ವಿಷಯಕ್ಕೆ ಹೋಗು

ಸದಸ್ಯ:Veena1610337/ನನ್ನ ಪ್ರಯೋಗಪುಟ/The nature and importance of management

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[][][]ನಿರ್ವಹಣೆಯ ಗುಣ ಮತ್ತು ಪ್ರಾಮುಖ್ಯತೆ

ಪೀಟರ್ ಡ್ರಕ್ಕರ್

ನಿರ್ವಹಣೆಯ ಅರ್ಥ

[ಬದಲಾಯಿಸಿ]
      ನಿರ್ವಹಣೆ ಎಂಬ ಕ್ರಿಯಾಪದವು ಇಟಲಿ ಭಾಷೆಯ ಮ್ಯಾನೇಜರೆ ಎಂಬ ಪದದಿಂದ ಬಂದಿದೆ. 'ಮ್ಯಾನೇಜರೆ' ಎಂದರೆ ಕೈಯಿಂದ ನಿರ್ವಹಿಸು, ವಿಶೇಷವಾಗಿ ಉಪಕರಣಗಳನ್ನು ನಿರ್ವಹಿಸುವುದು ಎಂದರ್ಥ. ಆಕ್ಸ್ಫ಼ರ್ಡ್ ನಿಘಂಟಿನ ಪ್ರಕಾರ ನಿರ್ವಹಣೆಯು ವ್ಯಕ್ತಿ ಮತ್ತು ಸಂಪನ್ಮೂಲಗಳೊಂದಿಗೆ ವ್ಯವಹರಿಸುವ ಹಾಗೂ ನಿಯಂತ್ರಿಸುವ ಪ್ರಕ್ರಿಯೆಯಾಗಿದೆ.
      
     ನಿರ್ವಹಣೆಯು ಸಂಸ್ಥೆಯ ನಿರ್ದಿಷ್ಟ ಉದ್ದೇಶಗಳನ್ನು ಸಾದಿಸುವುದಕ್ಕೆ ಇತರ ವ್ಯಕ್ತಿಗಳಿಂದ ಅಥವಾ ಅವರ ಸಹಾಯದಿಂದ ಕಾರ್ಯ ಮಾಡಿಸಿಕೊಳ್ಳುವ ಕಲೆಯಾಗಿದೆ.[]
     
    "ಪೀಟರ್ ಡ್ರುಕರ್"ರವರ ಪ್ರಕಾರ ನಿರ್ವಾಹಣೆಯು  ಒಂದು ವ್ಯಾಪಾರೋದ್ಯಮವನ್ನು ನಿರ್ವಹಿಸುವ ಮತ್ತು ನಿರ್ವಾಹಕರನ್ನು ನಿರ್ವಹಿಸುವ ಮತ್ತು ಕೆಲಸಗಾರರನ್ನು ಮತ್ತು ಕೆಲಸವನ್ನು ನಿರ್ವಹಿಸುವ ವಿವಿಧೋದ್ದೇಶ ಅಂಗವಾಗಿದೆ.
 

ನಿರ್ವಹಣೆಯ ಪ್ರಾಮುಖ್ಯತೆ

[ಬದಲಾಯಿಸಿ]
      ನಿರ್ವಹಣೆಯು ಸಾರ್ವತ್ರಿಕ ಕಾರ್ಯಚಟುವಟಿಕೆಯಾಗಿ ಸಂಘಟನೆಯ ಅವಿಭ್ಯಾಜ್ಯ ಅಂಗವಾಗಿದೆ. ನಿರ್ವಹಣೆಯು ಕೆಳಗಿನ ಕಾರಣಗಳಿಂದ ಎಲ್ಲಾ ರೀತಿಯ ಸಂಘಟನೆಗಳನ್ನು ಪ್ರಾಮುಖ್ಯತೆಯನ್ನು ಪಡೆದಿರುತ್ತದೆ.

