ವಿಷಯಕ್ಕೆ ಹೋಗು

ಸದಸ್ಯ:Umadevi devendra/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                   ಅಹಾರ

ಜೀವಿಗಳ ಬೆಳವಣಿಗೆಗೆ ಹಾಗೂ ಅಭಿವೃದ್ದಿಗೆ ಅವಶ್ಯಕವಾದ ಘಟಕ ಆಹಾರ.ಇದು ಶಕ್ತಿಯ ಆಕರ.ಹಾನಿಗೊಳಗಾದ ಅಂಗಾಂಶಗಳ ದುರಸ್ತಿ ಮತ್ತು ಪುನ: ಸ್ಥಾಪನೆಗೆ ಸಹಾಯ ಮಾಡುತ್ತದೆ. ಆಹಾರದಲ್ಲಿನ ಪೋಷಕಗಳು ಉತ್ತಮ ಆರೋಗ್ಯ ಮತ್ತು ದೇಹ ದಾಢ್ಯ ‌ತೆಯನ್ನು ಪಡೆಯಲು ಸಹಕರಿಸುತ್ತದೆ.ಶರೀರಕ್ಕೆ ಆಧಾರವನ್ನು ಒದಗಿಸಲು ಸೇವಿಸುವ ಪೋಷಕವೇ ಆಹಾರ. ಆಹಾರವು ಈ ಕಳಗಿನ ಘಟಕಗಳ ಸಂಯೋಜನೆಯಿಂದ ಕೂಡಿರುತ್ತದೆ. ಅ) ಕಾಭೋ‍ ‍ಹ್ಯಡ್ರೆಟ್ ಗಳು ಆ) ಪ್ರೋಟಿನ್ ಗಳು ಇ) ಲಿಪಿಡ್ ಗಳು ಈ) ವಿಟಮಿನ್ ಗಳು (ಜಿವಸತ್ವಗಳು) ಉ) ಖನಿಜಗಳು ಊ) ನೀರು ಹಾಗೂ ನಾರುಗಳನ್ನು ಒಳಗೊಂಡಿದೆ. ಇವುಗಳನ್ನೆಲ್ಲವನ್ನು ಸೇರಿಸಿ ಪೋಷಕಾಂಶಗಳೆನ್ನುವರು.

         ಪೋಷಕಗಳು ಆಹಾರದಲ್ಲಿ ನಿಯಮಿತವಾಗಿ ಇರಲೇಬೇಕು ಹಾಗೆ ಇರದಿದ್ದಲಿ ಅಥವ ದೀರ್ಘ ಕಾಲದವರೆಗೂ ಆಹಾರದಲ್ಲಿ ದೊರೆಯದಿದ್ದಲ್ಲಿ ನ್ಯೂನತಾ ಕಾಹಿಲೆಗಳು ಉಂಟಾಗುತ್ತವೆ. ಆಹಾರದಲ್ಲಿನ ಪೋಷಕಾಂಶಗಳ ಕೊರತೆಯನ್ನು ನ್ಯೂನ ಪೋಷಣೆ ಎನ್ನುವರು.  ತಂತ್ರಜ್ಞಾನ ಮುಂದುವರೆದಂತೆ  ಹಾಗೂ ಹಸಿರು ಕ್ರಾಂತಿಯಿಂದಾಗಿ ಆಹಾರ ಉತ್ಪಾದನೆಯ  ಪ್ರಮಾಣವು ಆಗಾಧವಾಗಿ ಹೆಚ್ಚಳವಾಗಿದೆ. ಆದ್ದರಿಂದ ಆಹಾರದ ಸಂರಕ್ಷಣೆ ಮತ್ತು ಸಂಗ್ರಹಣೆಗಳು ಆಹಾರದ ಉತ್ಪಾದನೆಯಷ್ಟೆ ಪ್ರಾಮುಖ್ಯವಾಗಿದೆ.
         ಸಾಮಾನ್ಯವಾಗಿ ಆಹಾರವು ಸಸ್ಯ ಮತ್ತು ಪ್ರಾ ಜನ್ಯವಾಗಿದ್ದು ಅವಶ್ಯಕ  ಪೋಷಕಗಳಿರುತ್ತವೆ. ಇದು ಎರಡು ಕಾರಣಗಳಿಂದಾಗಿ  ಕೆಟ್ಟು  ನಷ್ಟವಾಗುತ್ತವೆ. ಎರಡು ಮುಖ್ಯ ಕಾರಣಗಳು. ೧)ಅಂತರಿಕ ಅಂಶಗಳು   ೨) ಬಾಹ್ಯ ಅಂಶಗಳು. 
ಅಂತರಿಕ ಅಂಶಗಳು ಆಹಾರವನ್ನು ಒಳಗಿನಿಂದಲೇ ಕೆಡುವಂತೆ ಮಾಡುತ್ತವೆ.  ಬಾಹ್ಯ ಅಂಶಗಳು ಆಹಾರವನ್ನು ಹೊರಗಿನಿಂದ ಅಂದರೆ ವಾತಾವರಣದ ಅಂಶಗಳಿಂದ ಕೆಡುವಂತೆ ಮಾಡುತ್ತದೆ. ಅಂತರಿಕ ಅಂಶಗಳು ಕಿಣ್ವಗಳ ಚಟುವಟಿಕೆ  ಹಾಗೂ ಒಳಗಿನ ತೇವಾಂಶ.

ಆಹಾರವು ಕೆಡಲು ಮತ್ತು ವ್ಯರ್ಥವಾಗಲು ಹಲವಾರು ಬಾಹ್ಯ ಅಂಶಗಳು ಕಾರಣಗಳಾಗುತ್ತವೆ. ೧) ತಾಪ ಮತ್ತು ತೇವಾಂಶ ೨)ಸಂಗ್ರಹಾಗಾರಗಳ ರಚನೆಗಳ ಲ್ಲಿನ ದೋಷ ೩) ಸೂಕ್ಷಜೀವಿಗಳು. ೪)ಕೀಟಪಿಡುಗುಗಳು ೫) ದಂಶಕಗಳು ಮತ್ತು ಪಕ್ಷಿಗಳು ಆಹಾರ ಪದಾರ್ಥಗಳನ್ನು ೨ ವಿಭಾಗಗಳನ್ನಾಗಿ ವಿಂಗಡಿಸಬಹುದು. ೧) ಬೇಗ ಕೆಟ್ಟು ಹೋಗುವ ಆಹಾರ ಪದಾರ್ಥಗಳು ೨) ಬೇಗ ಕೆಟ್ಟು ಹೋಗದ ಆಹಾರ ಪದಾರ್ಥಗಳು

 ಬೇಗ ಕೆಟ್ಟು ಹೋಗುವ ಆಹಾರ ಪದಾರ್ಥಗಳನ್ನು ಕಡಿಮೆ ಅವಧಿಯವರೆಗೂ ಸಂಗ್ರಹಿಸಬಹುದು. ಉದಾ: ಹಾಲು ಮತ್ತು ಹಾಲಿನ ಉತ್ಪನ್ನಗಳು, ತರಕಾರಿಗಳು ಹಣ್ಣುಗಳು , ಬೇಯಿಸಿದ ಆಹಾರ ಪದಾರ್ಥಗಳು, ಮಾಂಸ, ಮೀನು ಮೊಟ್ಟೆಗಳು ಇತ್ಯಾದಿಗಳು.

ಬೇಗ ಕೆಟ್ಟು ಹೋಗದ ಆಹಾರ ಪದಾರ್ಥಗಳನ್ನು ದೀರ್ಘ ಅವಧಿಯವರೆಗೂ ಸಂಗ್ರಹಿಸಬಹುದು.ಉದಾ: ಧಾನ್ಯಗಳು, ಬೇಳೆ ,ಕಾಳುಗಳು ಇತ್ಯಾದಿ ಆಹಾರದಲ್ಲಿನ ಪೋಷಕಾಂಶಗಳ ಗುಣಮಟ್ಟವನ್ನು ಕಡಿಮೆ ಮಾಡುವ ವಿದ್ಯಮಾನವನ್ನು ಆಹಾರ ಕಲಬೆರಕೆ ಎನ್ನುವರು. ಕಡಿಮೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಆಹಾರಕ್ಕೆ ಸೇರಿಸುವುದರಿಂದ ಕಲಬೆರಕೆ ಮಾಡಬಹುದು. ಆಹಾರ ಕಲಬೆರಕೆಗೆ ಕಾರಣವಾಗುವ ಆಹಾರ ಪದಾರ್ಥಗಳು ಬಗ್ಗೆ ತಿಳಿಯೋಣ. ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ನೀರು , ಪಿಷ್ಟದ ಪುಡಿಗಳನ್ನು ಸೇರಿಸುವರು..

