ಸದಸ್ಯ:Vkshindhe7675/sandbox
ಸದಸ್ಯ ಚೌಕ
[ಬದಲಾಯಿಸಿ]AEF | ಈ ಸದಸ್ಯ ಆಳ್ವಾಸ್ ಕಾಲೇಜು ಮೂಡುಬಿದಿರೆ ವಿದ್ಯಾರ್ಥಿ. |
ಇತಿಹಾಸ
ವರ್ತಮಾನದ ತಲ್ಲಣಗಳು
ಕರ್ನಾಟಕ;ವರ್ತಮಾನದ ತಲ್ಲಣಗಳು ಇದು ಈ ಬಾರಿಯ ನುಡಿಸಿರಿಯ ಮುಖ್ಯ ಪರಿಕಲ್ಪನೆ. ಇದರಿಂದಾಗಿ ಈಬಾರಿಯ ಸಮ್ಮೇಳನದಲ್ಲಿ ಆತಂಕ, ತಲ್ಲಣಗಳದೇ ಸದ್ದು; ಸುದ್ದಿ. ಇತಿಹಾಸ; ವರ್ತಮಾನದ ಆತಂಕಗಳು ಎಂಬ ವಿಷಯದ ಕುರಿತು ನಾನು ಮಾತನಾಡಬೇಕಾಗಿದೆ. ಸಾಮಾನ್ಯವಾಗಿ ಒಂದು ಉಪನ್ಯಾಸಕ್ಕೆ ಸಿದ್ಧತೆಗಳನ್ನು ಮಾಡಿಕೂಳ್ಳುವ ಸಂದರ್ಭ ಏನೇನು ವಿಷಯಗಳನ್ಬು ಪ್ರಸ್ತಾಪಿಸಬೇಕು ಎಂಬ ಬಗ್ಗೆ ಪೂರ್ವ ಸಿದ್ಧತೆಗಳನ್ನು ಮಾಡಿಕೂಳ್ಳುತ್ತೇವ. ಆದರೆ ಇತಿಹಾಸಕ್ಕೆ ಸಂಬಂಧಿಸಿದ ವಿಷಯದಳನ್ನು ಮಾತನಾಡಬೆಕಾದ ಸಂದರ್ಭದಲ್ಲಿ ಮಾತ್ರ ಏನು ಮಾತನಾಡಬಾರದು, ಎಂಬ ಬಗ್ಗೆಯೇ ಅತೀವ ಎಚ್ಚರ ವಹಿಸಬೇಕಾಗಿರುವ ಅನಿವಾರ್ಯ ಪರಿಸ್ಥಿ ಇಂದಿನ ಕಾಲಘಟ್ಟದಲ್ಲಿ ನಿರ್ಮಾಣವಾಗಿರುವುದು ಆತಂಕಕಾರಿ ಬೆಳವಣಿಗೆ. ಇತಿಹಾಸ ಎಂಬುದು ಇಂದು ಅತ್ಯಂತ ಸೂಕ್ಷ್ಮ ವಿಷಯವಾಗಿ, ವಿವಾದಾಸ್ಪಾದ ವಿಷಯವಾಗಿ ಪರಿವರ್ತಿತಗೂಂಡಿರುವುದು ಇದಕ್ಕೆ ಮುಖ್ಯ ಕಾರಣ.ಸಮಾಜದಲ್ಲಿ ಇಂದು ನಾವು ಕಾಣುವ ಹಾಗೂ ಅನುಭವಿಸುತ್ತಿರುವ ಸಾಮಾಜಿಕ, ಧಾರ್ಮಕ ಸ್ವಾಸ್ಥ್ಯವನ್ನು ಕೆಡಿಸುವ ಹಲವಾರು ಬೆಳವಣಿಗೆಗಳನ್ನು ಎಂದೋ ನಡೆದ ಅಥವಾ ನಡೆದಿದೆ ಎಂದು ನಂಬಲಾಗುವ, ಇತಿಹಾಸದ ಘಟನೆಗಳು ತೆರೆಮರೆಯಲ್ಲಿ ನಿಂತುಊಂಡು ಪರೋಕ್ಷವಾಗಿ ನಿಯಂತ್ರಿಸುತ್ತಿರುವ ದುರಂತಮಯ ಸನ್ನಿವೇಶಕ್ಕೆ ನಾವಿಂದು ಸಾಕ್ಷಿಗಳಾಗುತ್ತಿದ್ದೇವೆ. ಭಾಷೆ, ರಂಗಭೂಮಿ, ಸಾಹಿತ್ಯ, ಕಲೆ ಇತ್ಯಾದಿಗಳು ಇಂಟುಮಾಡುವ ತಲ್ಲಣಗಳು ಸಾಮಾನ್ಯವಾಗಿ ಆಯಾ ಪ್ರದೇಶಕ್ಕಷ್ಟೆ ಸೀಮಿತವಾಗಿರುತ್ತದೆ. ಆದರೆ ಇತಿಹಾಸವು ಹುಟ್ಟು ಹಾಕುವ ಆತಂಕಗಳಿಗೆ ಉಂಟುಮಾಡುವ ತಲ್ಲಣಗಳಿಗೆ ಯಾವುದೇ ಮಿತಿಗಳಿಲ್ಲ. ದೂರದ ಉತ್ತರ ಪ್ರದೇಶ ರಾಜ್ಯದಲ್ಲಿನ ಒಂದು ಸ್ಮಾರಕದ ನಾಶ ಕನಾಟಕದಲ್ಲಿ ಗಂಭಿರವಾದ ಹಾಗೂ ಆತಂಕಕಾರಿ ಪರಣಮಗಳನ್ನುಂಟು ಮಾಡುವ ಸಾಧ್ಯ ಎಂಬುದು ಈ ಮಾತಿಗೊಂದು ಜೀವಂತ ನಿಧ್ರಶನ.
ಇತಿಹಾಸ ವರ್ತಮಾನದ ಆತಂಕಗಳು ಎಂಬ ವಿಷಯವನ್ನು ನಾಲ್ಕು ನೆಲೆಗಳಲ್ಲಿ ವಿಷ್ಲೇಶಿಸಲು ಸಾಧ್ಯ ಎಂದು ಭಾವಿಸುತ್ತೇನೆ