ಸದಸ್ಯ:Varsha Prabhu. T/ನನ್ನ ಪ್ರಯೋಗಪುಟ10
ಗೋಚರ
ಚಂದ್ರನಾಥ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರ ಬಸದಿ, ಬೈಲು ಪಲ್ಲದ ಬಿಡು ಈ ಬಸದಿಯು ಮಂಗಳೂರು ತಾಲೂಕು ಕೊಳಂಬೆಯಲ್ಲಿದೆ. ಇದು ಸುಮಾರು ೯೦ ವರ್ಷದ ಹಿಂದೆಯದೆಂದು ಪ್ರತೀತಿಯಿದೆ.
ಬಸದಿಯ ಹೊರಾಂಗಣ
[ಬದಲಾಯಿಸಿ]ಇತ್ತೀಚೆಗೆ ಜೀರ್ಣೋದ್ಧಾರಗೊಂಡ ಬಸದಿಯ ಎದುರು ದ್ವಾರಪಾಲಕರ ಚಿತ್ರಗಳನ್ನು, ಪ್ರಾರ್ಥನೆಯನ್ನು ಹಾಕಲಾಗಿದೆ.
ಪೂಜಾ ವಿಧಾನ
[ಬದಲಾಯಿಸಿ]ಸ್ವಾಮಿ ಚಂದ್ರನಾಥ ಸ್ವಾಮಿಯ ಪಂಚಲೋಹದ ಬಿಂಬ ಅಂದಾಜು ಎರಡು ಅಡಿ ಎತ್ತರವಿದೆ. ಪ್ರಭಾವಳಿ ಇದೆ. ನಿತ್ಯ ಪೂಜೆ ನಡೆಯುತ್ತಿದೆ. ಭಾನುವಾರ ಮೂಲ ಸ್ವಾಮಿಗೆ ಪಂಚಾಮೃತಅಭಿಷೇಕ ಮಾಡಲಾಗುತ್ತದೆ. ಒಂದು ಪೂಜೆ ಮಾತ್ರ ನಡೆಯುತ್ತದೆ. ವಿಶೇಷವಾಗಿ ವಾರ್ಷಿಕೋತ್ಸವ ಪೂಜೆ ಮಾತ್ರ ನಡೆಯುತ್ತದೆ.