ಸದಸ್ಯ:Yatheen M/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                            ಹೈಗನ್ ನ ತರಂಗ ಸಿದ್ಧಾಂತ 


ಕೆಲವು ಮಿತಿಗಳಿಂದ ಬೆಳಕಿನ ಕಣ ಸಿದ್ಧಾಂತವು ವಿಫಲವಾದಾಗ ಹೈಗನ್ ನು ಒಂದು ಸಿದ್ಧಾಂತವನ್ನು ಪ್ರತಿಪಾದಿಸಿದ,
ಅದಕ್ಕೆ ಹೈಗನ್ನನ ಬೆಳಕಿನ ತರಂಗ ಸಿದ್ಧಾಂತ ಎಂದು ಹೆಸರು.
ಯಾಂತ್ರಿಕ ತರಂಗವು ಚಲಿಸಲು ಮಾಧ್ಯಮ ಆವಶ್ಯಕವಾಗಿದೆ.ಹೈಗನ್ ನ ಪ್ರಕಾರ ಬೆಳಕು ಯಾಂತ್ರಿಕ ತರಂಗಗಳ ರೂಪದಲ್ಲಿ ಚಲಿಸುತ್ತದೆ,ಮಾಧ್ಯಮದಲ್ಲಿ ಉಂಟಾಗುವ ಕ್ಶೋಭೆಯ ತರಂಗ.
ಇಲ್ಲಿ ಹೈಗನ್ನನು ಈಥರ್ ಎಂಬ ಪದವನ್ನು ಕಲ್ಪಿಸಿಕೊಂಡು ಇದರ ಮೂಲಕ ಬೆಳಕನ್ನು ಹಾಯಿಸಿದಾಗ ಬೆಳಕು ಶಕ್ತಿಯನ್ನು ತರಂಗ ರೂಪದಲ್ಲಿ ಸಾಗಿಸುವುದರಿಂದ ಈಥರ್ನ ಅಣುಗಳು ಕಂಪಿಸುತ್ತದೆ ಎಂದು ತಿಳಿಸಿದ.
ಹೈಗನ್ನಿನ ತರಂಗ ಸಿದ್ಧಾಂತವು ಬೆಳಕಿನ ಪ್ರತಿಫಲನ,ವಕ್ರೀಭವನ,ವಿಕ್ಶೇಪಣ,ವ್ಯತೀಕರಣ ಮತ್ತು ವಿವರ್ತನೆಗಳನ್ನು ವಿವರಿಸಿತು.
ಆದರೆ ಮೈಕಲ್ಸ್ ನ್ ಮಾರ್ಲೆ ಪ್ರಯೂಗದ ಮೂಲಕ ಈಥರ್ನಂತಹ ನಿರ್ವಾತವು ಯಾವುದೇ ಮಾಧ್ಯಮವನ್ನು ಹೊಂದಿರುವುದಿಲ್ಲ ಎಂದು ತಿಳಿದುಬಂದಿತು.
ಆದರಿಂದ ಹೈಗನ್ನಿನ ಸಿದ್ಧಾಂತವು ವಿಫಲವಾಯಿತು

