ಸದಸ್ಯ:Swapna J BcomD/sandbox
ನೀರಜಾ ಭಾನೋಟ್
೧೯೮೬ ಸೆಪ್ಟೆಂಬರ್ ೫ರ ಬೆಳಗ್ಗೆ ಪಾನ್ ಎ.ಎಂ. ೭೩ ವಿಮಾನ ಕರಾಚಿಯಲ್ಲಿ ಇಳಿಯಿತು. ಈ ವಿಮಾನ ಮುಂಬೈ ನಗರದಿಂದ ಹೊರಡಿತು, ನಂತರ ಜರ್ಮನ್ನಿನ ಫ್ರಾಂಕ್ಫರ್ಟ್ ನಗರಕ್ಕೆ ಹೋಗಿ ಅಲ್ಲಿಂದ ನ್ಯೂಯಾರ್ಕ್ ಗೆ ಹೋಗಬೇಕಾಗಿತ್ತು. ವಿಮಾನಕ್ಕೆ ಯಾವುದೇ ರೀತಿಯ ಸಮಸ್ಯೆಯಿರಲಿಲ್ಲ. ವಿಮಾನದಲ್ಲಿ ಭಾರತೀಯರು, ಅಮೇರಿಕನ್ನರು, ಜರ್ಮನ್ನರು, ಪಾಕಿಸ್ತಾನ ದೇಶದವರು ಹೀಗೆ ನಾನಾ ದೇಶದವರಿದ್ದರು. ವಿಷದವೇನೆಂದರೆ ಕರಾಚಿಯ ವಿಮಾನ ನಿಲ್ದಾಣದಲ್ಲಿ ಟಾರ್ಮ್ಸಾಕ್ ನಲ್ಲಿ ನಿಲ್ಲಿಸಿದ್ದಾಗ ಭಯೋತ್ಪಾದಕರು ವಿಮಾನವನ್ನು ಅಪಹರಿಸಿದರು. ಶಸ್ತ್ರ ಸಜ್ಜಿತರಾದ ನಾಲ್ಕು ಭಯೋತ್ಪಾದಕರು ವಿಮಾನ ನಿಲ್ದಾಣದ ಸೆಕ್ಯೂರಿಟಿ ಗಾರ್ಡ್ ಗಳ ರೀತಿ ಉಡುಗೆ ತೊಟ್ಟು, ವಿಮಾನದ ಒಳಗೆ ನುಗ್ಗಿ, ತಮ್ಮ ಸ್ವಯಂಚಾಲಿತ ಬಂದೂಕಿನಿಂದ ಗುಂಡಿನ ಮಳೆ ಹರಿಸಿ, ವಿಮಾನವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ. ಈ ಕಥೆ 'ನೀರಜಾ ಭಾನೋಟ್'ನದ್ದು. ಆಕೆ ವಿಮಾನದ 'ಸೀನಿಯರ್ ಫ್ಲೈಟ್ ಅಟೆಂಡೆಂಟ್'. ಭಯೋತ್ಪಾದಕರ ದಾಳಿಯ ನಡುವೆಯೂ, ಹಲವಾರು ಪ್ರಯಾಣಿಕರನ್ನು ರಕ್ಷಿಸಿದಳು. ಭಯೋತ್ಪಾದಕರ ಬೆಂಕಿ ದಾಳಿಯಿಂದ ಮೂರು ಮಕ್ಕಳನ್ನು ಆಕೆ ರಕ್ಷಿಸುತ್ತಿದ್ದಳು, ದುರದೃಷ್ಟವಶಾತ್ ಆಕೆ ಉಗ್ರರ ದಾಳಿಗೆ ಬಳಿಯಾಗುತ್ತಾಳೆ. ತನ್ನ ಇಪ್ಪತ್ಮೂರನೆಯ ಜನ್ಮದಿನಾಚರಣೆಗೆ ಕೇವಲ ೨೫ ಗಂಟೆ ಮಾತ್ರ ಉಳಿದಿತ್ತು.