ನಿರ್ವಹಣೆಯು ಗುಂಪುಗಳ ಉದ್ದೇಶಗಳನ್ನು ಸಾದಿಸಲು ಸಹಾಯಕವಾಗುತ್ತದೆ

[ಬದಲಾಯಿಸಿ]
    ನಿರ್ವಹಣೆಯು ಗುಂಪುಗಳ ಉದ್ದೇಶಗಳನ್ನು ಸಾದಿಸಲು ಸಹಾಯಕವಾಗುತ್ತದೆ. ನಿರ್ವಹಣೆಯು ವೈಯಕ್ತಿಕ ಪರಿಶ್ರಮವನ್ನು ಒಗ್ಗೂಡಿಸುವುದರ ಮೂಲಕ ಸಂಘಟನೆಯ ಉದ್ದೇಶಗಳನ್ನು ಸಾದಿಸಲು ಸಹಾಯ ಮಾಡುತ್ತದೆ.

ನಿರ್ವಹಣೆಯು ದಕ್ಷತೆಯನ್ನು ಹೆಚ್ಚಿಸುತ್ತದೆ

[ಬದಲಾಯಿಸಿ]
     ಪ್ರತಿಯೊಬ್ಬ ವ್ಯವಸ್ಥಾಪಕನೂ ಸಂಸ್ಥೆಯ ದಕ್ಷತೆಯನ್ನು ಹೆಚ್ಚಿಸಲು ಕಡಿಮೆ ವೆಚ್ಚದಲ್ಲಿ, ಅದಿಕ ಪ್ರಮಾಣದಲ್ಲಿ ಉತ್ಪಾದಿಸುವ ಗುರಿಯನ್ನು ಹೊಂದಿರುತ್ತಾನೆ. ಇದನ್ನು ಉತ್ತಮ ಯೋಜನೆಯನ್ನು ರೂಪಿಸುವ, ಸಂಘಟಿಸುವ, ಸಿಬ್ಬಂದಿ ನೇಮಕಾತಿ ಮಾಡುವ, ನಿರ್ದೇಶಿಸುವ ಹಾಗೂ ನಿಯಂತ್ರಿಸುವ ಮೂಲಕ ಸಾದಿಸಬಹುದಾಗಿದೆ.

ನಿರ್ವಹಣೆಯು ಚಲನಶೀಲ ಸಂಘಟನೆಯನ್ನು ಸೃಷ್ಟಿಸುತ್ತದೆ

[ಬದಲಾಯಿಸಿ]
     ಪ್ರತಿಯೊಂದು ಸಂಘಟಣೆಯು ನಿರಂತರವಾಗಿ ಬದಲಾಗುತ್ತಿರುವ ಪರಿಸರದಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಸಾಮಾನ್ಯವಾಗಿ ಸಂಘಟನೆಯಲ್ಲಿರುವ ವ್ಯಕ್ತಿಗಳು ಬದಲಾವಣೆಯನ್ನು ವಿರೋದಿಸುತ್ತಾರೆ. ಒಂದು ಪರಿಣಾಮಕಾರಿ ನಿರ್ವಹಣೆಯು ಸ್ಪರ್ಧಾತ್ಮಕವಾಗಿ ಕಾರ್ಯ ನಿರ್ವಹಿಸುವ ದೃಷ್ಟಿಯಿಂದ ಸಿಬ್ಬಂದಿವರ್ಗವನ್ನು ಬದಲಾವಣೆಗೆ ಹೊಂದಿಕೊಳ್ಳುವಂತೆ ಮಾಡುತ್ತದೆ. ಆ ಮೂಲಕ ಸಂಘಟನೆ ಸ್ಪರ್ದೆಯನ್ನು ಎದುರಿಸುವ ಸಾಮರ್ಥ್ಯವನ್ನು ಕಾಪಾಡಿಕೊಳ್ಳಬಹುದು. ಈ ಕಾರ್ಯಗಳು ಸಂಘಟನೆಯ ನಿರ್ವಹಣೆಯ ಚಲನಶೀಲತೆಯನ್ನು ಒದಗುಸುತ್ತದೆ.

ನಿರ್ವಹಣೆಯ ವೈಯಕ್ತಿಕ ಉದ್ದೇಶಗಳನ್ನು ಸಾಧಿಸಲು ಸಹಾಯ ಮಾಡುತ್ತದೆ

[ಬದಲಾಯಿಸಿ]
     ನಿರ್ವಹಣೆಯ ಘಟನೆಯಲ್ಲಿರುವ ವ್ಯಕ್ತಿಗಳನ್ನು ಉತ್ತೇಜಿಸುವ ಮೂಲಕ ಅವರ ವೈಯಕ್ತಿಕ ಗುರಿಗಳನ್ನು ಸಾಧಿಸಲು ಸಹಾಯ ಮಾಡಬೇಕು. ನಿರ್ವಹಣೆಯು ಸಿಬ್ಬಂದಿವರ್ಗದಲ್ಲಿ ಸಹಕಾರ, ಬದ್ದತೆ ಮತ್ತು ತಂಡಸ್ಪೂರ್ತಿಯನ್ನು ಹೆಚ್ಚಿಸುತ್ತದೆ.

