ಸದಸ್ಯ:Zakeerhus

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೇಮ್ಸ್ ವ್ಯಾಟ್

ಜೇಮ್ಸ್ ವ್ಯಾಟ್ , ಎಫ್‌ಆರ್ಎಸ್, ಎಫ್ಆರ್ಎಸ್‌‍ಇ (೧೯ ಜನವರಿ ೧೭೩೬ - ೨೫ ಆಗಸ್ಷ್ ೧೮೧೯) ಒಬ್ಬ ಉಗಿ ಎಂಜಿನ್ ಅನ್ನು ಕಂಡು ಹಿಡಿದ ಸ್ಕಾಟ್‍ಲ್ಯಾಂಡಿನ ಸಂಶೋಧಕ, ಮೆಕ್ಯಾನಿಕಲ್ ಇಂಜಿನಿಯರ್ ಮತ್ತು ಬ್ರಿಟನ್ ಸಂಯುಕ್ತ ಸಂಸ್ಥಾನ ಮತ್ತು ಪ್ರಪಂಚದಾದ್ಯಂತ ಮೂಲಭೂತ ಬದಲಾವಣೆ ತಂದವನು .ಗ್ಲ್ಯಾಸ್ಗೋ ವಿಶ್ವವಿದ್ಯಾಲಯದಲ್ಲಿ ಸಲಕರಣೆ ತಯಾರಿಸುವ ಕೆಲಸ ಮಾಡುವಾಗ ವ್ಯಾಟ್‌ಗೆ ಉಗಿ ಎಂಜಿನ್ ತಂತ್ರಜ್ಞಾನದಲ್ಲಿ ಆಸಕ್ತಿ ಮೂಡಿತು. ಸಮಕಾಲಿನ ಎಂಜಿನ್ ಮಾದರಿಗಳಲ್ಲಿ ಸಿಲಿಂಡರ್ ತಂಪಾಗುವಿಕೆ ಮತ್ತು ಮತ್ತೆ ಶಾಖ ಪಡೆಯುವ ಶಕ್ತಿಯು ನಷ್ಷವಾಗುತ್ತಿದ್ದು ಇದು ಒಂದು ದೊಡ್ಡ ಸಮಸ್ಯೆಯಾಗಿದೆ ಎಂದು ಅರ್ಥ ಮಾಡಿಕೊಂಡನು. ಪ್ರತ್ಯೇಕ ಕಂಡೆನ್ಸರ್ ಬಳಕೆಯಿಂದ ನಷ್ಷವಾಗುವ ಶಕ್ತಿಯನ್ನು ತಡೆಯಬಹುದು. ಹಾಗೆಯೇ ಶಕ್ತಿಯ ಸಾಮರ್ಥ್ಯವನ್ನು ಹೆಚ್ಚಿಸಬಹುದು ಮತ್ತು ಬೆಲೆಯ ಪರಿಣಾಮವನ್ನು ಸುಧಾರಿಸಬಹುದು ಎಂದು ಕಂಡು ಕೊಂಡ ವ್ಯಾಟ್ ತನ್ನ ಬೆಳವಣಿಗೆಯ ಮಾದರಿಗಳನ್ನು ಪರಿಚಯಿಸಿದನು ಹಾಗೂ ಅಶ್ವಶಕ್ತಿಯ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದನು.