ಸದಸ್ಯ:Yogini suki/ನನ್ನ ಪ್ರಯೋಗಪುಟ 2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಸ್ಪೃಶ್ಯತೆ ಯ ಹುಟ್ಟು[ಬದಲಾಯಿಸಿ]

ಅಸ್ಪೃಶ್ಯತೆ ಅತ್ಯಂತ ಕ್ರೂರ ಮತ್ತು ಪ್ರತಿಗಾಮಿ. ಕ್ರಿ.ಶ 400-600 ರಲ್ಲಿ ಅಸ್ಪೃಶ್ಯತೆಯು ಜಾರಿಗೆ ಬಂದಿದೆ ಎಂದು ಇತಿಹಾಸಕಾರರು ಅಂದಾಜಿಸಿದ್ದಾರೆ. 

ಅಸ್ಪೃಶ್ಯತೆಯ ಇತಿಹಾಸ ಬಹಳ ಕ್ರೂರ. ಆರ್ಯ ಮತ್ತು ಬುಡಕಟ್ಟು ಜನಾಂಗದವರ ಮಧ್ಯೆ ನಡೆದ ಘೋರ ಯುದ್ದ ಅಸ್ಪೃಶ್ಯತೆಯ ಉಗಮಕ್ಕೆ ಕಾರಣವಾಗಿದ್ದು. ಅರಣ್ಯದಲ್ಲಿ ಬುಡಕಟ್ಟು ಜನಾಂಗಕ್ಕೂ ಆರ್ಯ ಜನಾಂಗಕ್ಕೂ ಸಂಘರ್ಷ ನಡೆಯಿತು. ಕೃಷಿಗಾಗಿ ಭೂಮಿ ಬಯಸಿ ಆರ್ಯರು, ಅರಣ್ಯದಲ್ಲಿ ವಾಸವಾಗಿದ್ದ ಬುಡಕಟ್ಟು ಜನಾಂಗದ ಮೇಲೆ ಒಂದೇ ಸಮನೆ ದಾಳಿ ಮಾಡಿದರು. ಕೆಲವು ಕಾಲ ಈ ಸಂಘರ್ಷವು ಘೋರವಾಗಿ ನಡೆದು, ಸಬಲರಾದ ಆರ್ಯರ ಮುಂದೆ ಬುಡಕಟ್ಟು ಜನಾಂಗವು ಸೋಲನ್ನು ಅನುಭವಿಸಿತು.ಇದಾದ ನಂತರ ಬುಡಕಟ್ಟು ಜನಾಂಗದವರನ್ನು ಆರ್ಯ ಜನಾಂಗವು ಅರಣ್ಯದಿಂದ ಓಡಿಸಿ, ಆ ಊರಿಂದನೆ ಹೊರಗಿಟ್ಟರು. ಹೀಗೆ ಹೊರಗಿಟ್ಟ ವ್ಯಕ್ತಿಗಳನ್ನು ಗುಲಾಮರನ್ನಾಗಿ ಮಾಡಿ, ಅವರನ್ನೂ ಅತ್ಯಂತ ಹೊಲಸು ಎಂದು ಬಿಂಬಿಸಿ, ಹೊಲಸು ಕೆಲಸ ನೀಡಿ, ಅಸ್ಪೃಶ್ಯರು ಎಂದು ಕರೆದರು.

ಭಾರತದಲ್ಲಿ ಬ್ರಾಹ್ಮಣ್ಯ ಹುಟ್ಟಿದ್ದು[ಬದಲಾಯಿಸಿ]

ಭಾರತದಲ್ಲಿ ಬ್ರಾಹ್ಮಣ್ಯವಾದ ಹುಟ್ಟಿದ್ದು ಕೃಷಿ ವಿಕಾಸಗೊಳ್ಳುವ ಕಾಲಘಟ್ಟದಲ್ಲಿ. ಅಸ್ಪೃಶ್ಯತೆಯ ಸಮುದಾಯಗಳನ್ನು ವಂಚಿಸಿ ಕೃಷಿ ಸಮುದಾಯದೊಳಗೆ ಎಳೆದು ತಂದರು. ಉಳಿಗಮಾನ್ಯ ದೊರೆಗಳಿಗೆ ಅನುಕೂಲವಾಗುವಂತೆ ಕೃಷಿ ಸಮುದಾಯದ ಕೆಲಸಗಳನ್ನು ವಿವಿಧ ಸಮುದಾಯಗಳಿಗೆ ಹಂಚಿ , ಅಸಮಾನತೆ ಪಾಲನ್ನು ನಿಗದಿ ಪಡಿಸಿದರು.

ಬ್ರಾಹ್ಮಣವಾದ[ಬದಲಾಯಿಸಿ]

ಮುಂದೆ ಬೆಳೆದು ಬಂದ ಸಮಾಜದಲ್ಲಿ ಆರ್ಯರ ಬ್ರಾಹ್ಮಣವಾದ ಅತ್ಯಂತ ಪ್ರತಿಗಾಮಿ ಚಿಂತನೆಯಾಗಿ ರೂಪುಗೊಂಡಿತು. ವ್ಯಕ್ತಿಯ ಹುಟ್ಟಿನ ಆಧಾರದ ಮೇಲೆ ಮೇಲು ಕೀಳು, ಸಮರ್ಥ ಅಸಮರ್ಥ, ಉಚ್ಚ ,ನೀಚ, ಎಂಬ ಇತ್ಯಾದಿ ಪ್ರತಿಗಾಮಿ ಮೌಲ್ಯಗಳ ಸರಮಾಲೆಯನ್ನೆ ಹುಟ್ಟು ಹಾಕಿತು. ಈ ಮೌಲ್ಯಗಳು ಪ್ರಬಲವಾಗಿ ಅಸ್ತಿತ್ವವನ್ನೂ ಪಡೆದುಕೊಂಡಿತು. ಇಲ್ಲಿಂದ ಆಳುವರ್ಗಗಳು ಬ್ರಾಹ್ಮಣವಾದವನ್ನೆ ಮುಂದುವರೆಸಿಕೊಂಡು ಬಂದಿದೆ.

==ಜಾತಿ ಅಥವ ಅಸ್ಪೃಶ್ಯತೆ ಪ್ರಶ್ನೆಯ ನಾಶ[ಬದಲಾಯಿಸಿ]

ಜಾತಿ ಅಥವ ಅಸ್ಪೃಶ್ಯತೆಯ ಪ್ರಶ್ನೆಯನ್ನು ನಾಶ ಮಾಡಬೇಕಾದರೆ ಅದನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳಬೇಕು. ಅಮಾನವೀಯ ಜಾತಿ ಸಾಮಾಜಿಕ ರೂಪವಾದ ಅಸ್ಪೃಶ್ಯತೆಯ ವಿರುದ್ದ ಹೋರಾಟ ನಡೆಸಿದ ಅಪರಿಮಿತ ವ್ಯಕ್ತಿಗಳ ಬಲಿದಾನಗಳು ನಡೆದಿದೆ. ಈ ಹೊರಾಟದಿಂದಲೆ ಅಸ್ಪೃಶ್ಯತೆಯಲ್ಲಿ ಒಂದಷ್ಟು ಸಡಿಲಿಕೆ ತರಲು ಸಾಧ್ಯವಾಗಿದೆ.