ಸದಸ್ಯ:Swaathi Nayak/ನನ್ನ ಪ್ರಯೋಗಪುಟ
ಚಂದ್ರನಾಥ ಸ್ವಾಮಿಯ ಶ್ರವಣ ಬಸದಿ
ಚಂದ್ರನಾಥ ಸ್ಮಾಮಿಯ ಬಸದಿಯು ಕರ್ನಾಟಕದ ಬಸದಿಗಳಲ್ಲಿ ಒಂದು.ಈ ಬಸದಿಯ ಹೆಸರು ಶ್ರವಣ ಬಸದಿಯಾಗಿದೆ.ಇಲ್ಲಿನ ಮೂಲ ನಾಯಕ ಶ್ರೀ ಚಂದ್ರನಾಥ ಸ್ವಾಮಿ.
ಸ್ಥಳ
[ಬದಲಾಯಿಸಿ]ಬಸದಿಯು ಕಾರ್ಕಳ ತಾಲೂಕಿನ ಕಾರ್ಕಳ ಗ್ರಾಮದ ಮಹಾವೀರ ನಗರದಲ್ಲಿದೆ. ಕಾರ್ಕಳ ಬಸ್ ನಿಲ್ದಾಣದಿಂದ ಇಲ್ಲಿಗೆ ಒಂದು ಕಿಲೋ ಮೀಟರ್ ದೂರ. ಬಸದಿಯ ಹತ್ತಿರ ಕೇತ್ರ ಪಾಲ ಮತ್ತು ನಾಗ ಸನ್ನಿದಿಯಿದೆ. ಇಲ್ಲಿಗೆ ಅತ್ಯಂತ ಹತ್ತಿರದಲ್ಲಿರುವ ಬಸದಿ ಎಂದರೆ ಕೆರೆ ಬಸದಿ. ಅದು ಇಲ್ಲಿಂದ ೨೫೦ ಮೀಟರ್ ದೂರದಲ್ಲಿ ಕೆರೆಯ ಮಧ್ಯದಲ್ಲಿದೆ. ಶ್ರವಣ ಬಸದಿಗೆ ಶ್ರೀ ಹೊಂಬುಜ ಮಠದವರು ಮತ್ತು ಭಕ್ತರು ಬರುತ್ತಾರೆ. ಇದು ಹೊಂಬುಜ ಮಠಕ್ಕೆ ಸೇರಿದುದು.
ವಿನ್ಯಾಸ
[ಬದಲಾಯಿಸಿ]ಈ ಬಸದಿಯ ವಿನ್ಯಾಸವು ಸ್ವಲ್ಪ ವಿಶಿಷ್ಟವಾದುದು.ಮೆಟ್ಟಿಲು ಏರುವ ಕಡೆ ಜಗಲಿ ಇಲ್ಲದಿರುವುದು ಮತ್ತು ನೇರವಾಗಿ ಮುಖ ಮಂಟಪವನ್ನು ಪ್ರವೇಶಿಸುವುದು ಇದರ ವೈಶಿಷ್ಟವಾಗಿದೆ. ಇದು ಸಂಪೂರ್ಣಶಿಲಾಮಯವಾದುದು. ಬೇರೆ ಬಸದಿಗಳಂತೆ ಗರ್ಭಗುಡಿಯ ಎದುರಿಗೆ ಮಂಟಪಗಳ ಬದಲಾಗಿ ಎದುರಿಗೆ ಆರು ಬೃಹತ್ ಕಂಬಗಳ ಸಭಾಂಗಣವಿದೆ. ಇದು ಹೆಚ್ಚಿನ ಮಟ್ಟಿಗೆ ಮಹರಾಷ್ರ್ಟದ ದೇವಾಲಯಗಳಂತೆ ಅಥವಾ ಭಜನಾ ಮಂದಿರಗಳಲಿರುವಂತೆ ಎದುರಿಗೆ ತುಂಬಾ ಜನ ನೆರೆದು ಸಾಮೂಹಿಕವಾಗಿ ಪ್ರಾರ್ಥನೆ ಮಾಡುವ ಮಂಟಪ. ಒಟ್ಟಿನಲ್ಲಿ ಇಲ್ಲಿ ಕೆಲವು ಬದಲಾವಣೆಯನ್ನು ಮಾಡಿರುವಂತೆ ಕಾಣುತ್ತದೆ. ಇಲ್ಲಿ ದಷ್ಟಪುಷ್ಟವಾದ ಕಂಬಗಳು ವಿಜಯನಗರ ಶೈಲಿಯನ್ನು ನೆನಪಿಸುತ್ತವೆ. ಈ ಪ್ರಾಥನಾ ಮಂಟಪದ ಆರು ಕಂಬಗಳ ತಳಭಾಗಗಳು ಬಹಳ ಘನವಾಗಿದ್ದು ಹಲವಾರು ಕಲಾಕೃತಿಗಳನ್ನು ಹೊಂದಿವೆ. [೧]
