ವಿಷಯಕ್ಕೆ ಹೋಗು

ಸದಸ್ಯ:Vinayakaganesha/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೇತಾಜಿ ನೆಹರೂ

[ಬದಲಾಯಿಸಿ]

ನವದೆಹಲಿ, ಏ.10: ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ನಿಗೂಢತೆ ಮುಂದುವರೆದಿರುವ ಬೆನ್ನಲ್ಲೇ ನೇತಾಜಿ ಹಾಗೂ ಅವರ ಕುಟುಂಬದ ಮೇಲೆ ನೆಹರೂ ನೇತೃತ್ವದ ಕಾಂಗ್ರೆಸ್ ಸರ್ಕಾರ ಗೂಢಚಾರಿಕೆ ನಡೆಸಿತ್ತು ಎಂಬ ಸುದ್ದಿ ಬೆಳಕಿಗೆ ಬಂದಿದೆ. ಗುಪ್ತಚರ ಇಲಾಖೆ ರಹಸ್ಯ ದಾಖಲೆಗಳಲ್ಲಿ ಈ ಬಗ್ಗೆ ಉಲ್ಲೇಖವಿರುವುದು ಪತ್ತೆಯಾಗಿದೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಭಾರಿ ಚರ್ಚೆ ಆರಂಭವಾಗಿದ್ದು, ಸಾರ್ವಜನಿಕರು ನೆಹರೂ ಜನ್ಮ ಜಾಲಾಡುತ್ತಿದ್ದಾರೆ. ಪಂಡಿತ್ ಜವಾಹರ ಲಾಲ್ ನೆಹರೂ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಮೇಲೆ ನಿಗಾ ಇರಿಸಲು ಸೂಚಿಸಲಾಗಿತ್ತು. ಅಲ್ಲದೆ, ಬೋಸ್ ಕುಟುಂಬದ ಮೇಲೆ ಸತತ 20 ವರ್ಷಗಳ ಕಾಲ ಗೂಢಾಚಾರಿಕೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿತ್ತು. [ನೇತಾಜಿ, ನೆಹರೂ ನಂಬಿಕಸ್ತ ನಂಬಿಯಾರ್ 'ಸ್ಪೈ'] ಸುಭಾಷ್ ಚಂದ್ರ ಬೋಸ್ ಅವರ ಅಣ್ಣ ಶರತ್ ಚಂದ್ರ ಬೋಸ್ ಮತ್ತು ಅವರ ಮಕ್ಕಳ ಮೇಲೂ ಕಣ್ಣಿಡಲಾಗಿತ್ತು. ನೇತಾಜಿ ಅವರ ಪತ್ನಿ ಎಮಿಲಿ ಅವರು ಬರೆಯುತ್ತಿದ್ದ ಪತ್ರಗಳು ಕೂಡಾ ಗುಪ್ತಚರ ಇಲಾಖೆ ಕಣ್ಗಾವಲಿನಲ್ಲೇ ಸಾಗುತ್ತಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. [ಪ್ರಧಾನಿಗೂ ಇಲ್ಲ ನೇತಾಜಿ ರಹಸ್ಯ ಹೇಳುವ ಅಧಿಕಾರ!] ನೇತಾಜಿ ಅವರ ಸಾವಿನ ಬಗ್ಗೆ ನೆಹರೂ ಅವರಿಗೆ ಮುಂಚಿತವಾಗಿ ತಿಳಿದಿತ್ತು ಎಂಬ ಸುದ್ದಿ ಈ ಮುಂಚೆ ಹಬ್ಬಿತ್ತು. ಈಗ ನೇತಾಜಿ ಕುಟುಂಬದ ಮೇಲೆ ನೆಹರೂ ಸರ್ಕಾರ ನಡೆಸಿದ ಗೂಢಚಾರಿಕೆಯ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದೆ.