ವಿಷಯಕ್ಕೆ ಹೋಗು

ಸದಸ್ಯ:Usha ga89/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಾಲಾ ಮಕ್ಕಳ ಪತ್ರಿಕೆ ‘ಮಕ್ಕಳ ಮಂದಾರ’.


ಮಕ್ಕಳ ಮಂದಾರ ಪತ್ರಿಕೆ 2008 ನವೆಂಬರ್ 1 ರಂದು ಸ ಹಿ ಪ್ರಾಥಮಿಕ ಶಾಲೆ ಮಲ್ಕಾಪುರ ಮಾನ್ವಿ ತಾಲೂಕಿನಲ್ಲಿ ಮಕ್ಕಳ ಸಂಪಾದಕೀಯ ಬಳಗದ ನೇತೃತ್ವದಲ್ಲಿ ರವಿಚಂದ್ರ ಶಿಕ್ಷಕರು ಅವರ ಮೊದಲ ಸಂಬಳದ ಒಂದಿಷ್ಟು ಹಣದಲ್ಲಿ ಆರಂಭಿಸಿದ ಶಾಲಾ ಪತ್ರಿಕೆ ಆಗಿದೆ. ಅವರೇ ಪ್ರಧಾನ ಸಂಪಾದಕನಾಗಿ ಆರಂಭಿಸಿದ ಶಾಲಾ ಮಕ್ಕಳ ಪತ್ರಿಕೆ ತ್ರೈಮಾಸಿಕವಾಗಿ 15 ವರ್ಷಗಳ ಕಾಲ ನಿರಂತರವಾಗಿ ಪ್ರಕಟವಾಗುತ್ತಿದೆ. ಇದು ಸರ್ಕಾರಿ ಶಾಲಾ ಗ್ರಾಮೀಣ ಮಕ್ಕಳಿಗೆ ಉಚಿತ ಪತ್ರಿಕೆಯಾಗಿ ಆಗಿದೆ.

15 ವರ್ಷಗಳಿಂದ ರವಿಚಂದ್ರ ಅವರು ಗ್ರಾಮೀಣ ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸುತಿದ್ದಾರೆ . ಶಾಲಾ ಮಕ್ಕಳ ಪತ್ರಿಕೆಯೊಂದು 100 ಪ್ರತಿಗಳಿಂದ ಆರಂಭವಾಗಿ 1000 ಪ್ರತಿಗಳವರೆಗೆ ಮುದ್ರಿತ ಪ್ರತಿಗಳ ರೂಪದಲ್ಲಿ ವಿತರಿಸಿ. ಪಿಡಿಎಫ್ ಆವೃತ್ತಿಯಲ್ಲಿ ಆನ್ಲೈನ್ ಮೂಲಕ ಸಾವಿರಾರು ಓದುಗರನ್ನು ತಲುಪುತ್ತಿದೆ. ಪ್ರಕಟಣೆಗೆ ಕೆಲವು ಸಂಘ ಸಂಸ್ಥೆಗಳು ಸಹ ಸಹಯೋಗ ನೀಡಿವೆ.

ಇದು 20 ಪುಟಗಳ ಕಲರ್ ಪತ್ರಿಕೆ ಆಗಿದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳು ಬರೆದ ಕತೆ, ಕವಿತೆ, ಪ್ರಬಂಧ, ಲೇಖನ, ಶಾಲಾ ಸುದ್ದಿ, ಶಾಲಾ ಮಕ್ಕಳ ಸಾಧನೆ, ಶಾಲಾ ಮಕ್ಕಳ ಊರಿನ ಕಲಾವಿದರು, ಸಮಸ್ಯೆಗಳನ್ನು ಸಹ ಮಕ್ಕಳಿಂದಲೆ ಬರೆಸಿ ಪ್ರಕಟಿಸುವ ಮಕ್ಕಳ ಪತ್ರಿಕೆ ಆಗಿದೆ.ಕರ್ನಾಟಕ ಶಿಕ್ಷಣ ಇಲಾಖೆ, ಸರ್ಕಾರಿ ಶಾಲಾ ಶಿಕ್ಷಕರು , ಸಾಹಿತಿಗಳು ಸಹ ಈ ಪತ್ರಿಕೆ ಬೆಂಬಲಿಸಿದ್ದಾರೆ.ಶಾಲಾ ಮಕ್ಕಳಲ್ಲಿಯೂ ಸೃಜನಶೀಲತೆಯಿದೆ, ಕಲ್ಪನೆಗಳಿವೆ ,ಅವರು ಸಹ ಬರೆಯಬಲ್ಲರು ಎಂಬುದನ್ನು ಪಾಲಕರಿಗೆ , ಸಮಾಜಕ್ಕೆ ಪ್ರತಿಬಿಂಬಿಸುವ ಲ್ಲಿ ಮಕ್ಕಳ ಮಂದಾರ ಯಶಸ್ವಿಯಾಗಿದೆ. ಸ್ವತಃ ಬರಹ ಬರೆದ ಮಕ್ಕಳಿಗೆ ತಾವೂ ಬರೆಯಬಲ್ಲೆವು, ಸಾಹಿತಿಗಳಾಗಬಲ್ಲೆವು. ಎಂಬ ಆತ್ಮವಿಶ್ವಾಸಮೂಡಿಸುವಲ್ಲಿ ಮಕ್ಕಳ ಮಂದಾರ ಯಶಸ್ವಿಯಾಗಿದೆ. ಈಗ ರಾಜ್ಯದ ಪ್ರತಿಭಾವಂತ ಸರ್ಕಾರಿ ಶಾಲಾ ಮಕ್ಕಳ ಬರಹಗಳ ವೇದಿಕೆಯಾಗಿ ಮನೆಮನೆ ತಲುಪುತ್ತಿದೆ.

