ಸದಸ್ಯ:Thirumala.k/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಬಡ್ಡಿ ಕಬಡ್ಡಿ

ಭಾರತದ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಸುಮಾರು ೪೦೦೦ ವರ್ಷ ಪುರಾತನವಾದದ್ದು. ಭಾರತದ ದೇಸೀ ಕ್ರೀಡೆ ಕಬಡ್ಡಿಯು ದೇಶಕ್ಕೆ ಸಾಕಷ್ಟು ಹೆಗ್ಗಳಿಕೆ ತಂದುಕೊಟ್ಟಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಗ್ರಾಮೀಣ ಜನರಿಗೆ ಇಷ್ಟ.

ಕಬಡ್ಡಿ ಹಲವಾರು ಹೆಸರುಗಳಿಂದ ಪ್ರಚಲಿತ. ಅವುಗಳಲ್ಲಿ , ಕಬಡ್ಡಿ ,ಹುತುತು, ಸಡುಗುಡು, ಗುಡುಗುಡು, ಪಲಿನ್ಜಡುಗಿದು, ಹಾಗೂ ಸಡುಗೂಡತ್ತಿ .


ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಆಡುತ್ತಾರೆ.


   1.ಇಂಟರ್ ನ್ಯಾಶನಲ್ ಕಬಡ್ಡಿ ಫೆಡರೇಶನ್ (ಐಕೆಫ್)
   2.ಕರ್ನಾಟಕ ರಾಜ್ಯ ಕಬಡ್ಡಿ ಸಂಸ್ಥೆ
   3.ಕಬಡ್ಡಿ ಅಸೋಸಿಯೇಶನ್ ಕಪ್

17ನೇ ಏಷ್ಯನ್‌ ಕ್ರೀಡಾಕೂಟ 2014-ಕಬಡ್ಡಿ

17ನೇ ಏಷ್ಯನ್‌ ಕ್ರೀಡಾಕೂಟ 2014 ರಲ್ಲಿ ಕರ್ನಾಟಕ

   ಮಹಿಳಾ ಕಬಡ್ಡಿ ತಂಡಕ್ಕೆ ಕನ್ನಡತಿ ತೇಜಸ್ವಿನಿ ಬಾಯಿ ನಾಯಕಿ. ರೈಲ್ವೆಯಲ್ಲಿ ಉದ್ಯೋಗಿ­ಯಾಗಿರುವ ಕರ್ನಾಟಕದ ಮಮತಾ ಪೂಜಾರಿ, ಕೆಎಸ್‌ಪಿಯಲ್ಲಿರುವ ಸುಷ್ಮಿತಾ ಪವಾರ್ ಮತ್ತು ಜಯಂತಿ ಅವರು ತಂಡದಲ್ಲಿದ್ದರು.17ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಎರಡು ಸ್ವರ್ಣ ಪದಕಗಳು ಲಭ್ಯವಾಗಿದ್ದು, ಪುರುಷರ ಮತ್ತು ಮಹಿಳೆಯರ ಕಬಡ್ಡಿ ತಂಡಗಳು ಇರಾನ್ ತಂಡಗಳನ್ನು ಸೋಲಿಸಿ ಎರಡೂ ಸ್ವರ್ಣ ಪದಕವನ್ನು ಮುಡಿಗೇರಿಸಿಕೊಂಡಿವೆ.


