ಸದಸ್ಯ:Umadevi.S/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಸರ ಶಾಸ್ತ್ರ[ಬದಲಾಯಿಸಿ]

ದಪ್ಪಗಿನ ಅಕ್ಷರಜೀವಿಗಳ ಮತ್ತು ಅವುಗಳ ಸುತ್ತಲಿನ ಪರಿಸರದ ನಡುವಿನ ಸಂಬಂಧಗಳಗಳ ಪರಿಪೂರ್ಣತೆ ಹಾಗೂ ವಿಧಾನಗಳನ್ನು ಅಧ್ಯಯನ ಮಾಡುವ ವಿಜ್ಞಾನದ ಅಧ್ಯಯನವೇ ಪರಿಸರಶಾಸ್ತ್ರ..ಪರಿಸರ ಶಾಸ್ತ್ರವು ಜೀವಶಾಸ್ತ್ರದ ಒಂದು ವಿಭಾಗವಾಗಿದ್ದು ಪರಿಸರ ಹಾಗೂ ಜೈವಿಕ ಸಮುದಾಯ ಹಾಗೂ ಅಜೈವಿಕ ಸಮುದಾಯಗಳ ನಡುವಿನ ಪರಸ್ಪರ ಅವಲಂಬನೆ, ಪರಸ್ಪರ ಸಹಕಾರಗಳ ವೈಜ್ಞಾನಿಕ ವಿಶ್ಲೇಷಣೆ ಹಾಗೂ ಅಧ್ಯಯನವಾಗಿದೆ. ಜೀವಶಾಸ್ತ್ರ ಹಾಗೂ ಭೂ ವಿಜ್ಞಾನಗಳ ಗಳ ಬಗ್ಗೆ ತಿಳಿಸುವುದಲ್ಲದೆ ನಿಸರ್ಗದ ವಿವಿಧ ಘಟಕಗಳ ನಡುವೆ ಇರುವ ಸಂಬಂಧಗಳ ಬಗ್ಗೆ ತಿಳಿಸುತ್ತದೆ. ಈ ಸಂಬಂಧಗಳು ಪರಿಸರ ಸಮತೋಲನವನ್ನು ಪ್ರತಿನಿಧಸುವ ಬಗ್ಗೆಯೂ ತಿಳಿಸಿಕೊಡುತ್ತದೆ.ಜೈವಿಕ ಹಾಗೂ ಅಜೈವಿಕ ಘಟಕಗಳ ಪರಸ್ಪರ ಅವಲಂಬನೆ ಬಗ್ಗೆ ವಿಸ್ತಾರವಾಗಿ ತಿಳಿಸಿಕೊಡುತ್ತದೆ.ಇದನ್ನು ಪರಿಸರ ವಿಜ್ಞಾನ ಎಂದೂ ಸಹ ಕರೆಯುವರು.

                        ಪರಿಸರ ವಿಜ್ಞಾನಿಗಳ ಪ್ರಕಾರ ಜೀವಿ ವೈವಿಧ್ಯತೆಯು ಪರಿಸರ ವ್ಯವಸ್ಥೆಯ ಒಳಗೆ ಹಾಗೂ ಹೊರಗೆ ಕಂಡುಬರುತ್ತವೆ. ನಿರ್ದಿಷ್ಟ ಜೀವಿಯು  ನಿರ್ದಿಷ್ಟ  ಪರಿಸರಕ್ಕೆ  ಹೊಂದಿಕೊಂಡಿರುವ ಬಗ್ಗೆ   ಪರಿಸರ ಶಾಸ್ತ್ರವು ತಿಳಿಸಿ ಕೊಡುತ್ತದೆ.ಜೀವಿಗಳ ನಡುವಿನ ಪರಸ್ಪರ  ಕ್ರಿಯೆ ಹಾಗೂ ಪ್ರತಿಕ್ರಿಯೆಗಳ ಬಗ್ಗೆ  ಪರಿಸರ ವ್ಯವಸ್ಥೆಯು'ದಪ್ಪಗಿನ ಅಕ್ಷರ' ತಿಳಿಸಿ ಕೊಡುತ್ತದೆ.ಉದಾ; ಒಂಟೆಯು ಮರುಭೂಮಿಗೆ ಹೊಂದಿಕೊಂಡಿರುವ ಬಗ್ಗೆ. ಆ ಪರಿಸರಕ್ಕೆ ಹೊಂದಿಕೊಳ್ಳಲು ಅದರ ದೇಹದಲ್ಲಿ ಆಗಿರುವ ಮಾರ್ಪಾಡುಗಳನ್ನು ತಿಳಿಯಬಹುದಾಗಿದೆ. ಜೀವಿ  ವೈವಿಧ್ಯತೆ ಯು ಅನೇಕ ರೀತಿಯ  ಜೀವಿಗಳ ಪ್ರಭೇದಗಳ ಬಗ್ಗೆ ತಿಳಿಸಿ  ಕೊಡುತ್ತದೆ. ನಿರ್ದಿಷ್ಟ ಪ್ರಭೇದಗಳು ಸೇರಿ ಗುಂಪುಗಳಾಗುವ ಬಗ್ಗೆ ತಿಳಿಯಬಹುದಾಗಿದೆ. ಪರಿಸರವು ಅತ್ಯಂತ ಅಸ್ಥಿರವಾಗಿದ್ದು ನಿರಂತರವಾಗಿ ಬದಲಾವಣೆಗೆ ಒಳಪಡುತ್ತಿರುತ್ತದೆ. ಅಂಥಹ ಬದಲಾವಣೆಗಳು ಜೀವಿಗಳಲ್ಲಿ ಹೊಸ ಬದಲಾವಣೆಗಳನ್ನು ಸೃಷ್ಟಿಸುತ್ತವೆ ಎಂಬುದನ್ನು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.ಪರಿಸರ ವ್ಯವಸ್ಥೆಯಲ್ಲಿ ಉಂಟಾಗುವ  ನೈಸರ್ಗಿಕ ಬದಲಾವಣೆಗಳು ಜೈವಿಕ ಸಮುದಾಯದ ಮೇಲೆ ಪರಿಣಾಮ ಬೀರುತ್ತವೆ.
                     ಜೈವಿಕ ಸಮುದಾಯಕ್ಕೆ  ಅಜೈವಿಕ ಘಟಕಗಳು ಪೂರಕವಾಗಿರುತ್ತವೆ.ಉದಾ; ಆಮ್ಲಜನಕ ಜೀವಿಗಳ ಜೀವ ವಾಯು. ನೀರು ಜೀವ ಜಲ. ಮಣ್ಣು ಇತ್ಯಾದಿ. ಪರಿಸರ ವ್ಯವಸ್ಥೆಯಲ್ಲಿ ಜೀವಿಗಳ ಪರಸ್ಪರ ಅವಲಂಬನೆಯನ್ನು ಆಹಾರ ಸರಪಣಿಯಲ್ಲಿ ಕಾಣುತ್ತೇವೆ. ಪರಿಸರ ವ್ಯವಸ್ಥೆಯಲ್ಲಿ ಉತ್ಪಾದಕರ ಪಾತ್ರವು ಮುಖ್ಯವಾದ್ದು. ಸಸ್ಯಗಳು ಉತ್ಪಾದಕರು, ಪ್ರಾಥಮಿಕ ಬಳಕೆದಾರರಾದ ಸಸ್ಯಾಹಾರಿಗಳು ಪ್ರಥಮವಾಗಿ ಉತ್ಪಾದಕರ ಮೇಲೆ ಅವಲಂಬಿತವಾಗಿರುತ್ತವೆ.ಸಸ್ಯಹಾರಿಗಳ ಮೇಲೆ ಪ್ರಥಮ ಹಂತದ ಮಾಂಸಾಹಾರಿ ಅಥವಾ ಭಕ್ಷಕರು ಅವಲಂಬಿತವಾಗಿರುತ್ತವೆ.  ದ್ವಿತೀಯ ಹಂತದ ಬಳಕೆದಾರರು ಅಥವಾ ದ್ವತೀಯ ಹಂತದ ಭಕ್ಷಕರು ಮಾಂಸಾಃಅಋಈಘಲ ಂಎಳೇ ಅವಲಂಬಿತವಾಗಿರುತ್ತವೆ. ಆಹಾರ ಸರಪಣಿಯು ಇದನ್ನು ಪ್ರತಿಪಾದಿಸುತ್ತದೆ.
ಪರಿಸರ ವ್ಯವಸ್ಥೆಯಲ್ಲಿ ಭೂ ಜೀವ ರಾಸಾಯನಿಕ ಚಕ್ರಗಳು ಜೀವ ಮಂಡಲದಲ್ಲಿ  ಪ್ರಮುಖ  ಪಾತ್ರ ವಹಿಸುತ್ತವೆ..

