ವಿಷಯಕ್ಕೆ ಹೋಗು

ಸದಸ್ಯ:Thrupthi Srinivas/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂತರಾಷ್ಟ್ರೀಯ ವ್ಯವಹಾರ

[ಬದಲಾಯಿಸಿ]

ಅಂತರಾಷ್ಟ್ರೀಯ ವ್ಯವಹಾರದ ಕಾರಣಗಳು

[ಬದಲಾಯಿಸಿ]

ಅಂತರಾಷ್ಟ್ರೀಯ ವ್ಯವಹಾರವು ಅಭಿವೃದ್ಧ ಹೊಂದಲು ಅನೇಕ ಕಾರಣಗಳಿಂದ ಪ್ರಮುಖ ಅಂಶಗಳೆಂದರೆ -

  1. ನೈಸಗಿಕ ಸಂಪನ್ಮೂಲಗಳ ಅಸದು ಹಾಗೂ ನೈಸಗಿಕ ಸಂಪನ್ಮೂಲಗಳು ಎಲ್ಲಾ ದೇಶಗಳಲ್ಲೂ ಸಮನಾಗಿ ಲಭಿಸುವುದಿಲ್ಲ. ಲಭ್ಯತೆಯಲ್ಲಿ ಅಸಮನತೆಯಿದೆ.
  2. ನೈಸಗಿಕ ಸಂಪನ್ಮೂಲಗಳ ವೈವಿಧ್ಯತೆ ಲಭಿಸುವ ಸಂಪನ್ಮೂಲಗಳು ವೈವಿಧ್ಯತೆಯಿಂದ ಕೂಡಿದೆ.
  3. ಎಲ್ಲಾ ವಿಧದ ಸಂಪನ್ಮೂಲಗಳ ಅಲಭ್ಯತೆ ಅಂತರಾಷ್ಟ್ರೀಯ ವ್ಯವಹಾರಗಳ ಬೆಳವಣಿಗೆಗೆ ಈ ಅಂಶವೂ ಕೊಡ ಪ್ರಮುಖವಾಗಿದೆ. ಎಲ್ಲಾ ನೈಸಗಿಕ ಸಂಪನ್ಮೂಲಗಳು ಯಾವುದೇ ದೇಶದಲ್ಲಿ ಲಭಿಸುತ್ತಿಲ್ಲ.ಇದರಿಂದಾಗಿ

ಯಾವುದೇ ದೇಶವೂ ಸ್ವಾವಲಂಬಿಯಾಗಿಲ್ಲ.

  1. ಭೌಗೋಳಿಕ ವಿಶೇಷತೆ ಮತ್ತು ಕ್ರಮ ವಿಭಜನೆ - ಎಲ್ಲಾ ದೇಶಗಳು ಒಂದೇ ರೀತಿಯ ಹವಾಗುಣ ಮತ್ತು ವಾಯುಗುಣ ಹೊಂದಿರುವುದಿಲ್ಲ. ಅಲ್ಲದೆ ಪ್ರತಿಯೊಂದೊ ದೇಶವು ಕೆಲವೇ ವಸ್ತುಗಳನ್ನು ಉತ್ಪಾದಿಸುವಲ್ಲಿ ವಿಶೇಷತೆ ಮತ್ತು ವೈಶಿಷ್ಟ್ಯತೆಯನ್ನು ಹೊಂದಿರುತ್ತವೆ. ಅಂತಹ ಸರಕುಗಳು ಹೊರದೇಶಗಳಿಗೂ ಅವಶ್ಯಕವಿರುತ್ತವೆ
  2. ಉತ್ಪಾದನೆ ಮತ್ತು ವೆಚ್ಚ ಅಂಶ : ಈ ಅಂಶವೂ ಕೊಡ ಅಂತರಾಷ್ಟ್ರೀಯ ವ್ಯವಹಾರಕ್ಕೆ ಕಾರಣವಾಗಿದೆ. ಕೆಲವೊಂದು ವಸ್ತುಗಳನ್ನು ಉತ್ಪಾದಿಸಲು ಅಧಿಕ ವೆಚ್ಚ ತಗಲುತ್ತದೆ. ಆದರೆ ಅದೇ ವಸ್ತು ಮಾರುಕಟ್ಟೆಗಳಲ್ಲಿ ಅಗ್ಗದ ದರದಲ್ಲಿ ಲಭಿಸುತ್ತದೆ. ಅಂತಹ ಸನ್ನಿವೇಶಗಳಲ್ಲಿ ಉತ್ಪಾದನೆ ದುಬಾರಿಯಾಗುತ್ತದೆ.
  3. ಅನುಕರಣೆ ಮತ್ತು ತಂತ್ರಜ್ಙಾನದಲ್ಲಿ ಬದಲಾವಣೆ - ಇತ್ತೀಚೆಗೆ ದಿನಗಳಲ್ಲಿ ವೇಷಭೂಷಣಗಳಲ್ಲಿ ನಾಗರಿಕತೆಯಲ್ಲಿ ಬದಲಾವಣೆಗಳಾಗಿವೆ. ಇವುಗಳು ಬೇರೆ ದೇಶದಿಂದ ಅನುಕರಣೆಯಾಗುತ್ತಿದೆ. ಇದರಿಂದಾಗಿ ಪಾಶ್ಚಿಮಾತ್ಯ ವಸ್ತುಗಳ ವ್ಯಾಮೋಹ ಹೆಚ್ಚಾಗಿದೆ. ತಂತ್ರಜ್ಞಾನದಲ್ಲೂ ಕೊಡ ಮಹತ್ತರ ಬದಲಾವಣೆಗಳಾಗುತ್ತಿವೆ. ವಸ್ತುಗಳ ವಿನ್ಯಾಸ, ಆಕಾರ ಮತ್ತು ಗಾತ್ರಗಳಲ್ಲಿ ಭಾರೀ ಬದಲಾವಣೆಗಳಾಗುತ್ತಿವೆ. ಹೊಸ ಹೊಸ ಆವಿಸ್ಕಾರಗಳು ಹುಟ್ಟಿಕೊಳ್ಳುತ್ತಿವೆ. ಇದರಿಂದಾಗಿ ವಿದೇಶಿ ವ್ಯವಹಾರ ಬೆಳವಣಿಗೆಗೆ ಕಾರಣವಾಗಿದೆ.
ಈ ಮೇಲ್ಕಂಡ ಅಂಶಗಳಿಂದ ತಿಳಿದು ಬರುವುದೇನೆಂದರೆ ಪ್ರಪಂಚದ ಯಾವುದೇ ದೇಶವು ಸಂಪೂಣ೵ವಾಗಿ ಸ್ವಾವಲಂಬಿಯಾಗಿಲ್ಲ.  ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ, ಅವಲಂಬಿತವಾಗಿದೆ.

