ಸದಸ್ಯ:Vinukumar t v/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫಿರ್ದಿನಾಂದ್ ಡಿ ಸೊಸ್ಸ್ಯೂರ್ ಫಿರ್ದಿನಾಂದ್ ಡಿ ಸೊಸ್ಸ್ಯುರ್ (೨೬ ನವೆಂಬರ್ ೧೮೫೭-೨೨ಫೆಬ್ರವರಿ ೧೯೧೩) ೨೦ ನೇ ಶತಮಾನದ ಸ್ವಿಸ್ ನ ಭಾಷಾ ವಿಜ್ನಾನಿ ಹಾಗೂ ಸಂಕೇತ ವಿಜ್ನಾನಿ. ಭಾಷಾ ವಿಜ್ನಾನ ಹಾಗೂ ಸಂಕೇತ ವಿಜ್ನಾನದ ಬೆಳವಣಿಗೆಯಲ್ಲಿ ಇವನ ಕೊಡುಗೆ ಗಮನಾರ್ಹವಾದದ್ದು. ಇವನನ್ನು ೨೦ ನೇ ಶತಮಾನದ ಭಾಷಾ ವಿಜ್ನಾನದ ಪಿತಾಮಹನೆಂದು ಪರಿಗಣಿಸಬಹುದು ಹಾಗೂ ಸಂಕೇತ ವಿಜ್ನಾನದ ಪಿತಾಮಹರುಗಳಲ್ಲಿ (ಚಾರ್ಲ್ಸ್ ಸ್ಯಾಂಡರ್ಸ್ ಫೇರ್ಯ್ಸ್) ಕೂಡ ಒಬ್ಬನು.

              ಇವನ ಭಾಷಾಂತರಕಾರರಲ್ಲಿ ಒಬ್ಬನಾದ ರಾಯ್ ಹ್ಯಾರಿಸ್, ಭಾಷಾ ವಿಜ್ನಾನಕ್ಕೆ ಹಾಗೂ ಭಾಷಾದ್ಯಯನಕ್ಕೆ ನೀಡಿದ ಕೊಡುಗೆಗಳನ್ನು  ಈ ಕೆಳಕಂಡಂತೆ ವಿವರಿಸುತ್ತಾನೆ.

"ಪದಗಳು ಕೇವಲ ಶಬ್ದದ ಗುಂಪು ಅಥವಾ ಸಂವಹನವನ್ನು ಕಾಯ್ದುಕೊಳ್ಳುವಂತವುಗಳು. ಅವುಗಳು ಪ್ರಪಂಚದಲ್ಲಿ ಮಾನವನಿಂದ ರಚಿಸಲ್ಪಟ್ಟ ಹಾಗೂ ಉಚ್ಚಾರಿಸಲ್ಪಟ್ಟ ಸಾಮಾಜಿಕ, ಅಗತ್ಯ ವಾದ ಉಪಕರಣಗಳಿಂದ ಸಂಗ್ರಹಿಸಲ್ಪಟ್ಟ ಉಪಕರಣಗಳು. ಇದು ೨೦ ನೇ ಶತಮಾನದ ಮಾನವಶಾಸ್ತ್ರದ ಎಲ್ಲಾ ಮಿತಿಗಳನ್ನು ಭಾಷಾ ದ್ರುಷ್ಟಿಕೋನದ ಆಳವಾದ......... ಇದು ವಿಶೇಷವಾಗಿ ಭಾಷಾ ವಿಜ್ನಾನದ,ತತ್ವಶಾಸ್ತ್ರ,ಮನೋವಿಜ್ನಾನ,ಸಮಾಜಶಾಸ್ತ್ರ,ಹಾಗೂ ಮಾನವಶಾಸ್ತ್ರದಲ್ಲಿ ಗುರುತಿಸಿಕೊಂಡಿದೆ."

