ಸದಸ್ಯ:Vindhyaathmika/sandbox
ಗಾಂಧೀವಾದಿ ಹಾಗು ಮಹಾನ್ ಮಾನವತಾವಾದಿ ಬಾಬಾ ಅಮ್ಟೆಯವರ ಹೆಸರನ್ನು ಕೇಳದವರಿಲ್ಲ ಅವರ ಜನ್ಮ ಶತಾಬ್ದವನ್ನು ಇತ್ತೀಚೆಗೆ ಮಹಾರಾ ದಲ್ಲಿ ಆಚರಿಸಲಾಯಿತು. ಬಾಬಾ ಅಮ್ವೆಯವರು ಬಡವರಿಗೆ, ಶೋ ತರಿಗೆ ಆರೋಗ್ಯ ಭಾಗ್ಯ ಶಿಕ್ಣ ಸೌಲಭ್ಯ ಒದಗಿಸಲು ಪ್ರಯತ್ನ ಮಾಡಿದರು. ೧೯೭೩ ರಲ್ಲಿ ಅವರು ನಾಗಪುರ ಆಸುಪಾಸಿನ ಭಮ್ರಾಘಡ ಜಿಲ್ಲೆಯ ಗಡಚಿರೋಲಿ ತಾಲೂಕಿನ ಹೇಮಲ್ ಕಸ ಎಂಬ ಹಳ್ಳಿಯಲ್ಲಿ " ಲೋಕ ಬಿರಾದಾರಿ ಪ್ರಕಲ್ಪ" ವನ್ನು ಆಚರಿಸಿದರು. ಇಂದ್ರವತಿ ಪಲ್ಕೋಟಾ ಹಾಗು ಪಾಮುಲ್ ಗೌತಮಿ ಎಂಬ ಮೂರು ನದಿಗಳು ಸಂಗಮಿಸುವ ಆ ಸ್ಟಳದ ಸುತ್ತ ದಟ್ಟವಾದ ಕಾಡು ಇತ್ತು. ಕಾಡಿನೊಳಗೆ ಆದಿವಾಸಿಗಳು ಇದ್ದರು. ಅವರಿಗೆ ನಾಗರಿಕ ಬದುಕಿನ ಯಾವ ಸಂಪರ್ಕವೂ ಇರಲಿಲ್ಲ. ರೋಗರುಜಿನಗಳಿಗೆ ಅಲ್ಲಿನಸಮುದಾಯಗಳು ಬಲಿಯಾಗಿ ನಿರ್ನಾಮವಾಗುವ ಸಿತಿಯಲ್ಲಿದ್ದವು. ಬಾಬಾ ಅಮ್ವೆ ಸ್ವತ: ವ್ಯೆದ್ಯರಲ್ಲ ಆದರೆ ರೋಗಿಗಳ ಸೇವೆಯನ್ನು ತಪಸ್ಸಿನಂತೆ ಮಾಡಿದರು. ತಮ್ಮ ಇಬ್ಬರು ಮಕ್ಕಳು ವ್ಯೆದ್ಯರಾದರೆ ಸಾಮುದಾಯಿಕ ಸ್ವಾಸ ಪಾಲನೆಯ ಧ್ಯೇಯಕ್ಕೆ ಬಲ ಬರುತ್ತದೆ ಎಂದು ಭಾವಿಸಿ ತಮ್ಮ ಇಬ್ಬರು ಮಕ್ಕಳಿಗೆ ಡಾಕ್ವರಿಗೆ ಕಲಿಸಿದರು. ಅವರಲ್ಲಿ ಹಿರಿಯ ಮಗನನ್ನು ನಾಗಪುರದ ಆನಂದವನದ ಉಸ್ತುವಾರಿಗೂ ಕಿರಿಯ ಮಗನನ್ನು ಹೇಮಲ್ಕಸದಲ್ಲಿ ಕರ್ತವ್ಯ ನಿರ್ವಹಿಸುವಂತೆಯೂ ಸೂಚಿಸಿದರು. ಹೇಮಲ್ ಕಸದ ಗೊಂಡಾರಣ್ಯದಲ್ಲಿ ಪ್ರಕಾಶ್ ಅಮ್ವೆ ತಮ್ಮ ಪತ್ನಿ ಮಂದಾಕಿನಿಯೊಂದಿಗೆ ಕೆಲಸ ನಿರ್ವಹಿಸಲಾರಂಬಿಸಿ ಹದಿನೇಳು ವ ಗಳಾಗುವವರೆಗೂ ಅವರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಕಾಡಿನ ಆದಿವಾಸಿ ಮಕ್ಕಳ ಕತ್ತಲ ಬದುಕನ್ನು ಬೆಳಗಿಸಿದ ಪ್ರಕಾಶ್ ಮಾತ್ರ ಕತ್ತಲಲ್ಲಿ ಉಳಿದಿದ್ದರು. ಪ್ರಚಾರ ಬಯಸದ ಅಂತರ್ಮುಖಿ ಧ್ಯಾನಿಯ ಏಕಾಗ್ರತೆ ಅವರಲ್ಲಿ ಇತ್ತು.