ಅಂತರಾಷ್ಟ್ರೀಯ ವ್ಯವಹಾರ ಮತ್ತು ದೇಶೀಯ ವ್ಯವಹಾರ ನಡುವಿನ ವ್ಯತ್ಯಾಸಗಳು

[ಬದಲಾಯಿಸಿ]
ಈ ಎರಡೂ ವ್ಯವಹಾರಗಳ ನಡುವೆ ಅನೇಕ ವಿಷಯಗಳಲ್ಲಿ ವ್ಯತ್ಯಾಸಗಳಿವೆ.  ಆದುದರಿಂದ ಈ ಎರಡರ ನಡುವಿನ ವ್ಯತ್ಯಾಸಗಳನ್ನು ತಿಳಿಯುವುದು ಸೂಕ್ತವಾಗಿದೆ.  ಸಾಮಾನ್ಯವಾಗಿ ಈ ಕೆಳಕಂಡ ವ್ಯತ್ಯಾಸಗಳನ್ನು ಕಾಣ ಬಹುದಾಗಿದೆ.

೧. ದೇಶದ ಗಡಿಯೊಳಗಿನ ವ್ಯಾಪಾರವಾಗಿದೆ ೧. ಗಡಿಯಾಚೆಗಿನ ವ್ಯಾಪಾರವಾಗಿದೆ. ೨. ವ್ಯವಹಾರ ಗಾತ್ರ ದೊಡ್ಡದಾಗಿರುತ್ತದೆ. ಒಟ್ಟು ವ್ಯಾಪಾರದಲ್ಲಿ ಶೇ.೯೦ ರಿಂದ ೨. ವ್ಯವಹಾರದ ಗಾತ್ರ ಸಣ್ಣದಾಗಿರುತ್ತದೆ. ಒಟ್ಟು ವ್ಯವಹಾರದಲ್ಲಿ ಶೇ.೫ ರಿಂದ ೧೦ ರಷ್ಟು ಇರುತ್ತದೆ.

       ೯೫ ರಷ್ಟು ಇರುತ್ತದೆ.