ನಿರ್ವಹಣೆಯು ಸಮಾಜದ ಅಭಿವೃದ್ದಿಗೆ ಸಹಕಾರಿಯಾಗಿದೆ

[ಬದಲಾಯಿಸಿ]
      ಸಂಘಟನೆಯ ಆಭಿವೃದ್ದಿಗೆ ಸಮಾಜದ ವಿವಿಧ ವರ್ಗಗಳು ಕಾರಣವಾಗಿರುವುದರಿಂದ ನಿರ್ವಹಣೆಯು ಅವರ ಹಿತಾಸಕ್ತಿಗಳನ್ನು ಕಾಪಾಡುವ ಹೊಣೆಗಾರಿಕೆಯನ್ನು ಹೊಂದಿದೆ. ಒಂದು ಪರಿಣಾಮಕಾರಿ ನಿರ್ವಹಣೆಯು ಕಾರ್ಮಿಕರ, ಹೂಡಿಕೆದಾರರ, ಗ್ರಾಹಕರ, ಸಾರ್ವಜನಿಕರ ಬಗೆ ಇರುವ ಬದ್ದತೆಯನ್ನು ಒಪಿಕೊಳ್ಳುವುದರ ಮೂಲಕ ಸಮಾಜದ ಬೆಳವಣಿಗೆ ಮತ್ತು ಅಭಿವೃದ್ದಿಗೆ ಸಹಕರಿಸುತ್ತೆದೆ. ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಸರಕು ಮತ್ತು ಸೇವೆಗಳನ್ನು ಪೂರೈಸುವ, ಉದ್ಯೋಗಾವಕಾಶಗಳನ್ನು ಸೃಷ್ಟಿಸುವ, ಆಧುನಿಕ ತಂತ್ರಜ್ಞಾನವನ್ನು ಅಳವಡಿಸುವುದರ ಮೂಲಕ ಸಮಾಜದ ಯೋಗಕ್ಷೇಮವನ್ನು ರಕ್ಷಿಸುತ್ತಾ, ಬೆಳವಣಿಗೆ ಮತ್ತು ಆಭಿವೃದ್ದಿಯ ಮಾರ್ಗವನ್ನು ನಿರ್ವಹಣೆಯು ಅನುಸರಿಸುತ್ತದೆ.

ನಿರ್ವಹಣೆಯ ಕಾರ್ಯಗಳು

[ಬದಲಾಯಿಸಿ]
   ನಿರ್ವಹಣೆಯನ್ನು ಸಾಮಾಜಿಕ ಪ್ರಕ್ರಿಯ ಎಂದು ವಿಶ್ಲೆಷಿಸಲಾಗಿದೆ. ಸಂಘಟನೆಯ ನಿಗದಿಪಡಿಸಿದ ಉದ್ದೇಶಗಳ ಸಾಧನೆಗಾಗಿ ಪರಿಣಾಮಕಾರಿ, ಮಿತವ್ಯಯದ ಯೋಜನೆಗಳನ್ನು ಸಿದ್ದಪಡಿಸುವ ಹಾಗೂ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸುವ ಹೊಣೆಗಳನ್ನು ಒಳಗೊಂಡಿದೆ. ನಿರ್ವಹಣೆಯು ಚಲನಾತ್ಮಕ ಪ್ರಕ್ರಿಯೆಯಾಗಿದ್ದು ಹಲವಾರು ಕಾರ್ಯಚಟುವಟಿಕೆಗಳನ್ನು ಒಲಗೊಂಡಿದೆ.
    ನಿರ್ವಹಣೆಯು ಕಾರ್ಯವನ್ನು ಬೇರೆ ಬೇರೆ ನಿರ್ವಹಣಾ ತಘ್ಣರು ವಿವಿಧ ರೀತಿಯಲ್ಲಿ ವಿಂಗಡಿಸಿದ್ದಾರೆ.
       ಹೆನ್ರಿ ಫಯಾಲ್ ರವರ ಪ್ರಕಾರ, "ನಿರ್ವಾಹಣೆಯು ಸಂಘಟಿಸಲು,ನಿರ್ದೇಶಿಸಲು ಮತ್ತು ನಿಯಂತ್ರಿಸಲು ಮುಂದಾಲೋಚಿಸುವುದು ಹಾಗು ಯೋಚಿಸುವುದು".
     ಲೂಥರ್ ಗುಲಿಕ್ ರವರು ಆಂಗ್ಲಭಾಷೆಯ "POSDCORD" ಎಂಬ ವಿಶಿಷ್ಟ ಪದದ ಪ್ರತಿಯೊಂದು ಅಕ್ಷರಗಳ ಮೂಲಕ ನಿರ್ವಹಣೆಯು ವಿವಿಧ ಕಾರ್ಯಗಳನ್ನು ತಿಳಿಸಿರುತ್ತಾರೆ.

