ವಿಷಯಕ್ಕೆ ಹೋಗು

ಸದಸ್ಯ:Swaathi Nayak/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಹಲ್ಲರ ಬಸದಿ

ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಯ ಹಲ್ಲರ ಬಸದಿ ಕರ್ನಾಟಕದ ಬಸದಿಗಳಲ್ಲಿ ಒಂದು. ಈ ಬಸದಿಯನ್ನು ಹಲ್ಲರ ಬಸದಿ ಅಥವಾ ಶ್ರೀ ಪದ್ಮಾವತಿ ದೇವಿ ಬಸದಿ ಎಂದೂ ಕರೆಯುತ್ತಾರೆ

ಇತಿಹಾಸ

[ಬದಲಾಯಿಸಿ]

ಈ ಬಸದಿಗೆ ಬಸದಿಗೆ ಸುಮಾರು ೫೦೦ ರಿಂದ ೬೦೦ ವರ್ಷಗಳ ಇತಿಹಾಸವಿದೆ. ಪದ್ಮಾವತಿ ಅಮ್ಮನ ಆರಾಧನೆಗೆ ವಿಶೇಷ ಪ್ರಾಧಾನ್ಯತೆ ಇರುವುದರಿಂದ ಇದನ್ನು ಅಮ್ಮನವರ ಬಸದಿಯೆಂದು ಕರೆಯುತ್ತಾರೆ. ಈ ಬಸದಿಯನ್ನು ಆರೂರ ( ಆರು+ಊರ) ಹಲ್ಲರು ಕಟ್ಟಿದ್ದರಿಂದ ಇದು ಹಲ್ಲರ ಬಸದಿಯೆಂದು ಪ್ರಸಿದ್ದವಾಗಿದೆ. ಆ ಆರು ಊರುಗಳು ಯಾವುದೆಂದರೆ ಕುಕ್ಕೂಂದೂರು, ಹಿರ್ಗಾನ,ನಿಟ್ಟೆ, ಅತ್ತೂರು, ಕಲ್ಯ ಮತ್ತು ನಖರೆ.ಹೀಗೆ ವ್ಯಾಪಕ ಜನಬೆಂಬಲ ಹಾಗೂ ಧನಸಂಗ್ರಹದಿಂದ ಇದನ್ನು ನಿರ್ಮಿಸಬೇಕು. ಇಲ್ಲಿ ಚವ್ಹೀಸ್ ತೀರ್ಥಂಕರರನ್ನು ವಿಶೇಷವಾಗಿ ಪೂಜಿಸುವುದರಿಂದ ಇದನ್ನು ತೀರ್ಥಂಕರರ ಬಸದಿಯೆಂದೂ ಕರೆಯುವ ರೂಢಿಯಿದೆ. ಎದುರಿಗೆ ವಿಶಾಲವಾದ ಅಂಗಣ, ಅದರ ಮುಂಭಾಗದಲ್ಲಿರುವ ಗೋಪುರವು ಬಸದಿಯ ಅಂದವನ್ನು ಹೆಚ್ಚಿಸಿದೆ. ಬಸದಿಯ ಸೂಇಯು ಶಿಲಾಮಯವಾಗಿದ್ದು ಇದು ಶಿಲಾಮಯ ಬಸದಿಯೆಂದು ಪರಿಗಣಿಸಲ್ಪಟ್ಟಿದೆ. ಇದರ ಎಡ ಭಾಗದಲ್ಲಿ ಗುರುರಾಯರ ಬಸದಿಯಿದೆ. ೨೪ ತೀರ್ಥಂಕರರ ಹರಿಪೀಠದ ಬಲಭಾಗದದಲ್ಲಿ ಸರಸ್ವತಿ ದೇವಿಯನ್ನು ಹಾಗೂ ಎಡ ಬದಿಯಲ್ಲಿ ಪದ್ಮಾವತಿ ದೇವಿಯ ವಿಶೇಷವಾಗಿರುವಂತಹ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಇಲ್ಲಿಯ ಶ್ರೀ ಪದ್ಮಾವತಿಯನ್ನು ಭೈರವಿ ಪದ್ಮಾವತಿ ಅಥವಾ ಸಿದ್ಧಿ ಪದ್ಮಾವತಿ ಎಂದು ಕರೆಯುವುತ್ತಾರೆ. ಏಕೆಂದರೆ, ಪದ್ಮಾವತಿ ದೇವಿ ಎಲ್ಲಾ ಜನರ ಅಬೀಕ್ಷೆಗಳನ್ನು ಸಿದ್ಧಿ ಮಾಡಿಕೊಡುತ್ತಾಳೆ ಎಂಬ ನಂಬಿಕೆ ಇದೆ.

ವಿಧಿ ವಿಧಾನ

[ಬದಲಾಯಿಸಿ]

ಈ ಬಸದಿಯಿಂದ ೨೦೦ ಅಡಿಒಳಗೆ ಶ್ರೀ ಚಂದ್ರನಾಥ ಸ್ವಾಮಿಯ ಬಸದಿ ಇದೆ. ಹಲ್ಲರ ಬಸದಿಗೆ ಕುಕ್ಕಂದೂರು ಗುಡ್ಡೆಗುತ್ತು ಮತ್ತು ಕಲ್ಪಾಪರಾರಿ ಕುಟುಂಬಗಳು ಪ್ರತಿ ವರ್ಷ ಭೇಟಿ ನೀಡುತ್ತಾರೆ. ಇಲ್ಲಿ ತ್ರಿಕಾಲ ಪೂಜೆ ನಡೆಯುತ್ತದೆ. ಮತ್ತು ವರ್ಷದ ಶುಧ್ದ ನಾಗೇಶ್ವರ ಪೌರ್ಣಮಿಯಂದು ಸ್ವಾಮಿಯ ಸನ್ನಿದಿಯಲ್ಲಿ ರಥೋತ್ಸವ ಜರುಗುತ್ತದೆ. ಆಗ ಪದ್ಮಾವತಿ ದೇವಿಗೂ ವಿಶೇಷ ಪೂಜೆ ನಡೆಯುತ್ತವೆ.[]

ವಿನ್ಯಾಸ

[ಬದಲಾಯಿಸಿ]

ಈ ಬಸದಿಯು ಸಂಪೂರ್ಣ ಶಿಲಾಮಯವಾಗಿದೆ. ದೂರದಿಂದ ನೋಡುವಾಗ ವಿಶಿರ್ಷಟ ವಾಸ್ತು ಶೈಲಿಯಲ್ಲಿ ಕಂಡು ಬಂದು ಆಕರ್ಷಕವಾಗಿದೆ. ವಿಶ್ವನಂದಿ ಎಂಬ ಮುನಿಗಳು ಇಲ್ಲಿ ಕೆಲವು ದಿನ ತಂಗಿದ್ದು ಕೊನೆಗೆ ಸಮಾಧಿಯಾದರೆಂಬ ಪ್ರತೀತಿ ಇದೆ. ನಾವು ಇಲ್ಲಿ ಅವರ ಮುನ್ಯಾಸೋವನ್ನು( ಮುನಿವಾಸವನ್ನು) ಕಾನಬಹುದು. ಈ ಬಸದಿ ಕಂಬಗಳಲ್ಲಿ ಕೆಲವು ಸುಂದರವಾದ ಕೆತ್ತನೆಗಳು ಇವೆ. ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿದ್ದು ಸುಂದರ ಮಂಟಪ ನಿರ್ಮಾಣವಾಗಿದೆ. ಇಲ್ಲಿ ಜಯಘಂಟೆ, ಜಾಗಟೆಗಳನ್ನು ತೂಗು ಹಾಕಲಾಗಿದೆ. ಬಸದಿಯ ಮೇಲ್ಭಾಗದಲ್ಲಿ ಆಕ಼ರ್ಷಕ ಕಣ್ಣುಮುಚ್ಚಿಗೆ ಇದೆ. ಇಲ್ಲಿಯ ಗಂಧಕುಟಿಯ ಮಧ್ಯಭಾಗದಲ್ಲಿ ಗಣಧರಪಾದ ಮತ್ತು ಮತ್ತು ಶ್ರುತದ ಮೂರ್ತಿಗಳಿವೆ. ಇಲ್ಲಿ ಪಾರ್ಶ್ವನಾಥ ಸ್ವಾಮಿಯ ಚರಬಿಂಬವನ್ನು ಇಡಲಾಗಿದೆ. ಇಲ್ಲಿ ಧರಣೇಂದ್ರ ಯಕ್ಷ ಮತ್ತು ಪದ್ಮಾವತಿ ಯಕ್ಷಿಯನ್ನು ಪೂಜಿಸಲಾಗುತ್ತದೆ.

ಸದ್ಯದ ಪರಿಸ್ಥಿತಿ

[ಬದಲಾಯಿಸಿ]

ಪ್ರಸ್ತುತ ಈ ಬಸದಿಯನ್ನು ಶ್ರೀ ಯತ್ನರಾಜರು ನಡೆಸಿಕೊಂಡು ಬರುತ್ತಿದ್ದಾರೆ. ಮತ್ತು ಗ್ರಾಮದ ಎಲ್ಲಾ ಮನೆತನದವರು ಸಹಕಾರ ನೀಡುತ್ತದ್ದಾರೆ. ಶ್ರೀ ಭರತ್ ರಾಜೇಂದ್ರ ಇಂದ್ರ ಎಂಬವರು ಪ್ರದಾನ ಇಂದ್ರರಾಗಿದ್ದಾರೆ. ಈ ಬಸದಿಗೆ ಅನೇಕ ದಿಗಂಬರಮುನಿಗಳು ಹಾಗು ಡಾ. ವೀರೇಂದ್ರ ಹೆಗಡೆಯವರಂತಹ ಗಣ್ಯರು ಬೇಟಿ ನೀಡುದ್ದಾರೆ. ಯಾವುದೇ ಸರಕಾರದ ಸಹಾಯವಿಲ್ಲದೆ ಈ ಬಸದಿಯ ಆಡಳಿತ ಮಂಡಳಿ ಬಸದಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದೆ. ಬಸದಿಯು ಇನ್ನಷ್ಟು ಬೆಳೆದು ಸಮಾಜಕ್ಕೆ ಉತ್ತಮ ಮಾದರಿಯಾಗಲಿ ಎಂಬುವುದು ಇಲ್ಲಿಯವರ ಆಶಯ.

ಉಲ್ಲೇಖಗಳು

[ಬದಲಾಯಿಸಿ]
  1. ಶೆಣೈ, ಉಮಾನಥ.ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೪ ed.). ಮಂಜುಶ್ರೀ ಪ್ರಿಂಟರ್ಸ್. p. ೪೪.