               ನಂತರ ಅವು ಹೆಚ್ಚುಕಾಲ ವಿಮರ್ಶಾತ್ಮಕವಾಗಿ ಹಾಗೂ ವಿಸ್ತಾರತೆಯನ್ನು ಹೊಂದಿದ್ದು, ಸೊಸ್ಸ್ಯೂರ್ ನಿಂದ ಪರಿಚಯಿಸಲ್ಪಟ್ಟ ಸಂಘಟನಾಯಾಮಗಳು ಭಾಷಾ ಸಂಗತಿಗೆ ಸಮಕಾಲೀನ ಮಾರ್ಗಗಳ ಮುಂದುವರಿಕೆಗೆ ಸಹಾಯಕವಾಗಿದೆ.ಫ್ರಾಗ್ ಸ್ಕೂಲ್ನ ಭಾಷಾ ವಿಜ್ನಾನಿ ಜಾನ್ ಮುಕರೊಸ್ಕಿ ಸೊಸ್ಸ್ಯೂರ್ ನ "ಭಾಷಾ ವಿಜ್ನಾನ ಸಂಕೇತದ ಆಂತರಿಕ ರಚನೆ ಶಬ್ದದ ಆಕರಗಳಿಂದ ಮತ್ತು ಮಾನಸಿಕ ಪ್ರಕ್ರಿಯೆಯಿಂದ ಪ್ರತ್ಯೇಕಿಸಲ್ಪಟ್ಟೈದೆ " ಎಂಬ ಅನ್ವೇಷಣೆಯನ್ನು ತಿಳಿಸಿದ್ದಾನೆ, ಮತ್ತು ಈ ಬೆಳವಣಿಗೆಯಲ್ಲಿ "ಇದರೊಂದಿಗೆ ಹೊಸ ಮಾರ್ಗಗಳು ಕೇವಲ ಭಾಷಾ ವಿಜ್ನಾನಕ್ಕಲ್ಲದೆ ಮುಂದಿನ ಸಾಹಿತ್ಯದ ಸಿದ್ದಾಂತಕ್ಕೆ ಕೂಡ ತೋರುತ್ತದೆ." ರುಕ್ವಾಯ್ ಹಸನ್ ನ ವಾದ "ಸೊಸ್ಸ್ಯೂರ್ ನ ಭಾಷಾ ವಿಜ್ನಾನ ಸಂಕೇತ ಸಿದ್ದಾಂತದ ಪ್ರಭಾವ ಹೇಗಿತ್ತೆಂದರೆ ಆಧುನಿಕ ಭಾಷಾಶಾಸ್ತ್ರಜ್ನರು ಮತ್ತು ಅವರ ಸಿದ್ದಾಂತಗಳು ಸೊಸ್ಸ್ಯೂರ್ ನ ಆಕರವನ್ನು ಹೊಂದಿವೆ:ಅವು ಪೂರ್ವ-ಸೊಸ್ಸ್ಯೂರ್ ನ ಕಾಲ,ಸೊಸ್ಸ್ಯೂರ್ ನ ಕಾಲ,ಸೂಸ್ಸ್ಯೂರ್ ನ ವಿರೋಧ,ಸೊಸ್ಸ್ಯೂರ್ ನ ನಂತರ ಅಥವಾ ಸೊಸ್ಸ್ಯೂರನದ್ದಲ್ಲದ ಎಂಬುದಾಗಿ ಕಂಡುಬರುತ್ತವೆ.

ಜೀವನ ಚರಿತ್ರೆ

                  ಫಿರ್ದಿನಾಂದ್ ಮೊಂಗಿನ್ ಡಿ ಸೊಸ್ಸ್ಯೂರ್ ಜಿನಿವಾದಲ್ಲಿ ೧೮೫೭ ರಲ್ಲಿ ಜನಿಸಿದನು.ತಂದೆ ಹೆನ್ರಿ ಲೂಯಿಸ್ ಫ್ರೆಡರಿಕ್ ಡಿ ಸೊಸ್ಸ್ಯೂರ್,ಖನಿಜಶಾಸ್ತ್ರಜ್ನ,ಕೀಟಶಾಸ್ತ್ರಜ್ನ, ಜೀವವರ್ಗೀಕರಣ ವಿಜ್ನಾನಿ. ಸೊಸ್ಸ್ಯೂರ್ ತನ್ನ ಹದಿನಾಲ್ಕನೇ ವಯಸ್ಸಿನಲ್ಲಿಯೇ ಗಣನೀಯವಾದ ಪ್ರತಿಭೆ ಮತ್ತು ಬೌದ್ದಿಕ ಸಾಮರ್ಥ್ಯವನ್ನು ತೋರುತ್ತಿದ್ದ. ಲ್ಯಾಟಿನ್,ಗೀಕ್,ಸಂಸ್ಕ್ರುತದ ಅಧ್ಯಯನದ ನಂತರದ ವರ್ಷಗಳಲ್ಲಿ ಜಿನಿವಾ ವಿಶ್ವವಿದ್ಯಾನಿಲಯದಲ್ಲಿ ವಿವಿಧ ವಿಷಯಗಳ ಅಧ್ಯಯನ ಕೈಗೊಂಡು, ಲಿಫ್ಸೀಗ್ ವಿಶ್ವವಿದ್ಯಾನಿಲಯದಲ್ಲಿ ೧೮೭೬ ರಲ್ಲಿ ಪದವಿಯನ್ನು ಪಡೆದನು.
