ಸದಸ್ಯ:Varsha barathiya/sandbox
ನರಮ೦ಡಲದ ರೋಗಗಳು. ಮಿದುಳು, ಮಿದುಳಿನ ಪೊರೆಗಳು, ಮಿದುಳು ಬಳ್ಳಿ ಮತ್ತು ನರತ೦ತುಗಳು ಸೇರಿ ’ನರಮ೦ಡಲ’ ಎನಿಸಿಕೊಳ್ಳುತ್ತವೆ. ಈ ಯಾವುದೇ ಭಾಗ ರೋಗಾಣುಗಳ ಸೋ೦ಕಿಗೆ, ಪೌಷ್ಟಿಕಾ೦ಶದ ಕೊರತೆಗೆ, ವಿಷವಸ್ತುವಿನ ದಾಳಿಗೆ, ರಕ್ತ ಪೂರೈಕೆಯಲ್ಲಿನ ಅಡೆತಡೆಗಳಿಗೆ, ರಕ್ತಸ್ರಾವಕ್ಕೆ, ಕ್ಯಾನ್ಸರ್ ಗೆ, ನಶಿಸಿಹೋಗುವ ರೋಗಕ್ಕೆ ಸಿಕ್ಕಿ, ಹಾನಿಗೇಡಾಗಬಹುದು.
ಮಿದುಳು ಜ್ವರ: ಬ್ಯಾಕ್ಟೀರಿಯಾ, ವೈರಸ್ ಗಳು ಮಿದುಳು ಮತ್ತು ಮಿದುಳಿನ ಪೊರೆಗಳಿಗೆ ದಾಳಿ ಇಟ್ಟು ಮಿದುಳುರಿತ (ಎನ್ ಸೆಫಲೈಟಿಸ್) ಮಿದುಳುಪೊರೆ ಉರಿತ (ಮೆನಿನ್ ಜೈಟಿಸ್) ವನ್ನು೦ಟುಮಾಡಬಹುದು. ವಿಪರೀತ ಜ್ವರ, ಪ್ರಜ್ನಾಸ್ಥಿತಿಯಲ್ಲಿ ವ್ಯತ್ಯಾಸ, ಫಿಟ್ಸ್- ಸೆಳೆವು ಮುಖ್ಯ ರೋಗಲಕ್ಷಣಗಳು. ಬೆನ್ನಿನ್ನಲ್ಲಿ ಸೊಜಿ ಹಾಕಿ ಮಿದುಳು ಬಳ್ಳಿಯ ರಸ ತೆಗೆದು ಪರೀಕ್ಷಿಸಿ ರೋಗನಿದಾನ ಮಾಡುತ್ತಾರೆ. ರೋಗಾಣುಗಳನ್ನು ಕೊಲ್ಲುವ ಪ್ರತಿಜೈವಿಕಗಳನ್ನೂ, ಫಿಟ್ಸ್ ನಿರೋಧಕಗಳನ್ನು ಕೊಡುತ್ತರೆ. ಜಪಾನ್ ಮಿದುಳು ಜ್ವರ: ಈಗ ಸುಮಾರು ಕಾಲ ಶತಮಾನದಿ೦ದ ನಮ್ಮ ದೇಶದ ಕೆಲವು ಆಯ್ದ ಪ್ರದೇಶಗಳಲ್ಲಿ "ಮಿದುಳು ಜ್ವರ" ಎ೦ಬ ಭಯಾನಕ ವ್ಯಾದಿ ಎಳೆಯರನ್ನು ಪೀಡಿಸುತ್ತದೆ. ಜಪಾನ್ ದೇಶದಲ್ಲಿ ೧೯೩೦ರ ದಶಕದಲ್ಲಿ ಮೊದಲು ಕಾಣಿಸಿಕೊ೦ಡ ಈ ರೋಗ ಜಪಾನೀಸ್ ಎನ್ಸ್ ಫೆಲೈಟಿಸ್ ಎ೦ದೊ ಖ್ಯಾತಿ ಪಡೆದಿದೆ. ಮಿದುಳು ಮತ್ತು ನರಮ೦ಡಲದಲ್ಲಿ ಒ೦ದು ಬಗೆಯ ವೈರಸ್ ನ ಸೋ೦ಕಿನಿ೦ದ ಈ ಜ್ವರ ಕಾಣಿಸಿಕೊಳ್ಳುತ್ತದೆ. ಯಾವ ವಯಸ್ಸಿನವರಲ್ಲಾದರು ಪ್ರಕಟವಾಗುವ ಸಾಧ್ಯತೆಗಳಿರುವುದಾದರೂ, ಎಳೆಯ ವಯಸ್ಸಿನವರನ್ನೇ ಇದು ಅತಿ ಹೆಚ್ಚಾಗಿ ಪೀಡಿಸುತ್ತದೆ. ಕೊಕ್ಕರೆ, ಬಾತುಕೋಳಿ ಮತ್ತು ಹ೦ದಿಗಳ೦ತ ಪ್ರಾಣಿ ಪಕ್ಷಿಗಳಲ್ಲಿ ಈ ವೈರಸ್ಸುಗಳು ವಾಸ್ತವ್ಯ ಹೂಡಿರುತ್ತದೆ. ಸಾಮಾನ್ಯವಾಗಿ ಕ್ಯೂಲೆಕ್ಸ್ ಜಾತಿಯ ಸೊಳ್ಳೆಗಳು ಜನ ವಾಸಿಸುವ ಪ್ರದೇಶದಲ್ಲಿ ಅಡ್ಡಡುವ ಹ೦ದಿಗಳಿ೦ದ ರಕ್ತ ಹೀರಿ ಮನುಷ್ಯರಿಗೆ ಸೋ೦ಕನ್ನು ದಾಟಿಸುತ್ತವೆ. ಸೋ೦ಕು ತಗುಲಿದ ಒ೦ದೆರಡು ವಾರದಲ್ಲೇ ವ್ಯಕ್ತಿಯಲ್ಲಿ ತಲೆನೋವು, ಮೈಕೈನೋವು, ವಿಪರೀತ ಜ್ವರ, ವಾ೦ತಿ, ಸುಸ್ತು ಮು೦ತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ವ್ಯಾದಿಯ ವಿಶಿಷ್ಟ ಲಕ್ಷಣವೆ೦ದರೆ ಕುತ್ತಿಗೆ ಬಿಗಿದಂತಾಗಿ, ಅದನ್ನು ಬಗ್ಗಿಸಲು ಕಷ್ಟವಾಗುವುದು. ಮುಂದೆ ರೋಗಿಯಲ್ಲಿ ಮಂಪರು ಕಾಣಿಸಿಕೊಂಡು ಅಂತಿಮವಾಗಿ ಪ್ರಜ್ನಾಹೀನನೂ ಆಗಬಹುದು. ವಿವಿಧ ದರ್ಜೆಯ ಮಾನಸಿಕ ವ್ಯತ್ಯಾಸಗಳು ಮತ್ತು ನರಗಳ ದೌರ್ಬಲ್ಯದ ಲಕ್ಷಣಗಳು ಉಂಟಾಗಿ ವ್ಯಕ್ತಿ ಜೀವಮಾನವೆಲ್ಲಾ ಅಂಗವಿಕಲನಂತಾಗಬಹುದು. ಮಿದುಳಿನ ಪೆಟ್ಟು: ಅಪಘಾತದಲ್ಲಿ, ಹೊಡೆದಾಟದಲ್ಲಿ, ಭಾರವಾದ ವಸ್ತು ತಲೆಯ ಮೇಲೆ ಬಿದ್ದು, ಮಿದುಳಿಗೆ ಪೆಟ್ಟಾಗಬಹುದು. ಮಿದುಳಿಗೆ ಪೆಟ್ಟಾದಾಗ, ಕಂಡುಬರುವ ಲಕ್ಷಣಗಳೆಂದರೆ, ಪ್ರಜ್ನೆ ತಪ್ಪುವುದು, ಕಿವಿ ಮೂಗು ಗಂಟಲ ಮೂಲಕ ರಕ್ತಸ್ರಾವ, ವಾಂತಿಯಾಗಿ ಅದರಲ್ಲಿ ಕಂದು ಬಣ್ಣದ ರಕ್ತ, ಫಿಟ್ಸ್, ಪೆಟ್ಟು ಬಿದ್ದ ಪೂರ್ವದ ಮತ್ತು ಆನಂತರದ ಘಟನೆಗಳ ನೆನಪು ಅಳಿಸಿಹೋಗುತ್ತದೆ. ಪೆಟ್ಟಿನ ತೀವ್ರತೆಗೆ ಅನುಗುಣವಾಗಿ, ಮೂರು ವಿಧಗಳ ಸ್ಥಿತಿ ಉಂಟಾಗಬಹುದು. ಕಂಕಶನ್: ಪೆಟ್ಟು ಬಿದ್ದ ರಭಸಕ್ಕೆ, ಮಿದುಳು ಬುರುಡೆಯೊಳಗೇ ಚಲಿಸಿ, ಅಪಘಾತಕ್ಕೆ ಈಡಾಗುತ್ತದೆ. ಸ್ವಲ್ಪ ದಿನಗಳ ಕಾಲ ತಲೆಭಾರ, ತಲೆಸುತ್ತು, ಮಂಕುತನ, ಹೊಸತನ್ನು ಕಲಿಯುವುದು ಕಷ್ಟ, ಇತ್ಯಾದಿ ತಾತ್ಕಾಲಿಕ ತೊಂದರೆ ಕಾಣಿಸಿಕೊಳ್ಳುವುದಿಲ್ಲ. ಕಂಟೂಶನ್ ಎನ್ನುವ ಸ್ತಿತಿಯಲ್ಲಿ ಮಿದುಳಿನ ವಸ್ತುವಿಗೆ ಹಾನಿಯಾಗುತ್ತದೆ. ಡೆಪ್ರೆಸ್ಡ್ ಫ್ರಕ್ಚರ್ ಎನ್ನುವ ಸ್ತಿತಿಯಲ್ಲಿ, ಬುರುಡೆಯ ಮೂಳೆ ತಗ್ಗಿ ಮಿದುಳಿನ ವಸ್ತುವಿಗೆ ಹಾನಿಯಾಗುತ್ತದೆ. ಯಾವ ಭಾಗದ ಮಿದುಳಿಗೆ ಹಾನಿಯಾಗಿದೆ ಎನ್ನುವುದರ ಮೇಲೆ ದೀರ್ಘಕಾಲ ಅಥವಾ ಶಾಶ್ವತ ನ್ಯೂನತೆ ಉಳಿಯಬಹುದು. ಮಿದುಳಿನ ಪೊರೆಯ ನಡುವೆ ರಕ್ತಸ್ರಾವವಾಗಿ, ರಕ್ತ ಹೆಪ್ಪುಗಟ್ಟಿ ಕೆಲವು ದಿನಗಳು, ವಾರಗಳ ನಂತರ, ವ್ಯಕ್ತಿಗೆ ರೋಗಲಕ್ಷಣಗಳು (ಸಬ್ ಡ್ಯೂರಲ್ ಹೆಮಟೋಮ), ಮಂಕುತನ, ಪ್ರಜ್ನಾಸ್ತಿತಿಯಲ್ಲಿ ವ್ಯತ್ಯಾಸ, ಅಸಂಬದ್ಧ ನಡವಳಿಕೆ, ಫಿಕ್ಸ್ ಇತ್ಯಾದಿ, ಕಾಣಿಸಿಕೊಳ್ಳುತ್ತವೆ. ಶಸ್ತ್ರಚಿಕಿತ್ಸೆಯಿಂದ ಈ ಸ್ಥಿತಿಯನ್ನು ಪೂರ್ಣವಾಗಿ ಗುಣಪಡಿಸಬಹುದು. ಮಿದುಳಿನ ಗಡ್ಡೆಗಳು: ಮಿದುಳಿನ ನರಊತಕಗಳಿಂದ, ಮಿದುಳ ಪೊರೆಯಿಂದ, ಪಿಟ್ಯೂಟರಿ ಗ್ರಂಥಿಯಿಂದ ಗಡ್ಡೆಗಳು ಬೆಳೆಯಬಹುದು. ಮೂಲ ಕಾನ್ಸರ್ ಗಡ್ಡೆ ದೆಹದ ಇನ್ಯಾವುದೋ ಭಾಗದಲ್ಲಿದ್ದು, ಸೆಕೆಂಡರಿ ಗೆಡ್ಡೆ ಮಿದುಳಿನಲ್ಲಿ ಕಾಣಿಸಿಕೊಳ್ಳಬಹುದು. ಮಿದುಳಿನಲ್ಲಿ ಬೆಳೆಯುವ ಶೇ. ೪೫ರಷ್ಟು ಗಡ್ಡೆಗಳು, ’ಗ್ಲೈಯೋಮ’ ಎನ್ನುವ ವರ್ಗಕ್ಕೆ ಸೇರಿದುವು. ಮಿದುಳಿನ ಪೊರೆಯಿಂದ ಮೆನಿನ್ಜಿಯೋಮ, ಪಿಟ್ಯೂಟರಿ ಗಡ್ಡೆಗಳು, ಕ್ಷಯ ರೋಗ ಗಡ್ಡೆ (ಟುಬರ್ ಕುಲೋಮ) ಲಾಡಿ ಹಿಳುವಿನ ಗಂಟು ಇವು ಇತರ ಸಾಮಾನ್ಯ ಗಡ್ಡೆಗಳು. ಯಾವ ಭಾಗದಲ್ಲಿ ಗಡ್ಡೆ ಇದೆ, ಎಷ್ಟು ಮಿದುಳಿನ ವಸ್ತು ಹಾನಿಗೀಡಾಗಿದೆ, ಗೆಡ್ಡೆ ತಲೆ ಬುರುಡೆಯೊಳಗೆ ಒತ್ತಡವನ್ನುಂಟು ಮಾಡುತ್ತದೆಯೊ ಎನ್ನುವುದರ ಮೇಲೆ, ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ತಲೆನೋವು, ಮಿದುಳಿನ ಗಡ್ಡೆಯ ಸಾಮನ್ಯ ಲಕ್ಷಣವಲ್ಲ ಎನ್ನುವುದನ್ನು ಜನ ಗಮನಿಸಬೇಕು. ಒಂದು ಭಾಗಕ್ಕೆ ಸೀಮಿತವಾದ ಫಿಟ್ಸ್ (ಲೋಕಲ್ ಫಿಟ್ಸ್), ಸಾಮನ್ಯ ಫಿಟ್ಸ್, ಬುದ್ಧಿ ಭ್ರಮಣೆ, ಕೈಕಾಲು ನಿಷ್ಕ್ರಿಯೆಗೊಳ್ಳುವುದು (ಲಕ್ವ), ದ್ರುಷ್ಟಿ ಮಂಜಾಗುವುದು, ತಲೆನೋವಿನೊಡನೆ ವಾಂತಿ, ಪ್ರಜ್ನಾಸ್ತಿಥಿಯಲ್ಲಿ ವ್ಯತ್ಯಾಸ ಇವು ರೋಗಲಕ್ಷಣಗಳು. ಶಸ್ತ್ರ ಚಿಕಿತ್ಸೆ, ವಿಕಿರಣ ಚಿಕಿತ್ಸೆ ಬಳಕೆಯಲ್ಲಿರುವ ಚಿಕಿತ್ಸಾ ವಿಧಾನಗಳು. ಪಾಶ್ವ೯ವಾಯು (ಸ್ಟ್ರೋಕ್): ಮಿದುಳಿನ ಒಂದು ವಲಯಕ್ಕೆ ರಕ್ತ ಸರಬರಾಜು ಮಾಡುವ ರಕ್ತನಾಳ ಒಡೆದು ರಕ್ತಸ್ರಾವವಾಗುವುದರಿಂದ, ಇಲ್ಲವೆ ಅಂತಹ ರಕ್ತಾನಾಳದೊಳಗಡೆ ರಕ್ತಗರಣೆ ಕತ್ತುವುದರಿಂದ ಅಥವ ಬೇರೆ ಕಡೆ ಹೆಪ್ಪುಗಟ್ಟಿದ ರಕ್ತದ ತುಣುಕು ಒಂದು ಸಿಕ್ಕಿಹಾಕಿಕೊಳ್ಳುವುದರಿಂದ (ಕ್ಲಾಟಿಂಗ್ ಅಂಡ್ ಎಂಬಾಲಿಸಮ್) ಹೀಗಾಗುತ್ತದೆ. ಇವೆಲ್ಲದರ ಪರಿಣಾಮ ಒಂದೇ. ಆ ರಕ್ತನಾಳದ ಮೂಲಕ ರಕ್ತ ಸರಬರಾಜಾಗುತ್ತಿದ್ದ ವಲಯಕ್ಕೆ ರಕ್ತ ಹರಿಯುವುದು ಸ್ಥಗಿತವಾಗುತ್ತದೆ. ಆ ವಲಯದ ಮಿದುಳಿನ ಜೀವಕೋಶಗಳಿಗೆ ಆಮ್ಲಜನಕ ದೊರೆಯದೆ ಅವು ನಾಶವಾಗುತ್ತದೆ. ಆ ಜೀವಕೋಶಗಳು ನಿಯಂತ್ರಣದಲ್ಲಿರುತ್ತಿದ್ದ ದೇಹದ ಭಾಗಕ್ಕೆ ನರಸಂದೇಶಗಳು ಕಡಿತವಾಗಿ ಆ ಭಾಗ ನಿಷ್ಕ್ರಿಯವಾಗಿ ಬಿಡುತ್ತದೆ. ಮಿದುಳಿನಲ್ಲಿ ಈ ಕೇಂದ್ರಗಳಿಂದ ಹೊರಡುವ ನರದೆಳೆಗಳು ಒಂದು ಪಾರ್ಶ್ವದಿಂದ ಇನ್ನೊಂದು ಪಾರ್ಶ್ವಕ್ಕೆ ಅಡ್ಡಲಾಗಿ ದಾಟಿ, ಆನಂತರ ಮಿದುಳು ಬಳ್ಳಿ ಸೇರುತ್ತವಾದ್ದರಿಂದ ಮಿದುಳಿನ ಒಂದು ಭಾಗದಲ್ಲಿ ಇಂತಹ ಅಪಘಾತವಾದರೆ ಪರಿಣಾಮಗಳು ಅದರ ವಿರುದ್ಧದ ಕೈ ಕಾಲುಗಳಲ್ಲಿ ಪ್ರಕಟವಾಗುತ್ತದೆ. ಹಠಾತ್ತಾಗಿ ಇಂತಹ ಆಕಸ್ಮಿಕವಾದಗ ವ್ಯಕ್ತಿ ಸಂಪೂರ್ಣ ಮಯಕ (ಕೋಮ) ಸ್ಥಿತಿಯಲ್ಲಿರಬಹುದು. ಕೆಲಕಾಲಾನಂತರ ಅಪಘಾತಕ್ಕೊಳಗಾದ ಮಿದುಳಿನ ವಲಯ ಚಿಕಿತ್ಸಾ ವಿಧಾನಗಳಿಂದ (ಫಿಸಿಯೊಥೆರಪಿ) ಸ್ವಲ್ಪ ಪರಿಣಾಮ ದೊರಕಬಹುದು. ಮಿದುಳು ನಶಿಸಿಹೋಗುವ ರೋಗಗಳು: ಪಿಕ್ ನ್ ಕಾಯಿಲೆ, ಹಂಟಿಂಗ್ ಟನ್ ನ್ ಕಾಯಿಲೆಗಳಲ್ಲಿ ಆನುವಂಶಿಕ ಅಥವ ಅಗೋಚರ ಕಾರಣಗಳಿಂದ ಮಿದುಳಿನ ನರಕೋಶಗಳು ನಾಶವಾಗತೊಡಗುತ್ತವೆ. ಡೆಮೆನ್ಷಿಯ ಸ್ಥಿತಿ ಉಒಟಾಗುತ್ತದೆ. ಪಾರ್ಕಿನ್ ಸನ್ ರೋಗ: ಇದೊಂದು ಮಿದುಳಿನ ರೋಗ. ಅವ್ಯಕ್ತ ಕಾರಣಗಳಿಂದ ಅಥವ ಕೆಲವು ಕಾರಣದಿಂದ ಮಿದುಳಿನ ಸಬ್ ಸ್ಟಾನ್ಷಿಯ ನೈಗ್ರದಲ್ಲಿ ಜೀವಕೋಶಗಳು ನಶಿಸುತ್ತವೆ ಮತ್ತು ತಳದ ನರಗಂಟು (ಬೇಸಲ್ ಗಾಂಗ್ಲಿಯಾ) ಗಳಲ್ಲಿ ಡೋಪಮಿನ್ ನರವಾಹಕ ರಾಸಾಯನಿಕದ ಕೊರತೆಯುಂಟಾಗುವುದರಿಂದ ಈ ರೋಗ ಕಾಣಿಸಿಕೊಳ್ಳುತ್ತದೆ. ಬೆಂಕಿ ಬಿದ್ದಾಗ ಉಂಟಾಗುವ ಇಂಗಾಲದ ಮಾನಾಕ್ಸೈಡ್, ಮ್ಯಾಒಗನೀಸ್ ನಂತಹ ಲೋಹಗಳು ದೇಹವನ್ನು ಪ್ರವೇಶಿಸುವುದು, ತಳದ ನರಗಂಟುಗಳಿಗೆ ರಕ್ತ ಪೂರೈಕೆ ಕಡಿಮೆಯಾಗುವುದು, ಗಡ್ಡೆ ಬೆಳೆದುಕೊಳ್ಳೂವುದು ಮತ್ತು ಮಾನಸಿಕ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸಲಾಗುವ ’ಚಿತ್ತವಿಕಲತೆ’ ರೋಧಕ ವಸ್ತುಗಳು ಪಾರ್ಕಿನ್ಸ್ಂನ್ ರೋಗವನ್ನು ತರಬಲ್ಲವು. ಅಪಸ್ಮಾರ (ಫಿಟ್ಸ್): ಇದೊಂದು ಪುರಾತನ ಕಾಯಿಲೆ. ಜೂಲಿಯಸ್ ಸೀಸರ್, ಅಲೆಕ್ಸಾಂಡರ್ ರಂತಹ ಇತಿಹಾಸ ಪ್ರಸಿದ್ಧ ವ್ಯಕ್ತಿಗಳೂ ಈ ಕಾಯಿಲೆಯಿಂದ ಬಳಲಿದ್ದಾರೆ. ಥಟ್ಟನೆ ಕಾಣಿಸಿಕೊಂಡು, ರೋಗಿಯನ್ನು ನೆಲಕ್ಕೆ ಬೀಳಿಸಿ, ಪ್ರಜ್ನೆ ತಪ್ಪಿಸಿ, ಕೈಕಾಲುಗಳು ಸೆಳೆಯುವಂತೆ ಮಾಡುವ, ಬಾಯಲ್ಲಿ ಬುರುಗು, ರಕ್ತವನ್ನು ಬರಿಸುವ ಈ ಕಯಿಲೆಯನ್ನು ಕಂಡರೆ ಜನ ಹೆದರುತ್ತಾರೆ. ಮಲ್ಲಾಗರ, ಮೂರ್ಛೆರೋಗ, ಸೆಳೆವು, ಫಿಟ್ಸ್ ಎಂದು ಹಲವು ಹೆಸರಿನಿಂದ ಕರೆಸಿಕೊಳ್ಳುವ ರೋಗ ಈಗ ಕ್ರಮವಾದ ಚಿಕಿತ್ಸೆ ಸೇವೆಯಿಂದಾಗಿ ಹತೋಟಿಗೆ ಬಂದಿದೆ. ಅಪಸ್ಮಾರ ಒಂದು ರೋಗದ ಲಕ್ಷಣ ಅಷ್ಟೆ. ಯಾವುದೆ ಕಾರಣದಿಂದ ಮಿದುಳಿನ ನರಕೋಶಗಳಲ್ಲಿ ಅತಿಯಾದ ಚಟುವಟಿಕೆ ಅಥವ ಅದಕ್ಕೆ ಅರೆಬರೆ ಹಾನಿಯುಂಟಾದಗ, ಕಂಡು ಬರುವ ಲಕ್ಷಣವೆ ಫಿಟ್ಸ್. ನೂರಕ್ಕೆ ತೊಂಬತ್ತೈದು ಪ್ರಕರಣಗಳಲ್ಲಿ, ನರಕೋಶಗಳ ಈ ಅತಿ ಚಟುವಟಿಕೆಗೆ ಕಾರಣ ಅವ್ಯಕ್ತ. ಎಕ್ಸ್- ಕಿರಣಗಳು, ಮಿದುಳು- ಮಿದುಳು ಬಳ್ಳಿಯ ರಸ ಪರೀಕ್ಷೆ ಇವುಗಳಿಂದ ಯಾವ ನ್ಯುನ್ಯತೆಯೂ ಕಾಣುವುದಿಲ್ಲ. ಹೀಗಾಗಿ ಈ ಬಗೆಯ ಅಪಸ್ಮಾರವನ್ನು ’ಇಡಿಯೋಪ್ಯಾತಿಕ್ ಎಪಿಲೆಪ್ಸಿ’ ಎನ್ನುತ್ತಾರೆ. ಪರಿಧಿಯ ನರಬೇನೆಗಳು (ಪೆರಿಫೆರಲ್ ನ್ಯೂರೋಪತಿ): ವಿಟಮಿನ್ ಕೊರತೆ, ಕುಷ್ಠ ರೋಗ, ಡಿಪ್ತೀರಿಯಾ, ಸಿಹಿಮೂತ್ರ ರೋಗ, ಲೋಹಕಣಗಳ ನಂಜು (ಆರ್ಸೆನಿಕ್, ಸೀಸ, ಪಾದರಸ), ಕ್ಯಾನ್ಸರ್ ಇವುಪರಿಧಿಯ ನರಬೇನೆಯನ್ನುಂಟುಮಾಡುವ ಸಾಮಾನ್ಯ ಕಾರಣಗಳು. ಕೈಕಾಲು ಜೋಮು, ಚರ್ಮದಲ್ಲಿ ಸ್ಪರ್ಶ, ನೂವು, ಉರಿ ಸಂವೇಧನೆ ಗೊತ್ತಾಗದಿರುವಿದು ಅಥವ ಉರಿ, ಚುಚ್ಚುವಿಕೆ, ಕೀಟ ಹರಿದಾಡಿದಂತ ಅನುಭವವಾಗುವುದು, ಕ್ರಮೇಣ ಸ್ನಾಯುಗಳ ಶಕ್ತಿ ಕ್ಷೀಣಿಸುವುದು ಪರಿಧಿಯ ನರಬೇನೆಗಳ ಸಮಾನ್ಯ ರೋಗ ಲಕ್ಷಣಗಳು. ವೈರಸ್ ಸೋಂಕಿನಿಂದ ’ಗಿಲಿಯನ್ ಬಾರೆ ನರಬೇನೆ’ ಕಾಣಿಸಿಕೊಳ್ಳುತ್ತದೆ. ಹಾಗೆಯೆ ಪೊಲಿಯೋ ವೈರುಸ್ ನಿಂದ, ಪೋಲಿಯೋ ಮೈಲೈಟಿಸ್ ನರಬೇನೆ ಕಾಣಿಸಿಕೊಳ್ಳುತ್ತದೆ.