ಸದಸ್ಯ:THUNGAGOWDA/sandbox
ತುಂಗಾ ಗೌಡ ಮೊದಲ ವರ್ಷ ಬಿ.ಕಾಂ (ಸಂತ ಅಲೋಶಿಯಸ್ ಕಾಲೇಜು,ಮಂಗಳೂರು)
ಮುನ್ನಾರ್ - ಸಾಮರಸ್ಯದಿಂದ ಕೂಡಿರುವ ಪ್ರಕೃತಿಯ ಸ್ವರ್ಗ
ಮುನ್ನಾರ್ - ಸಾಮರಸ್ಯದಿಂದ ಕೂಡಿರುವ ಪ್ರಕೃತಿಯ ಸ್ವರ್ಗ
ಇಡುಕ್ಕಿ ಜಿಲ್ಲೆಯಲ್ಲಿರುವ ಮುನ್ನಾರ್ ನಂಬಲಸಾಧ್ಯವಾದಷ್ಟು ಅದ್ಭುತವಾಗಿರುವ ಒಂದು ಮನಮೋಹಕ ಗಿರಿಧಾಮವಾಗಿದೆ. ಈ ಗಿರಿಧಾಮವು ಪಶ್ಚಿಮ ಘಟ್ಟದ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಇದು ಬೀಸಿ ಬರುವ ಗಾಳಿಗೆ ತೆರೆದುಕೊಂಡಿರುವ ಭೂಭಾಗದಿಂದ ಸುತ್ತುವರೆದಿದೆ. “ಮುನ್ನಾರ್” ಎಂದರೆ “ಮೂರು ನದಿಗಳು” ಎಂದರ್ಥ. ಈ ಪ್ರಾಂತ್ಯವು ಮಧುರಪುಳ, ನಲ್ಲತಣ್ಣಿ ಮತ್ತು ಕುಂಡಲಿ ಎಂಬ ಮೂರು ನದಿಗಳು ಹರಿಯುವ ವಿಶಿಷ್ಟವಾದ ಪ್ರದೇಶವಾಗಿದೆ.ತಮಿಳುನಾಡು ಗಡಿಯಲ್ಲಿರುವ ಮುನ್ನಾರ್ ಪಟ್ಟಣವು ಈ ನೆರೆಯ ರಾಜ್ಯದೊಂದಿಗೆ ಹಲವಾರು ಸಾಂಸ್ಕೃತಿಕ ಕೊಂಡಿಗಳನ್ನು ಉಳಿಸಿಕೊಂಡಿದೆ. ಪರ್ವತಭಾಗಗಳನ್ನು ಹೊಂದಿ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಮುನ್ನಾರ್ ಕೇರಳ ರಾಜ್ಯಕ್ಕೆ ವಿಶ್ವದೆಲ್ಲೆಡೆಯಿಂದ ಮನ್ನಣೆ ದೊರೆಯಲು ಬಹುಪಾಲು ಕೊಡುಗೆಯನ್ನು ನೀಡಿದೆ. ದೇಶ – ವಿದೇಶಗಳಿಂದ ಈ ಸ್ಥಳಕ್ಕೆ ಪ್ರವಾಸಿಗರು ಮತ್ತು ಕುಟುಂಬಸ್ಥರು ತಮ್ಮ ಕುಟುಂಬದ ಸದಸ್ಯರುಗಳ ಜೊತೆಗೆ ಕಾಲ ಕಳೆಯಲು ಆಗಮಿಸುತ್ತಿರುತ್ತಾರೆ.