ಈ ರೀತಿಯ ಕಲಬೆರಕೆ ಪದಾರ್ಥಗಳನ್ನು ದೀರ್ಘಕಾಲದವರೆಗೂ ಸೇವಿಸುವುದರಿಂದ ಅರೋಗ್ಯದ ಮೇಲೆ ಹಲವಾರು ಸಮಸ್ಯೆಗಳು ಉಂಟಾಗುತ್ತವೆ.  ಕಲಬೆರಕೆ ಆಹಾರ ಪದಾರ್ಥಗಳಲ್ಲಿ ಉದಾ: ಅಡಿಗೆ ಎಣ್ಣೆ.

ಯಲ್ಲಿ ದತ್ತೂರಿ ಎಣ್ಣೆ ಕಲಬೆರಕೆಯಾಗಿದ್ದಲ್ಲಿ ಜಲೋದರ ಅಥವಾ ಮಹೋದರ ಕಾಹಿಲೆಗಳು ಉಂಟಾಗುತ್ತವೆ. ತುಪ್ಪಕ್ಕೆ ಹ್ಯಡ್ರೋಜಿನೇಟೇಡ್ ಕಬ್ಬು, ವನಸ್ಪತಿ, ಹಾಗೂ ಪ್ರಾಣಿಗಳ ಕೊಬ್ಬನ್ನು ಸೇರಿಸುವರು. ಅಡಿಗೆ ಎಣ್ಣೆಗೆ ಖನಿಜ ತ್ಯಲ, ಅಖಾದ್ಯ ತ್ಯಲ ಮುಂತಾದವುಗಳು. ಮೆಣಸು ಕಾಳುಗಳಿಗೆ ಪರಂಗಿ ಹಣ್ಣಿನ ಬೀಜಗಳು. ಗೋಧಿ ಹಿಟ್ಟಿಗೆ ಮರಗೆಣಸಿನ ಹಿಟ್ಟು ಟಾಲ್ಕಮ್ ಪುಡಿ. ಸಾಸಿವೆಗೆ ರಾಗಿ ಅಥವಾ ದತ್ತೂರಿ ಬೀಜಗಳು ಧಾನ್ಯಗಳಿಗೆ ಬಳಪದ ಕಲ್ಲಿನ ಚೂರುಗಳು [ಕಲಬೆರಕೆಯನ್ನು ತಡೆಗಟ್ಟಲು ಕ್ರಮಗಳನ್ನು ಕ್ಯಗೋಳ್ಳಲಾಗುತ್ತಿದೆ. ಭಾರತ ಸರ್ಕಾರವು ೧೯೫೬ರಲ್ಲಿ 'ಕಲಬೆರಕೆ ನಿವಾರಣಾ ಕಾನೂನನ್ನು" ಜಾರಿಗಳಿಸಿದೆ. ಈ ಕಾನೂನಿನ ಪ್ರಕಾರ ಆಹಾರ ಪದಾರ್ಥಗಳು ಕನಿಷ್ಠ ಗುಣಮಟ್ಟವನ್ನು , ಮಾರಾಟಕ್ಕೆ ಕಟ್ಟು ನಿಟ್ಟಾದ ಆರೋಗ್ಯ ಆರೋಗ್ಯ ಸೂತ್ರಗಳನ್ನು ಸ್ಪಷ್ಟವಾಗಿ ನಿರೂಪಿಸಿದೆ.ಈ ಕಾನೂನನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗುತ್ತದೆ.