ಪರಿಸರ ವಿಜ್ಞಾನವು ಎರಡು ಮೂಲಭೂತ ನಿಯಮಗಳನ್ನು ಪ್ರತಿಪಾದಿಸುತ್ತದೆ. ೧.ಪ್ರಕೃತಿಯಲ್ಲಿ ಯಾವುದೇ ಒಂದು ನಿರ್ದಿಷ್ಟ ಕ್ರಿಯೆಯನ್ನು ಸದಾಕಾಲ ಮುಂದುವರೆಸಿಕೊಂಡು ಹೋಗಲು ಸಾಧ್ಯವಿಲ್ಲ. ೨.ಪ್ರಕೃತಿಯಲ್ಲಿ ಎಲ್ಲವೂ ಇತರೆ ಎಲ್ಲವು ಗಳ ಜತೆ ಅವಲಂಬಿತವಾಗಿರುತ್ತವೆ.

ನೈಸರ್ಗಿಕ ವ್ಯವಸ್ಥೆಯ ಹಂತಗಳು[ಬದಲಾಯಿಸಿ]

೧.ಜೀವಿ ೨..ಪ್ರಭೇಧಗಳು ೩.ಜೀವಿ ಸಂದಣಿ ೪.ಜೀವಿ ಸಮುದಾಯ ೫.ಪರಿಸರ ವ್ಯವಸ್ಥೆ ೬.ಜೀವ ಗೋಳ.

         ಪ್ರಭೇಧಗಳು ಒಂದೇ ರೀತಿಯ ಅನುವಂಶೀಯ ರಚನೆಯನ್ನು ಹಂಚಿಕೊಂಡಿರುವ ಜೀವಿಗಳ ಗುಂಪು.ಹೀಗಾಗಿ ಪರಸ್ಪರ ಸಣತಾನೋತ್ಪತ್ತಿಯನ್ನು ಮಾಡಿಕೊಳ್ಳಬಲ್ಲವು.
ಯಾವುದೇ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಏಕಕಾಲದಲ್ಲಿ ವಾಸಿಸುವ ಒಂದೇ ಪ್ತಭೇದಕ್ಕೆ ಸೇರಿದ ಜೀವಿಗಳ ಗಿಂಪನ್ನು ಜೀವಿ ಸಂದಣಿ ಎನ್ನುವರು.
ಯಾವುದೇ ಪ್ರದೇಶದಲ್ಲಿ ಬಗೆಬಗೆಯ ಸಸ್ಯಗಳ , ಪ್ರಾಣಿಗಳ ಹಾಗೂ ಇನ್ನಿತರ ಜೀವಿಗಳ ಜೀವಿಸಂದಣಿ ಗಳಿರುತ್ತವೆ. ಈ ಎಲ್ಲಾ ಜೀವಿ ಸಂದಣಿಯನ್ನು ಒಟ್ಟಾಗಿ ಜೀವಿ ಸಮುದಾಯ ಎನ್ನುವರು. ಜೀವಿ ಸಮುದಾಯದ ಜೀವಿಗಳು ಪರಸ್ಪರ ಪ್ರತಿಕ್ರಿಯಿಸುತ್ತವೆ.
ಈ ರೀತಿ ಪ್ರಕೃತಿಯಲ್ಲಿ ಜೈವಿಕ ಹಾಗೂ ಅಜೈವಿಕ ಘಟಕಗಳ ನಡುವೆ ಪ್ರತಿವರ್ತನೆಯಾಗುವುದನ್ನು ಪರಿಸರ ವ್ಯವಸ್ಥೆ ಎನ್ನುವರು.

ಪರಿಸರ ವ್ಯವಸ್ಥೆಯ ವಿಧಗಳು[ಬದಲಾಯಿಸಿ]

ಪರಿಸರ ವ್ಯವಸ್ಥೆಯಲ್ಲಿ ಮೂಲಭೂತವಾಗಿ ಹಾಗೂ ನೈಸರ್ಗಿಕವಾಗಿ ೧.ಜಲ ಪರಿಸರ ವ್ಯವಸ್ಥೆ ಹಾಗೂ ನೆಲ ಪರಿಸರ ವ್ಯವಸ್ಥೆ ಎಂದು ವರ್ಗಿಕರಿಸಬಹುದು. ಇದಲ್ಲದೆ ಮಾನವ ನಿರ್ಮಿತ ಪರಿಸರ ವ್ಯವಸ್ಥೆಗಳೂ ಇದೆ. ಉದಾ; ಮತ್ಸ್ಗಾಗಾರ. ಜಲ ಪರಿಸರಕ್ಕೆ ಮುಖ್ಯ ಉದಾ; ಕೆರೆ, ಸಮುದ್ರ. ವಾದರೆ ನೆಲ ಪರಿಸರ ವ್ಯವಸ್ಥೆಗೆ ಉದಾ; ಅರಣ್ಯ ಪ್ರದೇಶ .

ಪರಿಸರ ವ್ಯವಸ್ಥೆಯ ಘಟಕಗಳು[ಬದಲಾಯಿಸಿ]

ಪರಿಸರ ವ್ಯವಸ್ಥೆಯಲ್ಲಿ  ಪ್ರರ್ತಿವರ್ತಿಸುವ  ಜೈವಿಕ ಹಾಗೂ ಅಜೈವಿಕ ಘಟಕಗಳು   ಮೂಲ ಘಟಕಗಳು. ಜೀವದ ಲಕ್ಷಣಗಳಿಲ್ಲದ ಘಟಕಗಳನ್ನು ಅಜೈವಿಕ ಘಟಕಗಳು  ಇವು ಮೂಲಭೂತವಾಗಿ ಪರಿಸರದಲ್ಲಿ ಕಂಡುಬರುವ    ಭೌತಿಕ, ರಾಸಾಯನಿಕ ಹಾಗೂ  ಹವಾಮಾನ ಸಂಬಂಧಿ ಅಂಶಗಳನ್ನು ಒಳಗೊಂಡಿರುತ್ತವೆ.ರ: ಗಾಳಿ,ಬೆಳಕು,ಮಣ್ಣು ,ನೀರು ಮೂಂತಾದವುಗಳು. ಜೀವದ ಲಕ್ಷಣಗಳನ್ನು ಹೊಂದಿರುವ ಘಟಕಗಳನ್ನು ಜೈವಿಕ ಘಟಕಗಳೆಂದು ಗುರುತಿಸುವರು. ಇದರಲ್ಲಿ ಸಸ್ಯಗಳು, ಪ್ರಾಣಿಗಳು, ಬ್ಯಾಕ್ಟೀರಿಯಾಗಳು, ಮತ್ತು ಶೀಲೀಂದ್ರಗಳು  ಒಳಗೊಂಡಿರುತ್ತವೆ.