ಆವರಣ
[ಬದಲಾಯಿಸಿ]ಎದುರಿನ ಬಲಭಾಗದ ಕಂಬದ ಮೇಲೆ ಉತ್ತರದ ಮೈಯಲ್ಲಿ ಪೂರ್ಣಕುಂಭ ಅದರ ಮೇಲ್ಗಡೆ ನಾಲ್ಕು ಅಶ್ವತ್ಥ ಪತ್ರಗಳ ಚಿತ್ರಿಕೆ, ಅದರ ಮೇಲ್ಗಡೆ ಅಲಂಕಾರಿಕ ಸುತ್ತುಪಟ್ಟಿ ಹಾಗೂ ಬೋದಿಗೆ ಪೂರ್ವದ ಮೈಯಲ್ಲಿ ಒಂದು ಮಂಟಪ,ಅದರ ಮೇಲೆ ಹಂಸ, ಅಶ್ವತ್ಥ ಎಲೆಗಳು, ದಕ್ಷಿಣದ ಮೈ ಮೇಲೆ ಅಲಂಕಾರಿಕ ರೇಖೆಗಳು, ಅದರ ಮೇಲೆ ಸಿಂಹಗಳ ಮುಖಗಳು, ಪಶ್ಚಿಮ ಮೈ ಮೇಲೆ ಸ್ವಸ್ಥಿಕ, ಅದರ ಮೇಲೆ ಕಮಲ, ಮೇಲೆ ಮಕರ ಮತ್ತು ಅಲಂಕಾರಿಕ ಪಟ್ಟಿಗನ್ನು ಕಾಣಬಹುದ. ಬೋದಿಗೆಗಳು ಅಧೋಮುಖವಾದ ಕಮಲದ ಮೊಗ್ಗುಗಳನ್ನು ಹೊಂದಿವೆ. ಎಡಭಾಗದ ಕಂಬದ ತಳಭಾಗದಲ್ಲಿ ಮಂಟಪ, ಮೇಲೆಅಲಂಕಾರಿಕ ಚಿತ್ರಗಳು, ಪೂರ್ವ ಬದಿಗೆ ನಾಲ್ಕು ಹೂವುಗಳ ಆಕೃ, ಅದರ ಮೇಲೆ ರಥ, ಮೇಲೆ ಅಲಂಕಾರಿಕ ಚಿತ್ರಗಳು, ದಕ್ಷಿಣ ಭಾಗಕ್ಕೆ ಕಲಶ, ಅದರ ಮೇಲೆ ರಥ, ಅಲಂಕಾರಿಕ ಚಿತ್ರಗಳ ಸುತ್ತು ಪಟ್ಟಿ, ಪಶ್ಚಿಮ ಬದಿಗೆ ನಾಲ್ಕುಹೂವುಗಳು ಮತ್ತು ಅಲಂಕಾರಿಕ ಪಟ್ಟಿಯನ್ನು ಕಾಣಬಹುದು. ಮಧ್ಯದ ಎಡಭಾಗದ ಕಂಬದ ತಳದಲ್ಲಿ ಚಾಮರ ಹಿಡಿದಿರುವ ಒಬ್ಬ ದೇವತೆ, ಮೇಲೆ ಅಶ್ವತ್ಥ ಎಲೆಗಳ ಅಲಂಕಾರವಿದೆ. ಈ ರೀತಿಯ ಕೆತ್ತನೆಗಳನ್ನು ಇನ್ನುಳಿದ ಶಿಲಾಸ್ಥಂಭಗಳಲ್ಲಿಯೂ ಕಾಣಬಹುದು. ಇದನ್ನು ದಾಟಿ ಬಸದಿಯ ಮುಖ್ಯ ಭಾಗಕ್ಕೆ ಹೋದಾಗ, ಇತರ ಬಸದಿಗಳಿಗೆ ಇರುವಂತಹ ಮಂಟಪ ವಿಭಾಗಗಳನ್ನು ಕಾಣಬಹುದು. ಮೊದಲಿಗೆ ಗುದ್ದಿಗೆ ಮಂಟಪ, ಮುಂದುವರಿದಾಗ ನಮಸ್ಕಾರ ಮಂಟಪ, ಶುಕನಾಸ ಮತ್ತು ಗರ್ಭಗೃಹ- ಇವುಗಳು ಸಿಗುತ್ತವೆ. ಇದಕ್ಕೆ ಎರಡು ಪ್ರದಕ್ಷಿಣಾ ಪಥಗಳಿದ್ದು, ಮೊದಲಿನ ಪ್ರದಕ್ಷಿಣಾ ಪಥವು ಗರ್ಭಗೃಹ, ಶುಕನಾಸ ನಮಸ್ಕಾರ ಮಂಟಪಗಳನ್ನು ಆವರಿಸಿಕೊಂಡಿದೆ. ಎರಡೆನೆಯದು ಇವುಗಳ ಜೊತೆಗೆ ಗದ್ದುಗೆ ಮಂಟಪವನ್ನೂ ಒಳಗೊಂಡು, ಹೆಚ್ಚು ವಿಸ್ತಾರವಾಗಿದೆ.ನಮಸ್ಕಾರ ಮಂಟಪದಲ್ಲಿ ಜಾಗಟೆ ಮತ್ತು ಜಯಘಂಟೆಗಳನ್ನು ತೂಗುಹಾಕಲಾಗಿದೆ. ಅಲ್ಲಿಂದ ಮುಂದುವರಿದು ತೀರ್ಥಂಕರ ಸ್ವಾಮಿಯ ಬಳಿಗೆಹೋಗುವಾಗ ಸಿಗುವ ಮಂಟಪವನ್ನು ಇಲ್ಲಿಯವರು ಸುಖಾಸನ ಮಂಟಪ ಎಂದು ಕರೆಯುತ್ತಾರೆ.ಬಸದಿಯ ಬಲ ಭಾಗದಲ್ಲಿ ಕ್ಷೇತ್ರಪಲ ಮತ್ತು ನಾಗನ ಸನ್ನಿದಿಯಿದೆ. ಬಸದಿಯ ಸುತ್ತಲ್ಲೂ ಕರ್ಗಲ್ಲಿನ ಕಂಪೌಡ್ ಗೋಡೆ ಇದೆ
ಸದ್ಯದ ಪರಿಸ್ಥಿತಿ
[ಬದಲಾಯಿಸಿ]ಈಗ ಬಸದಿಯನ್ನು ಹೊಂಬುಜ ಮಠದವರೇ ನಡೆಸುತ್ತಿದ್ದಾರೆ. ಇದರ ಇಂದ್ರರ ಹೆಸರು ಶ್ರೀ ಜ್ಞಾನಚಂದ್ರ ಇಂದ್ರ. ಇದನ್ನು ಸ್ಥಳೀಯ ಇಮ್ಮಡಿ ಭೈರವ ಎಂಬ ರಾಜನು ಕ್ರಿ.ಶ. ೧೬೦೪ ರಲ್ಲಿ ಕಟ್ಟಿಸಿದನಂತೆ. ಇದಕ್ಕೆ ಮೇಗಿನ ನೆಲೆ ಇಲ್ಲ. ಬಸದಿಯಲ್ಲಿ ಶ್ರೀ ಪದ್ಮಾವತಿ ಅಮ್ಮನವರ ಮೂರ್ತಿ ಇದೆ. ಬ್ರಹ್ಮದೇವರ ಮೂರ್ತಿಯಿಲ್ಲ. ಬಸದಿಯ ಎದುರು ಮಾನ ಸ್ತಂಭವಿಲ್ಲ. ಬಸದಿಯ ಬಳಿಯಲ್ಲಿ ಕೆಲವು ಪಾರಿಜಾತ ಗಿಡ ಮತ್ತು ಮಲ್ಲಿಗೆ ಹೂವಿನ ಗಿಡಗಳನ್ನು ನೆಡಲಾಗಿದೆ. ಎದುರಿನ ಗೋಪುರವವನ್ನು ಭಕ್ತರು ಕುಳಿತುಕೊಳ್ಳಲು ಉಪಯೋಗಿಸುತ್ತಾರೆ. ಈ ಬಸದಿಗೆ ಕಾರ್ಯಲಯವಿಲ್ಲ. ನಮಸ್ಕಾರ ಮಂಟಪಕ್ಕೆ ಹೋಗುವಲ್ಲಿ ಗೋಡೆಯ ಮೇಲೆ ದ್ವಾರ ಪಾಲಕರ ಚಿತ್ರಗಳಿವೆ.