   ಏಷ್ಯನ್ ಗೇಮ್ಸ್‌ನಲ್ಲಿ ಸತತ ಎರಡನೇ ಬಾರಿಗೆ ಬಂಗಾರ ಗೆದ್ದಿರುವ ಭಾರತ ಮಹಿಳಾ ತಂಡ ಕೂಡ ವಿಶ್ವ ಕಪ್ ಕಬಡ್ಡಿಯಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡು ಪ್ರಭುತ್ವ ಮೆರೆದಿದೆ.
   2012ರಲ್ಲಿ ಪಂಜಾಬ್‌ನಲ್ಲಿ ನಡೆದ ಮೊದಲ ವಿಶ್ವಕಪ್‌ನಲ್ಲಿ ಇರಾನ್ ತಂಡವನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡ ಕರ್ನಾಟಕದ ಮಮತಾ ಪೂಜಾರಿ ಸಾರಥ್ಯದ ಭಾರತ ತಂಡ 2013ರಲ್ಲಿ ನಡೆದ ಟೂರ್ನಿ ಯಲ್ಲೂ ನ್ಯೂಜಿಲೆಂಡ್ ತಂಡವನ್ನು ಸದೆಬಡಿದು ದ್ವಿತೀಯ ಬಾರಿಗೆ ಪ್ರಶಸ್ತಿ ತಮ್ಮದಾಗಿಸಿಕೊಂಡಿದೆ.

ಕಬಡ್ಡಿ ಪದಕದ ಪಟ್ಟಿ

ಕಬಡ್ಡಿ ಪದಕದ ಪಟ್ಟಿ-2014 ನವೆಂಬರ್ ಶ್ರೇಣಿ/Rank ದೇಶ/Nation ಚಿನ್ನ/Gold ಬೆಳ್ಳಿ/Silver ಕಂಚು/Bronze ಒಟ್ಟು/Total 1 ಭಾರತ 9 0 0 9 2 ಬಾಂಗ್ಲಾದೇಶ 0 3 4 7 3 ಇರಾನ್ 0 3 1 4 4 ಪಾಕಿಸ್ತಾನ 0 2 5 7 5 ಥಾಯ್ ಲೆಂಡ್ 0 1 1 2 6 ಜಪಾನ್ 0 0 1 1 7 ಕೊರಿಯಾ 0 0 1 1

    • ಒಟ್ಟು 9 9 13 31


   2004ರಲ್ಲಿ ಆರಂಭವಾದ ವಿಶ್ವಕಪ್ ಕಬಡ್ಡಿ ಟೂರ್ನಿ 2005 ಮತ್ತು 2006ರನ್ನು ಹೊರತುಪಡಿಸಿ ಈವರೆಗೂ ಆರು ಬಾರಿ ನಡೆದಿದೆ. ವಾರ್ಷಿಕ ಟೂರ್ನಿ ಇದಾಗಿದ್ದು, ಭಾರತ ಸತತ ಆರು ಬಾರಿಯು ಚಾಂಪಿ ಯನ್ ಪಟ್ಟ ಅಲಂಕರಿಸಿದೆ.ಅದರಲ್ಲೂ 2010, 2012,2013ರಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಭಾರತ ಹೊರತುಪಡಿಸಿದರೆ, ಪಾಕಿಸ್ತಾನ ಮತ್ತು ಇರಾನ್ ಕ್ರಮುವಾಗಿ ಮೂರು ಹಾಗೂ ಎರಡು ಬಾರಿ ರನ್ನರ್‌ಅಪ್ ಸ್ಥಾನಗಳಿಸಿದ್ದು, ಭಾರತಕ್ಕೆ ಸವಾಲೊಡ್ಡಬಲ್ಲ ತಂಡಗಳಾಗಿವೆ.
       2012ರಲ್ಲಿ ಆರಂಭವಾದ ಮಹಿಳಾ ಟೂರ್ನಿ 2013ರಲ್ಲಿ ಎರಡನೇ ಬಾರಿಗೆ ನಡೆದಿದ್ದು, ಭಾರತವೇ ಇಲ್ಲಿಯೂ ಪ್ರಭುತ್ವ ಸಾಧಿಸಿದೆ.


ಈಗ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಆಟದ ಹಿನ್ನೆಲೆ ಇರುವಂಥ ಚಿತ್ರವೊಂದು ಇದೀಗ ಕನ್ನಡದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ನೋಡಿ