ಸದಸ್ಯ:Swathi Abhyankar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಸ್ವಾತಿ. ನನ್ನ ತಂದೆ ಶ್ರೀ ಪುರುಷೋತ್ತಮ ಅಭ್ಯಂಕರ್, ಇವರು ಪಣಂಬೂರ್ನ ಕೆ.ಐ.ಒ.ಸಿ.ಎಲ್ ನಲ್ಲಿ ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ನನ್ನ ತಾಯಿ ಸುಮಂಗಲಾ ಗೃಹಿಣಿ. ಅಣ್ಣ ಶರತ್ ಅಭ್ಯಂಕರ್ ಇಂಜಿನಿಯರಿಂಗ್ ಪದವಿಧರನಾಗಿದ್ದು ಟೆಕ್ ಮಹಿಂದ್ರ ಕಂಪನಿಯಲ್ಲಿ ಉದ್ಯೋಗಿ. ಪ್ರಸ್ತುತ ಮಂಗಳೂರಿನ ಕಾವೂರು ಗಾಂಧಿನಗರದಲ್ಲಿ ವಾಸಿಸುತ್ತಿದ್ದೇವೆ. ನನ್ನ ಮೂಲ ಊರು ದ. ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ.

ನನ್ನ ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದಲ್ಲಿ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ ಶಾರದಾ ಕಾಲೇಜ್ ನಲ್ಲಿ ಪಡೆದಿರುತ್ತೇನೆ. ಈಗ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಎಸ್ಸಿ. ಪದವಿ ವ್ಯಾಸಂಗ ಮಾಡುತ್ತಿದ್ದೇನೆ.

ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಆಸಕ್ತಿ ಹೊಂದಿರುತ್ತೇನೆ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಶ್ರೀ  ವೆಂಕಟೇಶ್ ಚಿಪಳೂಣ್ಕರ್ ಮತ್ತು ಶ್ರೀ ಯತಿರಾಜ್ ಆಚಾರ್ಯ ಇವರಲ್ಲಿ ಅಭ್ಯಾಸ ಮಾಡಿರುತ್ತೇನೆ. ನನ್ನ ಇತರ ಹವ್ಯಾಸ ಗಳೆಂದರೆ ನೃತ್ಯ, ಅಡುಗೆ, ಕರಕುಶಲ ವಸ್ತುಗಳ ತಯಾರಿ, ಖಗೋಳ ವಿಜ್ಞಾನ, ಆಕಾಶ ವೀಕ್ಷಣೆ, ಮತ್ತು ತಂತ್ರಜ್ಞಾನ ಸಂಶೋಧನೆ.

ಮುಂದೆ ಸ್ನಾತಕೋತ್ತರ ಪದವಿಯನ್ನು ಭೌತಶಾಸ್ತ್ರ ವಿಷಯದಲ್ಲಿ ಮಾಡಲು ಇಛ್ಚಿಸಿರುತ್ತೇನೆ. ಇದಕ್ಕೆ ಪೂರಕವಾಗಿ ಪ್ರವೇಶ ಪರೀಕ್ಷೆಗಳನ್ನು ಎದುರಿಸಲು ತಯಾರಿ ನಡೆಸುತ್ತಿದ್ದೇನೆ.