ಇದಕ್ಕೆ ಸಂಬಂಧಿಸಿದ ಯಾವುದೇ ಭವನಗಳಿಲ್ಲ. ಪ್ರಸಿದ್ಧ ಮುನಿಗಳು, ಭಟ್ಟಾರಕರು ಬಂದಿದ್ದಾರೆ. ಶಾಸಕರು ಬಂದು ಹೋಗಿದ್ದಾರೆ. ಆದರೆ ಬಸದಿಯ ಸ್ಥಿತಿ ಸುಧಾರಣೆಯಾಗಿಲ್ಲ. ಹೊಂಬುಜ ಮಠದ ಧನಸಹಾಯಕವೇ ಈ ಬಸದಿಯ ಪ್ರಮುಖ ಆದಾಯ. ಸರ್ಕಾರದ ಆರ್ಥಿಕ ನೆರವು ಪಡೆಯುವ ಪ್ರಯತ್ನಗಳು ನಡೆಯುತ್ತಿವೆ. ಸಮಾಜದ ಸಹಕಾರವಿಲ್ಲದ ಬಸದಿಯನ್ನು ನಡೆಸಬಹುದು , ಆದರೆ ಈಗ ಯಾರೂ ಧನ ಸಹಾಯ ಮಾಡಿಲ್ಲ ಎಂಬುವುದು ಇಲ್ಲಿಯ ಇಂದ್ರರ ಮಾತು. ಇದು ಪುರಾತನ ಬಸದಿ. ಇದರ ರಕ್ಷಣೆಗೆ ಸಮಿತಿಯಿಂದ ವ್ಯವಸ್ಥೆ ಆಗಬೇಕು ಎನ್ನುವುದು ಇಂದ್ರರ ಮನವಿ.
ಧಾರ್ಮಿಕ ಕಾರ್ಯಗಳು
[ಬದಲಾಯಿಸಿ]ಅನಂತರ ಗರ್ಭಗುಡಿ ಸಿಗುತ್ತದೆ. ಇಲ್ಲಿ ಗಣಿಧರ ಪಾದ, ಶ್ರುತ, ಬ್ರಹ್ಮದೇವರು ಇತ್ಯಾದಿ ಮೂರ್ತಿಗಳಿವೆ. ಇಲ್ಲಿ ಶ್ರೀ ಪದ್ಮಾವತಿ ದೇವಿಗೆ ಪೂಜೆ ನಡೆಯುತ್ತದೆ. ಈ ದೇವಿಗೆ ಸೀರೆ ಉಡಿಸಿ, ಬಳೆ ತೊಡಿಸಿ ಪೂಜೆ ಮಾಡಲಾಗುತ್ತದೆ. ಕಾಲಿನ ಬುಡದಲ್ಲಿ ಕುಕ್ಕುಟ ಸರ್ಪವಿಲ್ಲ. ಅಮ್ಮನವರ ಎದುರು ಹೂ ಹಾಕಿ ನೋಡುವ ಕ್ರಮವಿದೆ. ಇಲ್ಲಿರುವ ಜಿನ ಬಿಂಬಗಳ ಮೇಲೆ ಸ್ವಲ್ಪ ಅಸ್ಪಷ್ಟ ಬರವಣಿಗೆ ಇದೆ, ಮೂಲ ನಾಯಕ ಮೂರ್ತಿಯನ್ನು ನೆಲ್ಲಿಕಾರು ಕಪ್ಪು ಶಿಲೆಯಿಂದ ಮಾಡಲಾಗಿದೆ. ಇದು ಮೂರು ಅಡಿ ಎತ್ತರ, ರ‍್ಯಂಕಾಸನ ಭಂಗಿಯಲ್ಲಿದೆ. ಮೂರ್ತಿಗೆ ವಜ್ರ ಲೇಪನ ಮಾಡಿಲ್ಲ. ಆಲಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ ಇತ್ಯಾದಿಗಳನ್ನು ಮಾಡಲಾಗುತ್ತದೆ
ಆಚರಣೆ
[ಬದಲಾಯಿಸಿ]ಫೆಬ್ರವರಿಯಲ್ಲಿ ಒಂದು ದಿನ ವಾರ್ಷಿಕೋತ್ಸವ ನಡೆಯುತ್ತದೆ. ಕೆಲವು ಹಬ್ಬದ ದಿನಗಳನ್ನು ಆಚರಿಸಲಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ ಶೆಣೈ, ಉಮಾನಾಥ.ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಮಂಜುಶ್ರೀ ಪ್ರಿಂಟರ್ಸ್. p. ೨೫-೨೬.