ಸದಸ್ಯ:Vatsalya M.R/sandbox
ಗಾಯತ್ರಿ ಉಡುಪ ರವರು ದಕ್ಷಿಣಕನ್ನಡ ಜಿಲ್ಲೆಯ ಭರವಸೆಯ ಮಹಿಳಾ ಬರಹಗಾರ್ತಿಯರಲ್ಲಿ ಒಬ್ಬರಾಗಿ ಬಹುಮಾನ ಸಂಪನ್ನದ್ದಾರರು. ಬಿ.ಶಿವರಾಮ ವಾರಂಬಳ್ಳಿ ,ಕಮಲಾಕ್ಷಿ ದಂಪತಿಗಳ ಸುಪುತ್ರಿ .ಗಾಯತ್ರಿ ೨೫-೦೮-೧೯೫೬ ರಂದು ಕಾರ್ಕಳದಲ್ಲಿ ಜನಿಸಿದರು.ಕನ್ನಡದಲ್ಲಿ ಎಂ.ಎ ಹಾಗು ಬಿ.ಎಡ್ ಪದವಿ ಗಳಿಸಿರುವ ಇವರು ಪ್ರಸ್ತುತ ತೂಕೂರಿನ ಶ್ರಿ ಸುಬ್ರಹ್ಮಣ್ಯ ಸ್ವಾಮಿ ಶಾಲೆಯಲ್ಲಿ ಅದ್ಯಾಪಿಕೆಯಾಗಿ ಕಾರ್ಯನಿರ್ವಹಿಸುತಿದ್ದಾರೆ.ಶಾಸ್ತ್ರಿಯ ಸಂಗೀತದಲ್ಲಿ ಜ್ಯೂನಿಯರ್ ಗ್ರೇಡ್ ನಲ್ಲಿ ಉತ್ತೀಣತೆ ಹೊಂದಿದ ಗಾಯತ್ರಿಯವರು ಸತತ ಸಂಗೀತ ಅಬ್ಯಸದಿಂದಾಗಿ ಆಕಾಶವಾಣಿಯಲ್ಲಿ ಕಲಾವಿದೆಯಾಗಿದ್ದಾರೆ.
ಕಿನ್ನಿಗೂಳಿಯಲ್ಲಿ ಪತಿ ಸಚಿದಾನಂದ ಉಡುಪರ ಅನಂತ ಪ್ರಕಾಶಸಂಸ್ಥೆಯಲ್ಲಿ ಹಾಗು ಇನ್ನಿತರ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಹತ್ತನೆಯ ತರಗತಿಯಲ್ಲಿ ಕಲಿಯುತ್ತಿದ್ದಾಗ ಇವರ ನಾಲ್ಕು ಕತೆಗಳು ಪ್ರಕಟವಾಹಿತು .ಇದರಿಂದ ಸಿಕ್ಕ ಪ್ರೊತ್ಸಾಹಸದಿಂದ ನಿರತವಾಗಿ ಸಾಹಿತ್ಯದ ಕಡೆಗೆ ಒಲವುಮೂಡಿಸಿದರು.ತುಷಾರ ,ವನಿತ ,ತತರಂಗ,ಉದಯವಾಣಿ,ಮಂಗಳ ಹೀಗೆ ಹಲವು ಪತ್ರಿಕೆಗಳಲ್ಲಿ ,ಕತೆ,ಕವನ,ಹಾಸ್ಯಬರಹ,ಪರಿಚಯ ಲೇಖನಗಳನ್ನು ಬರೆಯುತ್ತಾ ಬಂದರು.
ಕವನಸಂಕನಗಳು
[ಬದಲಾಯಿಸಿ]- ಇನ್ನಷಟು ಕವಿತೆಗಳು (೧೯೯೫)
- ಅತ್ತಿಗೆಯ ಆಲಾಪ
- ಹೆಣ್ಣಿಗೆ
- ವಾಸ್ತವ
- ಕಾಯುವೆ
ಒಂಬತ್ತು ವಷಗಳ ನಂತರ ಗ್ರಹಿಣಿ ಗೀತ(೨೦೦೪)ಯನ್ನು ರಚಿಸಿದರು.
ಕಾವ್ಯ ಸಂಕಲನ
[ಬದಲಾಯಿಸಿ]- ಕಂದನ ಕನಸು
- ಗೌರಿಯ ಗೊಂಬೆ
ಹಪ್ಪಳ ಮತ್ತು ಇತರ ಕಥೆಗಳು.ಇಂದಿನ ತಲೆಮಾರುಗಳಲ್ಲಿ ಲುಪ್ತವಾಗುತ್ತಿರುವ ಭಾವಲೂಕವನ್ನು,ವಿಶೇಷವಾಗಿ ಸ್ತ್ರೀ ಸಂವೇದನೆಗಳನ್ನು ಜೊತೆಗೆ ಹಳ್ಳಿ ಮತ್ತು ಪಟ್ಟಣದ ಬದುಕಿನ ಮುಖಮುಕಿಯನ್ನು ಅಪ್ಯಾಯಮಾನವಾಗಿ ಕಟ್ಟಿಕೊಡುವ ಪರಿ ವಿಶೇಷವಾದದು.
ಪ್ರಶಸ್ತಿಗಳು
[ಬದಲಾಯಿಸಿ]- ಜಿ.ಪಿ ರಾಜರತ್ನಂ ಪ್ರಶಸ್ತಿ
- ಬಿ.ಎಂ ಶ್ರೀ ಪ್ರತಿಷ್ಟಾನ ಪ್ರಶಸ್ತಿ
ಹೀಗೆ ಹತ್ತು ಹಲವಾರು ಪ್ರಶಸ್ತಿಗಳ್ನ್ನು ಗಳಿಸಿದ್ದಾರೆ.ಸಂಸ್ಕ್ರಿತಿ ಮುಂತಾದ ವಿಚಾರಗಳಲ್ಲಿ ತೊಡಗಿಸಿಕೊಂಡಿದ್ದಾರುವ ಗಾಯತ್ರಿ ಎಸ್.ಉಡುಪರು ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಭರವಸೆಯ ಕ್ರಿಯಾಶೀಲ ಲೇಖಕಿಎಬುದರಲ್ಲಿ ಎರಡು ಮಾತಿಲ್ಲ.