ವಿಷಯಕ್ಕೆ ಹೋಗು

ಅಭಿಪ್ರಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಮಾನ್ಯವಾಗಿ, ಅಭಿಪ್ರಾಯವು ವೈಯಕ್ತಿಕವೆಂದು ಪರಿಗಣಿಸಲಾದ ವಿಷಯಗಳ ಬಗ್ಗೆ ಒಂದು ತೀರ್ಪು, ದೃಷ್ಟಿಕೋನ, ಅಥವಾ ಹೇಳಿಕೆ, ಅಂದರೆ ಸಂಪೂರ್ಣವಾಗಿ ಖಚಿತಕ್ಕಿಂತ ಕಡಿಮೆಯ ಮೇಲೆ ಆಧರಿಸಿದ್ದು, ಮತ್ತು ಭಾವನೆ ಅಥವಾ ವಾಸ್ತವಾಂಶಗಳ ವ್ಯಾಖ್ಯಾನದ ಪರಿಣಾಮವಾಗಿರುತ್ತದೆ. ವಾಸ್ತವಾಂಶ ಮತ್ತು ಅಭಿಪ್ರಾಯಕ್ಕೆ ವ್ಯತ್ಯಾಸವೇನೆಂದರೆ ವಾಸ್ತವಾಂಶಗಳನ್ನು ಪರಿಶೀಲಿಸಬಹುದು, ಅಂದರೆ ನಡೆದಿವೆ ಎಂದು ವಸ್ತುನಿಷ್ಠವಾಗಿ ಸಾಬೀತು ಮಾಡಬಲ್ಲವಾಗಿವೆ. ಉದಾಹರಣೆಗೆ: "ಅಮೇರಿಕಾ ವಿಯೆಟ್ನಾಮ್ ಯುದ್ಧದಲ್ಲಿ ಪಾಲ್ಗೊಂಡಿತ್ತು" ಎಂಬುದರ ವಿರುದ್ಧವಾಗಿ "ಅಮೇರಿಕಾ ವಿಯೆಟ್ನಾಮ್ ಯುದ್ಧದಲ್ಲಿ ಪಾಲ್ಗೊಂಡಿದ್ದು ಸರಿಯಾಗಿತ್ತು".