ವಿಷಯಕ್ಕೆ ಹೋಗು

ಸದಸ್ಯ:Vaishnavi90/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ವೈಷ್ಣವಿ. ನಾನು ಮಂಗಳೂರಿನ ಪಡೀಲ್ ಮೇಘನಗರ ಎಂಬಲ್ಲಿ ವಾಸವಾಗಿರುತ್ತೇನೆ. ನನ್ನ ತಂದೆ ಈಶ್ವರಸ್ವಾಮಿ ಮತ್ತು ತಾಯಿ ರೋಹಿಣಿ. ನನ್ನ ತಂದೆ ಪೋಲೀಸ್ ಇಲಾಖೆಯಲ್ಲಿ ಮತ್ತು ತಾಯಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಓರ್ವ ಸಹೋದರ ಮತ್ತು ಸಹೋದರಿಯನ್ನೊಳಗೊಂಡ ನಮ್ಮದು ಸುಖೀ ಕುಟುಂಬ.

ನಾನು ನನ್ನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಧ್ಯಾಭ್ಯಾಸವನ್ನು ಮಂಗಳೂರಿನ ಕೆನರಾ ವಿದ್ಯಾಸಂಸ್ಥೆಯಲ್ಲಿ ಪೂರೈಸಿದೆ. ಬಳಿಕ ಪದವಿಪೂರ್ವ ಶಿಕ್ಷಣವನ್ನು ಮಂಗಳೂರಿನ ಸಂತ ಅಲೋಶಿಯಸ್ ವಿದ್ಯಾಸಂಸ್ಥೆಯಲ್ಲಿ ಪೂರೈಸಿ, ಇದೀಗ ಅದೇ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದೇನೆ.

ನನ್ನ ತಂದೆಯ ಊರು ಗಂಧದ ನಾಡೆಂದು ಹೆಸರುವಾಸಿಯಾದ ಮೈಸೂರು. ರಜಾದಿನಗಳಲ್ಲಿ ಮೈಸೂರಿನ ಪ್ರವಾಸಿ ತಾಣಗಳಿಗೆ ತಪ್ಪದೇ ಭೇಟಿ ನೀಡುತ್ತೇವೆ. ನನಗೆ ಸಂಗೀತವೆಂದರೆ ತುಂಬಾ ಅಚ್ಚುಮೆಚ್ಚು. ಜೊತೆಗೆ ವಸ್ತ್ರವಿನ್ಯಾಸ ಮತ್ತು ಕಸೂತಿ ಕಲೆಗಳಲ್ಲೂ ಆಸಕ್ತಿ ಹೊಂದಿದ್ದೇನೆ. ಪದವಿಯನ್ನು ಪೂರೈಸಿ ಬಳಿಕ ಫ್ಯಾಶನ್ ಡಿಸೈನಿಂಗ್ ತರಬೇತಿ ಮಾಡಬೇಕೆಂಬುವುದು ನನ್ನ ಬಯಕೆ.