ಈ ಪತ್ರಿಕೆ ಮೂಲಕ ತಮ್ಮ ಊರು, ಶಾಲಾ ಸಮಸ್ಯೆಗಳನ್ನು ಸಹ ಮಕ್ಕಳೇ ಲೇಖನಗಳನ್ನು ಬರೆದು ಸಂಬಂಧಿಸಿದ ಅಧಿಕಾರಿಗಳಿಗೆ ವಿಷಯ ತಲುಪುವಂತಾಗಿ ಕುಂದುಕೊರತೆಗಳನ್ನು ಬಗೆಹರಿಸುವಲ್ಲಿಯೂ ಪತ್ರಿಕೆ ಯಶಸ್ವಿಯಾಗಿದೆ. ಈ ಪತ್ರಿಕೆಯಲ್ಲಿ ಬರಹಗಳನ್ನು ಬರೆದ ಶಿವಶಂಕರ್ ಸ್ವಾಮಿ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದನು. ನೂರಾರು ಬಾಲ ಪ್ರತಿಭೆಗಳ ಕತೆ, ಕವಿತೆಗಳಿಗೆ , ಪ್ರಬಂಧ, ಲೇಖನ ಬರಹಗಳಿಗೆ ಪತ್ರಿಕೆ ವೇದಿಕೆ ಒದಗಿಸಿದೆ. ಪತ್ರಿಕೆಯಲ್ಲಿ ತಮ್ಮ ಬರಹಗಳು ಪ್ರಕಟವಾದ ಸ್ಪೂರ್ತಿಯಿಂದ ಸ್ವತಃ ಕೃತಿ ಪ್ರಕಟಿಸಿದ ಶಿವಶಂಕರ ಸ್ವಾಮಿ ರಾಜ್ಯದ ಮನೆಮಾತಾಗಿದ್ದಾನೆ. ಹಲವು ಮಕ್ಕಳು ರಾಜ್ಯ ಮಟ್ಟದ ಕವಿಗೋಷ್ಠಿ, ಸಾಹಿತ್ಯ ಸಮ್ಮೇಳನಗಳಲಿ ಭಾಗಿಯಾಗಲು ಪತ್ರಿಕೆ ಸಹಾಯಕವಾಗಿದೆ. ಮಕ್ಕಳು ತಮ್ಮ ಊರಿನ ಕಲಾವಿದರ ಸಂದರ್ಶನ ಮಾಡಿದ್ದಾರೆ. ಊರಿನ ಸಮಸ್ಯೆ ಬಗ್ಗೆ ಲೇಖನ ಬರೆದು ಗ್ರಾಮ ಪಂಚಾಯಿತಿಯವರಿಗೆ ಸಮಸ್ಯೆ ಬಗೆಹರಿಸುವಂತೆ ಮನವರಿಕೆ ಮಾಡಿದ್ದಾರೆ. ಎರಡನೇ ತರಗತಿಯ ಕನ್ನಡ ಪಠ್ಯದಲ್ಲಿ ಮಕ್ಕಳ ಮಂದಾರ ಶಾಲಾ ಪತ್ರಿಕೆ ಮಾದರಿ ಪತ್ರಿಕೆಯಾಗಿ ಪ್ರಕಟಿಸಿದ್ದಾರೆ. ಹೀಗೆ ಹತ್ತಾರು ಫಲಶೃತಿಗಳ ಮಕ್ಕಳ ಮಂದಾರ ಕರ್ನಾಟಕದ ಶಾಲಾ ಮಕ್ಕಳ ವಿಶಿಷ್ಟ ಪ್ರಯೋಗವಾಗಿ ಮನೆಮಾತಾಗಿದೆ.

[೧]

  1. https://news13.in/archives/185030