ವಿಷಯಕ್ಕೆ ಹೋಗು

ಸದಸ್ಯ:Vineetha JM/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತೋಟಿಯ ಮಗ[ಬದಲಾಯಿಸಿ]

ತೋಟಿಯ ಮಗ ಕಾದಂಬರಿಯು ಜ್ಞಾನಪೀಠ ಪುರಸ್ಕೃತ ತಕಳಿ ಶಿವಶಂಕರ ಪಿಳ್ಳೆ ಕಾದಂಬರಿ. ತಗಳಿಯವರ 'ತೋಟಿಯುಡೆ ಮಗನ್' ಕಾದಂಬರಿಯು ತೋಟಿಗಳ ಬದುಕಿನ ಚಿತ್ರಣವನ್ನು ಚಿತ್ರಿಸುವ ಕಾದಂಬರಿಯಾಗಿದ್ದು ೧೯೪೮ರಲ್ಲಿ ಪ್ರಕಟವಾಗಿದೆ. ಈ ಕೃತಿಯನ್ನು ಕನ್ನಡಕ್ಕೆ ಮೋಹನ ಕುಂಟಾರ್ ಅವರು ೨೦೧೩ರಲ್ಲಿ 'ತೋಟಿಯ ಮಗ' ಎಂದು ಅನುವಾದಿಸಿದ್ದಾರೆ. ಮೋಹನ ಕುಂಟಾರ್ ಅವರು ಮೂಲ ಸಾಂಸ್ಕೃತಿಕ ಸನ್ನಿವೇಶಕ್ಕೆ ಧಕ್ಕೆ ಬಾರದಂತೆ ಕನ್ನಡದಲ್ಲಿ ಸಂವಹನ ಸುಲಭವಾಗುವಂತೆ ಅನುವಾದ ಮಾಡಿದ್ದಾರೆ.

ಕಥಾ ವಸ್ತು[ಬದಲಾಯಿಸಿ]

ತೋಟಿ ವೃತ್ತಿಯನ್ನು ಮಾಡುವ ಸಮುದಾಯದ ಮೂರು ತಲೆಮಾರುಗಳ ಇತಿಹಾಸವನ್ನು ಬಿಚ್ಚಿಡುವ ಕಾದಂಬರಿಯೇ ತಕಳಿಯವರ 'ತೋಟಿಯುಡೆ ಮಗನ್'. ಈ ಕಾದಂಬರಿಯು ಅಂದಿನ ತೋಟಿ ಕೆಲಸ ಮಾಡುವವರ ಸಮಸ್ಯೆಗಳನ್ನು ಅತ್ಯಂತ ಮಾರ್ಮಿಕವಾಗಿ ಚಿತ್ರಿಸುತ್ತದೆ. ಕೇರಳದ ಆಲಯಪ್ಪು ಪಟ್ಟಣವೇ ಈ ಕಾದಂಬರಿಯಲ್ಲಿ ಬರುವ ಮುಖ್ಯ ಪ್ರದೇಶ. ಅಲ್ಲಿನ ತೋಟಿಗಳ ಬದುಕು ಹಾಗೂ ಬದುಕಿನ ಸಮಸ್ಯೆಗಳೇ ಕಾದಂಬರಿಗೆ ಮುಖ್ಯ ವಸ್ತು. ಕಾದಂಬರಿಯಲ್ಲಿ ಒಂದೆರೆಡು ದಶಕಗಳಲ್ಲುಂಟಾದ ತೀವ್ರತರ ಸಾಮಾಜಿಕ ಬದಲಾವಣೆಯನ್ನು ವ್ಯಕ್ತಪಡಿಸಲಾಗಿದೆ. ಈ ಕಾದಂಬರಿ ಉಳ್ಳವರ ಮತ್ತು ಇಲ್ಲದವರ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ರೂಪುಗೊಂಡಿದ್ದು ಉಳ್ಳವರು ನಡೆಸುವ ಶೋಷಣೆಯ ವಿರುದ್ಧ ಒಂದಲ್ಲ ಒಂದು ದಿನ ಬಡವರು ದಂಗೆಯೇಳಬಲ್ಲರು ಎಂಬ ತತ್ವವನ್ನು ಪ್ರತಿಪಾದಿಸುತ್ತದೆ. ಇಲ್ಲಿನ ಇಶುಕ್ಕುಮುತ್ತು ಉಳ್ಳವರು ಸೃಷ್ಟಿಸಿದ ವ್ಯವಸ್ಥೆಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಬದುಕಿದ. ಆದರೆ ಚುಡುಲಮುತ್ತು ಒಪ್ಪಿತ ವ್ಯವಸ್ಥೆಯಲ್ಲಿನ ಅಸಮಾನತೆಯನ್ನು ಮನಗಂಡು ಪ್ರತಿಭಟನೆಯ ಅಗತ್ಯವನ್ನು ಕಂಡುಕೊಂಡ. ಆದರೆ ಮೋಹನನಲ್ಲಿ ಈ ಪ್ರತಿಭಟನೆಯ ಕಾವು ಹೆಚ್ಚಿತು. ಅದು ಒಂದಲ್ಲ ಒಂದು ದಿನ, ಇಡೀ ವ್ಯವಸ್ಥೆಯನ್ನೇ ಪ್ರತಿಭಟನೆಯ ಜ್ವಾಲೆಯಲ್ಲಿ ಉರಿಸಿ, ಬೂದಿಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿ ರೂಪುಗೊಂಡಂತದ್ದು. ಹೀಗೆ ಕಾದಂಬರಿಯಲ್ಲಿ ವರ್ಗ ಸಂಘರ್ಷದ ಕಿಚ್ಚು ಹಚ್ಚುವುದರ ಮೂಲಕ ಶೋಷಿತ ಸಮುದಾಯದ ಪ್ರಜ್ಞೆಯನ್ನು ಕೆಣಕಲಾಗಿದೆ.

