ಸದಸ್ಯ:Vijetha.A kokkada/ನನ್ನ ಪ್ರಯೋಗಪುಟ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕೌಕ್ರಾಡಿ ಗ್ರಾಮದಲ್ಲಿ ಕೊಕ್ಕಡ ಸೌತಡ್ಕ ರಸ್ತೆಗೆ ಹೊದಿ ಇನ್ನೂರು ಮೀಟರ್ ದೂರದಲ್ಲಿ ಕಾವು ಪ್ರದೇಶದಲ್ಲಿ ಆದಿ ಮಾಯೆ ತ್ರಿಗುಣತ್ಮಿಕ ದುರ್ಗಾ ಪರಮೇಶ್ವರಿ ನೆಳೆಸಿದ್ದಾಳೆ. ಬ್ರಹ್ಮ, ವಿಷ್ಟ್ಣು, ಮಹೇಶ್ವರ ಎಂಬ ಮೂರು ಗುಣಗಳನ್ನು ಹೊಂದಿರುವ ಈ ದೇವಿಯು ಭಕ್ತರನ್ನು ಸಲಹುತ್ತಾ ಬಂದಿದ್ದಾಳೆ.
ಐತಿಹ್ಯ
[ಬದಲಾಯಿಸಿ]ಶತಮಾನಗಳ ಹಿಂದೆ ನೆಲೆಗೊಂಡಿರುವ ದೇವಿಯ ಗುಡಿಯು ಶಿಥಿಲಗೊಂಡಿತ್ತು. ಅದೇ ಸಮಯದಲ್ಲಿ ಆ ಪ್ರದೇಶದ ಒಂದು ಮಗು ಅನಾರೋಗ್ಯಕ್ಕೆ ತುತ್ತಾಯಿತು.ವೈದ್ಯರು ಮಗುವಿನ ಬೆಳವಣಿಗೆಯ ಕುರಿತು ನಂಬಿಕೆ ಕಳೆದುಕೊಳ್ಳುತ್ತಾರೆ. ಆ ಸಂದರ್ಭ ಮಗುವಿನ ಪೋಷಕರು ದೇವಾಸ್ಥಾನದ ಜಿರ್ಣೋದ್ಧಾರ ಕಾರ್ಯಕ್ಕೆ ಪ್ರಯತ್ನಿಸುವೆನೆಂದು ಸಂಕಲ್ಪವನ್ನು ಮಾಡುತ್ತಾರೆ. ಆಶ್ಚರ್ಯಕರ ರೀತಿಯಲ್ಲಿ ಮಗುವಿನ ಆರೀಗ್ಯದಲ್ಲಿ ಸುಧಾರಣೆ ಕಂಡು ಬಂದಿತು. ತದ ನಂತರ ಹಲವಾರು ಭಕ್ತಾಧಿಗಳು ದೇವಾಲಯದ ಜಿರ್ಣೋದ್ಧಾರಕ್ಕಾಗಿ ಶ್ರಮಿಸುತ್ತಾ ಸಾಗುತ್ತದ್ದಾರೆ.
ಪವಾಡಗಳು
[ಬದಲಾಯಿಸಿ]ದೇವಾಲಯದ ಜಿರ್ಣೋದ್ಧಾರ ಕಾರ್ಯಗಳು ಆರಂಭದ ಸಮಯದಲ್ಲಿ ಪಾಳು ಬಿದ್ದ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ಆರಂಭವಾಯಿತು. ವಿಶಿಷ್ಟ ರೀತಿಯ ಇಷ್ಟರವರೆರೆ ಕಂಡು ಕೇಳರಿಯದ ಸರ್ಪವೊಂದು ಪ್ರತ್ಯಕ್ಷವಾಯಿತು. ದೇಗುಲದ ಸಂಪೂರ್ಣ ಕಲ್ಲು ತೆರವುಗೊಳಿಸುವುದನ್ನು ಸರ್ಪವೂ ವೀಕ್ಷಿಸಿ, ಅಧ್ಭುತ ರೀತಿಯಲ್ಲಿ ಮಾಯವಾಯಿತು.
ದೇಗುಲದ ಗರ್ಭಗುಡಿಯ ಪ್ರದೇಶದಲ್ಲಿ ಹಾವು ಮತ್ತು ಮುಂಗುಸಿ ಕ್ಷಣ ಕಾಲ ಆಟವಾಡುವ ಸನ್ನಿವೇಶ