ವಿಷಯಕ್ಕೆ ಹೋಗು

ಜಿ.ಎಚ್.ತಿಪ್ಪಾರೆಡ್ಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸದಸ್ಯ:Vidyashree.v./ನನ್ನ ಪ್ರಯೋಗಪುಟ ಇಂದ ಪುನರ್ನಿರ್ದೇಶಿತ)
ಜಿ.ಎಚ್. ತಿಪ್ಪಾರೆಡ್ಡಿ

ಅಧಿಕಾರ ಅವಧಿ
೧೯೯೪ – ೧೯೯೯
ಮತಕ್ಷೇತ್ರ ಚಿತ್ರದುರ್ಗ
ಅಧಿಕಾರ ಅವಧಿ
೨೦೧೩ – till date
ಅಧಿಕಾರ ಅವಧಿ
೨೦೦೪ – ೨೦೦೮
ವೈಯಕ್ತಿಕ ಮಾಹಿತಿ
ಜನನ ಕಡಬನಕಟ್ಟೆ, ಜಗಳೂರು, ಚಿತ್ರದುರ್ಗ, ಕರ್ನಾಟಕ
ರಾಜಕೀಯ ಪಕ್ಷ ಭಾರತೀಯ ಜನತ ಪಾರ್ಟಿ
ವಾಸಸ್ಥಾನ ಚಿತ್ರದುರ್ಗ
ಧರ್ಮ ಹಿಂದು ಧರ್ಮ

ಶಾಸಕರ ಹಿನ್ನೆಲೆ

[ಬದಲಾಯಿಸಿ]

ಜಿ.ಎಚ್. ತಿಪ್ಪಾರೆಡ್ಡಿ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರೆಂದೇ ಖ್ಯಾತಿ ಪಡೆದಿರುವ ಇವರು, ಸದ್ಯ ಚಿತ್ರದುರ್ಗ ಕ್ಷೇತ್ರವನ್ನು ಬಿ.ಜೆ.ಪಿ. ಶಾಸಕರಾಗಿ ವಿಧಾನಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ.

ಜನನ ಮತ್ತು ಹುಟ್ಟೂರು

[ಬದಲಾಯಿಸಿ]

ಇವರು ೨೫.೭.೧೯೪೭ ರಲ್ಲಿ ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಜಗಳೂರು ತಾಲ್ಲೂಕಿನ ಕಡಬನಕಟ್ಟೆ ಗ್ರಾಮದಲ್ಲಿ ಜನಿಸಿದರು .[]

ಕೌಟುಂಬಿಕ ಹಿನ್ನೆಲೆ

[ಬದಲಾಯಿಸಿ]

ಇವರ ತಂದೆ ಶ್ರೀ. ಜಿ. ಹನುಮಂತ್ ರೆಡ್ಡಿಯವರು. ಕಾಲಾನಂತರದಲ್ಲಿ ಇವರ ಕುಟುಂಬ ನಗರಕ್ಕೆ ಬಂದು ನೆಲೆಸಿತು .ಇವರ ತಂದೆಯವರು ಹತ್ತಿ ಜಿನ್ನಿಂಗ್ ಮಿಲ್ ಸ್ಥಾಪಿಸಿದ್ದರು ಹಾಗೂ ಇವರ ಕುಟುಂಬ ಹತ್ತಿ ಮತ್ತೆ ಅರಳೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿತ್ತು.[]

ಚಿತ್ರದುರ್ಗದ ಐತಿಹಾಸಿಕ ಮತ್ತು ಪಾರಂಪರಿಕ ಕಲ್ಲಿನ ಕೋಟೆ

ಬಾಲ್ಯ [ಆರಂಭಿಕ ಜೀವನ]

[ಬದಲಾಯಿಸಿ]