೩. ಒಂದೇ ದೇಶದ ನೀತಿ ನಿಯಮಗಳಿಗೆ ಒಳಪಟ್ಟರುತ್ತದೆ. ೩. ಹಲವಾರು ದೇಶಗಳ ನೀತಿನಿಯಮಗಳನ್ನು ಒಳಗೋಂಡಿರುತ್ತದೆ. ೪. ಈ ವ್ಯಾಪಾರವು ಮುಕ್ತವಾಗಿರುತ್ತದೆ. ೪. ಈ ವ್ಯಾಪಾರವು ಅನೇಕ ನೀತಿ ನಿಯಮಗಳಿಂದ ಕೊಡಿರುತ್ತದೆ. ೫. ಕಡಿಮೆ ದಾಖಲೆ ಪತ್ರಗಳನ್ನು ಒಳಗೋಂಡಿರುತ್ತದೆ. ೫. ಅನೇಕ ದಾಖಲೆ ಪತ್ರಗಳನ್ನು ಒಳಗೋಂಡಿರುತ್ತದೆ. ೬. ಸಾರಿಗೆ ವೆಚ್ಚ ಕಡಿಮೆ ೬. ಸಾರಿಗೆ ವೆಚ್ಚ ದುಬಾರಿಯಾಗಿರುತ್ತದೆ. ೭. ಸರಕುಗಳು ವಿಮೆಗೆ ಒಳಪಟ್ಟಿರಬಹುದು ಅಥವಾ ಇಲ್ಲದಿರಬಹುದು ೭. ಸರಕುಗಳನ್ನು ವಿಮೆಗೆ ಒಳಪಡಿಸಲೇಬೇಕಾಗುತ್ತದೆ. ೮. ಒಂದೇ ದೇಶದ ನಾಣ್ಯಗಳು ಚಲಾವಣೆಯಲ್ಲಿರುತ್ತದೆ. ೮. ವಿವಿಧ ದೇಶಗಳ ನಾಣ್ಯಗಳು ಚಲಾವಣೆಯಲ್ಲಿರುತ್ತವೆ. ೯. ದೇಶೀಯ ನಾಣ್ಯವನ್ನು ವಿದೇಶಿ ನಾಣ್ಯಗಳಿಗೆ ಪರಿವತಿಸುವ ಅಗತ್ಯವಿಲ್ಲ ೯. ದೇಶೀಯ ನಾಣ್ಯವನ್ನು ವಿದೇಶಿ ನಾಣ್ಯಗಳಿಗೆ ಪರಿವತಿಸುವ ಅಗತ್ಯಯಿದೆ. ೧೦. ಹೆಚ್ಚು ಕಡಿಮೆ ಏಕ ರೂಪ ಮಾರುಕಟ್ಟೆಗಳನ್ನು ಕಾಣಬಹುದು ೧೦. ಏಕ ರೂಪ ಮಾರುಕಟ್ಟೆಗಳನ್ನು ಕಾಣಲಾಗುವುದಿಲ್ಲ. ೧೧. ಒಂದೇ ರೀತಿಯ ವ್ಯಾಪಾರ ನಿಯಮಗಳನ್ನು ಹೊಂದಿರುತ್ತದೆ. ೧೧. ಏಕ ರೂಪ ವ್ಯಾಪಾರ ನಿಯಮಗಳನ್ನು ಹೊಂದಿರುವುದಿಲ್ಲ. ೧೨. ಸರಕುಗಳನ್ನು ಪರೀಕ್ಷಿಸಲು ಅವಕಾಶವಿರುತ್ತದೆ. ೧೨. ಸರಕುಗಳನ್ನು ಪರೀಕ್ಷಿಸಲು ಸಾಧ್ಯವಿಲ್ಲ. ೧೩. ಎಲ್ಲಾ ರೀತಿಯ ಸರಕುಗಳಿಗೆ ಇದು ಯೋಗ್ಯವಾಗಿದೆ. ೧೩. ಇದು ಕೇವಲ ದೀಘ೵ ಬಾಳಿಕೆಯ ಸರಕುಗಳಿಗೆ ಸೂಕ್ತವಾಗಿದೆ. ೧೪. ಕ್ರಯ- ವಿಕ್ರಯಗಾರರು ಒಂದೇ ದೇಶಕ್ಕೆ ಸೇರಿರುತ್ತಾರೆ. ೧೪. ಕ್ರಯ - ವಿಕ್ರಯಗಾರರು ವಿವಿಧ ದೇಶಗಳಿಗೆ ಸೇರಿದವರಾಗಿರುತ್ತಾರೆ.

ಅಂತರಾಷ್ಟ್ರಿಯ ವ್ಯವಹಾರದ ಪ್ರಯೋಜನಗಳು

[ಬದಲಾಯಿಸಿ]
ವಿದೇಶಿ ವ್ಯವಹಾರವು ಅನೇಕ ತೊಂದರೆ ಮತ್ತು ಕ್ಪಿಷ್ಟಕರ ನೀತಿನಿಯಮಗಳಿಂದ ಕೊಡಿದ್ದರೂ ಕೊಡ ಇದು ರಾಷ್ಟ್ರಕ್ಕೆ ಮತ್ತು ವ್ಯವಹಾರಿಕ ಸಂಸ್ಥೆಗಳಿಗೆ ಅನೇಕ ರೀತಿಯಲ್ಲಿ ಲಾಭದಾಯಕವಾಗಿದೆ.ಇದರಿಂದಾಗಿ ಅಂತರಾಷ್ಟ್ರೀಯ ವ್ಯವಹಾರವು ಬಹಳ ಪ್ರಾಮುಖ್ಯವಾಗಿದೆ.  ಇದರಿಂದ ಎರಡು ರೀತಿಯ ಲಾಭಗಳುಂಟು.
  1. ====ರಾಷ್ಟ್ರಕ್ಕೆ ಆಗುವ ಲಾಭಗಳು===
  2. ವಿದೇಶಿ ವಿನಿಮಗಳಿಕೆ -

