ಸದಸ್ಯ:Vishal reddy/sandbox
ಡುನೇಡಿನ್, ಫೆ.17: ವಿಶ್ವಕಪ್ ಟೂರ್ನಿ ಎಂದರೆ ಹಾಗೆ ದಾಖಲೆಗಳನ್ನು ಧೂಳಿಪಟ ಮಾಡಲು ಪರ್ಫೆಕ್ಟ್ ಸ್ಟೇಜ್. ವಿಶ್ವಕಪ್ 2015ರಲ್ಲಿ ಕಳೆದ ಮೂರು ದಿನಗಳಲ್ಲಿ ಸತತ ಐದು ಇನ್ನಿಂಗ್ಸ್ ನಲ್ಲಿ 300 ಪ್ಲಸ್ ಸ್ಕೋರ್ ಕಾಣಲಾಯಿತು ಅದರೆ, ರನ್ ಬರ ನೀಗಿತು ಎನ್ನುವಷ್ಟರಲ್ಲಿ ಡುನೇಡಿನ್ ನಲ್ಲಿ 'ಡಕ್' ಸರಣಿ ಕಂಡು ಬಂದಿದೆ.
ಡುನೇಡಿನ್ ವಿಶ್ವವಿದ್ಯಾಲಯ ಓವಲ್ ಮೈದಾನದಲ್ಲಿ ಮಂಗಳವಾರ ನಡೆದ ನ್ಯೂಜಿಲೆಂಡ್ ಹಾಗೂ ಸ್ಕಾಟ್ಲೆಂಡ್ ನಡುವಿನ ವಿಶ್ವಕಪ್ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ನ ಬೌಲರ್ ಗಳು ಕಿವೀಸ್ ನ ಏಳು ವಿಕೆಟ್ ಉದುರಿಸಿದ್ದೇ ದೊಡ್ಡ ಸಾಧನೆಯಾಯಿತು.
ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | 2015: ಟಾಪ್ 10 ಬದಲಾವಣೆ
ಗೋಲ್ಡನ್ ಡಕ್: ಆದರೆ, ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ಪೇಲವ ಪ್ರದರ್ಶನ ನೀಡಿತು. ನಾಲ್ವರು ಬ್ಯಾಟ್ಸ್ ಮನ್ ಗಳು ಡಬ್ಬಲ್ ಡಿಜಿಟ್ ದಾಟಿ 36.2 ಓವರ್ಸ್ ನಲ್ಲಿ 142 ಸ್ಕೋರಿಗೆ ಆಲೌಟ್ ಆದರು. ಐದು ಬ್ಯಾಟ್ಸ್ ಮನ್ ಗಳು ಶೂನ್ಯಕ್ಕೆ ಔಟ್ ಆದರು. ಈ ಪೈಕಿ ನಾಲ್ವರು ಗೋಲ್ಡನ್ ಡಕ್ ಸಂಪಾದಿಸಿದರು. ಇದು ವಿಶ್ವಕಪ್ ನ ಹೊಸ ದಾಖಲೆಯಾಯಿತು. [ಪಂದ್ಯದ ವರದಿ ಓದಿ] ವಿಶ್ವಕಪ್ ದಾಖಲೆ: ಡುನೇಡಿನ್ ನಲ್ಲಿ 4 ಗೋಲ್ಡನ್ ಡಕ್ಸ್
ಗೋಲ್ಡನ್ ಡಕ್ ಹೊಡೆದ ಆಟಗಾರರು
- ಸಿ ಮೆಕ್ಲಾಯ್ಡ್ ಎಲ್ ಬಿ ಟ್ರೆಂಟ್ ಬೌಲ್ಟ್ 1 ಎಸೆತ
- ಹಮೀಷ್ ಗಾರ್ಡಿನೇರ್ ಎಲ್ ಬಿ ಟ್ರೆಂಟ್ ಬೌಲ್ಡ್ 1ಎಸೆತ
- ಪ್ರೆಸ್ಟಾನ್ ಮೊಮ್ಮಸೆನ್ ಎಲ್ ಬಿ ಟಿಮ್ ಸೌಥಿ 1 ಎಸೆತ.
- ಲಿಯಾನ್ ವಾರ್ಡ್ಲಾ ಎಲ್ ಬಿ ಡೇನಿಯಲ್ ವೆಟ್ಟೋರಿ 1 ಎಸೆತ. [ಸ್ಕೋರ್ ಕಾರ್ಡ್]
ಈ ಮುಂಚೆ 1999ರಲ್ಲಿ ಶ್ರೀಲಂಕಾ ಹಾಗೂ 2003ರಲ್ಲಿ ಪಾಕಿಸ್ತಾನ ತಂಡದವರು ಮಾತ್ರ ಇಂಥ ದಾಖಲೆ ಪುಟದಲ್ಲಿ ಕಾಣಿಸಿಕೊಂಡಿದ್ದರು. ಈಗ ನ್ಯೂಜಿಲೆಂಡ್ ವಿರುದ್ಧ ಪಂದ್ಯ ಸೋತರೂ ಸ್ಕಾಟ್ಲೆಂಡ್ ನ ಆಟಗಾರರು ದಾಖಲೆ ಸಾಧಿಸಿದ್ದಾರೆ.
ಒನ್ ಇಂಡಿಯಾ ಸುದ್ದಿ