ಉಗ್ರರ ವಿಮಾನವನ್ನು ಹಾರಿಸಲು ಸಿದ್ಧರಾದಾಗ ನಿರಜಾ ಅಲ್ಲಿನ ಕಾಕ್ಪಿಟ್ ಸಿಬ್ಬ್ಂದಿಯನ್ನು ಎಚ್ಚರಿಸುತ್ತಾಳೆ. ಕಾಕ್ಪಿಟ್ ಸಿಬ್ಬಂದಿಗಳು ವಿಮಾನದ ದ್ವಾರದಿಂದ ಓಡಿಹೋಗಿದ್ದರು. ಅವರಲ್ಲಿ ಸೆನಿಯರ್ ಸಿಬ್ಬಂದಿ ಮಾತ್ರ ವಿಮಾನದೊಳಗಿದ್ದನು. ಉಗ್ರರಲ್ಲಿ ಒಬನು ಪ್ರಯಾಣಿಕರ ಪಾಸ್ ಪೋರ್ಟ್ ಕೇಳಿದನು. ನೀರಜಾಗೆ ಈ ಉಗ್ರರು ಕೇವಲ ಅಮೇರಿಕಾದ ಪ್ರಯಾಣಿಕರನ್ನು ಮಾತ್ರ ಗುರಿಯಿಡುತ್ತಿದ್ದಾರೆಂದು ತಿಳಿಯಿತು. ಆಗ ಆಕೆ ಅವರ ಪಾಸ್ಪೋರ್ಟನ್ನು ಬಚ್ಚಿಟಳು. ೪೧ ಅಮೇರಿಕನ್ ಪ್ರಯಾಣಿಕರಲ್ಲಿ ಕೇವಲ ಎರಡು ಪ್ರಯಾಣಿಕರು ಅವರ ದಾಳಿಗೆ ಬಲಿಯಾದರು.
ಈ ಉಗ್ರರು ಸತತವಾಗಿ ೧೭ ಗಂಟೆಗಳ ಕಾಲ ಪ್ರಯಾಣಿಕರನ್ನು ಹಾಗು ಸಿಬ್ಬಂದಿಗಳನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದರು.. ಉಗ್ರರು ಬೆಂಕಿ ದಾಳಿ ಮಾಡಲು ಶುರು ಮಾಡಿದರು. ನಿರಜ ಹಲವಾರು ಪ್ರಯಾಣಿಕರನ್ನು ಆ ಸಮಯದಲ್ಲಿ ರಕ್ಷಿಸಲು ಮುಂದಾದಳು. ಆ ಉಗ್ರರು ನೀರಜಳನ್ನು ಮೊದಲು ಬಿಡುಗಡೆ ಮಾಡಿದರೂ ಆಕೆ ಮಕ್ಕಳನ್ನು ರಕ್ಷಿಸುವ ಸಮಯದಲ್ಲಿ ಉಗ್ರರ ದಾಳಿಗೆ ಬಲಿಯಾಗುತ್ತಾಳೆ.