ಅಂತರಾಷ್ಟ್ರೀಯ ವ್ಯವಹಾರವು ವಿದೇಶಿ ವಿನಿಯಮಗಳಿಸಲು ಸಹಾಯವಾಗುತ್ತದೆ. ಇದರಿಂದಾಗಿ ಬಂಡವಾಳ ಸರಕುಗಳು, ತಂತ್ರಜ್ಞಾನ, ಪೆಟ್ರೋಲಿಯಂ ಉತ್ಪನ್ನ ಮತ್ತು ಇತರೆ ಕೊರತೆ ಸರಕುಗಳನ್ನು ಆಮುದು ಮಾಡಿಕೊಳ್ಳಲು ಸಹಾಯವಾಗುತ್ತದೆ.

  1. ಸಂಪನ್ಮೂಲಗಳ ಸದ್ಭಳಕೆ -

ದೇಶದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಅಪವ್ಯಯ ಮಾಡದಂತೆ ಗರಿಷ್ಠ ಪ್ರಮಾಣದಲ್ಲಿ ಉಪಯೋಗಿಸಿಕೋಳ್ಳಲು ಸಾಧ್ಯವಾಗುತ್ತದೆ.

  1. ಭೌಗೋಳಿಕ ವೈಶಿಷ್ಟ್ಯತೆ -

ಈ ವ್ಯವಹಾರವು ಶ್ರಮವಿಭಜನೆಯಲ್ಲಿ ವೈಶಿಷ್ಟ್ಯತೆ ಮೂಡಿಸುತ್ತದೆ. ಇದರಿಂದಾಗಿ ವಿಶಿಷ್ಟವಾದ ಸರಕುಗಳನ್ನು ವಿವಿಧ ವಿನ್ಯಾಸಗಳಲ್ಲಿ ತಯಾರಿಸಬಹುದು ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ಪರಿಚಯಿಸಬಹುದು.

  1. ಮಾರುಕಟ್ಟೆ ವಿಸ್ತರಣೆ -

ಈ ವ್ಯವಹಾರವು ಮಾರುಕಟ್ಟೆಗಳನ್ನು ವಿಸ್ತರಿಸುತ್ತದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಉತ್ಪಾದನಾ ಕಾಯ೵ವನ್ನು ಕೈಗೆತ್ತಿಕೊಳ್ಳಬಹುದು. ಅಲ್ಲದೆ ಸಂಶೋಧನೆ ಮತ್ತು ತಂತ್ರಜ್ಞಾನವನ್ನು ಬಳಸಲು ಅವಕಾಶ ಕಲ್ಪಿಸುತ್ತದೆ. ಉತ್ತಮ ಸಂಬಂಧ -ಅಕ್ಕ ಪಕ್ಕದ ದೇಶಗಳೋಂದಿಗೆ ಉತ್ತಮ ಸಂಬಂಧವನ್ನು ಹೊಂದಬಹುದು. ಇದರಿಂದ ಯುದ್ಧಗಳು ಕಡಿಮೆಯಾಗಿ ಶಾಂತಿನೆಮ್ಮದಿ ನೆಲಸುತ್ತದೆ.

  1. ಉದ್ಯೋಗವಕಾಶ -

ಅಂತರಾಷ್ಟ್ರೀಯ ವ್ಯವಹಾರದಿಂದ ಉದ್ಯೋಗಗಳು ಸೃಷ್ಟಿಯಾಗಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ.

  1. ಜೀವನ ಮಟ್ಟ ಹೆಚ್ಚಳ -

ಜನ ಜೀವನ ಮಟ್ಟ ಅಂತರಾಷ್ಟ್ರೀಯ ವ್ಯವಹಾರದಿಂದ ಹೆಚ್ಚಾಗುತ್ತದೆ. ವಿವಿಧ ಬಗೆಯ ಸರಕುಸೇವೆಗಳ ಬಳಕೆ, ಉದ್ಯೋಗವಕಾಶಗಳು ಮತ್ತು ಇನ್ನಿತರೆ ಸೌಲಭ್ಯಗಳು ಲಬೀಸುವುದರಿಂದ ಜೀವನ ಮಟ್ಟ ಹೆಚ್ಛಾಗುತ್ತದೆ.

