ಸದಸ್ಯ:Varshachakrapani

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಣಕ ಯಂತ್ರ

               ಗಣಕ ಅಥವಾ ಗಣಕಯಂತ್ರ ಎನ್ನುವುದು ಯಾವುದೇ ನಿರ್ದಿಷ್ಟ ಕಾರ್ಯಗಳನ್ನು ಅದರ ಪ್ರೋಗ್ರಾಂಗಳ ನೆರವಿನೊಂದಿಗೆ ಬಳಕೆದಾರರ ಆದೇಶದಂತೆ ಸ್ವತ: ನಿರ್ವಹಿಸುವ ಒಂದು ವಿದ್ಯುನ್ಮಾನ ಸಾಧನವಾಗಿದೆ.
     ಕಂಪ್ಯೂಟರ್ ಗಳು ಇಂದು ತಾಂತ್ರಿಕವಾಗಿ ಬಹಳಷ್ಟು ಮುಂದುವರೆದಿದೆ ಹಾಗೂ ಅವು ದಿನೇ ದಿನೇ ಮುಂದುವರೆಯುತ್ತಲೇ ಇವೆ.ಆದರೆ ಅವು ಈಗಿನ ಸ್ಥಿತಿಯನ್ನು ತಲುಪಲು ಬಹಳಷ್ಟು ವರ್ಷಗಳನ್ನೇ ತೆಗೆದುಕೊಂಡಿರುತ್ತದೆ. ೨೦ನೇ  ಶತಮಾನಕ್ಕಿಂತ ಮುಂಚೆ ಹೆಚ್ಚಿನ ಲೆಕ್ಕಾಚಾರಗಳನ್ನು ಮಾನವರು ಸ್ವತ: ಮಾಡುತ್ತಿದ್ದರು.ಆಗ ಅವರು ಈಗಿನ ಕಂಪ್ಯೂಟರ್ ಗಳಿಗೆ ಪರ್ಯಾಯವಾಗಿ ಇತರೆ ಸಾಧನ ಸಲಕರಣೆಗಳನ್ನು ಬಳಸುತ್ತಿದ್ದರು.
     ಕ್ರಿ.ಶ ೧೮೨೦ರ ದಶಕದಲ್ಲಿ ಚಾರ್ಲ್ಸ್ ಬಾಬೆಜ್   ಎಂಬುವವರು  ಮೊದಲ ಯಾಂತ್ರಿಕ ಕಂಪ್ಯೂಟರ್  ಎಂದು ಪರಿಗಣಿಸಲಾಗಿರುವ 'ಅಂತರ ಎಂಜಿನ್' ನನ್ನು  ಅಭಿವೃಧ್ಧಿ ಪಡಿಸಲು  ತೊಡಗಿದರು. ಆದರೆ  ನಿಧಿಯ ಕೊರತೆಯಿಂದಾಗಿ  ಅವರಿಗೆ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.ಅವರು ಮಾಡಿದ ಈ ಪ್ರಯತ್ನವನ್ನು ಈಗಿನ ಆಧುನಿಕ ಕಂಪ್ಯೂಟರ್ ಗಳ ವಿಕಾಸಕ್ಕೆ ಬಹುಮುಖ್ಯ ಕಾರಣ ಎಂದು ಪರಿಗಣಿಸಲಾಗಿದೆ.(ಈ ಕಾರಣದಿಂದಾಗಿ ಅವರನ್ನು ' ಕಂಪ್ಯೂಟರ್ ನ ಪಿತಾಮಹ ' ಎಂದು ಪರಿಗಣಿಸಲಾಗಿದೆ).
     ಕಂಪ್ಯೂಟರ್ ವಿಚಾರ ಬಂದಾಗ , ಬಹಳಷ್ಟು ಮಂದಿ ಮನೆಗಳಲ್ಲಿ ಹಾಗೂ ಕಚೇರಿಗಳಲ್ಲಿ ಹೆಚ್ಚಾಗಿ ಕಾಣಸಿಗುವ ಡೆಸ್ಕ್ ಟಾಪ್,ಹಾಗು ಲ್ಯಾಪ್ ಟಾಪ್ ಕಂಪ್ಯೂಟರ್ ಗಳಷ್ಟೇ ಕಂಪ್ಯೂಟರ್ ಗಳೆಂದು ಭಾವಿಸಿದ್ದಾರೆ. ಆದರೆ ಅವುಗಳು ಕಂಪ್ಯೂಟರ್ ನ          ಒಂದು ಪ್ರಕಾರಗಳಷ್ಟೆ ಆಗಿವೆ. ಕನ್ಸೊಲ್, ನೆಟ್^ಬುಕ್, ಸರ್ವರ್, ಸ್ಮಾರ್ಟ್^ಫೋನ್ , ಟ್ಯಾಬ್ಲೆಟ್ ಇತ್ಯಾದಿ ಕೆಲ ವಿದ್ಯುನ್ಮಾನ ಸಾಧನಗಳು ಸಹ ಕಂಪ್ಯೂಟರ್ ನ ಪ್ರಕಾರಗಳೇ ಅಗಿದೆ.
     ಇಂಗ್ಲಿಷ್ ನ ' ಕಂಪ್ಯೂಟರ್ ' ಎಂಬ ಪದದ ಮೂಲವು ಗ್ರೀಕ್ ನ 'computare' ಎಂಬ ಪದ ಎಂದು ಹಾಗು ಅದರ ಅರ್ಥ ' ಲೆಕ್ಕಾಚಾರ ಮಾಡುವುದು ' ಎಂದು ತಿಳಿಯಲಾಗಿದೆ. 'ಕಂಪ್ಯೂಟರ್' ಎಂಬ ಪದವನ್ನು ಹಿಂದೆ ಲೆಕ್ಕಾಚಾರದ ಕೆಲಸವನ್ನು ನಿರ್ವಹಿಸುತ್ತಿದ್ದ ವ್ಯಕ್ತಿಗಳಿಗೆ ನೀಡಲಾಗಿತ್ತು ಹಾಗೂ ಅವರನ್ನು ಕಂಪ್ಯೂಟರ್ ಗಳೆಂದು  (ಡಾಕ್ಟರ್ , ಲಾಯರ್ , ಪೋಲೀಸ್ ಎಂಬಂತೆ) ಕರೆಯಲಾಗುತ್ತಿತ್ತು. ನಂತರ ಆ ಮಾನವ ಕಂಪ್ಯೂಟರ್ ಗಳ ಜಾಗಕ್ಕೆ ಯಂತ್ರಿಕ ಸಾಧನಗಳು ಬಂದೊಡನೆಯೇ ಅವಕ್ಕೆ 'ಕಂಪ್ಯೂಟರ್' ಎಂಬ ಹೆಸರನ್ನು ನೀಡಲಾಯಿತು.