ಕಾಲೇಜು ದಿನಗಳಿಂದಲೂ ಸಕ್ರಿಯವಾಗಿ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು ಹಾಗು ಯುವ ಕಾಂಗ್ರೆಸ್ ಮುಖಂಡರಾಗಿದ್ದರು.ಇವರು ಒಳ್ಳೆ ಬ್ಯಾಸ್ಕೆಟ್ಬಾಲ್ ಆಟಗಾರರಾಗಿದ್ದರು. ಇವರು ೧೯೬೬ರಲ್ಲಿ ರಾಷ್ಟೀಯ ಬ್ಯಾಸ್ಕೆಟ್ಬಾಲ್ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.ಇವರ ಹಿರಿಯ ಸಹೋದರ ಶ್ರೀ ಅಶ್ವತ್ಥರೆಡ್ಡಿಯವರು ತಮ್ಮ ಕಾಲೇಜಿನ ಉಪನ್ಯಾಸ ಹುದ್ದೆಯನ್ನು ತೊರೆದು ಸಮಾಜಸೇವೆಗೆಂದು ರಾಜಕೀಯಕ್ಕೆ ಕಾಲಿಟ್ಟಾಗ ಇಡೀ ಜಗಳೂರು ಕ್ಷೇತ್ರವೇ ಅವರ ಗೆಲುವಿಗೆ ಜೊತೆಯಾಗಿ ನಿಂತಿತ್ತು.[]

ರಾಜಕೀಯಕ್ಕೆ ಪಾದಾರ್ಪಣೆ

[ಬದಲಾಯಿಸಿ]

