ಸದಸ್ಯ:Varsha Prabhu. T/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[೧]ಶೀತಲನಾಥ ಸ್ವಾಮಿ

ಶೀತಲನಾಥ ಸ್ವಾಮಿ ಜೈನ ತೀರ್ಥಂಕರರಲ್ಲಿ ಒಬ್ಬರು. ಕರ್ಮದಿಂದ ಸಂತೃಪ್ತರಾದವರಿಗೆ ಚಂದ್ರನಂತೆ ಶೀತಲನಾಗಿರುವವನು ಶೀತಲ ತೀರ್ಥಂಕರನು ಆಗಿದ್ದಾನೆ.

ಜನನ[ಬದಲಾಯಿಸಿ]

ಪುಷ್ಪದಂತ ತೀರ್ಥಂಕರನು ಮುಕ್ತನಾಗಿ ಒಂಭತ್ತು ಕೋಟಿ ಸಾಗರೋಪಮ ಕಾಲವು ಕಳೆದು, ಧರ್ಮಕ್ಕೆ ಹಾನಿಯುಂಟಾದಾಗ ಅವತರಿಸಿದನು. ಕಾಲಲಬ್ಧಿಯಾದ ಮೇಲೆ ಆತನ ಚೇತನ ಪುಷ್ಕರಾರ್ಧದ್ವೀಪದ ಸೀತಾ ನದಿಯ ಪಶ್ಚಿಮ ತೀರದ ವತ್ಸದೇಶದ ಸುಸೀಮಾ ನಗರದಲ್ಲಿ ಪದ್ಮಗುಲ್ಮರಾಜನಾಗಿ ಜನಿಸಿತು.

ವೈರಾಗ್ಯ[ಬದಲಾಯಿಸಿ]

ಒಂದು ವಸಂತ ಮಾಸದಲ್ಲಿ ಅನವರತವೂ ಕ್ರೀಡೆಯಿಂದಿದ್ದ ಆತನಿಗೆ ಆ ಮಾಸ ಕಳೆದುಹೋದುದನ್ನು ಕಂಡು ವೈರಾಗ್ಯ ಉದಿಸಿತು.ಚಂದನನೆಂಬ ಮಗನಿಗೆ ರಾಜ್ಯವಿತ್ತು, ತಪಸ್ಸನ್ನಾಚರಿಸಿದನು.

ಶೀತಲನ ಜೀವನ[ಬದಲಾಯಿಸಿ]

ಸಮಾಧಿ ಮರಣದಿಂದ ಸತ್ತ ಈ ರಾಜನು ಆರಣಸ್ವರ್ಗದಲ್ಲಿ ದೇವೇಂದ್ರನಾಗಿ ಜನಿಸಿ, ಜೀವಿತಾಂತ್ಯದಲ್ಲಿ ಭಾರತ ವರ್ಷದ ಮಲಯ ದೇಶದ ರಾಜಧಾನಿ ಭದ್ರಪುರದಲ್ಲಿದ್ದ ಇಕ್ಷ್ವಾಕ್ಷು ವಂಶದ ದೃಢರಥರಾಜನ ಮಡದಿ ಸುನಂದೆಯ ಗರ್ಭವನ್ನು ಚೈತ್ರ ಬಹುಳ ಅಷ್ಟಮಿಯಂದು ಪೂರ್ವಾಷಾಢ ನಕ್ಷತ್ರದಲ್ಲಿ ಪ್ರವೇಶಿಸಿ, ಮಾಘ ಶುಕ್ಲ ದ್ವಾದಶಿಯ ವಿಶ್ವಯೋಗದಲ್ಲಿ ಜನಿಸಿದನು. ದೇವೇಂದ್ರ ಜನ್ಮಾಭಿಷೇಕ ಮಾಡಿ ಶೀತಲನೆಂದು ನಾಮಕರಣ ಮಾಡಿದನು. ಈತನು ಒಂಭತ್ತು ಲಕ್ಷ ಪೂರ್ವಾಯುಷ್ಯಯುಳ್ಳವನು. ಯುವಕನಾದಾಗ ತೊಂಭತ್ತು ಧನಸ್ಸುಗಳಷ್ಟು ಎತ್ತರವಾಗಿದ್ದನು.[೨]

ಶೀತಲನ ವೈರಾಗ್ಯ[ಬದಲಾಯಿಸಿ]

ರಾಜನಾದ ಶೀತಲನು ಒಮ್ಮೆ ಮೋಡವೊಂದು ಕರಗಿ ಹೋದುದನ್ನು ಕಂಡು ವೈರಾಗ್ಯಪರನಾದನು. ದೇವತೆಗಳು ಆತನ ಪರಿನಿಷ್ಕ್ರಮಣ ಕಲ್ಯಾಣವನ್ನು ಆಚರಿಸಿದರು.

ವೈರಾಗ್ಯ ಜೀವನ ಹಾಗೂ ಮೋಕ್ಷ[ಬದಲಾಯಿಸಿ]

ಮಾಘ ಕೃಷ್ಣ ದ್ವಾದಶಿ ಪೂರ್ವಾಷಾಢ ನಕ್ಷತ್ರದಲ್ಲಿ ಆತನಿಗೆ ಮನಃಪರ್ಯಯಜ್ಞಾನ ಉದಿಸಿತು. ಅರಿಷ್ಟನಗರದ ಪುನರ್ವಸು ರಾಜನಿಂದ ಆಹಾರ ಸ್ವೀಕರಿಸಿದನು. ಮೂರು ವರ್ಷ ಛದ್ಮಾವಸ್ಥೆಯಲ್ಲಿದ್ದುಪುಷ್ಯ ಕೃಷ್ಣ ಚತುರ್ದಶಿಯ ಪೂರ್ವಾಷಾಢ ನಕ್ಷತ್ರದಲ್ಲಿ ಕೇವಲಜ್ಞಾನಿಯಾದನು. ಸ್ವಾಮಿಯು ನಾನಾ ದೇಶಗಳಲ್ಲಿ ವಿಹರಿಸಿ, ಜ್ಞಾನವರ್ಷವನ್ನು ನೀಡುತ್ತಾ ಕಡೆಗೆ ಒಂದು ತಿಂಗಳ ಕಾಲ ಸಮ್ಮೇದರ್ಪತದಲ್ಲಿ ತಪಸ್ಸು ಮಾಡುತ್ತಿದ್ದು, ಆಶ್ವೀಜ ಶುಕ್ಲ ಅಷ್ಟಮಿಯ ದಿನ ಪೂರ್ವಾ ನಕ್ಷತ್ರದಲ್ಲಿ ಮೋಕ್ಷವನ್ನು ಪಡೆದನು. ಎಂಭತ್ತೊಂದು ಜನ ಗಣಧರರು ಆತನ ಬಳಿಯಲ್ಲಿದ್ದರು. ಆತನ ಲಾಂಛನ ಕಲ್ಪವೃಕ್ಷ, ಯಕ್ಷ-ಯಕ್ಷಿಯರು, ಬ್ರಹ್ಮ- ಮಾನವೀ.


ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ. ಉಜಿರೆ: ಮಂಜುಶ್ರೀ ಪ್ರಿಂಟರ್ಸ್.
  2. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ. ಉಜಿರೆ: ಮಂಜುಶ್ರೀ ಪ್ರಿಂಟರ್ಸ್.