ಸದಸ್ಯ:Vidya.k123456/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರೆಟ್ರೋಲ್ ಇಂಜಿನ್

ಪೆಟ್ರೋಲ್ ಇಂಜಿನ್ ನಲ್ಲಿ ಸಿಲಿಂಡರ್ ನೊಳಗೆ ಸುಲಭವಾಗಿ ಚಲಿಸುವ ಮತ್ತು ಗಾಳಿಯ ಪ್ರವೇಶವನ್ನು ಪ್ರತಿಬಂಧಿಸುವ ಪಿಸ್ಟನ್ ಇರುತ್ತದೆ. ಸಿಲಿಂಡರಿನಲ್ಲಿ ಆಗಮಕವಾಟ ಮತ್ತು ನಿರ್ಗಮ ಕವಾಟಗಳೆಂಬ ಎರಡು ಕವಾಟಗಳಿರುತ್ತವೆ ಹಾಗೂ ಒಂದು ಕಿಡಿಬೆಣೆ ಇರುತ್ತದೆ. ಪಿಸ್ಟನನ್ನು ವಕ್ರದಂಡಕ್ಕೆ ಸಂಪರ್ಕಿಸಲಾಗಿರುತ್ತದೆ ಮತ್ತು ಇಂಜಿನ್ ಕಾರ್ಬೊರೇಟರಿಗೆ ಸಂಪರ್ಕ ಹೊಂದಿದೆ ಕಾರ್ಬೋರೇಟರಿನಲ್ಲಿ ಪೆಟ್ರೋಲ್ ಮತ್ತು ಗಾಳಿಯು ಸರಿಯಾದ ಪ್ರಮಾಣದಲ್ಲಿ ಮಿಶ್ರಣವಾಗಿ ನಂತರ ಮಿಶ್ರಣವು ಇಂಜಿನಿನೊಳಗೆ ಪ್ರವೇಶಿಸುತ್ತದೆ.

ಪೆಟ್ರೋಲ್ ಇಂಜನಿನ ಕಾರ್ಯವಿಧಾನಗಳು :

೧. ಭುಕ್ತಿ ಹೊಡೆತ :ಆವೀಕೃತ ಪೆಟ್ರೋಲ್ ಮತ್ತು ಗಾಳಿಯ ಮಿಶ್ರಣವು ಆಗಮ ಕವಾಟದ ಮೂಲಕ ಸಿಲಿಂಡರಿನೊಳಗೆ ಬರುತ್ತದೆ. ನಿರ್ಗಮಕವಾಟ ಮುಚ್ಚಿರುತ್ತದೆ. ಪಿಸ್ಟನ್ ಕಿಡಿಬೆಣೆಯ ಕಡೆಗೆ ಚಲಿಸುತ್ತದೆ.

೨. ಸಂಪೀಡನಾ ಹೊಡೆತ : ಆಗಮ ಮತ್ತು ನಿರ್ಗಮ ಕವಾಟಗಳೆರಡು ಮುಚ್ಚಿರುತ್ತವೆ ಪಿಸ್ಟನ್ ಕಿಡಿಬೆಣೆಯ ಕಡೆಗೆ ಚಲಿಸುವುದರ ಮೂಲಕ ಪೆಟ್ರೋಲ್ ಮತ್ತು ಗಾಳಿಯ ಮಿಶ್ರಣವನ್ನು ಸಂಪೀಡಿಸುತ್ತದೆ. ಈ ಸಂಪೀಡನೆಯು ಮಿಶ್ರಣದ ತಾಪವನ್ನು ಹೆಚ್ಚಿಸಿದರೂ ಸಹ ಅದು ಪೆಟ್ರೋಲನ್ನು ಹೊತ್ತಿಸಲು ಸಾಕಾಗುವುದಿಲ್ಲ.

೩. ಜ್ವಲನ ಹೊಡೆತ : ಕಿಡಿಬೆಣೆಯಿಂದ ಹೊಮ್ಮುವ ಕಿಡಿಗಳು ಸಂಪೀಡಿತಗೊಂಡ ಪೆಟ್ರೋಲ್ ಮತ್ತು ಗಾಳಿಯ ಮಿಶ್ರಣವನ್ನು ಹೊತ್ತಿಸುತ್ತವೆ.

೪. ವ್ಯಾಕೋಚಕ ಹೊಡೆತ : ಪೆಟ್ರೋಲ್ ಅತಿ ವೇಗವಾಗಿ ಉರಿದು ಉಷ್ಣ ಬಿಡುಗಡೆಯಾಗುತ್ತದೆ ದಹನಕ್ರಿಯೆಯ ಉತ್ಪನ್ನಗಳಾದ ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮೊನಾಕ್ಸೈಡ್ ನೀರಾವಿಗಳು ಮತ್ತು ಕಾರ್ಬನ್ ಕಣಗಳು ಉಂಟಾಗುತ್ತವೆ, ಅನಿಲಗಳು ಥಟ್ಟನೆ ವ್ಯಾಕೋಚನೆ ಹೊಂದುತ್ತವೆ ಮತ್ತು ಪಿಸ್ತನ್ ಹೆಚ್ಚು ಬಲದಿಂದ ಹೊರತಳ್ಳಿಕೆಗೊಳಗಾಗುತ್ತವೆ.

೫. ವಿಷ್ಕಾಸ ಹೊಡೆತ : ನಿರ್ಗಮ ಕವಾಟವು ತೆರೆಯಲ್ಪಡುತ್ತದೆ ಪಿಸ್ಟನ್ ಹಿಂದಕ್ಕೆ ಚಲಿಸುತ್ತದೆ ದಹನಕ್ರಿಯೆಯ ಅನಿಲ ಉತ್ಪನ್ನಗಳು ಸಿಲಿಂಡರಿನಿಂದ ನಿರ್ಗಮ ಕವಾಟದ ಮೂಲಕ ಹೊರಕ್ಕೆ ತಳ್ಳಿಕೆಯಾಗುತ್ತದೆ.