ಸದಸ್ಯ:Varsha Prabhu. T/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೇಯಾಂಸನಾಥ ಸ್ವಾಮಿ

ಶ್ರೇಯಾಂಸನಾಥ ಸ್ವಾಮಿ ಜೈನ ತೀರ್ಥಂಕರರಲ್ಲಿ ಒಬ್ಬರು. ಶ್ರೇಯಸ್ಸಿಗೋಸ್ಕರ ಆಶ್ರಯಿಸಬೇಕಾದ ವಸ್ತುಗಳಲ್ಲಿ ಶ್ರೇಯಾಂಸ ತೀರ್ಥಂಕರನು ಬಹುಶ್ರೇಷ್ಠನು.

ಜನನ[ಬದಲಾಯಿಸಿ]

ಈತನು ಶೀತಲನಾಥನು ಮುಕ್ತನಾದ ನೂರು ಸಾಗರದ ಅರವತ್ತಾರು ಲಕ್ಷದ ಇಪ್ಪತ್ತಾರು ಸಾವಿರ ವರ್ಷಗಳು ಕಡಿಮೆಯಾದ ಒಂದು ಸಾಗರೋಪಮ ಕೋಟಿ ವರ್ಷಗಳಾದ ನಂತರ ಅವತರಿಸಿದನು.

ಅವತಾರಗಳು[ಬದಲಾಯಿಸಿ]

ಕಾಲಲಬ್ಧಿಯಾದ ಮೇಲೆ ಈತನು ಮೂರು ಜನ್ಮವನ್ನು ಎತ್ತಿದನು. ಮೊದಲ ಜನ್ಮದಲ್ಲಿ ಪೂರ್ವವಿದೇಹದ ಸೀತಾನದಿಯ ಉತ್ತರದಲ್ಲಿ ಸುಕಚ್ಛ ದೇಶದ ರಾಜಧಾನಿ ಮೇರುಪುರದ ನಲಿನಪ್ರಭ ರಾಜನಾಗಿದ್ದ. ಬಹುಕಾಲ ವೈಭವದಿಂದ ರಾಜ್ಯವಾಳಿದ. ಈತನು ಸಹಸ್ರಾಮ್ರವನದಲ್ಲಿ ಅನಂತಜಿನನ ಧರ್ಮಶ್ರವಣವನ್ನು ಮಾಡಿ, ವೈರಾಗ್ಯಪರನಾದನು. ಸುಪುತ್ರನೆಂಬ ಮಗನಿಗೆ ರಾಜ್ಯವನ್ನು ವಹಿಸಿ ಆತನು ತಪೋಮಗ್ನನಾದನು. ಜೀವಾಂತ್ಯದಲ್ಲಿ ಆತನು ಅಚ್ಯುತೇಂದ್ರನಾಗಿ ಬಹುಕಾಲ ಸಾರಸುಖವನ್ನು ಅನುಭವಿಸಿ, ಭರತ ಕ್ಷೇತ್ರದ ಸಿಂಹಪುರಾಧಿಪತಿ (ಇಕ್ಷ್ವಾಕ್ಷು ವಂಶದ) ವಿಷ್ಣುನರೇಶ್ವರನ ಪತ್ನಿ ನಂದೆಯ ಗರ್ಭವನ್ನು ಜ್ಯೇಷ್ಠ ಕೃಷ್ಣ ಷಷ್ಠಿಯ ಶ್ರವಣ ನಕ್ಷತ್ರದಲ್ಲಿ ಪ್ರವೇಶಿಸಿದನು. ಒಂಭತ್ತು ತಿಂಗಳಾದ ಮೇಲೆ ಫಾಲ್ಗುಣ ಕೃಷ್ಣ ಏಕಾದಶಿಯ ವಿಷ್ಣು ಯೋಗದಲ್ಲಿ ಹೇಮ ವರ್ಣನಾಗಿ ಜನಿಸಿ, ಜನ್ಮಾಭಿಷೇಕನಂತರ ಶ್ರೇಯಾಂಸನೆಂದು ನಾಮಕರಣವನ್ನು ಪಡೆದನು. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ. ಉಜಿರೆ: ಮಂಜುಶ್ರೀ ಪ್ರಿಂಟರ್ಸ್.

ಶ್ರೇಯಾಂಸನ ವಿಶೇಷತೆಗಳು[ಬದಲಾಯಿಸಿ]

ಶ್ರೇಯಾಂಸನು ನಾಲ್ಕು ಲಕ್ಷ ವರ್ಷಗಳ ಆಯಸ್ಸುಳ್ಳವನೂ, ಎಂಭತ್ತು ಬಿಲ್ಲುಗಳಷ್ಟು ಎತ್ತರವುಳ್ಳವನೂ ಆಗಿದ್ದನು.

ಶ್ರೇಯಾಂಸನ ವೈರಾಗ್ಯ ಜೀವನ ಹಾಗೂ ನಿರ್ವಾಣ[ಬದಲಾಯಿಸಿ]

ಆತನು ಋತು ಪರಿವರ್ತನೆಯಿಂದ ವೈರಾಗ್ಯ ಹೊಂದಿ, ರಾಜ್ಯವನ್ನೂ ಭೋಗ ಭಾಗ್ಯಗಳನ್ನೂ ತೊರೆದು ಪರಿನಿಷ್ಕ್ರಮಣವನ್ನು ಕೈಗೊಂಡನು. ಫಾಲ್ಗುಣ ಬಹುಳ ಏಕಾದಶಿಯ ಬೆಳಿಗ್ಗೆ ಶ್ರವಣ ನಕ್ಷತ್ರದಲ್ಲಿ ತಪೋನಿರತನಾಗಿ ಮನಃ ಪರ್ಯಾಯ ಜ್ಞಾನವನ್ನು ಹೊಂದಿದನು. ಸಿದ್ಧಾರ್ಥ ನಗರದ ನಂದ ರಾಜನಿಂದ ಆಹಾರವನ್ನು ಪಡೆದು, ಎರಡು ವರ್ಷಗಳ ಛದ್ಮಾವಸ್ಥೆಯನ್ನು ಕಳೆಯುತ್ತಲೇ ಮನೋಹರೋದ್ಯಾನದಲ್ಲಿ ಮಾವಿನ ವೃಕ್ಷದ ಕೆಳಗೆ ಎರಡು ದಿನ ಉಪವಾಸವನ್ನು ಮಾಡಿ ಮಾಘ ಕೃಷ್ಣ ಅಮಾವಾಸ್ಯೆಯ ಶ್ರವಣ ನಕ್ಷತ್ರದಲ್ಲಿ ಕೇವಲ ಜ್ಞಾನಿಯಾದನು. ಬಹುಕಾಲ ಭವ್ಯರಿಗೆ ಜ್ಞಾನವರ್ಷವನ್ನು ನೀಡಿ ಸಮ್ಮೇದ ಪರ್ವತದ ಮೇಲೆ ನಿರ್ವಾಣ ಹೊಂದಿದನು.ಎಪ್ಪತ್ತೇಳು ಜನ ಗಣಧರರು ಶ್ರೇಯಾಂಸನ ಬಳಿಯಲ್ಲಿದ್ದರು. ಆತನ ಲಾಂಛನ ಗಂಢಕ; ಯಕ್ಷ-ಯಕ್ಷಿಯರು- ಈಶ್ವರ-ಗೌರೀ. ಆತನ ಕಾಲದಲ್ಲಿ ಮೊದಲ ಅರ್ಧಚಕ್ರಿಯಾದ ಕೇಶವನು ಇದ್ದನು.

ಉಲ್ಲೇಖಗಳು[ಬದಲಾಯಿಸಿ]