ಸದಸ್ಯ:Yeshwanth kalavathi

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯಶವಂತ್ ಎಸ್ ನಾನು ದಿನಾಂಕ ೧೩-೧೧-೧೯೯೭ ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೂದಗುರು ಎಂಬ ಗ್ರಾಮದಲ್ಲಿ ಜನಿಸಿದ್ದೇನೆ. ನನ್ನ ತಂದೆಯ ಹೆಸರು ಎಸ್ ಆರ್ ಸೂರ್ಯನಾರಯಣಗುಪ್ತ, ನನ್ನ ತಾಯಿಯ ಹೆಸರು ಕಲಾವತಿ ಎಸ್.

  ನನ್ನ ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಮುಗಿಸಿ, ನಂತರ ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಗೌರಿಬಿದನೂರಿನಲ್ಲಿ ಮುಂದುವರಿಸಿದ್ದೇನೆ. ಫ್ರೌಡ ಶಿಕ್ಷಣವನ್ನು ಗೌರಿಬಿದನೂರಿನಲ್ಲಿ ಮುಗಿಸಿದ್ದೇನೆ. ಆ ಸಮಯದಲ್ಲಿ ನಾನು ಓದಿನಲ್ಲಿ ಬಹಳ ತುಂಟನಾಗಿದ್ದೆ, ನಾನು ಕ್ರಿಡೆಗಳಲ್ಲಿ ಆಸಕ್ತಿಯಿಂದ ಭಾಗವಯಿಸುತ್ತಿದ್ದೆ. ನಾನು ಗುಂಡು ಎಸೆತ,ಕಬ್ಬಡಿ ಮತ್ತು ಬ್ಯಾಸ್ಕೇಟ್ ಬಾಲ್ ಭಾಗವಹಿಸುತಿದ್ದೆ. ಜಿಲ್ಲಾ ಮಟ್ಟದ  ಬ್ಯಾಸ್ಕೇಟ್ ಬಾಲ್ ಕ್ರಿಡೆಯಲ್ಲಿ ಭಾಗವಹಿಸಿ ನಮ್ಮ ಶಾಲೆಗೆ ದ್ವಿತೀಯ ಬಹುಮಾನವನ್ನು ತಂದುಕೊಟ್ಟಿದ್ದೇನೆ.
 ಆ ನಂತರ ನನ್ನ ಪಿಯುಸಿ ಶಿಕ್ಷಣವನ್ನು ಆಳ್ವಾಸ್  ಶಿಕ್ಷಣ ಸಂಸ್ಥೆಯಲ್ಲಿ ಪೂರೈಯಿಸಿದ್ದೇನೆ. ಅಲ್ಲಿ ಓದುತ್ತಿರುವಾಗ ನನ್ನ ಜೀವನಕ್ಕೆ ಉಪಯೋಗವಾಗುವ ಬಹಳಷ್ಟು ವಿಷಯಗಳನ್ನು ತಿಳಿದುಕೊಂಡೆ. ಮತ್ತು ನಮ್ಮ ಕಾಲೇಜಿನ ಪ್ರಾಂಶುಪಾಲರು ಬಹಳ ಒಳ್ಳೆಯವರು ಮಕ್ಕಳಿಗೆ ಯಾವ ಸಮಯದಲ್ಲಿ ಏನು ಬೇಕು ಎಂಬ ವಿಷಯಗಳನ್ನು ತಿಳಿಸಬಲ್ಲರು, ಆ ಕಾಲೇಜಿನಲ್ಲಿ ವರ್ಷಕ್ಕೊಮ್ಮೆ "ನುಡಿಸಿರಿ ಮತ್ತು ವಿರಾಸತ್" ಎಂಬ ಕಾರ್ಯಕ್ರಮವನ್ನು ಸುಮಾರು ಇಪ್ಪತ್ತು ಕೊಟಿ ಖರ್ಚು ಮಾಡಿ ನಡೆಸುತ್ತಾರೆ ಮತ್ತು ನಮ್ಮ ಕನ್ನಡ ನುಡಿಯನ್ನು ಬೆಳೆಸಿ ಗೌರವಿಸಿದ್ದಾರೆ.ಕಾಲೇಜಿನಲ್ಲಿ ವಾರ್ಷಿಕೋತ್ಸವದ ಅಂಗವಾಗಿ ನಡೆಸಿದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನವನ್ನು ಪಡೆದಿದ್ದೇನೆ. ಅಲ್ಲಿ ನನಗೆ ಓದಲು ಚೆನ್ನಾಗಿ ಪ್ರೋತ್ಸಾಹ ಸಿಗುತ್ತಿತ್ತು. ಪ್ರತಿ ದಿನ ನಮಗೆ ಪ್ರಾರ್ಥನೆ, ವ್ಯಾಯ್ಯಮವನ್ನು ಮಾಡಿಸುತ್ತಿದ್ದರು. ನಾನು ನೀಲಯದಲ್ಲಿದ್ದೆನು, ಅಲ್ಲಿ ನನಗೆ ಒಳ್ಳೆಯ ಸ್ನೇಹಿತರಿದ್ದರು ತುಂಬಾ ಖುಷಿಯಾಗಿದ್ದೆವು. ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇಕಡಾ ೯೪%ಗಳಿಸಿ ನಮ್ಮ ತಂದೆ ತಾಯಿಯರಿಗೆ ಸಂತಸ ತಂದಿದ್ದೇನೆ.
 ನಂತರ ನನ್ನ ಪದವಿ ಶಿಕ್ಷಣವನ್ನು 'ಕ್ರೈಸ್ಟ ಯುನಿರ್ವಸಿಟಿಯಲ್ಲಿ' ಅಭ್ಯಾಸ ಮಾಡುತ್ತಿದ್ದೇನೆ. ಇದು ಒಳ್ಳೆಯ ಹೆಸರಾಂತ ಕಾಲೇಜು, ನಾನು ಇಲ್ಲಿ ಅಭ್ಯಾಸ ಮಾಡುತ್ತಿರುವುದು ನನ್ನ ಪುಣ್ಯ. ನನಗೆ ಇಲ್ಲಿ ಭಾಷಾ ಕೌಶಲ್ಯ ಬೆಳೆಯುತ್ತದೆ, ಒಳ್ಳೆಯ ಸ್ನೇಹಿತರಿದ್ದಾರೆ ಹಾಗೂ ನಮ್ಮ ತರಗತಿ ಶಿಕ್ಷಕರ ಪ್ರೋತ್ಸಾಹ ಚೆನ್ನಾಗಿದೆ. ಈ ಕಾಲೇಜಿನಲ್ಲಿ ಓದುತ್ತಿರುವುದರಿಂದ ಮುಂದೆ ಒಳ್ಳೆಯ ಭವಿಷ್ಯವಿದೆ. ಈಗ ನಾನು ಮಳಕಲ ಎಂಬ ಉಚಿತ ನೀಲಯದಲಗಲ್ಲಿದ್ದೇನೆ,  ಪ್ರತಿ ದಿನ ನಮಗೆ ಪ್ರಾರ್ಥನೆ, ವ್ಯಾಯ್ಯಮವನ್ನು ಮಾಡಿಸುತ್ತಾರೆ.