           
                     ತನ್ನ ಇಪ್ಪತ್ತೊಂದನೆ ವಯಸ್ಸಿನಲ್ಲಿ " ಮೆಮೊರೆಸರ್ ಲೇ ಸಿಸ್ಟಮಪ್ರಿಮಿಟಿವ್ ದೈಸ್ ವಯೊಲೆಸ್ಡಾನ್ಸ್ ಲೇಸ್ ಲಾಂಗ್ಸ್  ಇಂಡೊ-ಯೂರೊಪಿನ್ಸ್" (ಡೆಸರ್ಟೆಷನ್ ಆನ್ ದಿ ಪ್ರಿಮಿಟಿವ್ ವೊವೆಲ್ ಸಿಸ್ಟಮ್ ಇನ್ ಇಂಡೊ-ಯೂರೊಪಿಯನ್ ಲ್ಯಾಂಗ್ವೆಜಸ್) ಎಂಬ ಪುಸ್ತಕವನ್ನು ಪ್ರಕಟಿಸಿ, ನಂತರ ಲೊಕೆಟಿವ್ ಆಬ್ಸಲ್ಯೂಟ್ ಎಂಬ ವಿಷಯದ ಮೇಲೆ ಸಂಸ್ಕ್ರುತದಲ್ಲಿ ಸಂಶೋಧನಾ ಕಾರ್ಯವನ್ನು ಬರ್ಲಿನ್ ನಲ್ಲಿ ಕೈಗೊಂಡನು. ಲಿಪ್ಸೀಗ್ ನಗರಕ್ಕೆ ಮರಳಿದ ನಂತರ ೧೮೮೦ ರಲ್ಲಿ ಡಾಕ್ಟರೇಟ್ ನೀಡಲಾಯಿತು. ತದ ನಂತರ, ಪ್ಯಾರಿಸ್ ನಲ್ಲಿ ಸಂಸ್ಕ್ರುತ,ಗಾಥಿಕ್ ಮತ್ತು ಒಲ್ಡ್ ಹೈ ಜರ್ಮನ್, ಮತ್ತು ಇತರ ವಿಷಯಗಳಲ್ಲಿ ಪ್ರಾದ್ಯಾಪಕನಾಗಿದ್ದನು.