ಸಿ.ಎಂ.ಇ 

ನಮ್ಮ ಸೂರ್ಯನಲ್ಲಿ ಊಂಟಾಗುವ ಕಾಂತೀಯ ತಳಮಳಗಳೀಂದ ಮೈದಳೆವ ಸೌರ ಕಲೆ,ಸೌರಜ್ವಾಲೆ ಇತ್ಯಾದಿ ವಿದ್ಯಮಾನಗಳಂತೆಯೇ ಸಿ.ಎಂ.ಇ ಕೂಡ ಒಂದು ಸೌರ ವಿದ್ಯಮನ. ಅದರೆ ಶಕ್ತಿ ,ವ್ಯಪ್ತಿ ಪ್ರಮಾಣ ಮತ್ತು ಪರಿಣಾಮಗಳಲ್ಲಿ ಸಿ.ಎಂ.ಇ ಯ ಭೀಕರತ್ತೆಯನು ಬೇರಾವ ಸೌರ ವಿದ್ಯಮನಕೂ ಹೋಲಿಸುದಕೂ ಸಾಧ್ಯವಿಲ್ಲ.ಸೂರ್ಯನ ವಾತಾವರಣದ ಅತ್ಯಂತ ಹೊರಪದರವಾದ ಕೊರೋನಾದಿಂದ ಚಿಮ್ಮಿ,ಸಿಡಿದು ಹೊರ ಹರಿವ ಭಾರೀ ಪ್ರಮಾಣದ ದ್ರವ್ಯ ಉತ್ಸರ್ಜನ ಇದಾದ್ದರಿಂದ ಈ ವಿದ್ಯಮಾನಕ್ಕೆ ಕೊರೋನಲ್ ಮಾಸ್ ಇಜೆಕ್ಷನ್(ಸಿ.ಎಂ.ಇ) ಎಂದೇ ಹೆಸರು.

ಸೂರ್ಯನಲ್ಲಿ ಸಿ.ಎಂ.ಇ ಯೊಂದು ಸಂಭವಿಸಿದಾಗ ಸೌರ ಕರೋನದಿಂದ ಸರಾಸರಿ ೧೦ ಶತಕೋಟಿ ಟನ್ ಗಳಷ್ತು ಸೌರಉತ್ಸರ್ಜನ ದ್ರವ್ಯ ಸುಮಾರು ೧ ಶತಕೋಟಿ ಜಲಜನಕ ಬಾಂಬ್ ಗಳ ಒಟ್ಟು ಸ್ಪೋಟ ಶಕ್ತಿಯೊಡನೆ ತಾಸಿಗೆ ಒಂದೂವರೆ ದಶಲಕ್ಶ ಕಿ.ಮಿ ಗೂ ಅಧಿಕ ವೇಗದಲ್ಲಿ ಏಕಾಏಕಿ ಉತ್ಸರ್ಜನಗೊಳ್ಳುತ್ತದೆ. ಮಹಾಪ್ರಲಳಯ ಪ್ರವಾಹದಂತೆ ಹೊರಕೆ ಹರಡತೊಡಗುತ್ತದೆ.ಸಿ.ಎಂ.ಇ ಯಲ್ಲಿ ಚಿಮ್ಮುವ ದ್ರವ್ಯ ಭಾರಿ ಬಿಸಿಯ ಪ್ಲಾಸ್ಮ ಸ್ತಿಥಿಯ ಸೌರ ದ್ರವ್ಯ ವಿದ್ಯುದಾವಿಶ್ಟ ಕಣಗಳು ಹಾಗು ಅಪಾರ ವಿದ್ಯುತ್ ಕಾಂತಿಯ ವಿಕಿರಣಗಳು. ಸೌರವ್ಯೂಹದ ಎಲ್ಲೆಡೆಗೆ ಧಾವಿಸುವ ಈ ಅಗೋಚರ ದ್ರವ್ಯ ಪ್ರವಾಹ ಸೂರ್ಯನಿಂದ ೧೫ಕೋಟಿ ಕಿ.ಮಿ ದೂರದಲ್ಲಿರುವ ಭೂಮಿಯನ್ನು ಸಾಮಾನ್ಯವಾಗಿ ಒಂದರಿಂದ ಮೂರು ದಿನಗಳಲ್ಲಿ ತಲುಪುತ್ತದೆ.ಪ್ರತಿ ಸಾಧಾರಣ ಸಿ.ಎಂ.ಇಯ ಗಾತ್ರ ನಮ್ಮ ಇಡಿ ಭೂಮಿಯ ನೂರಾರು ಸಾವಿರಾರು ಪಟ್ಟು ಮೀರುತ್ತದೆ.