಿಗೇ,ತುಂಗಭದ್ರಾ ಮತ್ತು ಹಂಪಿ ಪ್ರವಾಸಕ್ಕೆ ಹೋಗಿದ್ದೆವು.ಅಲ್ಲಿನ ಸ್ಥಳಗಳು ಬಹಳ ಸುಂದರವಾಗಿದ್ದವು.ಹಾಗೆ ನನಗೆ ಕೆಲವು ಪುರಸ್ಕಾರಗಳು ಸಿಕ್ಕಿದವು.ನಾನು ಎಸ್ ಎಸ್ ಎಲ್ ಸಿ ನಲ್ಲಿ 625 ಅಂಕ್ಕಕೆ 518 ಅಂಕಗಳನ್ನು ಪಡೆದು ಉತ್ತೀರ್ಣನಾದೆ.

ವಾಸವಾಗಿದ್ದ ಸ್ಥಳ ಮತ್ತು ತಂದೆಯ ವ್ಯಪಾರ[ಬದಲಾಯಿಸಿ]

ನಮ್ಮ ತಂದೆ ಚಹಾ ಅಂಗಡಿಯನ್ನು ಇಟ್ಟಿದರು
ಚಹಾ ಅಂಗಡಿ

ನಾವು ಚಿಂತಾಮಣಿಯಲ್ಲಿ ಮೂರು ವರ್ಷಗಳ ಕಾಲ ಅಗ್ರಹಾರ ಎಂಬ ನಗರದಲ್ಲಿ ವಾಸಿಸುತ್ತಿದೆವು ನಂತರ ಕೆಲವು ಕಾರಣಾಂತರಗಳಿಂದ ಶಾಂತಿನಗರ್ ಎಂಬ ಸ್ಥಳದಲ್ಲಿ ನಾಲ್ಕು ವರ್ಷಗಳ ಕಾಲ ವಾಸಿಸುತ್ತಿದೆವು.ಚಿಂತಾಮಣಿಯಲ್ಲಿ ನಮ್ಮ ತಂದೆ ಚಹಾ ಅಂಗಡಿಯನ್ನು ನಡೆಸುತ್ತಿದ್ದರು.ಹಾಗೂ ತಮ್ಮ ತಂದೆ ಐದು ವರ್ಷಗಳ ಕಾಲ ಚಹಾ ಅಂಗಡಿಯನ್ನು ನಡೆಸಿದರು.ನಂತರ ಚಹಾ ಅಂಗಡಿಯಲ್ಲಿ ಸರಿಯಾಗಿ ವ್ಯಾಪಾರ ಆಗುತ್ತಿರಲಿಲ್ಲದ ಕಾರಣಕ್ಕಾಗಿ ನಮ್ಮ ತಂದೆ ಚಹಾ ಅಂಗಡಿಯನ್ನು ಬಿಟ್ಟು ಬೆಂಗಳೂರು ಮಹಾನಗರದ ಬೆಳಂದೂರು ಎಂಬ ನಗರದಲ್ಲಿದ http://ecospace.ambujaneotia.com/ ಎಂಬ ಸಾಫ್ಟ್ವೇರ್ ಕಂಪನಿಯಲ್ಲಿ ನಾಲ್ಕು ವರ್ಷಗಳಿಂದ ಸೆಕ್ಯುರಿಟಿ ಗಾರ್ಡ ಕೆಲಸವನ್ನು ಮಾಡುತ್ತಿದ್ದಾರೆ.ನಮ್ಮ ಕುಟುಂಬ ಚಿಂತಾಮಣಿಯಲ್ಲಿ ವಾಸಿಸುತ್ತಿದ್ದು ನಂತರ ನಮ್ಮ ತಂದೆಯ ಪ್ರತಿದಿನ ಚಿಂತಾಮಣಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದರಿಂದ ಅವರ ಕಷ್ಟವನ್ನು ನೋಡಲಾಗದ ಕಾರಣಕ್ಕಾಗಿ ನಮ್ಮ ಕುಟುಂಬ ಚಿಂತಾಮಣಿ ತಾಲೂಕಿನಿಂದ ಬೆಂಗಳೂರಿನಲ್ಲಿದ್ದ ಸರಜಾಪುರ ಹೋಬಳಿಗೆ ಸೇರಿದ ದೊಮ್ಮಸಂದ್ರ ಎಂಬ ನಗರದಲ್ಲಿ ವಲಸೆ ಬಂದೆವು.

ವಿದ್ಯಾಬ್ಯಾಸ[ಬದಲಾಯಿಸಿ]

ತಣ್ಣೀರ್ಬಾವಿ ಬೀಚ್,ಮಂಗಳೂರು,ಕರ್ನಾಟಕ,ಭಾರತ
ಮಂಗಳೂರು ಬೀಚ್

ಹಾಗೆ ನನ್ನ ಶಿಕ್ಷಣವನ್ನು ಮುಂದುವರಿಸಲು ನನ್ನನ್ನು https://en.wikipedia.org/wiki/Dommasandra,_Bangalore_Urban ಶ್ರೀ ಸರಸ್ವತಿ ವಿಧ್ಯಾನಿಕೇತನ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಮೊದಲ ಪಿಯುಸಿಗೆ ಸೇರಿಸಿದರು.ನಾನು ವಾಣಿಜ್ಯ ವಿಭಾಗದಲ್ಲಿ ನನ್ನ ಪಿಯುಸಿಯನ್ನು ಮುಗಿಸಿದೆ.ನಾನು ಮತ್ತು ನಮ್ಮ ಗೆಳೆಯರು ಶಾಲಾಶಿಕ್ಷಕರೊಂದಿಗೆ ಮಂಗಳೂರಿಗೆ ಮೂರು ದಿನ ಪ್ರವಾಸಕ್ಕೆ ಹೋಗಿದ್ದೆವು.ಹಾಗೂ ನಾನು ಪಿಯುಸಿನಲ್ಲಿ 600 ಅಂಕ್ಕಕೆ 560 ಅಂಕಗಳನ್ನು ಪಡೆದು ಉತ್ತೀರ್ಣನಾಗಿದೆ ಮತ್ತು ನನಗೆ 560 ಅಂಕಗಳನ್ನು ಪಡೆದಿದಕ್ಕೆ ನನ್ನನ್ನು ಕಾಲೇಜಿನಲ್ಲಿ ಹತ್ತು ಗ್ರಾಮ್ ಬೆಳ್ಳಿಯ ಪದಕ ಮತ್ತು 1000 ರೂಪಾಯಿಗಳನ್ನು ಕೊಟ್ಟು ಸನ್ಮಾನಮಾಡಿದರು.ಮುಂದೆ ನಾನು ಕ್ರೈಸ್ತ ಎಂಬ ಕಾಲೇಜಿಗೆ ಸೇರಿದ್ದೇನೆ.