ಸ್ವಪೋಷಕಗಳು[ಬದಲಾಯಿಸಿ]

ಹಸಿರು ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಅವುಗಳನ್ನು ಸ್ವಪೋಷಕಗಳು ಎಂದು ಕರೆಯಲಾಗುತ್ತದೆ.ಈ ಜೀವಿಗಳು ಉತ್ಪದಿಸುವ ಆಹಾರವನ್ನು ಎಲ್ಲಾ ಜೀವಿಗಳು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಬಳಸಿಕೊಳ್ಳುತ್ತವೆ.ಅದರಿಂದ ಭೂ ಪರಿಸರ ವ್ಯವಸ್ಥೆಯಲ್ಲಿ ಸಸ್ಯಗಳನ್ನು ಹಾಗೂ ಜಲ ಪರಿಸರ ವ್ಯವಸ್ಥೆಯಲ್ಲಿ ಶೈವಲಗಳನ್ನು ಉತ್ಪಾದಕರು ಎಂದು ಗುರುತಿಸಲಾಗುತ್ತದೆ.ತಮ್ಮ ಆಹಾರವನ್ನು ತಾವೇ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿಲ್ಲದೆ ಇರುವ ಜೀವಿಗಳನ್ನು ಯಾ ಪ್ರಾಣಿಗಳನ್ನು ಪರಪೋಷಕಗಳು ಎಂದು ಕರೆಯಲಾಗುತ್ತದೆ.ಇಂತಹ ಜೀವಿಗಳನ್ನು ಬಳಕೆದಾರರು ಎಂದು ಸಹಾ ಕರೆಯುವರು.

ಪ್ರಾಥಮಿಕ ಬಳಕೆದಾರರು[ಬದಲಾಯಿಸಿ]

ಕೇವಲ ಸಸ್ಯಗಳನ್ನು ಆಹಾರವಾಗಿ ಸೇವಿಸುವ ಪ್ರಾಣಿಗಳನ್ನು ಸಸ್ಯಾಹಾರಿಗಳೆನ್ನುವರು. ಪರಿಸರ ವ್ಯವಸ್ಥೆಯಲ್ಲಿ ಸಸ್ಯಗಳಿಂದ ತಮ್ಮ ಆಹಾರ ಶಕ್ತಿಯನ್ನು ಗಳಿಸುವ ಪ್ರಾಣಿಗಳನ್ನು ಪ್ರಾಥಮಿಕ ಬಳಕೆದಾರರು ಎನ್ನುವರು.ಉದಾ; ಮಿಡತೆ,ಜಿಂಕೆ. ಮುಂತಾದವುಗಳು.

ದ್ವಿತೀಯ ಭಕ್ಷಕರು[ಬದಲಾಯಿಸಿ]

ಸಸ್ಯಾಹಾರಿಗಳನ್ನು ತಿಂದು ಬದುಕುವ ಪ್ರಾಣಿಗಳನ್ನು ದ್ವತೀಯ ಭಕ್ಷಕರೆನ್ನುವರು. ಉದಾ: ಕಪ್ಪೆ, ಜಿಂಕೆ. ಕಪ್ಪೆಯು ಮಿಡತೆಗಳನ್ನು ತಿಂದು ಬದುಕುತ್ತವೆ.

ಆಹಾರ ಸರಪಳಿ[ಬದಲಾಯಿಸಿ]

ಪೋಷಣಾ ಸಂಬಂಧದಲ್ಲಿ ಒಂದು ಸ್ತರದಿಂದ ಮತ್ತೊಂದು ಸ್ರರಕ್ಕೆ ಆಹಾರ ಶಕ್ತಿಯು ವರ್ಗಾವಣೆಯಾಗುವುದನ್ನು ಆಹಾರ ಸರಪಳಿ''''ದಪ್ಪಗಿನ ಅಕ್ಷರ' ಎನ್ನುವರು. FoodChain.svg ಪ್ರತಿಯೊಂದು ಪೋಷಣಾಸ್ತರದಲ್ಲಿರುವ ಜಿವಿಯು ಅನೇಕ ಆಹಾರ ಸರಪಣಿಗಳ ಜೊತೆಗೆ ಸಂಬಂಧಹೊಂದಿದ್ದು ಒಂದು ಸಂಕೀರ್ಣ ರಚನೆಯನ್ನು ಉಂಟುಮಾಡುತ್ತವೆ. ಇದನ್ನು ಆಹಾರ ಜಾಲ ಎನ್ನುವರು.