ಸದಸ್ಯ:Vigneshholla/sandbox
ಗೋಚರ
ಓ ಮಮಕಾರದ ಅಕ್ಷಯ ನಿಧಿಯೇ ಅಮ್ಮಾ ನಿನಗೆ ಕೋಟಿ ವಂದನೆ..! ಓ ಸ್ನೇಹದ ಮೂರ್ತ ರೂಪವೇ ನಿನಗೆ ಕೋಟಿ ವಂದನೆ..!
ನಡು ರಾತ್ರಿಯಲು ನನ್ನ ಅಳುವಿಗೆ ಎದೆ ಹಾಲಿನ ಸಾಂತ್ವನ ನೀಡಿ.. ನನ್ನ ಹಟಕ್ಕೆಲ್ಲ ತಲೆಬಾಗಿ ನಿಂತು.. ಅತ್ತಾಗ ಕಣ್ಣೊರೆಸಿ , ನಕ್ಕಾಗ ಕಣ್ಣರಳಿಸಿ.. ಪ್ರೀತಿಯ ಮಳೆ ಸುರಿಸಿ, ಗೆಲುವಿನ ದಾರಿ ತೋರಿಸಿ ಬೆಳೆಸಿದಳು ನನ್ನ ತಾಯಿ… ಓ ಜನನೀ.. ನಿನಗೆ ಕೋಟಿ ವಂದನೆ…!
ತೆವಳಿ ಬರಲು ಕೈ ನೀಡಿಡಳು.. ತೊದಲು ನುಡಿಯಲು ತಿದ್ದಿ ಹೇಳಿದಳು.. ಚಂದ ಮಾಮನ ತೋರಿಸಿ ತುತ್ತು ಕೊಟ್ಟು ಹಸಿವ ನೀಗಿಸಿದಳು.. ತನ್ನ ಬಸಿರೊಳಗೂ ನನಗೆ ಉಸಿರಾದಳು.. ಓ ದಿವ್ಯ ಚೇತನವೇ.. ನಿನಗೆ ಕೋಟಿ ವಂದನೆ..!
ತನ್ನ ಬೇಸರವ ಮರೆತು ನನಗೆ ಸಾಂತ್ವನವಾದಳು.. ನನ್ನ ಸಂತೋಷದಲಿ ನಗೆಯ ಕಂಡಳು.. ಗೆಲುವಿಗೆ ಸ್ಪೂರ್ತಿಯಾದಳು… ಬದುಕಿದೆ ದಾರಿದೀಪವಾದಳು.. ಓ ಸ್ಪೂರ್ತಿಯ ಚಿಲುಮೆಯೇ.. ನಿನಗೆ ಕೋಟಿ ವಂದನೆ..!
ಪದಗಳು ಸಾಕಾಗದು ನಿನ್ನ ಬಣ್ಣಿಸಲು.. ಈ ಜನ್ಮವು ಸಾಕಾಗದು ನಿನ್ನ ಋಣವ ತೀರಿಸಲು.. ನವಮಾಸ ನೀ ಹೊತ್ತ ಈ ಜೀವ ನಿನಗಷ್ಟೇ ಮೀಸಲು.. ಹೊತ್ತು ಹೆತ್ತ ಹೆತ್ತವಳು ನೀನು. ನನ್ನ ಉಸಿರಿನ ಒಡತಿ ನೀನು.. . ಅಮ್ಮಾ… ನಿನಗೆ ಕೋಟಿ ಕೋಟಿ ವಂದನೆ….!