ವಿಷಯಕ್ಕೆ ಹೋಗು

ಸದಸ್ಯ:Yeshma uthaiah/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫೇಸ್‌ಬುಕ್

ಫೇಸ್‌ಬುಕ್ ಒಂದು ವಿಶ್ವವ್ಯಾಪಕವಾದ ಸಾಮಾಜಿಕ ಸಂಪರ್ಕದ ಜಾಲತಾಣ, ಇದರ ಕಾರ್ಯಾಚರಣೆ ನಿರ್ವಹಿಸುವ ಮತ್ತು ಖಾಸಗಿಯಾಗಿ ಮಾಲಿಕತ್ವ ಹೊಂದಿರುವ ಕಂಪನಿ ಬಳಕೆದಾರರು ತಮ್ಮ ಮಿತ್ರರನ್ನು ಇಲ್ಲಿ ಸೇರಿಸಬಹುದು ಮತ್ತು ಅವರಿಗೆ ಸಂದೇಶಗಳನ್ನು ಕಳುಹಿಸಬಹುದು, ಮತ್ತು ತಮ್ಮ ವೈಯುಕ್ತಿಕ ವ್ಯಕ್ತಿಚಿತ್ರವನ್ನು ಸಹ ನವೀಕರಿಸಿ ಮಿತ್ರರಿಗೆ ತಮ್ಮ ಬಗ್ಗೆ ಪ್ರಕಟಿಸಬಹುದು. ಇದರ ಜೊತೆಗೆ, ಬಳಕೆದಾರರು ಊರು, ಕಾರ್ಯಾಲಯ, ಶಾಲೆ, ಮತ್ತು ಪ್ರದೇಶದವರು ಸಂಘಟಿಸಿದ ಸಂಪರ್ಕಜಾಲದಲ್ಲಿ ಸೇರಬಹುದು. ವಿಶ್ವವಿದ್ಯಾಲಯದ ನಿರ್ವಾಹಕರು ತಮ್ಮ ವಿದ್ಯಾರ್ಥಿಗಳು ಪರಸ್ಪರರನ್ನು ಒಳ್ಳೆಯ ರೀತಿಯಲ್ಲಿ ಪರಿಚಿತರಾಗಲಿ ಎಂಬ ಉದ್ದೇಶದಿಂದ ಶೈಕ್ಷಣಿಕ ವರ್ಷದ ಆರಂಭದಲ್ಲಿ ಕೊಡುತ್ತಿದ್ದ ಪುಸ್ತಕಗಳ ಆಡುಮಾತಿನ ಹೆಸರಿಂದ ಈ ವೆಬ್‍ಸೈಟ್‌‍ನ ಹೆಸರು ಉಗಮಗೊಂಡಿದೆ. ಮಾರ್ಕ್‌‍ ಜ್ಯೂಕರ್‌‍ಬರ್ಗ್ ಹಾರ್ವರ್ಡ್‌‍ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾಗ ತಮ್ಮ ಕಾಲೇಜಿನ ಜೊತೆವಾಸಿಗರು ಮತ್ತು ಕಂಪ್ಯೂಟರ್ ಸೈನ್ಸ್ನ ವಿದ್ಯಾರ್ಥಿ ಗೆಳೆಯರಾದ ಎಡ್ವಾರ್ಡೊ ಸೆವರಿನ್, ಡಸ್ಟಿನ್ ಮಸ್ಕೊವಿಟ್ಸ್ ಮತ್ತು ಕ್ರಿಸ್ ಹ್ಯುಸ್‌ರೊಂದಿಗೆ ಸೇರಿ ಫೇಸ್‍ಬುಕ್ ಶೋಧಿಸಿದರು. ಆರಂಭದಲ್ಲಿ ಈ ಜಾಲತಾಣದ ಸದಸ್ಯತ್ವ ಕೇವಲ ಹಾರ್ವರ್ಡ್ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿತ್ತು, ಆದರೆ ನಂತರ ಅದು ಬೊಸ್ಟನ್ ಏರಿಯಾ, ದಿ ಐವಿ ಲೀಗ್, ಮತ್ತು ಸ್ಟಾನ್‌‍ಫೋರ್ಡ್‌‍ ವಿಶ್ವವಿದ್ಯಾಲಯದಂತಹ ಇತರ ಕಾಲೇಜುಗಳಿಗೂ ವಿಸ್ತಾರಗೊಂಡಿತು. ನಂತರ ಇನ್ನೂ ವಿಸ್ತರಿಸುತ್ತ ಯಾವುದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೂ ಕೂಡ ಸೇರ್ಪಡೆಗೆ ಅವಕಾಶ ನೀಡತೊಡಗಿತು, ನಂತರ ಪ್ರೌಢ ಶಾಲೆಯ ವಿದ್ಯಾರ್ಥಿಗಳು, ಮತ್ತು ಕೊನೆಯದಾಗಿ 13 ವರ್ಷ ಹಾಗು ಅದಕ್ಕಿಂತ ಮೇಲ್ಪಟ್ಟವರು ಯಾರಾದರೂ ಸೇರಬಹುದಾಗಿತ್ತು. ಈ ಜಾಲತಾಣವು ಇಂದು ವಿಶ್ವದಾದ್ಯಂತ 300 ಮಿಲಿಯನ್‌‍ಗಿಂತ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ. ಫೇಸ್‌‍ಬುಕ್ ಕೆಲವು ವಿವಾದಗಳಿಗೆ ಕೂಡಾ ಗುರಿಯಾಗಿದೆ. ಸಿರಿಯಾ, ಚೀನಾ, ವಿಯಟ್ನಾಮ್‌‍, ಮತ್ತು ಇರಾನ್ ಸೇರಿದಂತೆ ಇತರ ಹಲವು ದೇಶಗಳಲ್ಲಿ‍ ಹಲವಾರು ಬಾರಿ ಇದನ್ನು ತಡೆಹಿಡಿಯಲಾಗಿತ್ತು.