  1. ಬಂಡವಾಳ ಸರಕುಗಳಿಂದ ರಾಷ್ಟ್ರಗಳ ಅಭಿವೃದ್ಧಿ -

ಬಂಡವಾಳ ಸರಕುಗಳಾದ ಯಂತ್ರೋಪಕರಣ, ಸ್ಥಾವರ ಮತ್ತು ಆಧುನಿಕ ತಂತ್ರಜ್ಞಾನವನ್ನು ತರಿಸಿಕೊಳ್ಳಲು ಸಹಾಯವಾಗುತ್ತದೆ ಇದರಿಂದಾಗಿ ಮುಂದುವರಿಯುತ್ತಿರುವ ಮತ್ತು ಹಿಂದುಳಿದ ರಾಷ್ಟ್ರಗಳ ಅಭಿವೃದ್ಧಿಯಾಗುತ್ತದೆ.

  1. ====ವ್ಯವಹಾರ ಸಂಸ್ಥೆಗಳಿಗೆ ಆಗುವ ಲಾಭಗಳು====
  2. ಅಧಿಕಲಾಭಗಳಿಕೆ :

ಅಂತರಾಷ್ಟ್ರೀಯ ವ್ಯವಹಾರದಿಂದ ಅಧಿಕ ಲಾಭಗಳಿಸುವ ಅವಕಾಶಗಳು ದೊರೆಯುತ್ತವೆ. ಏಕೆಂದರೆ ಸ್ಥಳಿಯ / ದೇಶಿಯ ಬೆಲೆಗಳಿಗಿಂತ ವಿದೇಶಿ ಬೆಲೆಗಳು ಹೆಚ್ಚಿರುತ್ತವೆ. ಹೆಚ್ಚು ಬೆಲೆಗಳು ಎಲ್ಲಿ ದೊರೆಯುತ್ತವೆಯೋ ಆ ದೇಶಗಳಲ್ಲಿ ಮಾರಾಟ ಮಾಡಬಹುದು.

  1. ಉತ್ಪಾದನಾ ಸಾಮಥ್ಯ ಹೆಚ್ಚಳ -ಲಭ್ಯವಿರುವ ಉತ್ಪಾದನಾ ಸಾಮಥ್ಯವನ್ನು ಸಮಥ೵ವಾಗಿ ಬಳಸಿಕೊಳ್ಳಬಹುದು. ಇದರಿಂದ ಅಧಿಕ ಸರಕುಗಳನ್ನು ಉತ್ಪಾದಿಸಿ ಲಾಭಗಳಿಸಬಹುದು.
  2. ದೇಶೀಯ ಸಂಸ್ಥೆಗಳ ಬೆಳವಣಿಗೆ -

ವಿದೇಶಿ ಮಾರುಕಟ್ಟೆಗಳಲ್ಲಿ ಸರಕುಗಳಿಗೆ ಬೇಡಿಕೆ ಸೃಷ್ಟಿಸಿ ಸಂಸ್ಥೆಗಳು ಬೆಳೆವಣಿಗೆಯಾಗುತ್ತವೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ಕಡಿಮೆ ಅವಕಾಶಗಳು ಸಿಗುವುದರಿಂದ ಬೆಳವಣಿಗೆ ಕುಂಠಿತವಾಗುತ್ತದೆ. ವಿದೇಶೀ ಮಾರುಕಟ್ಟೆಗಳಲ್ಲಿ ವಿಪುಲ ಅವಕಾಶಗಳಿರುವುದರಿಂದ ಅವುಗಳನ್ನು ಸದ್ಬಳಕೆ ಮಾಡಿಕೊಂಡು ಶ್ರೀಘ್ರವಾಗಿ ಬೆಳವಣಿಗೆ ಹೊಂದಬಹುದು.

  1. ಕಾಯ೵ಕ್ಷೇತ್ರ ವಿಸ್ತರಣೆ -

ವ್ಯವಹಾರ ಸಂಸ್ಥೆಗಳು ತ್ಮ ಕಾಯ೵ಕ್ಷೇತ್ರವನ್ನು ವಿಶಾಲಗೊಳಿಸಿಕೊಂಡು ತಮ್ಮ ದೃಷ್ಟಿಯನ್ನು ವಿದೇಶೀ ವ್ಯವಹಾರಗಳಿಗೆ ಕೇಂದ್ರೀಕರಿಸಬಹುದು. ಅಂತರಾಷ್ಟ್ರೀಯ ವ್ಯವಹಾರಗಳ ಅಗತ್ಯತೆಗಳನುಸಾರ ಉತ್ಪಾದನೆ ಮತ್ತು ಮಾರುಕಟ್ಟೆಗಳನ್ನು ಕಂಡುಕೊಳ್ಳಬಹುದು.