ಹೇಮಲ್ಕಸ ಗ್ರಾಮ ಇದೊಂದು ಕುಗ್ರಾಮವಾಗಿದ್ದು ಇಲ್ಲಿ ಒಳ್ಳೆಯ ಶಾಲೆಗಳು ಇರಲಿಲ್ಲ. ಸುಸಜ್ಜಿತ ಆಸ್ಪತ್ರೆಗಳಿರಲಿಲ್ಲ. ಜೋಪಡಿ ಪಟ್ಟಿಗಳೇ ಏಲ್ಲೆಲ್ಲೂ ನೆರೆಬರುವ ಸಮಯದಲ್ಲಿ ಸೇತುವೆಗಳ ಮೇಲೆ ಪ್ರವಾಹ ಹರಿಯುತ್ತಿರುತ್ತಿತ್ತು. ೧೯೭೩ರಲ್ಲಿ ಒಂದು ದಿನ ಜನಪರವಾದ ಚಳುವಳಿಗಳಲ್ಲಿ ತೊಡಗಿಸಿಕೊಂಡಿದ್ದ ಬಾಬಾ ಅಮ್ಟೆ ಹೇಮಲ್ ಕಸಕ್ಕೆ ಬಂದಿಳಿದಿದ್ದರು. ಅವರೊಡನೆ ಅವರ ಇರ್ವರು ಮಕ್ಕಳಿದ್ದರು. ಒಂದು ಡಾಕ್ಟರ್ ವಿಕಾಸ್ ಅಮ್ಟೆ ಎರಡು ಡಾಕ್ಟರ್ ಪ್ರಕಾಶ್ ಅಮ್ಟೆ ಬಡತನ ಹಾಗು ಅವಕಾಶದ ಅಲಭ್ಯತೆಯಿಂದ ಅನಾರೋಗ್ಯಕ್ಕೊಳಗಾಗಿ ಬವಣೆ ಪಡುವ ಸಮುದಾಯಗಳಿಗೆ ಆರೋಗ್ಯ ಭಾಗ್ಯ ಕೊಡಿಸುವ ಉದ್ದೇಶದಿಂದ ಬಾಬಾ ಅಮ್ಟೆ ತಮ್ಮಿಬ್ಬರು ಮಕ್ಕಳನ್ನು ಡಾಕ್ಟರ್ ಗಳನ್ನಾಗಿ ಮಾಡಿದ್ದರು.ಹೇಮಲ್ ಕಸದಲ್ಲಿ ಈ ಪುಟ್ಟ ಕುಟುಂಬ ಬಂದಿಳಿಯುತ್ತಿದ್ದಂತೆ ಅನ್ಯಗ್ರಹವಾಸಿಗಳನ್ನು ಕಂಡಂತೆ ಆದಿವಾಸಿಗಳು ಕಾಡಿನ ಒಳಗೊಳಗೆ ಸೇರಿಬಿಟ್ಟರು. ಮಾನ ಮುಚ್ಚುವ ಒಂದು ತುಂಡು ಬಟ್ಟೆಯೋ ಎಲೆಯೋ ಬಿಟ್ಟರೆ ಅವರ ಮೈಮೇಲೆ ಏನು ಇರಲ್ಲಿಲ್ಲ. ಕಾಯಿಲೆ ಕಸಾಲೆ ಸಾವೇ ಅವರ ಸಂಗಾತಿಗಳಾಗಿದ್ದವು. ಕೆಲವೊಮ್ಮೆ ಕ್ರೂರ ಪ್ರಾಣಿಗಳು ಅವರ ಮೇಲೆರಗಿ ಘಾಸಿಗೊಳಿಸುತ್ತಿದ್ದವು. ಇಲ್ಲವೇ ಕೊಲ್ಲುತ್ತಿದ್ದವು. ಯಾವುದಾದರೂ ಮಾರಕ ರೋಗ ಬಂದರೆ ದೇವರೇ ಕಾಪಾಡಬೇಕಲ್ಲದೆ ಬೇರೆ ಯಾವ ವ್ಯೆದ್ಯಕೀಯ ಶುಶ್ರೂ ಇರಲಿಲ್ಲ. ಇಲ್ಲಿ ಸೇವೆ ಸಲ್ಲಿಸಲು ನಿಮಗೆ ಮನಸ್ಸಿದೆಯ? ಎಂದು ಮಕ್ಕಳಲ್ಲಿ ಕೇಳುತ್ತಾರೆ ಬಾಬಾ ಅಮ್ಟೆ. ಪಟ್ಟಣದ ಕಾಲೇಜಿನಲ್ಲಿ ಕಲಿತ ಹುಡುಗರು ಹಳ್ಳಿಗೆ ಬರಲು ಬಯಸುವುದಿಲ್ಲ. ಆದರೆ ಪ್ರಕಾಶ ಅಮ್ಟೆ ಹೇಳುತ್ತಾರೆ " ನಾನಿಲ್ಲಿಯೇ ಇದ್ದು ನಿಮ್ಮ ಸಂಕಲ್ಪವನ್ನು ಪೂರೈಸುತ್ತೇನೆ" ೧೯೭೩ರ ದಿನವದು ಇಂದಿಗೆ ನಲುವತ್ತು ವ ಗಳಿಗಿಂತಲೂ ಹಿಂದೆ.
ಹಾಗೆ ಬಂದ ಪ್ರಕಾಶ್ ಅಮ್ಟೆಯವರ ಕುಟುಂಬವು ಅಲ್ಲಿಯ ಜನರ ವಿದ್ಯಾಭ್ಯಾಸ ಆರೋಗ್ಯ ಶುಚಿತ್ವ ರೋಗರುಜಿನಗಳಿಗೆ ಸ್ಪಂದಿಸಿ ತಮ್ಮ ಸುಖವನ್ನು ತ್ಯಜಿಸಿ ರಾತ್ರಿ ಹಗಲೂ ಆ ಹಳ್ಳಿಯನ್ನು ಹಾಗೂ ಅಲ್ಲಿಯ ಜನರನ್ನು ನಾಗರಿಕರನ್ನಾಗಿ ಮಾಡಿ ಹೊರ ಪ್ರಪಂಚದ ಅರಿವನ್ನು ಅವರಿಗೆ ಮಾಡಿಸಿದರು. ಇವರತ್ಯಾಗದ ಫಲವಾಗಿ ಅಲ್ಲಿನ ಆನೇಕ ಆದಿವಾಸಿ ಮಕ್ಕಳು ಉನ್ನತ ಶಿ ಣ ಪಡೆದು ಬೇರೆ ಬೇರೆ ಊರುಗಳಲ್ಲಿದ್ದಾರೆ. ವಿದೇಶಕ್ಕೂ ಹೋಗಿದ್ದಾರೆ. ಅವರೆಲ್ಲ ಹೇಮಲ್ ಕಸದಲ್ಲೇ ನೆಲಸಬೇಕೆಂಬ ಇರಾದೆ ಪ್ರಕಾಶ್ ಅಮ್ಟೆಯವರಿಗೆ ಸರ್ವತಾ ಇಲ್ಲ. ಅವರಿಗೆ ವಿದ್ಯಾಭ್ಯಾಸ ಕೊಟ್ಟು ಹೊಸ ಬದುಕಿನತ್ತ ಮುಖ ಮಾಡುವುದ ನಮ್ಮ ಕೆಲಸ ಎನ್ನುತ್ತಾರೆ ಪ್ರಕಾಶ್ ಅಮ್ಟೆ.