ಕಂಪ್ಯೂಟರ್ ಗಳನ್ನು ಮುಖ್ಯವಾಗಿ ಎರಡು ಪ್ರಕಾರಗಳಲ್ಲಿ ವರ್ಗೀಕರಿಸಲಾಗುತ್ತದೆ. ೧.ಕಾರ್ಯಾ ಆಧಾರಿತ ವರ್ಗಗಳು

  ♦ ಅನಲಾಗ್ ಕಂಪ್ಯೂಟರ್ ಗಳು
  ♦ ಡಿಜಿಟಲ್ ಕಂಪ್ಯೂಟರ್ ಗಳು
  ♦ ಹೈಬ್ರಿಡ್ ಕಂಪ್ಯೂಟರ್ ಗಳು

೨.ಗಾತ್ರ ಆಧಾರಿತ ವರ್ಗಗಳು

   ♦ ಸೂಪರ್ ಕಂಪ್ಯೂಟರ್ ಗಳು
   ♦ ಮೇನ್^ಫ್ರೇಮ್ ಕಂಪ್ಯೂಟರ್ ಗಳು
   ♦ ಮಿನಿ ಕಂಪ್ಯೂಟರ್ ಗಳು
   ♦ ಮೈಕ್ರೊ ಕಂಪ್ಯೂಟರ್ ಗಳು


ಈ ಸದಸ್ಯರ ಊರು ಮಂಗಳೂರು.