ಇಲ್ಲಿ ಹೆಚ್ಚು ಕೆಲಸ ಮಾಡಬೇಕಾಗಿದೆ ಅನಿವಾರ್ಯ.

ನನಗೆ ಮೊಬೈಲ್ ಗೇಮ್ ಎಂದರೆ ಇಷ್ಟ. ನಾನು ಮುಂದೆ ಒಳ್ಳೆಯ ವ್ಯಕ್ತಿಯಾಗಬೇಕೆಂಬ ಆಸೆ ಇದೆ. ನನಗೆ ಅರ್ಥಶಾಸ್ತ್ರ ವಿಷಯದ ಬಗ್ಗೆ ಹೆಚ್ಚು ಆಸಕ್ತಿ.ನನಗೆ ನಮ್ಮ ದೇಶದ ಮೇಲೆ ತುಂಬಾ ಪ್ರಿತಿ,ನಮ್ಮ ದೇಶಕ್ಕಾಗಿ ನನ್ನ ಪ್ರಾಣವನ್ನು ಅರ್ಪಿಸುತ್ತೇನೆ.
ನನ್ನ ಗುರಿ ಐ.ಪಿ.ಎಸ್ ಅಧಿಕಾರಿಯಾಗಿ ನಮ್ಮ ದೇಶವನ್ನು ಶತೃ ದೇಶಗಳಿಂದ ರಕ್ಷಿಸುತ್ತೇನೆ, ಇದೇ ನನ್ನ ಜೀವನದ ಮುಖ್ಯ ಗುರಿ.
                             "ಜೈ ಹಿಂದ್, ಜೈ ಭಾರತ ಮಾತೆ"
This user is a member of WikiProject Education in India



ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ: