ವಿಷಯಕ್ಕೆ ಹೋಗು

ಸದಸ್ಯ:Varsha Prabhu. T/ನನ್ನ ಪ್ರಯೋಗಪುಟ7

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನಂತನಾಥ ಸ್ವಾಮಿ ಬಸದಿ ಕೋಟೆಕೇರಿ ಕೋಟೆಕೇರಿ ಬಸದಿ ಮೂಲ್ಕಿ ಇದನ್ನು ಮಂಜುನಾಥ ಸ್ವಾಮಿ ಬಸದಿ ಎಂದು ಕರೆಯುತ್ತಾರೆ. ಈ ಬಸದಿಯು ಮಂಗಳೂರು ತಾಲೂಕು ಬಪ್ಪನಾಡುಗ್ರಾಮ ಮೂಲ್ಕಿಯಲ್ಲಿದೆ.

ಬಸದಿಯಲ್ಲಿರುವ ವಿಗ್ರಹಗಳು

[ಬದಲಾಯಿಸಿ]

ಬಸದಿಯ ಮೂರು ದಿಕ್ಕಿನಲ್ಲೂ ಗದ್ದೆಯಿದೆ. ಬಸದಿಯ ಎದುರು ಮಾನಸ್ತಂಭವಿದೆ. ಈ ಬಸದಿಗೆ ಮೇಗಿನ ನೆಲೆ ಇದೆ. ಆದರೆ ಇಲ್ಲಿ ಯಾವ ತೀರ್ಥಂಕರ ಮೂರ್ತಿ ಇಲ್ಲ. ಬಸದಿಯಲ್ಲಿ ದೇವರ ವಿಗ್ರಹ ಮತ್ತು ಒಂದು ದೇವಿಯ ವಿಗ್ರಹ ಇದೆ. ಶ್ರೀ ಚಂದ್ರನಾಥ ಸ್ವಾಮಿ ಬಿಳಿ ಪಂಚಲೋಹದ ನಿಂತ ಭಂಗಿಯಲ್ಲಿದೆ. ಬಿಳಿ ಅಮೃತಶಿಲೆಯ ಶ್ರೀ ಅನಂತನಾಥ ಸ್ವಾಮಿ ಪರ್ಯಂಕಸನ ಭಂಗಿಯಲ್ಲಿದೆ. ಸಣ್ಣದಾದ ಕಪ್ಪುಶಿಲೆಯ ಪರ್ಯಂಕಸನ ಭಂಗಿಯಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿ, ಕಂಚಿನ ನಿಂತ ಭಂಗಿಯಲ್ಲಿ ಪಂಚ ಪರಮೇಷ್ಠಿ ದೇವರ ವಿಗ್ರಹ, ಕಂಚಿನ ೨೪ ತೀರ್ಥಂಕರರಿರುವ ದೇವರ ಮೂರ್ತಿ, ಕಂಚಿನ ಶ್ರುತಗಣದೇವರ ಮೂರ್ತಿ, ಕಂಚಿನ ಶ್ರೀ ಸರಸ್ವತೀದೇವಿಯ ಮೂರ್ತಿ, ಪದ್ಮಾವತಿದೇವಿಯ ವಿಗ್ರಹವಿದೆ.

ಬಸದಿಯ ಹೊರಾಂಗಣ

[ಬದಲಾಯಿಸಿ]

ಬಸದಿಯ ಎದುರು ಕಲ್ಲಿನಲ್ಲಿ ಕೆತ್ತಿರುವ ಮಾನಸ್ತಂಭವಿದೆ. ಮಾನಸ್ತಂಭದ ಎದುರುಗಡೆ ಬಲಿಕಲ್ಲು, ನಾಲ್ಕು ದಿಕ್ಕುಗಳಲ್ಲಿ ೬ ರಂತೆ ದೇವರ ಕುಣಿತದ ಭಂಗಿಯಲ್ಲಿ ದೇವರ ಮೂರ್ತಿಗಳು ಇವೆ. ಸ್ವಲ್ಪ ಮೇಲೆ ನಾಲ್ಕು ದಿಕ್ಕಿನಲ್ಲಿಯೂ ಕುಳಿತ ಭಂಗಿಯಲ್ಲಿಒಂದೊಂದು ದೇವರ ಮೂರ್ತಿಯಿದೆ. ಎಲ್ಲಾ ದೇವರ ಮೂರ್ತಿಗಳ ಕೆಳಗಡೆ ನಾಲ್ಕು ದಿಕ್ಕಿನಲ್ಲಿ ನರ್ತಕಿಯರ ನರ್ತನ ಮಾಡುವ ಕೆತ್ತನೆ ಚಿತ್ರವಿದೆ. ಮಾನಸ್ತಂಭದ ತುದಿಯಲ್ಲಿಒಂದು ಸಣ್ಣ ಮಂಟಪವಿದ್ದು, ಅಲ್ಲೊಂದು ಸಣ್ಣ ದೇವರ ಮೂರ್ತಿಯಿದೆ. ಅಂಗಳದ ಬದಿಯಲ್ಲಿ ಕಲ್ಲಿನಲ್ಲಿ ಕ್ಷೇತ್ರಪಾಲನ ಸನ್ನಿಧಿಯಿದೆ. ಕ್ಷೇತ್ರಪಾಲನ ಕೆಳಗಡೆ ಕಲ್ಲಿನ ನಾಗರ ಮೂರ್ತಿ, ತ್ರಿಶೂಲ ಕೂಡಇದೆ. ಬೇರೆಯಾವ ಮೂರ್ತಿಗಳು ಇಲ್ಲ. ೪ ಅಡಿ ಎತ್ತರದ ಬಲಿಕಲ್ಲು ಮಾನಸ್ತಂಭದೆದುರು ಇದೆ. ಶಿಲಾಶಾಸನ ಇತ್ಯಾದಿ ಇಲ್ಲ. ಬಸದಿಯ ಸುತ್ತಲೂ ಮೂರು ಅಡಿ ದೂರದಲ್ಲಿ ಕಲ್ಲಿನಿಂದ ಕಟ್ಟಿದ ಪ್ರಾಕಾರ ಮೂರು ದಿಕ್ಕುಗಳಲ್ಲಿ ಮಾತ್ರಇದೆ. []ಶ್ರೀ

ಮೂರ್ತಿಗಳು ಹಾಗೂ ಪೂಜಾ ವಿಧಾನ

[ಬದಲಾಯಿಸಿ]

ಜಗಲಿಯಿಂದ ಪ್ರಾರ್ಥನಾ ಮಂಟಪಕ್ಕೆ ಬರುವಲ್ಲಿ ದ್ವಾರಪಾಲಕರ ಚಿತ್ರವಿದೆ. ಪ್ರಾರ್ಥನಾ ಮಂಟಪವಿಲ್ಲ. ಈಗ ಇರುವ ಮಂಟಪವನ್ನುಘಂಟ ಮಂಟಪ ಎಂದುಕರೆಯುತ್ತಾರೆ. ಇದರಲ್ಲಿ ಜಾಗಟೆ, ಜಯ ಗಂಟೆಗಳನ್ನು ತೂಗುಹಾಕಲಾಗಿದೆ. ಈ ಮಂಟಪದ ನಂತರ ಸಿಗುವುದೇ ತೀರ್ಥಂಕರ ಮಂಟಪ. ತೀರ್ಥಂಕರ ಮಂಟಪದಲ್ಲಿಗಂಧಕುಟಿಯಿದೆ. ನಂತರ ಗಂಧದಕೋಟೆಯ ಬಳಿಯಲ್ಲಿ ಶ್ವೇತಾಗಣದರ ಪಾದದ ಮೂರ್ತಿಗಳಿವೆ. ಇದಕ್ಕೆ ನಿತ್ಯವೂ ಪೂಜೆ ಮಾಡುತ್ತಾರೆ. ಮಾತೆ ಪದ್ಮಾವತಿ ದೇವಿಗೆ ನಿತ್ಯ ಹೂಗಳಿಂದ ಅಲಂಕಾರ ಮಾಡಿ ಪೂಜೆ ಮಾಡುತ್ತಾರೆ. ಈ ಬಸದಿಯು ಉತ್ತರಕ್ಕೆ ಮುಖ ಮಾಡಿರುತ್ತದೆ. ಅವರ ಕಾಲಬಳಿಯಲ್ಲಿ ಕುಕ್ಕುಟ ಸರ್ಪಇದೆ. ಈ ಬಸದಿಯಲ್ಲಿ ವಾರ್ಷಿಕೋತ್ಸವ, ರಥೋತ್ಸವ ಮೊದಲಿನಿಂದಲೂ ಇಲ್ಲ.

ಪೂಜಾ ವಿಧಾನ ಹಾಗೂ ಹಬ್ಬಗಳ ಆಚರಣೆ

[ಬದಲಾಯಿಸಿ]

ಬಸದಿಯ ಮೂಲ ಸ್ವಾಮಿಯಾಗಿರುವ ಶ್ರೀ ಚಂದ್ರನಾಥ ಸ್ವಾಮಿಯ ಮೂರ್ತಿ ಬಿಳಿ ಬಣ್ಣದ ಪಂಚಲೋಹ ಎರಡು ಅಡಿ ಎತ್ತರದ ನಿಂತ ವಿಗ್ರಹ ಶ್ರೀದೇವರ ಕಾಲಬಳಿಯಲ್ಲಿ ಎಡಬಲಗಳಲ್ಲಿ ಯಕ್ಷಯಕ್ಷಿಯರ ಮೂರ್ತಿಗಳಿವೆ. ದೇವರ ಸುತ್ತಲೂ ಪ್ರಭಾವಳಿ ಇದೆ. ದಿನಂಪ್ರತಿ ಶ್ರೀದೇವರಿಗೆ ಜಲಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತಅಭಿಷೇಕ, ಪೂಜೆ ಇತ್ಯಾದಿ ಮಾಡಲಾಗುತ್ತಿದೆ. ಪ್ರತಿ ವರ್ಷ ನಾಗರಪಂಚಮಿ, ಶ್ರಾವಣ, ನವರಾತ್ರಿ, ದೀಪಾವಳಿ, ಯುಗಾದಿ ಹಬ್ಬಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ನವರಾತ್ರಿ ಹಬ್ಬದಲ್ಲಿ ಪದ್ಮಾವತಿ ಅಮ್ಮನವರಿಗೆ ದಿನಕ್ಕೊಂದು ಸೀರೆ ಉಡಿಸಿ, ಹೂವಿನಿಂದ ಅಲಂಕಾರ ಮಾಡಿ ಪೂಜೆ ಮಾಡುತ್ತಾರೆ. ಹಿಂದಿನಿಂದಲೂ ಬಂದಂತಹ ಹರಕೆಯ ೧೦ ಪೂಜೆಗಳನ್ನು ನೆರವೇರಿಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜುಶ್ರೀ ಪ್ರಿಂಟರ್ಸ್. pp. ೨೭೪.