  1. ಹೊಸ ಸಂಸ್ತೆಗಳ ಸ್ಥಾಪನೆಗೆ ಅವಕಾಶ

ದೇಶೀಯ ಕಂಪನಿಗಳು ವಿದೇಶೀ ಮಾರುಕಟ್ಟೆಗಳಲ್ಲಿ ಬೆಳೆಯಲು ಅನುಕೂಲವಾಗುತ್ತದೆ. ಇದರಿಂದಾಗಿ ಯುವಕರು, ಬಂಡವಾಳಶಾಃಇಗಳು, ಬುದ್ಧಿವಂತರು, ಹೊಸ ಹೊಸ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶವಾಗುತ್ತದೆ.


ಅಂತರಾಷ್ಟ್ರೀಯ ವ್ಯವಹಾರದಲ್ಲಿನ ಸಮಸ್ಯೆಗಳು

[ಬದಲಾಯಿಸಿ]
  1. ವಿದೇಶೀ ವ್ಯವಹಾರದಲ್ಲಿ ಅನೇಕ ರೀತಿಯ ಸಮಸ್ಯೆಗಳು ತಲೆದೋರುತ್ತವೆ. ಪ್ರಮುಖವಾದವುಗಳು ಈ ಕೆಳಕಂಡಂತಿವೆ.

ಅವಶ್ಯಕ ಸರಕುಗಳಿಗೂ ದೇಶವನ್ನು ಪರಾವಲಂಬಿಯಾಗಿಸುತ್ತದೆ. ಇಂತಹ ಪರಾವಲಂಬನೆ ವಿಶೇಷವಾಗಿ ಯುದ್ಧ ಸಮಯದಲ್ಲಿ ಒಳಿತಲ್ಲ. ಇದರಿಂದಾಗಿ ದೇಶ ಸಂಕಷ್ಟ ಎದುರಿಸಬೇಕಾಗುತ್ತದೆ.

  1. ರಾಷ್ಟ್ರೀಯ ಸಂಪನ್ಮೂಲಗಳ ದುಬ೵ಳಕೆ ಹೆಚ್ಚಿ ಸಂಪನ್ಮೂಲಗಳು ಬರಿದಾಗುತ್ತವೆ.
  2. ವಿದೇಶಿ ವ್ಯವಹಾರವು ತೀವ್ರ ಪೈಪೋಟಿ ಸೃಷ್ಟಿಸುತ್ತದೆ. ಇದರಿಂದಾಗಿ ದೇಶೀಯ ಮತ್ತು ಸಣ್ಣ ಉದ್ದಿಮೆಗಳು ಅವನತಿಹೊಂದುತ್ತವೆ. ಇದರಿಂದಾಗಿ ನಿರುದ್ಯೋಗ ಸಮಸ್ಯೆ ಉಲ್ಬಣಗೊಳ್ಳುತ್ತದೆ.
  3. ಅಂತರಾಷ್ಟ್ರಿಯ ವ್ಯವಹಾರವು ಐಶಾರಾಮಿ ಸರಕುಗಳನ್ನು ಖರೀದಿಸುವಂತೆ ಪ್ರೆರೇಪಿಸುತ್ತದೆ. ಆದರೆ ಬಹುಪಾಲು ಜನರು ಇವುಗಳನ್ನು ಇಚ್ಚಿಸುವುದಿಲ್ಲ.ಕಚ್ಚಾ ಪದಾರ್ಥಗಳನ್ನು ರಫ್ತು ಮಾಡುವ ದೇಶವು ಸಂಪೂಣ೵ವಾಗಿ ಬರಿದಾಗುತ್ತದೆ. ಮತ್ತು ಆ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ.
  4. ಅಂತರಾಷ್ಟ್ರೀಯ ವ್ಯಾಪಾರವು ಕೇವಲ ಏಕಮುಖ ಅಭಿವೃದ್ಧಿಯನ್ನು ಸಾಧಿಸುತ್ತದೆಯೇ ಹೊರತು ಸವಾ೵ಂಗೀಣ ಅಭಿವೃದ್ಧಿಯಾಗದು. ಯಾವ ಕ್ಷೇತ್ರದಲ್ಲಿ ವಿಶೇಷತೆ ಮತ್ತು ನೈಪುಣ್ಯತೆ ಹೊಂದಿರುತ್ತದೆಯೋ ಆಕ್ಷೇತ್ರಕ್ಕೆ ಆದ್ಯತೆ ನೀಡಿ, ಉಳಿದ ಕ್ಷೇತ್ರಗಳನ್ನು ನಿಲ೵ಕ್ಷಿಸುತ್ತದೆ.
  5. ಇದು ಅನೇಕ ಕಾನೂನಿನ ಅಡಚಣೆಗಳಿಂದ ಕೂಡಿದೆ. ಆದುದರಿಮದ ಇದರಲ್ಲಿ ಪಾಲ್ಗೋಳ್ಳಲು ಹಿಂಜರಿಯುತ್ತಾರೆ.
  6. ಇದು ಬೇಗನ ಕೆಡುವ ಸರಕುಗಳಿಗೆ ಯೋಗ್ಯವಾಗಿಲ್ಲ.
  7. ಸರಕುಗಳನ್ನು ಪರೀಕ್ಷಿಸಲು ಸಾಧ್ವಿಲ್ಲ. ಕೇವಲ ವಿವರಣೆಯ ಆಧಾರದ ಮೇಲೆ ಸರಕುಗಳನ್ನು ಖರೀದಿಸಬೇಕು, ಸರಿಹೊಂದುತ್ತದೆಯೋ ಅಥವಾ ಇಲ್ಲವೋ ಎನ್ನುವುದರ ಬಗ್ಗೆ ಭೀತಿ ಇರುತ್ತದೆ.
  8. ಸರಕು ಪಡೆಯಲು ದೀಘ೵ಕಾಲ ಬೇಕು. ಅಂದರೆ ಬೇಕೆನಿಸಿದಾಗ ಸರಕುಗಳು ಲಬಿಸುವುದಿಲ್ಲ.
  9. ವಿದೇಶಿ ವಿನಿಮಯ ದೊರದಿಸುವುದು ಕಷ್ಟಕರ
  10. ಈ ವ್ಯವಹಾರ ಶಿಕ್ಷಣವಂತರಿಗೆ ಮಾತ್ರ ಸಾಧ್ಯ ಅವಿದ್ಯಾವಂತವರಿಗೆ ಇದು ಸೂಕ್ತವಲ್ಲ.

