ಸದಸ್ಯ:T.G.Jhonson/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

"ರಹಮತ್ ತರಿಕೆರೆ"


   ರಹಮತ್ ತರೀಕೆರೆಯವರು ತಮ್ಮ ಓದಿನ ದಿನಗಳಲ್ಲೇ ‘ಪ್ರಪಂಚ’, ‘ಜನಪ್ರಗತಿ’, ‘ಅಂಚೆವಾರ್ತೆ’ಗಳಂಥ ಪತ್ರಿಕೆಗಳಲ್ಲಿ ಹೃದಯಸ್ಪರ್ಶಿ ಕಥೆ ಕವಿತೆಗಳನ್ನು ಪ್ರಕಟಿಸಿ ತರೀಕೆರೆ ಸೀಮೆಯ ಜನರ ಹೆಮ್ಮೆಗೆ ಪಾತ್ರರಾಗಿದ್ದರು.
   ಅವರು ಆಗಲೇ ‘ಐವರು ಹೇಳಿದ ಜನಪದ ಕಥೆಗಳು’ ಎಂಬ ಸಂಪಾದನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸುವಷ್ಟು ಬೆಳೆದಿದ್ದರು. ಎಂ.ಎ. ಸೇರುವುದರೊಳಗಾಗಿ ದಾರಿ ಖಚಿತವಾಗಿತ್ತು. ವಿದ್ಯಾರ್ಥಿ ಬದುಕಿನ ಜೀವನದುದ್ದಕ್ಕೂ ವಿದ್ಯಾಗುರುಗಳಾದ ಗೋವಿಂದರಾಜು, ಹಾಲೇಶ್, ನೊಸಂತಿ, ಎಚ್. ಎಂ. ಚೆನ್ನಯ್ಯ, ಪ್ರಭುಶಂಕರ, ಜಿ.ಎಚ್ ನಾಯಕ ಮೊದಲಾದವರು ನೀಡಿದ ನೈತಿಕ ಬೆಂಬಲ ಅವರನ್ನು ಬೆಳೆಸಿತು.
   ‘ಪ್ರತಿಸಂಸ್ಕೃತಿ’, ‘ಮರದೊಳಗಿನ ಕಿಚ್ಚು’, ‘ಸಂಸ್ಕೃತಿ ಚಿಂತನೆ’, ‘ಕತ್ತಿಯಂಚಿನ ದಾರಿ’, ‘ಚಿಂತನೆಯ ಪಾಡು’, ‘ಕರ್ನಾಟಕದ ಸೂಫಿಗಳು ಹಾಗೂ ಕರ್ನಾಟಕದ ನಾಥಪಂಥ’ ಮುಂತಾದವು ರಹಮತ್ ತರೀಕೆರೆ ಅವರ ವಿಮರ್ಶಾ ಗ್ರಂಥಗಳಾಗಿವೆ. ‘ಮಾತು ತಲೆ ಎತ್ತುವ ಬಗೆ’, ‘ಇಲ್ಲಿ ಯಾರೂ ಮುಖ್ಯರಲ್ಲ’ ಮುಂತಾದವು ಅವರ ಸಂಶೋಧನಾ ಕೃತಿಗಳು. ‘ಅಂಡಮಾನ್ ಕನಸು’ ಪ್ರವಾಸ ಕಥನ. ‘ಸಾಂಸ್ಕೃತಿಕ ಅಧ್ಯಯನ’, ‘ಧರ್ಮಪರೀಕ್ಷೆ’, 'ವಸಾಹತು ಪ್ರಜ್ಞೆ ಮತ್ತು ವಿಮೋಚನೆ’, ‘ಧರ್ಮವಿಶ್ವಕೋಶ’, ‘ಹೊಸ ತಲೆಮಾರಿನ ತಲ್ಲಣ’, ‘ಕವಿರಾಜಮಾರ್ಗ ಸಾಂಸ್ಕೃತಿಕ ಮುಖಾಮುಖಿ’, ‘ಅಕ್ಕನ ವಚನಗಳು ಸಾಂಸ್ಕೃತಿಕ ಮುಖಾಮುಖಿ’, ‘ಕುಮಾರವ್ಯಾಸ ಸಾಂಸ್ಕೃತಿಕ ಮುಖಾಮುಖಿ’, ‘ಇಂಗ್ಲಿಷ್ ಗೀತೆಗಳು ಸಾಂಸ್ಕೃತಿಕ ಮುಖಾಮುಖಿ’, ‘ಮಲೆಗಳಲ್ಲಿ ಮದುಮಗಳು ಸಾಂಸ್ಕೃತಿಕ ಮುಖಾಮುಖಿ’, ‘ತನ್ನತನದ ಹುಡುಕಾಟ’ ಮುಂತಾದವು ಅವರ ವೈಶಿಷ್ಟ್ಯಪೂರ್ಣ ಚಿಂತನ ಕೃತಿಗಳು. ‘ಲೋಕವಿರೋಧಿಗಳ ಜತೆಯಲ್ಲಿ’, ‘ಐವರು ಹೇಳಿದ ಜನಪದ ಕಥೆಗಳು’ ಮುಂತಾದವು ಸಂಪಾದಿತ ಕೃತಿಗಳು.