ಸದಸ್ಯ:Vathsala N/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
   ಮಹಾಭಾರತದಲ್ಲಿ ಶಿಖಂಡಿಯ ಪಾತ್ರ 

ಮಹಾಭಾರತದ ನಿರ್ಣಾಯಕ ಪಾತ್ರಗಳಲ್ಲಿ ದ್ರುಪದನ ಮಗಳಾದ ಶಿಖಂಡಿಯ ಪಾತ್ರವು ಒಂದು. ಲಿಂಗವಿನೀಮಯ ಮಾಡಿಕೊಂಡು ಶಿಖಂಡಿಯು ಭೀಷ್ಮನ ಸಾವಿಗೆ ಕಾರಣಳಾಗುತ್ತಾಳೆ. [೧]'ಶಿಖಂಡಿ ಪಾತ್ರದ ವಿಶೇಷತೆ ಏನೆಂದರೆ ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾಗುವುದು.ಕುರುಕ್ಷೇತ್ರ ಯುದ್ಧದಲ್ಲಿ ಭೀಷ್ಮನನ್ನು ಕೊಲ್ಲಲು ಶಿಖಂಡಿಯನ್ನು ಅರ್ಜುನನು ಮುಂದೆ ನಿಲ್ಲಿಸುತ್ತಾನೆ. ಭೀಷ್ಮನು ಕುರುಡರು, ಅಸ್ತ್ರಶಸ್ತ್ರಗಳನ್ನು ಹಿಡಿಯದಿರುವವರು, ನೆಲದ ಮೇಲೆ ನಿಂತು ಯುದ್ದಮಾಡುವವರು, ಹೆಂಗಸರು ಹಾಗೂ ನಪುಂಸಕರನ್ನು ಕೊಲ್ಲುವುದಿಲ್ಲ ಎಂದು ಮೊದಲೇ ಪ್ರತಿಜ್ಞೆ ಮಾಡಿರುತ್ತಾನೆ. ಆದ್ದರಿಂದ ಅರ್ಜುನನು ಭೀಷ್ಮನನ್ನು ಕೊಲ್ಲಲು ಶಿಖಂಡಿಯನ್ನು ಮುಂದೆ ಬಿಡುತ್ತಾನೆ. ಸ್ತ್ರಿಯಿಂದ ಪುರುಷನಾದ ಶಿಖಂಡಿ ನಪುಂಸಕ ಅಲ್ಲದಿದ್ದರು ಸಹ ಮೊದಲು ಸ್ತ್ರೀಯಾಗಿ ಜನಿಸಿರುವುದರಿಂದ ಭೀಷ್ಮನು ಶಿಖಂಡಿಯನ್ನು ಕೊಲ್ಲುವುದಿಲ್ಲ. ಭೀಷ್ಮನಿಗೆ ಅವರ ತಂದೆಯು ಶಂತನು ವರ ಕೊಟ್ಟಿರುತ್ತಾರೆ ಸಾವಿಲ್ಲದೆ ಎಷ್ಟು ಕಾಲಗಳಾದರೂ ಬದುಕಬಹುದು ಎಂದು ಆದರೆ ಭೀಷ್ಮನು ಶಿಖಂಡಿಯ ಕಾರಣದಿಂದ ಕೊಲ್ಲಲ್ಪಡುತ್ತಾನೆ. ಪಾಂಡವರ ಗೆಲುವಿಗೆ ಶಿಖಂಡಿಯ ಪಾತ್ರವು ಸಹ ಪ್ರಮುಖ ಪಾತ್ರವಹಿಸಿದ.

ಉಲ್ಲೇಖ[ಬದಲಾಯಿಸಿ]

  1. https://m.udayavani.com/article/sikhandi-was-born-the-wrath-of-bhishma/754791