                    ಹನ್ನೊಂದು ವರ್ಷಗಳಕಾಲ ಇಕೊಲೆ ಪ್ರಾಟಿಕ್ ಡೆಸ್ ಹೊಟಿಸೆಟ್ಯುಡ್ಸ್  ಬಗ್ಗೆ ಬೊದಿಸುವ ಸಂಧರ್ಭದಲ್ಲಿ ಚೆವೆಲಿಯರ್ ಡಿ ಲ ಲೆಜಿಯಾಂಡ್ ಹೊನರ್( ನೈಟ್ ಆಫ್ ದಿ ಲೆಜಿಯಾನ್ ಆಫ್ ಹಾನರ್) ಎಂದೇ ಹೆಸರು ಪಡೆದನು. ಜಿನಿವಾದಿಂದ ೧೮೯೧ ರಲ್ಲಿ ಪ್ರಾದ್ಯಾಪಕತ್ವಕ್ಕೇ ಆಹ್ವಾನ ಬಂದಾಗ ಜಿನಿವಾಕ್ಕೇ ಹಿಂತಿರುಗಿದನು. ಸೊಸ್ಸ್ಯೂರ್ ತನ್ನ ಜೀವನದ ಉಳಿದ ಭಾಗವನ್ನು ಜಿನಿವಾ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಮತ್ತು ಇಂಡೊ-ಯೊರೊಪಿಯನ್ ಭಾಷೆಗಳನ್ನು ಬೋದಿಸುವುದರೊಂದಿಗೆ ಕಳೆದರು. ಸೊಸ್ಸ್ಯೂರ್ ೧೯೦೭ ರಿಂದ ' ಕೋರ್ಸ್ ಆಫ್ ಜನರಲ್ ಲಿಂಗ್ವಿಸ್ಟಿಕ್ಸ್' ವಿಷಯವನ್ನು ಬೋದಿಸಲು ಪ್ರಾರಂಭಿಸಿದ್ದಲ್ಲದೆ,ಅದನ್ನು ಮೂರು ಬಾರಿ ೧೯೧೧ರ ಅಂತ್ಯದ ವರೆಗೆ ಬೋದಿಸಿದನು. ೧೯೧೩ರಲ್ಲಿ ಸ್ವಿಡ್ಜರ್ ಲ್ಯಾಂಡ್ ನ ವುಫ್ಲೆನ್ಸ್-ಲೆ-ಚಾಟಿವ್,ವಾಡ್ ಎಂಬಲ್ಲಿ ಮರಣ ಹೊಂದಿದನು. ಇವನ ಮಗ ರೇಮಂಡ್ ಡಿ ಸೊಸ್ಸೂರ್ ಮನೋವಿಶ್ಲೇಷಕ.
                   ಸೊಸ್ಸ್ಯೂರ್ ೧೮೮೦ ಮತ್ತು ೧೮೯೦ರ  ದಶಕದಲ್ಲಿ ಹಲವಾರು ಬಾರಿ 'ಸಾಮಾನ್ಯ ಭಾಷಾವಿಜ್ನಾನ' ವಿಷಯದ ಬಗ್ಗೆ ಪುಸ್ತಕ ಬರೆಯಲು ಪ್ರಯತ್ನಿಸಿದ್ದಾನೆ. ೧೯೧೬ರಲ್ಲಿ ೧೯೦೭ ಮತ್ತು ೧೯೧೧ ರ ನಡುವಿನ ಭಾಷಾ ವರ್ಣನೆಯ ಪ್ರಮುಖ ತತ್ವಗಳ ಬಗ್ಗೆ ಸೊಸ್ಸ್ಯೂರ್ ನೀಡಿರುವ ಉಪನ್ಯಾಸಗಳನ್ನು ಅವನ ಶಿಷ್ಯರು ಸಂಗ್ರಹಿಸಿ ಸೊಸ್ಸ್ಯೂರ್ ನ ಮರಣದ ನಂತರ "ಕೋರ್ಸ್ ಡೇ ಲಿಂಗ್ವಿಸ್ಟಿಕ್ ಜನರಲ್" ಎಂಬ ಹೆಸರಿನಲ್ಲಿ ಪುಸ್ತಕವನ್ನು  ಪ್ರಕಟಗೊಳಿಸಿದರು. ಇವನ ಕೆಲವು ಬರಹಗಳಲ್ಲಿ ಪೂರ್ಣಗೊಳ್ಳದ ಪ್ರಬಂದಗಳನ್ನು ೧೯೯೬ರಲ್ಲಿ ಅನ್ವೇಷಿಸಲಾಯಿತು, ಆದರೂ ಬಹುಪಾಲು ಅಂಶಗಳು ಇಗಾಗಲೇ ಇಂಗ್ಲರ್ ನ ಕ್ರಿಟಿಕಲ್ ಎಡಿಷನ್ ಅಫ್ ದ ಕೋರ್ಸ್ ಎಂಬ ಪುಸ್ತಕದಲ್ಲಿ ೧೯೬೭ ಮತ್ತು ೧೯೭೪ ರಲ್ಲಿ ಪ್ರಕಟಗೊಂದಿವೆ.