ಅಂತರಾಷ್ಟ್ರೀಯ ವ್ಯವಹಾರದ ವ್ಯಾಪ್ತಿ

[ಬದಲಾಯಿಸಿ]

ಈಗಾಗಲೇ ನಮಗೆ ತಿಳಿದಿರುವಂತೆ ಇದರ ವ್ಯಾಪ್ತಿ ಬಹಳ ವಿಶಾಲವಾಗಿದೆ. ಅಂತರಾಷ್ಟ್ರೀಯ ವ್ಯವಹಾರವು ಅಂತರಾಷ್ಟ್ರೀಯ ವ್ಯಾಪಾರಕ್ಕಿಂತ ವಿಶಾಲವಾಗಿದೆ. ಅಂತರಾಷ್ಟ್ರೀಯ ವ್ಯಾಪಾರವು ಕೇವಲ ಸರಕುಗಳ ಕ್ರಯ - ವಿಕ್ರಯಕ್ಕೆ ಸಂಬಂಧಿಸಿದೆ. ಆದರೆ ಅಂತರಾಷ್ಟ್ರೀಯ ವ್ಯವಹಾರವು ಸರಕುಗಳ ಜೊತೆಗೆ ಸೇವೆಗಳ ಕ್ರಯ ವಿಕ್ರಯಗಳಿಗೂ ಸಂಬಂಧಿಸಿದೆ. ಇದರ ವ್ಯಾಪ್ತಿಯನ್ನು ಈ ಕೆಳಕಂಡ ಆಂಶಗಳಿಂದ ತಿಳಿಯಬಹುದಾಗಿದೆ.

  1. ಸರಕುಗಳ ಆಮುದು ರಫ್ತು :

ವಿದೇಶಿ ವ್ಯವಹಾರವು ಗೋಚರ ಸರಕುಗಳ ಕ್ರಯ ವಿಕ್ರಯಗಳಿಗೆ ಸಂಬಂಧಿಸಿದೆ. ಇದನ್ನು ಸಂಬಂಧಿಸಿರುವುದಿಲ್ಲ.

  1. ಸೇವೆಗಳ ಆಮದು ರಫ್ತು :

ಅಗೋಚರ ಸೇವೆಗಳಿಗೆ ಸಂಬಂಧಿಸಿದೆ. ಇದನ್ನು ಸೇವೆಗಳ ವ್ಯವಹಾರ ಎಂದೂ ಕರೆಯುತ್ತಾರೆ. ಪ್ರವಾಸೋದ್ಯಮ, ಊಟ ಮತ್ತು ವಸತಿ, ಮನರಂಜನೆ, ಸುಸಜ್ಜಿತ ಸಾರಿಗೆ, ಸಂವಹನ (ಅಂಚೆ, ತಂತಿ,ದೂರವಾಣಿ, ಫ್ಯಾಕ್ಸ್ ಕೊರಿಯರ್್ ಸೇವೆ ಇತ್ಯಾದಿ) ನಿಮಾ೵ಣ ಮತ್ತು ಇಂಜಿನಿಯರಿಂಗ್್ ಸೇವೆ , ವೃತ್ತಿಪರ ಸೇವೆಗಳು ಮಾರಾಟ ಪ್ರಕಿಯೆ (ಠೋಕ ವ್ಯಾಪಾರ, ಚಿಲ್ಲರೆ ವ್ಯಾಪಾರ, ಸಂಶೋಧನೆ, ಜಾಹೀರಾತು) ಶಿಕ್ಷಣ ಮತ್ತು ಹಣಕಾಸು ಸೇವೆಗಳು.

  1. ಅನುಮತಿ ಮತ್ತು ಗುತ್ತಿಗೆ

ಅನುಮತಿ ನೀಡಿಕೆ ಏಂದರೆ " ನಮ್ಮ ಹಕ್ಕು ಅಥವಾ ಸನ್ನದು ಅಥವಾ ವ್ಯಾಪಾರ ರಹಸ್ಯಗಳನ್ನು ಮತ್ತು ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ವಿದೇಶಿಯರು ಸರಕುಗಳನ್ನು ಉತ್ಪಾದಿಸುವುದು ಎಂದಥ೵ " ಇದಕ್ಕಾಗಿ ಅವರು ನಮಗೆ ನಿದಿ೵ಷ್ಠ ಶುಲ್ಕ ಅಥವಾ ಹಣವನ್ನು ನೀಡುತ್ತಾರೆ. ಹೊರಗುತ್ತಿಗೆ ವ್ಯವಹಾರವು ಅನುಮತಿ ನೀಡಿಕೆಗೆ ಸರಿಸಮಾನವಾದುದು. ಅನುಮತಿ ನೀಡಿಕೆಯು ಸರಕುಗಳಿಗೆ ಸಂಬಂದಿಸಿರುತ್ತದೆ. ಆದರೆ ಹೊರಗುತ್ತಿಗೆಯು ಸೇವೆಗಳಿಗೆ ಸಂಬಂಧಿಸಿರುತ್ತದೆ. ಇದು ಅಂತರಾಷ್ಟ್ರೀಯ ವ್ಯವಹಾರದಲ್ಲಿ ಭಾಗವಹಿಸುವ ಒಂದು ವಿಧಾನವಾಗಿದೆ.

  1. ವಿದೇಶಿ ಹೊಡಿಕೆ :

ಇದೂ ಕೊಡ ವಿದೇಶಿ ವ್ಯವಹಾರ ಒಂದು ರೂಪವಾಗಿದೆ. ಹಣಕಾಸಿನ ಪ್ರತಿಫಲಕ್ಕಾಗಿ ವಿದೇಶಗಳಲ್ಲಿ ಬಂಡವಾಳವನ್ನು ಹೊಸುವುದಕ್ಕೆ ವಿದೇಶಿ ಹೊಡಿಕೆ ಎನ್ನುವರು. ಇದರಲ್ಲಿ ಎರಡು ವಿಧಗಳು. ಅವುಗಳೆಂದರೆ :

ನೇರ / ಪ್ರತ್ಯಕ್ಷ ಹೊಡಿಕೆ

[ಬದಲಾಯಿಸಿ]

ನೇರ / ಪ್ರತ್ಯಕ್ಷ ಹೊಡಿಕೆ ಎಂದರೆ ವಿದೇಶಿಗಳಲ್ಲಿ ಉತ್ಪಾದನೆ ಮತ್ತು ಮಾರಾಟ ಕ್ಷೇತ್ರಗಳಲ್ಲಿ ಬಂಡಾವಳವನ್ನು ತೊಡಗಿಸುವುದು. ಇದನ್ನು ವಿದೇಶಿ ನೇರ ಬಂಡವಾಳ ಹೊಡಿಕೆ ಎಂದೂ ಕರೆಯುತ್ತಾರೆ.ವ್ಯವಹಾರವನ್ನು ನಿಯಂತ್ರಿಸುವ ಹಕ್ಕು ಇದಾಗಿರುತ್ತದೆ.

ಪರೋಕ್ಷ ಹೊಡಿಕೆ

[ಬದಲಾಯಿಸಿ]

ಪರೋಕ್ಷ ಹೊಡಿಕೆ  : ಎಂದರೆ ವಿದೇಶಿ ಕಂಪನಿಗಳ ಶೇರುಗಳ ಮೇಲೆ ಬಂಡವಾಳವನ್ನು ತೊಡಗಿಸುವುದು ಮತ್ತು ವಿದೇಶಿಕಂಪನಿಗಳಿಗೆ ಸಾಲ ನೀಡುವುದಾಗಿದೆ. ಇದರಿಂದ ನಿಯಮಿತವಾಗಿ ಲಾಭಾಂಶ ಮತ್ತು ಬಡ್ಡಿ ಪಡೆಯಬಹುದು.