ಯೋಜಿಸುವುದು

[ಬದಲಾಯಿಸಿ]
     ಯೋಜಿಸುವಿಕೆಯು ನಿರ್ವಹಣೆಯ ಪ್ರಥಮ ಕಾರ್ಯವಾಗೆದೆ. ಇದು ಭವಿಷ್ಯದಲ್ಲಿ ನಿರ್ವಹಿಸಬೇಕಾದ ಕಾರ್ಯಗಳನ್ನು ಪೂರ್ವಭಾವಿಯಾಗಿ ನಿರ್ಧರಿಸುವ ಪ್ರಕ್ರಿಯೆಯಾಗಿದೆ. ಸಂಘಟನೆಯ ಪೂರ್ವನಿರ್ಧರಿತ ಉದ್ದೇಶಹಗಳ ಸಾಧನೆಗೆ ಸೂಕ್ತವಾದ ಕಾರ್ಯ ಯೋಜನೆಗಳನ್ನು ರೂಪಿಸುವ ಕಾರ್ಯಗಳನ್ನು ಒಳಗೊಂಡಿದೆ.
      ಯೋಜಿಸುವಿಕೆಯು ಭವಿಷ್ಯದಲ್ಲಿ ನಿರ್ವಹಿಸಬೇಕಾದ ಕಾರ್ಯಚಟುವಟಿಕೆಗಳನ್ನು ನೆರ್ಧರಿಸುವುದಾಗಿದೆ.ಇದು ಸಮಸ್ಯೆಗಳ ಪರಿಹಾರಕ್ಕೆ ತೀರ್ಮಾನಗಳನ್ನು ತೆಗೆದುಕೊಳ್ಳುವ ಪ್ರಯತ್ನವಾಗಿರುತ್ತದೆ.

ಸಂಘಟಿಸುವಿಕೆ

[ಬದಲಾಯಿಸಿ]
       ಸಂಸ್ಥೆಯ ಭೌತಿಕ, ಆರ್ಥಿಕ ಹಾಗೂ ಮಾನವ ಸಂಪನ್ಮೂಲಗಳನ್ನು ಒಗ್ಗೂಡಿಸುವ ಪ್ರಕ್ರಿಯೆಯೇ ಸಂಘಟಿಸುವಿಕೆಯಾಗಿದೆ. ಇದು ವಿವಿಧ ಸಂಪನ್ಮೂಲಗಳ ಮಧ್ಯೆ ಉತ್ಪಾದಕತೆಯ ಸಂಬಂಧವನ್ನು ಸಂಘಟನೆಯ ಗುರಿಯನ್ನು ಸಾಧಿಸುತ್ತದೆ.
        ಹೆನ್ರಿ ಫಯೋಲ್ ರವರ ಪ್ರಕಾರ,"ಸಂಘಟನೆ ಎಂದರೆ ಒಂದು ವ್ಯವಹಾರದ ಸಂಸ್ಥೆಯ ಕಾರ್ಯನಿರ್ವಹಣೆಗೆ ಅಗತ್ಯವಾದ ವಸ್ತು,ಉಪಕರಣ,ಬಂಡವಾಳ, ಮಾನವ ಸಂಪನ್ಮೂಲ ಇತ್ಯಾದಿಗಳನ್ನು ಒದಗಿಸುವುದಾಗಿದೆ. ಸಂಘಟನೆಯು ವ್ಯವಹಾರದ ಸಂಘಟನೆಗೆ ಅಗತ್ಯವಾದ ಮಾನವ ಸಂಪನ್ಮೂಲ ಹಾಗೂ ಇತರೆ ಸಂಪನ್ಮೂಲಗಳನ್ನು ನಿರ್ಧರಿಸಿ ಒದಗಿಸುವುದಾಗಿದೆ".