ಕಾದಂಬರಿಯಲ್ಲಿ ಕಂಡುಬರುವ ಮೂರು ತಲೆಮಾರುಗಳು[ಬದಲಾಯಿಸಿ]

•ಇಶಕ್ಕುಮುತ್ತು[ಬದಲಾಯಿಸಿ]

ಕಾದಂಬರಿಯಲ್ಲಿ ಬರುವ ಇಶುಕ್ಕುಮುತ್ತು ಒಂದನೇ ತಲೆಮಾರಿನ ಪ್ರತಿನಿಧಿ. ಹಸಿವು, ಬಡತನ, ಶೋಷಣೆ, ಅವಮಾನ ಎಲ್ಲವನ್ನೂ ಆತ ಸಹಜವೆಂಬಂತೆ ಸ್ವೀಕರಿಸುತ್ತಾನೆ. ತಾನು ಕಾಯಿಲೆ ಬಂದು ಮಲಗಿದಾಗ ತನ್ನ ಬದಲಾಗಿ ಬೇರೊಬ್ಬನನ್ನು ನೇಮಿಸುವುದಾಗಿ ಓವರ್‌ಸಿಯ‌ರ್ ಹೇಳಿದಾಗ ಆತ . ತನ್ನ ಮಗ ಚುಡಲಮುತ್ತುವಿಗೆ ತನ್ನ ಕೆಲಸವನ್ನು , ತನ್ನ ಮಗ ಈ ಅನ್ನವನ್ನು ಯಾವಾಗಲೂ ಉಣುವಂತೆ ಅನುಗ್ರಹಿಸಬೇಕು ಎಂದೇ ಅವನು ಪ್ರಾರ್ಥಿಸುತ್ತಾನೆ.

•ಚುಡಲಮುತ್ತು[ಬದಲಾಯಿಸಿ]

ಚುಡಲಮುತ್ತು ಎರಡನೆ ತಲೆಮಾರಿನ ಪ್ರತಿನಿಧಿ. ಅವನ ಕಾಲಕ್ಕಾಗಲೇ ಸಮಾಜದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿರುತ್ತದೆ. ಬಡಗಿಗಳಂತಹ ಕೆಲವು ವರ್ಗದ ಕಾರ್ಮಿಕರು ತಮಗಾಗಿ ಸಂಘಟನೆಗಳನ್ನು ಕಟ್ಟಿಕೊಂಡು ತಮ್ಮ ಹಕ್ಕಿಗಾಗಿ ಹೋರಾಡತೊಡಗಿದಾಗ ಅವನು ಹೋರಾಟದ ಮಾರ್ಗವನ್ನು ಅನುಸರಿಸಿ ವಿಫಲನಾಗುತ್ತಾನೆ. ತಾನು ತೋಟಿಯಾದಂತೆ ತನ್ನ ಮಗನೂ ತೋಟಿಯಾಗಬಾರದು ಅವನು ಬೇರೆನಾದರೂ ಆಗಬೇಕು ಎಂಬುದು ಅವನ ಆಸೆ. ಆದರೆ ಅವನ ಹೆಂಡತಿ ವಳ್ಳಿ ತನ್ನ ಒಡಲಲ್ಲಿ ಬೆಳೆಯುತ್ತಿರುವುದು ತೋಟಿಯ ಮಗ ಎಂಬ ಸತ್ಯವನ್ನು ಹೇಳಿದಾಗ ತನ್ನ ಮಗನಿಗೆ ತಾನು ತೋಟಿಯ ಮಗ ಎಂಬ ಅರಿವು ಬಾರದಂತೆ ಬೆಳೆಸಬಯಸುತ್ತಾನೆ. ಆದರೆ ಕಾಲರಾ ಅವನನ್ನು ವಳ್ಳಿಯನ್ನು ಬಲಿ ತೆಗೆದುಕೊಂಡಾಗ ಅವನೆಲ್ಲ ಆಸೆಯು ನುಚ್ಚುನೂರಾಗುತ್ತದೆ. ಕೊನೆಗೆ ಮೋಹನ ತೋಟಿಯೇ ಆಗುತ್ತಾನೆ. ಅಂತೆಯೇ ಚುಡಲಮುತ್ತುವಿನ ತಲೆಮಾರು ದೊಡ್ಡದೊಂದು ದುರಂತದಲ್ಲಿ, ಸೋಲಿನಲ್ಲಿ, ನಿರಾಸೆಯಲ್ಲಿ ಕೊನೆಗೊಳ್ಳುತ್ತದೆ.

•ಮೋಹನ[ಬದಲಾಯಿಸಿ]

ಮೋಹನ ಮೂರನೇ ತಲೆಮಾರಿನ ಪ್ರತಿನಿಧಿ. ಇವನ ಕಾಲದಲ್ಲಿ ಸಾಮಾಜಿಕ ಬದಲಾವಣೆಯಾಗಿ ತೋಟಿಗಳು ಸಂಘಟಿತರಾಗುತ್ತಾರೆ. ಅವರು ತಮ್ಮ ಸಂಬಳವನ್ನು ಲೆಕ್ಕ ಹಾಕಿ ಪಡೆಯುತ್ತಾರೆ. ಯಾರಿಗೂ ತಲೆ ಬಾಗುವುದಿಲ್ಲ. ಮೋಹನನಿಗೆ ತನ್ನನ್ನು ತೋಟಿಯಾಗಿಸಿದ ಹಿಂದಿನ ತಲೆಮಾರಿನ ಮೇಲೆ, ಹೊಸಕಿ ಹಾಕಿದ ವ್ಯವಸ್ಥೆಯ ಮೇಲೆ ದ್ವೇಷವಿದೆ, ಅದರ ನಿರ್ನಾಮವನ್ನು ಅವನ ತಲೆಮಾರು ಬಯಸುತ್ತದೆ. ಪ್ರಸಿಡೆಂಟಿನ ಹೊಸ ಕಟ್ಟಡವನ್ನು ಸ್ಫೋಟಿಸುವ ಮೂಲಕ ಆದು ವ್ಯಕ್ತವಾಗುತ್ತದೆ.

ಉಲ್ಲೇಖಗಳು