ವಿಷಯಕ್ಕೆ ಹೋಗು

ಸದಸ್ಯ:Swetha thippeswamy/ನನ್ನ ಪ್ರಯೋಗಪುಟ ನ್ನು ಸೃಷ್ಟಿಸಲಾಗುತ್ತಿದೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಲೆನಾಡು ಕರ್ನಾಟಕದಲ್ಲಿ ಕಂಡುಬರುವ ಪಶ್ಚಿಮ ಘಟ್ಟಗಳು ಇರುವ ಪ್ರದೇಶಗಳನ್ನು ಮಲೆನಾಡು ಎನ್ನುತ್ತಾರೆ. ವರ್ಷದ ಬಹುಪಾಲು ದಿನ ಮಳೆ ಸುರಿಯುತ್ತಿರುವದರಿಂದ ಮತ್ತು ನಿತ್ಯ ಹರಿದ್ವರ್ಣ ಕಾಡುಗಳಿಂದ ಆವೃತವಾಗಿರುವ ಬೆಟ್ಟಗಳು ಕೂಡಿರುವದರಿಂದ ಮಲೆನಾಡು ಎಂಬ ಹೆಸರು ಬಂದಿದೆ. ಶಿವಮೊಗ್ಗ ವನ್ನು ಮಲೆನಾಡಿನ ಹೆಬ್ಬಾಗಿಲು ಎಂದು ಕರೆಯುತ್ತಾರೆ. ಮಲೆನಾಡಿನ ಆಹಾರ ಕರಿಮೀನು ಚಟ್ನಿ: ಮಳೆಗಾಲ ಶುರುವಾಗಿ ಜಮೀನಿನ ನೀರು ಹಳ್ಳಕ್ಕೆ ಬಿದ್ದು ಹಳ್ಳದ ನೀರು ಹೊಳೆಗೆ ಸೇರಲು ಶುರುವಾದಾಗ ಹೊಳೆಯಲ್ಲಿರುವ ಮೀನುಗಳು ನೀರಿನ ವಿರುದ್ದ ದಿಕ್ಕಿಗೆ ಈಜುತ್ತಾ ಹೊಳೆಯಿಂದ ಹಳ್ಳಕ್ಕೆ, ಹಳ್ಳದಿಂದ ಜಮೀನಿಗೆ ಮೊಟ್ಟೆ ಇಡಲು ಬಂದು ಸೇರುತ್ತವೆ. ಒಂದೆರಡು ದಿನ ಜೋರು ಮಳೆಯಾದಾಗ ಮಲೆನಾಡಿಗರು ನೀರು ಬೀಳುವ ಜಾಗಗಳಲ್ಲಿ ಇರುಳಿನ ಹೊತ್ತು ಕಾದು ಕುಳಿತು ಈ ರೀತಿ ಬಂದು ಸೇರುವ ಮೀನುಗಳನ್ನು ಬೇಟೆಯಾಡುತ್ತಾರೆ, ಇವುಗಳಿಗೆ ಹತ್ಮೀನು(ಹತ್ತುವ ಮೀನು) ಎಂದು ಕರೆಯುತ್ತಾರೆ.