ಸಿಬ್ಬಂದಿ ನೇಮಕಾತಿ

[ಬದಲಾಯಿಸಿ]
          ಸಿಬ್ಬಂದಿ ನೇಮಕಾತಿಯು ಸಂಘಟನೆಗೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ಒದಗಿಸುವುದಾಗಿದೆ. ಇತ್ತೀಚಿಗೆ ಮುಂದುವರೆಯುತ್ತಿರುವ ತಾಂತ್ರಿಕತೆ, ವ್ಯವಹಾರದ ಪ್ರಮಾಣದಲ್ಲಾದ ಹೆಚ್ಚಳ, ಮಾನವೇಯ ಸ್ವಭಾವಗಳ ಸಂಕೀರ್ಣತೆ, ಸಿಬ್ಬಂದಿ ನೇಮಕಾತಿಯ ಪ್ರಾಮುಖ್ಯತೆಯನ್ನು ಹೆಚ್ಚಿಸಿವೆ. ಸಿಬ್ಬಂದಿ ನೇಮಕಾತಿಯ ಮುಖ್ಯ ಉದ್ದೇಶ ಸರಿಯಾದ ವ್ಯಕ್ತಿಗೆ ಸರಿಯಾದ ಕೆಲಸ ನೀಡುವುದು.
ಸಿಬ್ಬಂದಿ ನೇಮಕಾತಿಯು ಕೆಳಕಂಡ ಪ್ರಕ್ರಿಯೆಯನ್ನು ಒಲಗೊಂಡಿದೆ.
  • ಮಾನವಶಕ್ತಿಯ ಯೋಜನೆ
  • ನೇಮಕಾತಿ, ಆಯ್ಕೆ, ಸ್ಥಳ ನಿಯೋಜನೆ
  • ತರಬೇತಿ ಮತ್ತು ನಿಯೋಜನೆ
  • ಸಂಭಾವನೆ ನೀಡುವುದು
  • ಕಾರ್ಯಕ್ಷಮತೆಯನ್ನು ಅಳೆಯುವುದು
  • ಬಡ್ತಿ ಹಾಗೂ ವರ್ಗಾವಣೆ.

ನಿರ್ದೇಶಿಸುವಿಕೆ

[ಬದಲಾಯಿಸಿ]
    ಸಂಘಟನೆಯ ಉದ್ದೇಶಗಳನ್ನು ದಕ್ಷತೆಯಿಂದ ಸಾಧಿಸಲು ಅದರ ಕಾರ್ಯವಿಧಾನಗಳನ್ನು ಪ್ರಚೋದಿಸುವ ನಿರ್ವಹಣಾ ಕಾರ್ಯಗಳ ಭಾಗಕ್ಕೆ ನಿರ್ದೇಶನವೆನ್ನುತಾರೆ. ಸಿಬ್ಬಂದಿಯನ್ನು ಕೆಲಸದಲ್ಲಿ ತೊಡಗಿಸುವ ಮೂಲಕ ನಿರ್ದೇಶನವು ಸಂಘಟತೆಗೆ ಜೀವಂತಿಕೆಯನ್ನು ನೀಡುತ್ತದೆ.

ಇದು ಕೆಳಕಂಡ ಅಂಶಗಳನ್ನು ಒಳಗೊಂಡಿದೆ.