ನಮಗೆ ಈ ರೀತಿಯ ಸನ್ನಿವೇಶ ಎದುರಾದರೆ ಏನು ಮಾಡಬೇಕೆಂದು ದಿಕ್ಕು ತೋಚುವುದಿಲ್ಲ. ಆದರೆ ಒಂದು ಹೆಣ್ಣು ಮಗಳಾಗಿ ನೀರಜಾ ಸಾವು-ಬದುಕಿನ ಮಧ್ಯ ಹೋರಾಡುತ್ತಾಳೆ. ಭಯದ ನಡುವೆಯೂ ಶೌರ್ಯ ಮೆರೆಯುತ್ತಾಳೆ. ಉಗ್ರರು ವಿಮಾನವನ್ನು ವಶ ಪಡಿಸಿಕೊಂಡಾಗ ನೀರಜ ಏನು ಯೋಚಿಸಿದಳೆಂದು ಆ ಒಂದು ಕ್ಷಣದಲ್ಲಿ ಆಕೆಯ ಸ್ಥಿತಿ ಹೇಗಿತ್ತು ಎಂದು ನಮಗೆ ಯಾರಿಗೂ ತಿಳಿದಿಲ್ಲ. ಆದರೆ ಆ ಉಗ್ರರ ಎದುರು ನಿಂತು ಶೌರ್ಯದಿಂದ, ಕಡಿ ಮಸೆದು, ಧೀರತೆಯನ್ನು ತೋರಿಸುತ್ತಾಳೆ. ೩೮೦ ಪ್ರಯಾಣಿಕರನ್ನು ಒಳಗೊಂಡಿದ್ದ ವಿಮಾನ ೭೩ಯಲ್ಲಿ ಕೇವಲ ೨೦ ಪ್ರಯಾಣಿಕರು ಮಾತ್ರ ಬಲಿಯಾಗುತ್ತಾರೆ. ಇನ್ನು ಕೆಲವರಿಗೆ ಗಾಯಾಳುಗಳಾಗುತ್ತವೆ, ಆದರೆ ಅವರು ಬದುಕುಳಿಯುತ್ತಾರೆ. ಇದೆಲ್ಲಾ ಸಾಧ್ಯವಾದದ್ದು ಅದಿಹರೆಯದ ೨೨ ವಯಸ್ಸಿನ ಶರ್ಯವಂತೆ, ಬುದ್ಧಿವಂತೆ, ನೀರಜಾ ಭಾನೋಟ್ ನಿಂದ.
ಆಕೆಯ ತಂದೆ-ತಾಯಿಗೆ ನೀರಜಾ ಎಕೈಕ ಪುತ್ರಿ. ತಮ್ಮ ಮಗಳನ್ನು ಕಳೆದುಕೊಂಡ ಆ ಪೋಷಕರ ಕರುಳಿನ ಕೂಗು ದೇವರಿಗೆ ಕೇಳಿಸುವ ರೀತಿ ಹೊರಡಿತ್ತು. ನೀರಜಾ ತನ್ನ ಮನೆಯ 'ಲಾಡೊ' ಯೌವನದ ಮುದ್ದಿನ ಮಗಳಾಗಿದ್ದಳು. ಆಕೆಯ ಮರಣದ ನಂತರ, ಆಕೆಯ ತಂದೆ, ನೀರಜಾ ೧೯೬೨ ಸೆಪ್ಟ್ಂಬರ್ ೭ರಂದು ಹುಟ್ಟಿದಾಗ ಹೇಗೆ ಇದ್ದಳು ಎಂದು ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದ್ದರು. ಆಸ್ಪತ್ರೆಯ ವಾರ್ಡನ್ ತಂದೆಗೆ ನಿಮಗೆ ಹೆಣ್ಣು ಮಗುವಾಗಿದೆ ಎಂದು ಹೇಳಿದಾಗ ಆತನಿಗೆ ಎಲ್ಲಿಲ್ಲದ ಸಂತೋಷ ಕಾರಣ ಎರಡು ಗಂಡು ಮಕ್ಕಳಾದ ನಂತರ ಈಕೆ ಹುಟ್ಟಿದ್ದು. ನೀರಜಾಳ ಅಣ್ಣ ಅನೀಶ ಆಕೆಯ ಬಗ್ಗೆ ಹೀಗೆ ಹೇಳಿದ್ದಾನೆ. ಆಕೆ ಬಹಳ ಸೂಕ್ಷ್ಮ ಸ್ವಭಾವದವಳು. ಶಿಸ್ತಿನ ವ್ಯಕ್ತಿ ಆಕೆ. ತನ್ನ ಸುಖವನ್ನು ಮಾತ್ರ ಇತರರೊಡನೆ ಹಂಚಿಕೊಳ್ಳುತ್ತಿದ್ದಳು, ದುಃಖವನ್ನು ತಾನೇ ಅನುಭವಿಸುತ್ತಿದ್ದಳು. ಮಗಳನ್ನು ಕಳೆದುಕೊಂಡ ರಮಾ ಹಾಗು ಹರೀಶ್ ಭಾನೋಟ್ ದಂಪತಿಗಳು ಆಕೆಗೆ ಗೌರವಾರ್ಪಣೆ ಸಲ್ಲಿಸುತ್ತಾರೆ. ಅವರಿಗೆ ವಿಮೆ ಹಣ ಹಾಗು ವಿಮಾನ ಸಂಸ್ಥೆಯಿಂದ ಹಣ ಬರುತ್ತದೆ, ಆದರೆ ಮಗಳಿಗೆ ಸಮನಾದ ವಸ್ತು ಯಾವುದೂ ಇಲ್ಲ. ಹಣದಲ್ಲಿ ನೀರಜಾ ಭಾನೋಟ್ ಟ್ರಸ್ಟ್ ತೆರೆದಿದ್ದಾರೆ. ಆ ಟ್ರಸ್ಟಿನ ಮೂಲಕ ಸಾಮಾಜಿಕ ಷೋಶಣೆಗೆ ಒಳಗಾಗಿರುವ ಹೆಣ್ಣು ಮಗಳನ್ನು, ಅದನ್ನು ಗೆದ್ದು ಹೊರಬಂದರೆ ಹಾಗೆಯೇ ಅದೇ ಸ್ಥಿತಿಯಲ್ಲಿರುವ ಹೆಣ್ಣು ಮಗಳಿಗೆ ಸಹಾಯ ಮಾಡಿದವರಿಗೆ ರೂ.೧೫೦೦೦೦ ಸಹಾಯದ ಧನ ನೀಡಲಾಗುತ್ತದೆ.
ಹಾಗು ವಿಮಾನ ಸಿಬ್ಬಂದಿ ವರ್ಗ ಈ ರೀತಿ ಸಾಧನೆ ಮಾಡಿದರೀಎ ಟ್ರಸ್ಟ್ ನಿಂದ ಹಣ ಸಹಾಯ ಮಾಡಲಾಗುವುದು. ನೀರಜಾಳ ನೆನಪು ಚಿರಂಜೀವಿಯಾಗಿದೆ. ಆಕೆಯ ಸಾಧನೆಗೆ ಭಾರತದ ಅತ್ಯುನ್ನತ ಪ್ರಶಸ್ತಿ 'ಅಶೋಕ ಚಕ್ರ' ಬಂದಿದೆ. ಇದು ಶೌರ್ಯ ಮೆರೆದವರಿಗೆ, ಬದುಕು ಸಾವಿನ ನಡುವೆ ಬೇರೆಯವರನ್ನು ರಕ್ಷಿಸುವುದಕ್ಕೆ ಭಾರತ ಸರ್ಕಾರ ನೀಡುವ ಗೌರವ, ಹಾಗೂ ಪಾಕಿಸ್ತಾನ ಸರ್ಕಾರ 'ತಮಘ-ಇ-ಇನ್ಸಾನಿಯಟ್' ಗೌರವ ನೀಡಿದೆ, ಇದು ಅಸಾಧ್ಯವಾದ ಧೈರ್ಯ ಪ್ರದರ್ಶನಕ್ಕೆ ಆ ಸರ್ಕಾರ ನೀಡುವ ಗೌರವ. ಅಮೇರಿಕ ದೇಶದಿಂದಲೂ, ಆ ವೀರ ವನಿತೆ ಮಾಡಿದ ಸಾಧನೆಗೆ, ಎರಡು ಗೌರವಗಳನ್ನು ಆಕೆಯ ಮಡಿಲಿಗೆ ಸೇರಿಸಿದೆ.