ಸದಸ್ಯ:Yathibh/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೊಡ್ಡಬಳ್ಳಾಪುರ ಜಿಲ್ಲಾ ಹೋರಾಟ ಚಳುವಳಿ

ಪ್ರಾರಂಭ : ಕುಮಾರ ಸ್ವಾಮಿಯವರು ಮುಖ್ಯಮಂ ತ್ರಿಯಾಗಿದ್ದಾಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಮನಗರ ಕಂದಾಯ ಉಪವಿಭಾಗವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಿದರು. ಅದೆ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಕಂದಾಯ ಉಪವಿಭಾಗವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರವನ್ನು ಮಾಡಬೆಕೇಂದು ಒತ್ತಾಯಿಸಿ ದೊಡ್ಡಬಳ್ಳಾಪುರದ ನಾಗರಿಕರು ಜಿಲ್ಲಾ ಹೋರಾಟ ಸಮಿತಿ ರಚಿಸಿ ಹೋರಾಟ ಪ್ರಾರಂಭಿಸಿದರು.

ಚಳುವಳಿ ಮುಂದುವರೆದ ಭಾಗ : ನಂತರದ ದಿನಗಳಲ್ಲಿ ಚಳುವಳಿಯು ಕುಂಟಿತಗೊಂಡಿದ್ದರು ನರಸಿಂಹ ಸ್ವಾಮಿಯವರು ಕಾಂಗ್ರೇಸ್ ಪಕ್ಷ ತೊರೆದು ಬಿ.ಜೆ.ಪಿ ಸೇರಿದಾಗ ಅಂದಿನ ಮುಖ್ಯಮಂತ್ರಿಗಳು ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಮಾಡುವುದಾಗಿ ಘೋಷಿಸಿದರು ಆದರೆ ಕೊಟ್ಟ ಮಾತು ತಪ್ಪಿದರು ಇವರ ಮುಂದುವರೆದ ಭಾಗವಾಗಿ ಜಿಲ್ಲಾ ಹೋರಾಟ ಸಮಿತಿಯು 2013 ರಲ್ಲಿ ಪುನರ್ ರಚನೆಯಾಗಿ ವಿದ್ಯಾರ್ಥಿಗಳು ಸಂಘ-ಸಂಸ್ಥೆಗಳು ಉಪನ್ಯಾಸಕರು ಕಾರ್ಮಿಕರು ರೈತರು ಪತ್ರಕರ್ತರು ಸೇರಿ ಹೋರಾಟ ಪ್ರಾರಂಭಿಸಿದರು. ಈ ಹೋರಾಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾದ ಆರ್.ಕೆ.ರವಿಕಿರಣ್, ರಾಜೇಂದ್ರ. ತೂಬಗೆರೆ ಶರೀಫ್, ಹುಲಿಕಲ್ ನಟರಾಜು ಮುಂತಾದ ಕನ್ನಡ ಪರ ಹೋರಾಟಗಾರರ ನೇತೃತ್ವದಲ್ಲಿ ಹೋರಾಟ ಮುಂದುವರೆಸಿದ್ದಾರೆ. ದೊಡ್ಡಬಳ್ಳಾಪುರ ಕಂದಾಯ ಉಪ ವಿಭಾಗ ಕಚೇರಿಯು ಕೂಡ ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮೊದಲನೇಯ ಹಂತದಲ್ಲಿ ಉಪವಿಭಾಗ ಕಛೇರಿ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಿಸಬೇಕು ತಿರ್ಮಾನ ಕೈಗೊಂಡಿದ್ದಾರೆ ಹೋರಾಟ ಮುಂದುವರೆಸಿದ್ದಾರೆ