  • ಮೇಲ್ವಿಚಾರಣೆ
  • ಉತ್ತೇಜನ ನೀಡುವುದು
  • ನಾಯಕತ್ವ
  • ಸಂವಹನ

ನಿಯಂತ್ರಿಸುವಿಕೆ

[ಬದಲಾಯಿಸಿ]
    ನಿಯಂತ್ರಿಸುವಿಕೆ ಎಂದರೆ ಸಂಘಟನೆಯ ನೈಜ ಕಾರ್ಯತತ್ಪರತೆಯನ್ನು ಪೂರ್ವನಿರ್ಧರಿತ ಮಾನಕಗಳೊಂದಿಗೆ ತುಲನೆ ಮಾಡುವ, ವ್ಯತ್ಯಾಸಗಳನ್ನು

ಕಂಡುಹಿಡಿಯುವ ಹಾಗೂ ವ್ಯತ್ಯಾಸಗಳಿದ್ದರ್ರೆ ಸರಿಪಡಿಸುವ ಪ್ರಕ್ರಿಯೆಯ ಮೂಲಕ ಸಂಘಟನೆಯ ಉದ್ದೇಶಗಳನ್ನು ಸಾಧಿಸುವುದಾಗಿರುತ್ತದೆ.ನಿಯಂತ್ರಣದ ಉದ್ದೆಶ ನೈಜ ಕಾರ್ಯಚಟುವಟಿಕೆಗಳು ಈಗಾಗಲೇ ಯೋಜಿಸಿದಂತೆ ನಡೆದಿರುತ್ತವೆಯೇ ಎಂಬುದನ್ನು ಮನಗಾಣುವುದಾಗಿದೆ.ಒಂದು ಉತ್ತರ ನಿಯಂತ್ರಣ ಪದ್ಧತಿಯು ಭವಿಷ್ಯದಲ್ಲಿ ಸಂಭವಿಸಬಹುದಾದ ವ್ಯತ್ಯಾಸಗಳಾನ್ನು ಸಂಭವಿಸುವ ಪೂರ್ವದಲ್ಲಿ ನಿರೀಕ್ಷಿಸಿ ಆ ಮೂಲಕ ನಿಯಂತ್ರಿಸಲು ಸಹಕರಿಸುತ್ತದೆ.

ನಿರ್ವಹಣೆಯ ಹಂತಗಳು

[ಬದಲಾಯಿಸಿ]
  ಸಂಘಟನೆಯ , ನಿರ್ವಹಣೆಯ ಸ್ಥಾನ , ಅಧಿಕಾರ ಮತ್ತು ಹೊಣೆಗಾರಿಕೆಯನ್ನಾಧರಿಸಿ ವಿಂಗಡಿಸುವ ಶ್ರೇಣಿಗಳಿಗೆ ನಿರ್ವಹಣೆಯ ಹಂತ ಎಂದು ಕರೆಯುತ್ತರೆ. ಸಂಘಟನೆಯ ವ್ಯವಹಾರದ ಸ್ವರೂಪ ಹಾಗೂ ಕೆಲಸಗಾರರ ಸಂಖ್ಯೆಗೆ ಅನುಗುಣವಾಗಿ ನಿರ್ವಹಣಾ ಹಂತಹಳು ಹೆಚ್ಚಾಗುತ್ತವೆ ಅಥವಾ ಕಡಿಮೆಯಾಗುತ್ತವೆ. ನಿರ್ವಹಣಾ ಹಂತಗಳು ಅಧಿಕಾರದ ಪ್ರಮಾಣ, ಅಧಿಕಾರದ ಮಟ್ಟ ಆಜ್ನಾಪಿಸುವಿಕೆಯ ಶ್ರೇಣಿಯನ್ನು ನಿರ್ಧರಿಸುತ್ತವೆ. ನಿರ್ವಹಣಾ ಹಂತಗಳನ್ನು ಸಾಮಾನ್ಯವಾಗಿ ಮೂರು ವಿಭಾಗಗಳನ್ನು ವಿಂಗಡಿಸಬಹುದು.

ಉನ್ನತ ಹಂತ/ಆಡಳಿತಾತ್ಮಕ ಹಂತ

[ಬದಲಾಯಿಸಿ]

ಮಧ್ಯಮ ಹಂತ /ಕಾರ್ಯನಿರ್ವಹಣಾ ಹಂತ

[ಬದಲಾಯಿಸಿ]

=ಕೆಳಹಂತ / ಮೇಲ್ವಿಚಾರಣೆಯ ಹಂತ / ಕಾರ್ಯಕಾರ/ಮೂದಲ ಹಂತ ನಿರ್ವಹಣೆ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. 2 nd pu business studies textbook
  2. https://www.linkedin.com/.../management-nature...
  3. https://www.scribd.com/.../Management-Concept...
  4. uru.ac.in/.../Nature%20of%20Management.pdf