ಅಲ್ಲಿಂದ ಶುರುವಾದ ಇವರ ರಾಜಕೀಯ ಜೀವನ ಹತ್ತು ಹಲವು ತಿರುವುಗಳನ್ನು ಪಡೆದುಕೊಂಡು, ಒಬ್ಬ ಸಮರ್ಥ ರಾಜಕೀಯ ನಾಯಕನ ಸೃಷ್ಟಿಗೆ ಕಾರಣವಾಗಿದೆ. ೧೯೮೦ರಿಂದಲೂ ಕಾಂಗ್ರೆಸ್ ಕಾರ್ಯಕರ್ತರಾಗಿ ಕೆಲಸ ಮಾಡಿದ ಇವರಿಗೆ ಕಾಂಗ್ರೆಸ್ ಪಕ್ಷ, ಪ್ರತಿ ಚುನಾವಣೆಯಲ್ಲಿ ಟಿಕೆಟ್ ನೀಡುತ್ತೇವೆಂದು ಭರವಸೆ ನೀಡುತ್ತಾ ಕಡೆ ಘಳಿಗೆಯಲ್ಲಿ ಹೊರಗಿನ ವ್ಯಕ್ತಿಗೆ ಟಿಕೆಟ್ ನೀಡಿ ಇವರನ್ನು ಅವಕಾಶ ವಂಚಿತರನ್ನಾಗಿ ಮಾಡುತ್ತಿತ್ತು.ಇದರಿಂದ ಬೇಸತ್ತ ಇವರು ೧೯೯೪ನೇ ಇಸವಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಪ್ರಥಮ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವಿನ ನಗೆ ಬೀರಿದರು.[]ಆದರೆ ೨೦೦೮ರಲ್ಲಿ ಮಾತ್ರ ಇವರು ಜೆ.ಡಿ.ಸ್ ಪಕ್ಷದ ಎಸ್.ಕೆ ಬಸವರಾಜನ್ ವಿರುದ್ಧ ಒಮ್ಮೆ ಸೋತಿದ್ದರು. ನಂತರ ೨೦೧೦ನೇ ಚುನಾವಣೆಯಲ್ಲಿ ಬಿ.ಜೆ.ಪಿ. ಪಕ್ಷದಿಂದ ಸ್ಪರ್ಧಿಸಿ, ಗೆದ್ದು ಶಾಸಕರಾಗಿ ಆಯ್ಕೆಯಾದರು. ೨೦೧೩ರವರೆಗೆ ವಿಧಾನ ಪರಿಷತ್ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇವರು ೧೯೯೪ರಿಂದಲೂ ಸತತವಾಗಿ ಚುನಾಯಿತ ಪ್ರತಿನಿಧಿಯಾಗಿ ಚಿತ್ರದುರ್ಗ ಕ್ಷೇತ್ರವನ್ನು ಶಾಸನ ಸಭೆಗಳಲ್ಲಿ ಪ್ರತಿನಿಧಿಸುತ್ತಲೆ ಬಂದಿದ್ದಾರೆ. ಇವರು ೨೦೧೩ರ ವಿಧಾನಸಭಾ ಚುನಾವಣೆಯ ವೇಳೆಗೆ ತಮ್ಮ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮತ್ತೊಮ್ಮೆ ಬಿ.ಜೆ.ಪಿ. ಇಂದ ಅಭ್ಯರ್ಥಿಯಾಗಿ ನಿಂತು ತಮ್ಮ ರಾಜಕೀಯ ಕಡು ವೈರಿ ಎಂದೇ ಬಿಂಬಿಸಲ್ಪಡುವ ಎಸ್.ಕೆ ಬಸವರಾಜನ್ ವಿರುದ್ಧ ೩೭೦೦೦ ಮತಗಳ ಅಂತರದಿಂದ ಗೆದ್ದು ವಿಜಯೋತ್ಸವ ಆಚರಿಸಿದರು. ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಜೆ.ಡಿ.ಸ್ ಪಕ್ಷದ ಕೆ.ಸಿ. ವೀರೇಂದ್ರ (ಪಪ್ಪೀ) ವಿರುದ್ಧ ೪೦೦೦೦ಕ್ಕೂ ಅಧಿಕ ಮತಗಳ ಅಂತರದಿಂದ ಸಾಧಿಸಿದ ಗೆಲುವು ಇವರ ಸಾಧನೆಯ ರೆಕ್ಕೆಗೆ ಮತ್ತೊಂದು ಗರಿ ಸೇರಿದಂತಾಯಿತು. ಚಿತ್ರದುರ್ಗ ಕ್ಷೇತ್ರದ ಶಾಸಕರಾದ ಇವರು ಜನರೊಂದಿಗೆ ನೇರವಾದ ಮತ್ತು ಆತ್ಮೀಯವಾದ ಸಂಬಂಧವನ್ನು ಹೊಂದಿದ್ದಾರೆ. ಎಲ್ಲ ಮತದಾರರನ್ನು ವೈಯಕ್ತಿಕವಾಗಿ ಗುರುತಿಸಬಲ್ಲಂತಹ ವಿಶೇಷ ವ್ಯಕ್ತಿ. ಏಷ್ಯಾದಲ್ಲೇ ಅತ್ಯಂತ ದೊಡ್ಡ ಕೆರೆಯಾದ ಶಾಂತಿಸಾಗರದಿಂದ ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಾಕಾರಗೊಳಿಸಿದರು. ಇವರು ಅತ್ಯಂತ ಸರಳ ರಾಜಕಾರಣಿ ಹಾಗೂ ಜನರ ನೋವಿಗೆ ಮಿಡಿಯುವ ಶಾಸಕ ಎಂದರೆ ಅತಿಶಯೋಕ್ತಿಯಾಗಲರದು.ಇವರ ಈ ಕುಡಿಯುವ ನೀರಿನ ಯೋಜನೆಯು ಕೇವಲ ಚಿತ್ರದುರ್ಗ ನಗರಕ್ಕಷ್ಟೇ ಸೀಮಿತವಾಗಿಲ್ಲ, ಇದು ಹೊಳಲ್ಕೆರೆ ಹಾಗೂ ಜಗಳೂರು ತಾಲ್ಲೂಕುಗಳಿಗೂ ಮುಂದುವರಿದು ಅಲ್ಲಿನ ಜನರ ಕುಡಿಯುವ ನೀರಿನ ಸಮಸ್ಯೆಗೂ ಪರಿಹಾರವಾಗಿದೆ. ಆದರೆ ಚಿತ್ರದುರ್ಗ ನಗರದಲ್ಲಿ ಯು.ಜಿ.ಡಿ. ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ರಸ್ತೆ ಅಗಲೀಕರಣ ಹಾಗು ಅಭಿವೃದ್ಧಿಯು ತಡವಾಗುತ್ತಿದೆ ಎಂಬುದು ಶಾಸಕರ ಅಭಿಪ್ರಾಯ. ಇತ್ತೀಚಿಗಷ್ಟೇ ಹೊಸದಾಗಿ ಅಮೃತ್ ಯೋಜನೆಯಡಿ ಚಿತ್ರದುರ್ಗ ನಗರಕ್ಕೆ ೨೪/೭ ಕುಡಿಯುವ ನೀರಿನ ಯೋಜನೆಯನ್ನು ಪ್ರಾರಂಭಿಸಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]