ಸದಸ್ಯ:Vidhathri Bhat/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಿನಾಥ ಸ್ವಾಮಿ

ಜನನ[ಬದಲಾಯಿಸಿ]

ಮುನಿಸುವ್ರತನ ತರುವಾಯ ಆರುಲಕ್ಷ ವರ್ಷಗಳಾದ ಮೇಲೆ ನಮಿನಾಥನ ಜನನವಾಯಿತು.

ಜನ್ಮ ಇತಿಹಾಸ[ಬದಲಾಯಿಸಿ]

ಈತನು ಹಿಂದಿನ ಮೂರನೇ ಜನ್ಮದಲ್ಲಿ ವತ್ಸದೇಶನ ಕೌಶಂಬಿ ನಗರದಲ್ಲಿ ಪಾರ್ಥಿರಾಜ ಮತ್ತು ಸುಂದರೀ ದೇವಿಯರ ಮಗನಾಗಿ ಸಿದ್ದಾರ್ಥನೆಂಬ ಹೆಸರಿನಿಂದ ಹುಟ್ಟಿದ್ದನು. ತಂದೆಯ ತರುವಾಯ ರಾಜನಾದ ಆತನು ತನ್ನ ತಂದೆಯ ಮರಣದಿಂದ ವೈರಾಗ್ಯಪರನಾಗಿ ಮುನಿಯಾದನು. ತಪಃ ಫಲದಿಂದ ಜೀವಿತಾಂತ್ಯದಲ್ಲಿ ಅಪರಾಜಿತ ಎಂಬ ಉತ್ತರ ವಿಮಾನದಲ್ಲಿ ಲವಸತ್ತನೆಂಬ ಅಹಮಿಂದ್ರನಾದನು. ಪುಣ್ಯ ತೀರುತ್ತಲೆ ಆತನು ವಂಗದೇಶದ ಮಿಥಿಲಾ ನಗರದ ವಿಜಯ ಮಹಾರಾಜನ ಮಡದಿ ಪಿಪ್ಪಲಾ ದೇವಿಯ ಗರ್ಭವನ್ನು ಆಷಾಢ ಕೃಷ್ಣ ದಶಮೀ ಸ್ವಾತಿ ನಕ್ಷತ್ರದಲ್ಲಿ ಜನಿಸಿದನು.[೧]

ನಾಮಕರಣ[ಬದಲಾಯಿಸಿ]

ದೇವೇಂದ್ರ ಜನ್ಮಾಭಿಷೇಕವನ್ನು ಮಾಡಿ, ನಮಿ ಎಂದು ನಾಮಕರಣ ಮಾಡಿದನು.

ಆಡಳಿತ[ಬದಲಾಯಿಸಿ]

ಸುವ್ರತಿ ತೀರ್ಥಂಕರ ತರುವಾಯ ಆರುಲಕ್ಷ ವರ್ಷಗಳಾದ ಮೇಲೆ ಹುಟ್ಟಿದ ಈತನು ಹತ್ತು ಸಹಸ್ರ ವರ್ಷ ಆಯುಷ್ಯವುಳ್ಳವನಾಗಿ ಸ್ವರ್ಣವರ್ಣವುಳ್ಳವನಾಗಿ ಹದಿನೈದು ಬಿಲ್ಲುಗಳ ಎತ್ತರವಿದ್ದನು. ಈತನು ಐದು ಸಹಸ್ರ ವರ್ಷ ರಾಜ್ಯವಾಳಿದ ಮೇಲೆ ದೇವ ಕುಮಾರರಿಂದ ತನ್ನ ಪೂರ್ವಜನ್ಮ ವೃತ್ತಾಂತವನ್ನು ಕೇಳಿ ವೈರಾಗ್ಯ ಹೊಂದಿದನು.

ದೀಕ್ಷೆ[ಬದಲಾಯಿಸಿ]

ಉತ್ತರಪುರವೆಂಬ ಪಲ್ಲಕ್ಕಿಯಲ್ಲಿ ಪರಿನಿಷ್ಕ್ರಮಣಯಾತ್ರೆಯನ್ನು ಕೈಗೊಂಡ ಆತನು ಚಿತ್ರವನೋದ್ಯಾನದಲ್ಲಿ ಆಷಾಢ ಕೃಷ್ಣ ದಶಮಿಯ ದಿನ ದೀಕ್ಷೆ ವಹಿಸಿದನು. ಮನಃಪರ್ಯಯ ಜ್ಞಾನ ಉದಿಸಿದ ಮೇಲೆ ವೀರಪುರದ ದತ್ತರಾಜನಿಂದ ಆಹಾರ ದಾನವನ್ನು ಪಡೆದು ಅನಂತರ ಒಂಬತ್ತು ವರ್ಷಗಳನ್ನು ಛದ್ಮಾವಸ್ಥೆಯಲ್ಲಿ ಕಳೆದು, ದೀಕ್ಷಾ ವನದ ಬಕುಲ ವೃಕ್ಷದ ಬುಡದಲ್ಲಿ ಕೇವಲ ಜ್ಞಾನವನ್ನು ಪಡೆದನು.

ಮುಕ್ತಿ[ಬದಲಾಯಿಸಿ]

ಹದಿನೇಳು ಜನ ಗಣಧರರೊಡನೆ ಧರ್ಮ ವಿಹಾರವನ್ನು ಮಾಡಿ ಮುಗಿಸಿದ ಮೇಲೆ ಸಮ್ಮೇದ ಪರ್ವತಾಗ್ರದಲ್ಲಿ ವೈಶಾಖ ಕೃಷ್ಣ ಚತುದರ್ಶಿಯ ಬೆಳಗಿನ ಜಾವ ಅಶ್ವಿನಿ ನಕ್ಷತ್ರದಲ್ಲಿ ಮುಕ್ತನಾದನು.

ಲಾಂಛನ[ಬದಲಾಯಿಸಿ]

ಈತನ ಲಾಂಛನ ನೀಲ ಕಮಲ.ಯಕ್ಷ ಯಕ್ಷಿಯರು ಭ್ರಕುಟ - ಚಾಮುಂಡೀ.

ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಮಂಜೂಶ್ರೀ ಪ್ರಿಂಟರ್ಸ್. p. ೪೩೯-೪೪೦.