ಸದಸ್ಯ:Vinutha B.S.
ಶ್ರೀಮತಿ ಬಿ.ಎಸ್.ವಿನುತ ಆದ ನಾನು ಡಯಟ್, ಬೆಂಗಳೂರು ಗ್ರಾಮಾಂತರ ಜಿಲ್ಲೆ, ೨ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-೧೦ ಇಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಾನು ಈ ಕಛೇರಿಗೆ ೧೭-೦೬-೨೦೧೨ರಲ್ಲಿ ಪರಸ್ಪರ ವರ್ಗಾವಣೆ ಮುಖಾಂತರ ಹಾಜರಾಗಿರುತ್ತೇನೆ. ನನ್ನ ವಿದ್ಯಾರ್ಹತೆ ಎಂ.ಎಸ್.ಸಿ. ಎಂ.ಇಡಿ. ಆಗಿರುತ್ತದೆ. ನಾನು ಈ ಕಛೇರಿಯಲ್ಲಿ ಮೊದಲಿಗೆ ಶೈಕ್ಷಣಿಕ ತಂತ್ರಜ್ಞಾನ ವಿಭಾಗದಲ್ಲಿ ಕೆಲಸವನ್ನು ಪ್ರಾರಂಭಿಸಿದೆ. ನಂತರ ಪಿ.ಎಸ್.ಟಿ.ಇ. ವಿಭಾಗದಲ್ಲಿ ಪ್ರಥಮ ಡಿ.ಇಡಿ. ವಿದ್ಯಾರ್ಥಿಗಳಿಗೆ (ಹಳೆಯ ಪಠ್ಯಕ್ರಮ) ಪಠ್ಯಕ್ರಮದಲ್ಲಿ ಸಂವಹನಾ ತತ್ವಗಳು ಹಾಗೂ ದ್ವಿತೀಯ ಡಿ.ಇಡಿ. ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯವನ್ನು ಬೋಧಿಸುತ್ತಿದ್ದೆನು. ನಂತರ ಪರಿಷ್ಕೃತ ಪಠ್ಯಕ್ರಮದಂತೆ ಪ್ರಥಮ ಡಿ.ಇಡಿ. ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಅನುಕೂಲಿಸುವುದು- ಪರಿಸರ ಅಧ್ಯಯನ ಹಾಗೂ ಆಂಗ್ಲ ಭಾಷೆಯಲ್ಲಿ ಸಂವಹನಾ ಕೌಶಲಗಳು ಹಾಗೂ ದ್ವಿತೀಯ ಡಿ.ಇಡಿ. ವಿದ್ಯಾಥಿಗಳಿಗೆ ಕಲಿಕೆಯನ್ನು ಅನುಕೂಲಿಸುವುದು- ವಿಜ್ಞಾನ ವಿಷಯವನ್ನು ಬೋಧಿಸುತ್ತಿದ್ದೆನು. ಪ್ರಸ್ತುತ ಈಗ ನಾನು ಭೌತಿಕ ವಿಜ್ಞಾನ, ಜೈವಿಕ ವಿಜ್ಞಾನ ಹಾಗೂ ಗಣಿತ ವಿಭಾಗದಲ್ಲಿ ಕರ್ತವ್ಯ ನಿವಹಿಸುತ್ತಿದ್ದೇನೆ. ಈ ವಿಭಾಗದಲ್ಲಿ ನಾನು ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಾಟಕ ಸ್ಫರ್ಧೆ, ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ವಿಜ್ಞಾನ ವಿಷಯದಲ್ಲಿ ವಿಚಾರ ಸಂಕಿರಣ ವನ್ನು ನಮ್ಮ ಸಂಸ್ಥೆಯ ಪ್ರಾಂಶುಪಾಲರು ಹಾಗೂ ವಿಭಾಗದ ಮುಖ್ಯಸ್ಥರ ಸಹಕಾರದೊಂದಿಗೆ ಆಯೋಜಿಸಿರುತ್ತೇನೆ. ಹಾಗೆಯೇ ವಿಭಾಗ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ನಾಟಕ ಸ್ಪರ್ಧೆ ಮತ್ತು ಜಿಲ್ಲಾ ಮಟ್ಟದ ಪ್ರೌಢಶಾಲಾ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿರುತ್ತೇನೆ. ನೆಲಮಂಗಲ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೂ ಸಹ ಭೇಟಿ ನೀಡಿ ಶಾಲೆಯಲ್ಲಿ ಆಗುತ್ತಿರುವ ಚಟುವಟಿಕೆಗಳನ್ನು ಗಮನಿಸಿ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ. ಶಾಲಾ ಮೌಲ್ಯಮಾಪನವನ್ನು ತಂಡವಾರು ಹೊಸಕೋಟೆ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ತಾಲ್ಲೂಕಿನಲ್ಲಿ ನಿಗಿಧಿಪಡಿಸಿದ ಶಾಲೆಗಳಿಗೆ ಭೇಟಿ ನೀಡಿ ವಿವರವಾದ ಮಾಹಿತಿ ಹಾಗೂ ತರಗತಿಗಳಲ್ಲಿ ಆಗುತ್ತಿರುವ ವಿವಿಧ ವಿಷಯಗಳ ತರಗತಿ ಪ್ರಕ್ರಿಯೆಯನ್ನು ಗಮನಿಸಲಾಯಿತು.