ಪ್ರಕಾಶ್ ಅಮ್ಟೆಯವರ ಪ್ರಾಣಿ ಪ್ರೀತಿಯ ಬಗ್ಗೆ ಹೇಳಹೊರಟರೆ ಒಂದು ಕಾದಂಬರಿಯ ದೆ. ಕಾಡಿನಲ್ಲಿ ಸಿಕ್ಕಿದ ಪ್ರಾಣಿ ಮರಿಗಳನ್ನು, ಘಾತಿಸಲ್ಪಟ್ಟ ಪ್ರಾಣಿಗಳನ್ನು ಅವರು ಮನೆಗೆ ತಂದು ಸಾಕುತ್ತಾರೆ. ಹಾಗೆ ಪೋ ಸಿದ ಪ್ರಾಣಿಗಳಲ್ಲಿ ಹುಲಿ, ಚಿರತೆ, ಕತ್ತೆ ಕಿರುಬ ಹೆಬ್ಬಾವು, ನಾಗರಹಾವು ಪಟ್ಟೆ ಹಾವು ಕರಡಿ ಮುಂಗುಸಿ ಅಳಿಲು ಹದ್ದು ಎಲ್ಲವೂ ಇದೆ. ಕ್ರೂರವೆಂದು ನಾವು ಭಾವಿಸಿರುವ ಪಾಣಿಗಳನ್ನು ಪ್ರಕಾಶ್ ಅಮ್ಟೆ ಮುದ್ದಿಸುತ್ತಾರೆ. ಅವರು ಮಾತ್ರವಲ್ಲ ಅವರ ಮಕ್ಕಳು ಮೊಮ್ಮಕ್ಕಳು ಕೂಡ. ಪ್ರಾಣಿಗಳು ಮುಗ್ದವಾಗಿ ಬಾಲ ಆಲ್ಲಾಡಿಸಿ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ಪ್ರೀತಿ ಇದ್ದಲ್ಲಿ ಬೀತಿ ಇಲ್ಲ ಎಂಬುದು ಪ್ರಕಾಶ್ ಅಮ್ಟೆಯವರ ಅನುಭವದ ಮಾತು. ಆದಿವಾಸಿಗಳು ಬರಿ ಮ್ಯೆಯಲ್ಲಿ ಇದ್ದುಕೊಂಡು ಚಳಿ ಮಳೆಯಲ್ಲಿ ನಡುಗುವುದನ್ನು ಕಂಡ ಪ್ರಕಾಶ್ ತಾವು ಕೂಡ ಜೀವನವಿಡೀ ಚಡ್ಡಿ ತೋಳಿಲ್ಲದ ಬನಿಯನ್ನು ತೊಡುವ ಸಂಕಲ್ಪ ಮಾಡಿದ್ದಾರೆ. ತಮ್ಮ ತಂದೆ ಬಾಬಾ ಅಮ್ಟೆ ವರೋರಾದಲ್ಲಿ ಸ್ಧಾಪಿಸಿದ್ದ ಮಾಹಾರೋಗಿ ಸೇವಾ ಸಮಿತಿಯ ಆಸ್ಪತ್ರೆ ಹೇಮಕಲಶದಲ್ಲಿ ಕಾರ್ಯಾಚರಿಸುತ್ತಿದೆ. ಮಕ್ಕಳಿಗಾಗಿ ವಸತಿ ಶಾಲೆಗಳಿವೆ. ವಿದ್ಯಾರ್ಧಿ, ವಿದ್ಯಾರ್ಧಿನಿಯರಿಗಾಗಿ ಹಾಸ್ಟೇಲ್ ಗಳು ನಿರ್ಮಾಣಗೊಂಡಿದೆ. ಅಧ್ಯಾಪಕರಿಗಾಗಿ ವಸತಿ ಗೃಹಗಳಿವೆ. ಇತ್ತಿಚೆಗೆ ಬಾಬಾ ಅಮ್ಟೆ ಶತಮಾನೋತ್ಸವ ಸಂದರ್ಭದಲ್ಲಿ ಹೊಸ ಸುಸಜ್ಜಿತ ಆಸ್ಪತ್ರೆ ಕಟ್ಟಡವನ್ನು ನಿರ್ಮಿಸಿ ಮೇದಾಪಾಟ್ಕರ್ ನಂತ ಗಣ್ಯರ ಸಮಕಮದಲ್ಲಿ ಲೋಕಾರ್ಪಣೆ ಮಾಡಲಾಗಿದೆ. ತಮ್ಮ ತಂದೆ ಬಾಬಾ ಅಮ್ಟೆಯವರಿಂದ ಆರಂಭವಾದ ಮಾನವತ ಅಭಿಯಾನವನ್ನು ಇನ್ನೂ ಮುಂದುವರೆಸಿಕೊಂಡು ಬಂದಿರುವುದು ಅವರ ಹಿರಿತನಕ್ಕೆ ಸಾಕಿ ಹಾಗು ನಮಗೆಲ್ಲರಿಗೂ ಆದರ್ಶಪ್ರಾಯವಾಗಿದೆ. ಜ಼್ಜ಼್ಜ಼್